For Quick Alerts
ALLOW NOTIFICATIONS  
For Daily Alerts

SBIನ ಹೊಸ ಪ್ಲಾಟಿನಂ ಠೇವಣಿ ಯೋಜನೆ: ಬಡ್ಡಿದರ ಹಾಗೂ ಪ್ರಮುಖ ಮಾಹಿತಿ ಇಲ್ಲಿದೆ

|

ಭಾರತದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ವಿಶೇಷ ಠೇವಣಿ ಯೋಜನೆಯನ್ನು ಪರಿಚಯಿಸಿದೆ.

ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯಂದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಹೊಸ ಪ್ಲಾಟಿನಂ ಠೇವಣಿ ಯೋಜನೆಯನ್ನು ತಿಳಿಸಿದೆ. ಈ ಯೋಜನೆಯನ್ನು ಯಾವುದೇ SBI ಶಾಖೆ ಅಥವಾ SBI YONO ಆ್ಯಪ್‌ ಮೂಲಕ ಪಡೆಯಬಹುದಾಗಿದೆ.

"ಭಾರತದ 75 ನೇ ಸ್ವಾತಂತ್ರ್ಯ ದಿನವನ್ನು ಪ್ಲಾಟಿನಂ ಠೇವಣಿಗಳೊಂದಿಗೆ ಆಚರಿಸಲು ಇದು ಸಕಾಲವಾಗಿದೆ. ಎಸ್‌ಬಿಐನೊಂದಿಗೆ ಟರ್ಮ್‌ ಡೆಪಾಸಿಟ್ ಮತ್ತು ವಿಶೇಷ ಟರ್ಮ್‌ ಡೆಪಾಸಿಟ್‌ಗಳಿಗೆ 14 ನೇ ಸೆಪ್ಟೆಂಬರ್ 2021 ರವರೆಗೆ ಆಫರ್ ಮಾನ್ಯವಾಗಿದೆ."

SBIನ ಹೊಸ ಪ್ಲಾಟಿನಂ ಠೇವಣಿ ಯೋಜನೆ: ಪ್ರಮುಖ ಮಾಹಿತಿ ಇಲ್ಲಿದೆ

ಹೊಸ ಎಸ್‌ಬಿಐ ಪ್ಲಾಟಿನಂ ಠೇವಣಿ ಯೋಜನೆ ಆಗಸ್ಟ್ 15, 2021 ರಿಂದ ಸೆಪ್ಟೆಂಬರ್ 14, 2021 ರವರೆಗೆ ಲಭ್ಯವಿರುತ್ತದೆ ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯ ಆಯ್ಕೆಯನ್ನು ಹೊಂದಿದ್ದಾರೆ.

ಗ್ರಾಹಕರು ಈ ಕೆಳಗಿನ ಅವಧಿಯ ಠೇವಣಿಗಳಿಂದ ಆಯ್ಕೆ ಮಾಡಬಹುದು:
ಪ್ಲಾಟಿನಂ 75 ದಿನಗಳು- ಪ್ಲಾಟಿನಂ 525 ದಿನಗಳು- ಪ್ಲಾಟಿನಂ 2250 ದಿನಗಳು

ಅರ್ಹತೆ ಏನಿರಲಿದೆ?
ದೇಶೀಯ ಚಿಲ್ಲರೆ ಅವಧಿ ಠೇವಣಿಗಳು (DRTD) NRE ಮತ್ತು NRO ಅವಧಿ ಠೇವಣಿಗಳು (2 ಕೋಟಿ ರೂಪಾಯಿ ಒಳಗೆ), ಹೊಸ ಮತ್ತು ನವೀಕರಣ ಠೇವಣಿಗಳು- ಟರ್ಮ್‌ ಡೆಪಾಸಿಟ್ ಮತ್ತು ವಿಶೇಷ ಟರ್ಮ್‌ ಠೇವಣಿಗಳು- NRE ಠೇವಣಿಗಳು 525 ದಿನಗಳು ಮತ್ತು 2250 ದಿನಗಳವರೆಗೆ ಮಾತ್ರ ಅರ್ಹವಾಗಿವೆ.

ಬಡ್ಡಿ ಪಾವತಿ
ಟರ್ಮ್ ಡೆಪಾಸಿಟ್: ಮಾಸಿಕ ಅಥವಾ ತ್ರೈಮಾಸಿಕ ಠೇವಣಿಗಳಲ್ಲಿ ಮಾತ್ರ ಪಡೆಯಬಹುದು.
ವಿಶೇಷ ಟರ್ಮ್ ಡೆಪಾಸಿಟ್: ಅವಧಿ ಮುಕ್ತಾಯದ ಮೇಲೆ ಬಡ್ಡಿ ಮತ್ತು ಟಿಡಿಎಸ್‌ - ನಿವ್ವಳ ಬಡ್ಡಿಯನ್ನು ಗ್ರಾಹಕರ ಖಾತೆಗೆ ಜಮಾ ಮಾಡಲಾಗುವುದು.
2 ಕೋಟಿಗಿಂತ ಕಡಿಮೆ ಇರುವ ಡಿಆರ್‌ಟಿಡಿಗೆ ಬಡ್ಡಿ ದರ ಮತ್ತು ಎನ್‌ಆರ್‌ಇ ಮತ್ತು ಎನ್‌ಆರ್‌ಒ ಟರ್ಮ್‌ ಠೇವಣಿಗಳು ಬದಲಾಗುವುದಿಲ್ಲ.

English summary

SBI New Platinum Deposit Scheme: Important Dates, Interest Rates And Other Details in Kannada

Here the details of SBI new platinum deposit scheme and interest rates and other details here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X