For Quick Alerts
ALLOW NOTIFICATIONS  
For Daily Alerts

ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಬಹುದಾದ ಉಳಿತಾಯ ಖಾತೆಗಳು

|

ದೇಶದ ಬಹುದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ತನ್ನ ಗ್ರಾಹಕರಿಗೆ ಅನೇಕ ಸೇವೆಗಳನ್ನು ಒದಗಿಸಿದೆ. ಇತರೆ ಬ್ಯಾಂಕುಗಳಂತೆ ಉಳಿತಾಯ ಖಾತೆ, ನಿಶ್ಚಿತ ಠೇವಣಿ(FD), ಮರುಕಳಿಸುವ ಠೇವಣಿ (RD) ಸೇರಿದಂತೆ ಬ್ಯಾಂಕ್ ಲಾಕರ್ ಸೌಲಭ್ಯಗಳನ್ನು ಹೊಂದಿದೆ.

 

ಯಾವುದೇ ಬ್ಯಾಂಕಿನ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಉಳಿಸಿಕೊಳ್ಳಲು ಪ್ರತಿ ತಿಂಗಳು ಪ್ರಯತ್ನಿಸುತ್ತಿರುತ್ತಾರೆ. ಏಕೆಂದರೆ ಕನಿಷ್ಠ ಮೊತ್ತಕ್ಕಿಂತ ಕಡಿಮೆ ಬ್ಯಾಲೆನ್ಸ್ ಇದ್ದರೆ ಬ್ಯಾಂಕ್‌ಗಳು ಶುಲ್ಕ ವಿಧಿಸುತ್ತದೆ. ಹಾಗಿದ್ದರೆ ಎಸ್‌ಬಿಐನಲ್ಲಿ ಯಾವೆಲ್ಲಾ ಉಳಿತಾಯ ಖಾತೆಗಳಿವೆ ಮತ್ತು ಅವುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟು ಇರಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯಲು ಈ ಕೆಳಗಿನ ವಿವರಣೆ ಓದಿ

ಬೇಸಿಕ್ ಸೇವಿಂಗ್ಸ್ ಅಕೌಂಟ್

ಬೇಸಿಕ್ ಸೇವಿಂಗ್ಸ್ ಅಕೌಂಟ್

ಈ ಬೇಸಿಕ್ ಸೇವಿಂಗ್ಸ್ ಅಕೌಂಟ್ ಅನ್ನು ಯಾರು ಬೇಕಾದರೂ ತೆರಯಬಹುದಾಗಿದೆ. ಮೂಲ ದಾಖಲಾತಿಗಳನ್ನು(KYC) ಬ್ಯಾಂಕ್‌ಗೆ ತಲುಪಿಸಿದರೆ ನಿಮ್ಮ ಅಕೌಂಟ್ ಚಾಲ್ತಿಗೆ ಬರಲಿದೆ. ಈ ಅಕೌಂಟ್ ನಲ್ಲಿ ನೀವು ಯಾವುದೇ ರೀತಿಯ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಬೇಕೆಂದು ನಿಯಮವಿಲ್ಲ.

ಈ ಉಳಿತಾಯ ಖಾತೆಯನ್ನು ಸಮಾಜದಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ಎಂದೇ ರೂಪಿಸಲಾಗಿದೆ. ತಿಂಗಳಲ್ಲಿ ನಾಲ್ಕು ಬಾರಿ ಮಾತ್ರ ಉಚಿತವಾಗಿ ಹಣವನ್ನು ಹಿಂಪಡೆದುಕೊಳ್ಳಲು ಅವಕಾಶವಿದೆ. ಎಸ್‌ಬಿಐ ಎಟಿಎಂ ಅಥವಾ ಇತರೆ ಯಾವುದೇ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಹಣವನ್ನು ಹಿಂಪಡೆಯಬಹುದು. ನಂತರ ಪ್ರತಿ ಹೆಚ್ಚುವರಿ ನಗದು ವಹಿವಾಟಿಗೆ ಸೇವಾ ಶುಲ್ಕ 15 ರುಪಾಯಿ ಸೇರಿದಂತೆ ಜಿಎಸ್‌ಟಿ ಶುಲ್ಕವನ್ನು ವಿಧಿಸಲಾಗುತ್ತದೆ.

ಸ್ಮಾಲ್ ಸೇವಿಂಗ್ಸ್ ಅಕೌಂಟ್

ಸ್ಮಾಲ್ ಸೇವಿಂಗ್ಸ್ ಅಕೌಂಟ್

ಈ ಸಣ್ಣ ಉಳಿತಾಯ ಖಾತೆಯನ್ನು 18 ವರ್ಷ ವಯಸ್ಸಿನ ಮೇಲ್ಪಟ್ಟ ಯಾವುದೇ ವ್ಯಕ್ತಿ ತೆರೆಯಬಹುದು. ಇವರ ಬಳಿ ಮಾನ್ಯ ಕೆವೈಸಿ ದಾಖಲೆಗಳು ಇಲ್ಲದೆ ಹೋದರು ಹಲವು ನಿರ್ಬಂಧಗಳಿಗೆ ಒಳಪಟ್ಟು ಖಾತೆ ತೆರೆಯಬಹುದು. ಕೆವೈಸಿ ದಾಖಲೆಗಳನ್ನು ಸಲ್ಲಿಸಿದ ಬಳಿಕ ಸಾಮಾನ್ಯ ಉಳಿತಾಯ ಖಾತೆಯನ್ನಾಗಿ ಪರಿವರ್ತಿಸಬಹುದಾಗಿದೆ.

ಇದರಲ್ಲೂ ಯಾವುದೇ ರೀತಿಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಬೇಕಾಗಿಲ್ಲ. ಈ ಅಕೌಂಟ್ ಒಂದು ತಿಂಗಳಲ್ಲಿ 4 ಬಾರಿ ಹಣ ಹಿಂಪಡೆದುಕೊಳ್ಳಲು ಅನುಮತಿಸುತ್ತದೆ. ಅದು ಎಸ್‌ಬಿಐ ಎಟಿಎಂ ಆಗಿರಲಿ ಅಥವಾ ಇತರೆ ಯಾವುದೇ ಬ್ಯಾಂಕಿನ ಎಟಿಎಂ ಆಗಿರಲಿ ಉಚಿತವಾಗಿ ಹಣ ಹಿಂಪಡೆಯಬಹುದಾಗಿದೆ.

 

ಇನ್ಸ್ಟಾ ಸೇವಿಂಗ್ಸ್ ಅಕೌಂಟ್ (Insta Savings account)
 

ಇನ್ಸ್ಟಾ ಸೇವಿಂಗ್ಸ್ ಅಕೌಂಟ್ (Insta Savings account)

ಭಾರತದಿಂದ ಹೊರಗೆ ಯಾವುದೇ ತೆರಿಗೆ ಹೊಣೆಗಾರಿಕೆ ಇಲ್ಲದ 18 ವರ್ಷ ಮೇಲ್ಪಟ್ಟ ಭಾರತೀಯ ನಿವಾಸಿಗಳು ಮಾತ್ರ ಇನ್ಸ್ಟಾ ಖಾತೆಯನ್ನು ತೆರೆಯಲು ಅರ್ಹರಾಗಿದ್ದಾರೆ. ಈ ಖಾತೆಯನ್ನು ಹೊಂದಿರುವ ಗ್ರಾಹಕರು ಸಾಮಾನ್ಯ ಉಳಿತಾಯ ಖಾತೆಯಂತೆ ಕನಿಷ್ಠ ಬ್ಯಾಲೆನ್ಸ್ ಉಳಿಸಿಕೊಳ್ಳಬೇಕು.

ಈ ಖಾತೆಯಲ್ಲಿ ಗರಿಷ್ಠ 49,999 ರುಪಾಯಿ ವಹಿವಾಟು ನಡೆಸಬಹುದಾಗಿದೆ. ಗರಿಷ್ಠ 1 ಲಕ್ಷ ರುಪಾಯಿ ಇಟ್ಟುಕೊಳ್ಳಬಹುದು. ಈ ಖಾತೆಯನ್ನು ತೆರೆಯಲು ಗ್ರಾಹಕ ಬ್ಯಾಂಕ್‌ನ ಶಾಖೆಗೆ ಬರಬೇಕಾಗಿಲ್ಲ.

ಡಿಜಿಟಲ್ ಸೇವಿಂಗ್ಸ್ ಅಕೌಂಟ್

ಡಿಜಿಟಲ್ ಸೇವಿಂಗ್ಸ್ ಅಕೌಂಟ್

ಇನ್ಸ್ಟಾ ಉಳಿತಾಯ ಖಾತೆಯಂತೆಯೇ 18 ವರ್ಷ ಮೇಲ್ಪಟ್ಟ ಭಾರತೀಯ ನಿವಾಸಿಗಳು ಮಾತ್ರ ಈ ಡಿಜಿಟಲ್ ಉಳಿತಾಯ ಖಾತೆಯನ್ನು ತೆರೆಯಬಹುದು. ಸಾಮಾನ್ಯ ಉಳಿತಾಯ ಖಾತೆಯಂತೆ ಕನಿಷ್ಠ ಬ್ಯಾಲೆನ್ಸ್ ಉಳಿಸಿಕೊಳ್ಳಬೇಕಾಗಿದೆ. ಇದರಲ್ಲಿ ಜಂಟಿ ಖಾತೆ ತೆರೆಯಲು ಅವಕಾಶವಿಲ್ಲ. ಈ ಖಾತೆಯನ್ನು ಸಾಮಾನ್ಯ ಉಳಿತಾಯ ಖಾತೆಯನ್ನಾಗಿ ಪರಿವರ್ತಿಸಿದರೆ ಮಾತ್ರ ಜಂಟಿ ಖಾತೆ ತೆರೆಯಬಹುದು. ಈ ಖಾತೆಯಲ್ಲಿ ಗರಿಷ್ಠ 1 ಲಕ್ಷ ರುಪಾಯಿ ಇಟ್ಟುಕೊಳ್ಳಬಹುದು.

ಸ್ಪೆಷಲ್ ಸೇವಿಂಗ್ಸ್ ಅಕೌಂಟ್

ಸ್ಪೆಷಲ್ ಸೇವಿಂಗ್ಸ್ ಅಕೌಂಟ್

ಕಾರ್ಪೋರೇಟ್ ಸಂಬಳ ಯೋಜನೆಯಡಿಯಲ್ಲಿ ಈ ವಿಶೇಷ ಸ್ಯಾಲರಿ ಖಾತೆಗಳು (ಸ್ಪೆಷಲ್ ಸ್ಯಾಲರಿ ಅಕೌಂಟ್) ಬರುತ್ತದೆ. ಕಾರ್ಪೋರೇಟ್‌ ಸಂಸ್ಥೆಗಳು ಮತ್ತು ಸೇವಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ವಿಶೇಷ ಸೌಲತ್ತುಗಳ ಈ ಖಾತೆಯನ್ನು ನೀಡಲಾಗುತ್ತದೆ.

ಉದ್ಯೋಗಿಯ ಮಾಸಿಕ ವೇತನದ ಆಧಾರದ ಮೇಲೆ ಪ್ಲಾಟಿನಮ್, ಡೈಮಂಡ್, ಗೋಲ್ಡ್ ಮತ್ತು ಸಿಲ್ವರ್ ಎಂಬ ನಾಲ್ಕು ರೀತಿಯ ಪ್ಯಾಕೇಜ್ ಒಳಗೊಂಡಿದೆ. ಈ ಅಕೌಂಟ್ ಹೊಂದಿರುವ ಗ್ರಾಹಕರು ಉಚಿತವಾಗಿ ಯಾವುದೇ ಬ್ಯಾಂಕಿನ ಎಟಿಎಂಗಳಲ್ಲಿ ಅನಿಯಮಿತವಾಗಿ ಹಣ ಹಿಂಪಡೆಯಬಹುದಾಗಿದೆ. ಮಾಸಿಕ ವೇತನದ ಆಧಾರದ ಮೇಲಿರುವ ಯೋಜನೆಗಳು ಇಂತಿವೆ. ಪ್ಲಾಟಿನಮ್ : 1 ಲಕ್ಷ ರುಪಾಯಿಗೂ ಹೆಚ್ಚು ಸಂಬಳ

ಡೈಮಂಡ್ : 50,000 ರುಪಾಯಿಗಿಂತಲೂ ಹೆಚ್ಚು ಮತ್ತು 1 ಲಕ್ಷ  ರುಪಾಯಿ ಒಳಗಿರುವ ಸಂಬಳ

ಗೋಲ್ಡ್ : 20,000 ದಿಂದ 50,000 ರುಪಾಯಿ

ಸಿಲ್ವರ್ : 5,000 ದಿಂದ 20,000 ಒಳಗಿನ ಸಂಬಳ

 

ಸೇವಿಂಗ್ಸ್ ಪ್ಲಸ್ ಅಕೌಂಟ್

ಸೇವಿಂಗ್ಸ್ ಪ್ಲಸ್ ಅಕೌಂಟ್

ಈ ಉಳಿತಾಯ ಖಾತೆಯಲ್ಲಿ ಖಾತೆಯ ಮಿತಿಗಿಂತ ಹೆಚ್ಚಿನ ಹಣವನ್ನು ಸ್ವಯಂಚಾಲಿತವಾಗಿ ನಿಶ್ಚಿತ ಠೇವಣಿ(FD)ಗೆ ವರ್ಗಾಯಿಸಲಾಗುತ್ತದೆ. ಅಥವಾ 1,000ರ ಗುಣಕದಲ್ಲಿ ತೆರೆಯಲಾದ ಟರ್ಮ್ ಠೇವಣಿಗೆ ವರ್ಗಾಯಿಸಲಾಗುತ್ತದೆ.

ನಗರ ಮತ್ತು ಮಹಾನಗರಗಳಲ್ಲಿ ಈ ಉಳಿತಾಯ ಖಾತೆಯನ್ನು ಹೊಂದಿರುವ ಖಾತೆದಾರನು ಕನಿಷ್ಠ 3,000 ಬ್ಯಾಲೆನ್ಸ ಹೊಂದಿರಬೇಕು. ಅರೆ ನಗರ ಮತ್ತು ಗ್ರಾಮೀಣ ಪ್ರದೇಶದ ಶಾಖೆಗಳಲ್ಲಿ ಗ್ರಾಹಕರು ಕ್ರಮವಾಗಿ 2,000 ಮತ್ತು 1,000 ರುಪಾಯಿ ಬ್ಯಾಲೆನ್ಸ್ ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಶುಲ್ಕ ವಿಧಿಸಲಾಗುತ್ತದೆ. ಗರಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳಲು ಯಾವುದೇ ಮಿತಿಯಿಲ್ಲ.

English summary

SBI Different Savings Account For Minimum Balance

SBI Provides option for to open different types of savings account. some saving accounts not need to maintain minimum balance.
Story first published: Friday, December 13, 2019, 13:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X