ಎಸ್‌ಬಿಐ ಕ್ರೆಡಿಟ್ ಕಾರ್ಡ್: ಶುಲ್ಕ, ವಿತ್‌ಡ್ರಾ ಮಿತಿ ಇತರೆ ಮಾಹಿತಿ
ಪ್ರಸ್ತುತ ಹಲವಾರು ಜನರು ನಗದು ಬಳಕೆ ಮಾಡುವುದಕ್ಕಿಂತ ಹೆಚ್ಚಾಗಿ ನಗದುರಹಿತ ವಹಿವಾಟು ನಡೆಸುತ್ತಾರೆ. ಆನ್‌ಲೈನ್, ಯುಪಿಐ ವಹಿವಾಟು ಹಾಗೂ ಎಟಿಎಂ ಕಾರ್ಡ್‌ಗಳ ಬಳಕೆ ಸರ್ವೇ ಸಾಮಾನ್ಯವಾಗಿದೆ. ಈ ಮಧ್ಯೆ ನಾವು ಎಟಿಎಂ ಕಾರ್ಡ್ ವಿಚಾರಕ್ಕೆ ಬಂದಾಗ, ಹೆಚ್ಚಿನ ಜನರು ತಮ್ಮ ದಿನನಿತ್ಯದ ವಹಿವಾಟಿಗೂ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡುತ್ತಾರೆ.
ಬಹುತೇಕ ಎಲ್ಲ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ ಅನ್ನು ತಮ್ಮ ಗ್ರಾಹಕರಿಗೆ ನೀಡುತ್ತದೆ. ಆದರೆ ಅದಕ್ಕೂ ಹಲವಾರು ಮಾನದಂಡಗಳು ಇರುತ್ತದೆ. ಕ್ರೆಡಿಟ್ ಕಾರ್ಡ್‌ನಲ್ಲಿಯೂ ಹಣ ವಿತ್‌ಡ್ರಾ ಮಿತಿ, ಶುಲ್ಕ ಮೊದಲಾದವುಗಳು ಇರುತ್ತದೆ. ಈ ಎಲ್ಲ ಮಾನದಂಡಗಳು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿಯೂ ಇದೆ.
ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ತಮ್ಮ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಆಫರ್‌ಗಳನ್ನು ನೀಡುತ್ತದೆ. ಇಲ್ಲಿ ನಾವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನ ವಿತ್‌ಡ್ರಾ ಮಿತಿ, ಕ್ರೆಡಿಟ್ ಕಾರ್ಡ್ ಶುಲ್ಕ, ಪಿನ್ ಜನರೇಟ್ ಮಾಡುವುದು ಹೇಗೆ ಎಂಬ ಮೊದಲಾದ ಮಾಹಿತಿಯನ್ನು ವಿವರಿಸಿದ್ದೇವೆ. ಮುಂದೆ ಓದಿ..

ಆನ್‌ಲೈನ್ ಮೂಲಕ ಕ್ರೆಡಿಟ್ ಕಾರ್ಡ್ ಪಿನ್ ಜನರೇಟ್
ಹಂತ 1: ಎಸ್‌ಬಿಐನ ವೆಬ್‌ಸೈಟ್ sbicard.com ಗೆ ಭೇಟಿ ನೀಡಿ
ಹಂತ 2: ಎಡಭಾಗದಲ್ಲಿರುವ ಮೆನುವಿನಲ್ಲಿ My Account ಆಯ್ಕೆ ಮಾಡಿ, Manage PIN ಮೇಲೆ ಕ್ಲಿಕ್ ಮಾಡಿ
ಹಂತ 3: ನೀವು ಪಿನ್ ಜನರೇಟ್ ಮಾಡಲು ಬಯಸುವ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿ
ಹಂತ 4: ಎಸ್‌ಎಂಎಸ್ ಮೂಲಕ ಒಟಿಪಿ ಬರಲಿದೆ
ಹಂತ 5: ಒಟಿಪಿಯನ್ನು ನಮೂದಿಸಿ, ಹೊಸದಾಗಿ ನೀವು ಬಳಕೆ ಮಾಡಲು ಬಯಸುವ ಎಟಿಎಂ ಕಾರ್ಡ್ ಪಿನ್ ಅನ್ನು ಉಲ್ಲೇಖ ಮಾಡಿ
ಹಂತ 6: ನೀವು Submit ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಪಿನ್ ಜನರೇಟ್ ಆಗಲಿದೆ.

ಕರೆ ಮೂಲಕ ಪಿನ್ ಜನರೇಟ್ ಮಾಡುವುದು ಹೇಗೆ?
ಹಂತ 1: 39 02 02 02ಗೆ ಕರೆ ಮಾಡಿ. ಎಸ್‌ಟಿಡಿ ಕೋಡ್ ಅನ್ನು ಕೂಡಾ ಸೇರಿಸಬೇಕು
ಹಂತ 2: 1860 180 1290 ಕೂಡಾ ಕರೆ ಮಾಡಬಹುದು
ಹಂತ 3: ಅಲ್ಲಿ ನೀಡಲಾಗುವ ಆಯ್ಕೆಗಳ ಪೈಕಿ ಪಿನ್ ಜನರೇಟ್ ಮಾಡುವ ಸಂಖ್ಯೆ 6 ಅನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಹಾಗೂ ಜನನ ದಿನಾಂಕ ಉಲ್ಲೇಖಿಸಿ
ಹಂತ 5: ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ ಒಟಿಪಿ ಬರಲಿದೆ.
ಹಂತ 6: ಒಟಿಪಿಯನ್ನು ಹಾಕಿದ ಬಳಿಕ ನಿಮಗೆ ಬೇಕಾದ ಪಿನ್ ಅನ್ನು ಹಾಕಿ Submit ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ ನಗದು ಪಡೆಯುವುದು ಹೇಗೆ?
ಹಂತ 1: ಎಟಿಎಂ ಮೆಷಿನ್‌ಗೆ ನಿಮ್ಮ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಅನ್ನು ಹಾಕಿ
ಹಂತ 2: ನಿಮ್ಮ ಪಿನ್ ಹಾಗೂ ನಿಮಗೆ ಬೇಕಾದ ಮೊತ್ತವನ್ನು ನಮೂದಿಸಿ
ಹಂತ 3: ನಿಮ್ಮ ಹಣವನ್ನು ಪಡೆಯಿರಿ, ರಶೀದಿಯನ್ನು ಕೂಡಾ ಪಡೆಯಿರಿ

ನಗದು ವಿತ್‌ಡ್ರಾ ಶುಲ್ಕ, ಇತರೆ ಶುಲ್ಕ
* ನೀವು ಎಸ್‌ಬಿಐನ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡಿ ಹಣವನ್ನು ವಿತ್‌ಡ್ರಾ ಮಾಡಿದಾಗ ಮೊತ್ತದ ಮೇಲೆ ಶುಲ್ಕವನ್ನು ವಿಧಿಸಲಾಗುತ್ತದೆ.
* ಸ್ಥಳೀಯವಾಗಿ ಮಾಡಲಾಗುವ ವಿತ್‌ಡ್ರಾಗೆ ಶೇಕಡ 2.5 ಅಥವಾ 500 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಈ ಎರಡರಲ್ಲಿ ಯಾವುದು ದೊಡ್ಡ ಮೊತ್ತವೋ ಅದನ್ನೇ ವಿಧಿಸಲಾಗುತ್ತದೆ. ಅಂತಾರಾಷ್ಟ್ರೀಯ ವಹಿವಾಟಿಗೂ ಕೂಡಾ ಇಷ್ಟೇ ಶುಲ್ಕವನ್ನು ವಿಧಿಸಲಾಗುತ್ತದೆ.
* ಸೇವಾ ಶುಲ್ಕವನ್ನು ಕೂಡಾ ವಿಧಿಸಲಾಗುತ್ತದೆ. ಮಾಸಿಕವಾಗಿ ಹಾಗೂ ವಾರ್ಷಿಕವಾಗಿ ಕ್ರಮವಾಗಿ ಶೇಕಡ 3.5 ಹಾಗೂ ಶೇಕಡ 42ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ!. ನೀವು ಕಾರ್ಡ್ ಅನ್ನು ಪಡೆದು ಅದನ್ನು ರಿಟರ್ನ್ ನೀಡಿದವರೆಗಿನ ಒಟ್ಟು ಎಷ್ಟು ವಹಿವಾಟು ನಡೆಸಲಾಗಿದೆ ಅದರ ಆಧಾರದಲ್ಲಿ ಶುಲ್ಕ ವಿಧಿಸಲಾಗುತ್ತದೆ.

ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನ ಮಿತಿ
ಒಂದು ಕ್ರೆಡಿಟ್ ಕಾರ್ಡ್ ಬಳಕೆದಾರರು ತಮ್ಮ ಕಾರ್ಡ್‌ನಿಂದ ಒಟ್ಟಾಗಿ ಎಷ್ಟು ಮೊತ್ತವನ್ನು ವಿತ್‌ಡ್ರಾ ಮಾಡಬಹುದೋ ಅದನ್ನು ಕ್ರೆಡಿಟ್ ಕಾರ್ಡ್ ವಿತ್‌ಡ್ರಾ ಮಿತಿ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಕಾರ್ಡ್ ಮಿತಿ 2 ಲಕ್ಷ ರೂಪಾಯಿಯಾಗಿದ್ದರೆ, ನಗದು ಮಿತಿ ಶೇಕಡ 20ರಿಂದ 80ರ ನಡುವೆ ಇರುತ್ತದೆ. ಅಂದರೆ ಉಳಿದ ಮೊತ್ತವನ್ನು ನೀವು ನಗದು ಮಾಡಿಕೊಳ್ಳಲು ಸಾಧ್ಯವಿಲ್ಲ ನೀವು ಶಾಪಿಂಗ್ ವೇಳೆ ಮಾತ್ರ ಕಾರ್ಡ್ ಬಳಕೆ ಸಾಧ್ಯ ಎಂದರ್ಥ. ನಗದು ಮಿತಿ ಶೇಕಡ 20 ಎಂದಾದರೆ ನೀವು 2 ಲಕ್ಷ ರೂಪಾಯಿಯಲ್ಲಿ 40 ಸಾವಿರ ರೂಪಾಯಿ ಮಾತ್ರ ವಿತ್‌ಡ್ರಾ ಮಾಡಲು ಸಾಧ್ಯವಾಗುತ್ತದೆ. ನಗದು ಮಿತಿ ಶೇಕಡ 80 ಎಂದಾದರೆ, ಕಾರ್ಡ್ ಬಳಕೆದಾರರು 2 ಲಕ್ಷ ರೂಪಾಯಿಯಲ್ಲಿ 1,60,000 ರೂಪಾಯಿಯನ್ನು ವಿತ್‌ಡ್ರಾ ಮಾಡಲು ಸಾಧ್ಯವಿದೆ. ಎಸ್‌ಬಿಐ ಹೆಚ್ಚಾಗಿ ಶೇಕಡ 80ರಷ್ಟು ವಿತ್‌ಡ್ರಾ ಮಿತಿಯನ್ನು ನೀಡುತ್ತದೆ.