For Quick Alerts
ALLOW NOTIFICATIONS  
For Daily Alerts

SBI WhatsApp Banking : ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್: ಹೇಗೆ ಬಳಸುವುದು, ಇಲ್ಲಿದೆ ವಿವರ

|

ಆನ್‌ಲೈನ್ ಪಾವತಿ ಆಪ್‌ಗಳಿಂದ ವಹಿವಾಟು ನಡೆಸುವುದರ ಜೊತೆಗೆ ಇತ್ತೀಚೆಗೆ ವಾಟ್ಸಾಪ್ ಮೂಲಕವೂ ಹಣಕಾಸಿನ ವಹಿವಾಟು ನಡೆಸುವುದು ಆರಂಭವಾಗಿದೆ. ನಮ್ಮ ಬ್ಯಾಂಕ್‌ ಖಾತೆಯನ್ನು ವಾಟ್ಸಾಪ್‌ನಲ್ಲಿ ಲಿಂಕ್ ಮಾಡಿದರೆ ಆಪ್ ಮೂಲಕ ಪಾವತಿ ಮಾಡಬಹುದಾಗಿದೆ. ಈಗ ದೇಶದ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಾಟ್ಸಾಪ್‌ನಲ್ಲಿ ವಹಿವಾಟು ನಡೆಸುವ ಆಯ್ಕೆಯನ್ನು ತನ್ನ ಗ್ರಾಹಕರಿಗೆ ನೀಡಿದೆ.

 

ಎಸ್‌ಬಿಐ ವಾಟ್ಸಾಪ್ ಮೂಲಕ ಹಣಕಾಸು ವಹಿವಾಟು ನಡೆಸುವ ಆಯ್ಕೆಯನ್ನು ನೀಡಿದ್ದು, ಈಗ ಎಸ್‌ಬಿಐ ಗ್ರಾಹಕರು ವಾಟ್ಸಾಪ್ ಬ್ಯಾಲೆನ್ಸ್ ಹಾಗೂ ಸ್ಟೇಟ್‌ಮೆಂಟ್ ಅನ್ನು ವಾಟ್ಸಾಪ್ ಮೂಲಕವೇ ತಿಳಿಯಲು ಸಾಧ್ಯವಾಗಲಿದೆ. ಇನ್ನು ಈಗಾಗಲೇ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಈ ಸೇವೆಯನ್ನು ಹೊಂದಿದೆ.

ವಾಟ್ಸಾಪ್ ಪೇಮೆಂಟ್‌ನಲ್ಲಿ 35 ರೂ. ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?ವಾಟ್ಸಾಪ್ ಪೇಮೆಂಟ್‌ನಲ್ಲಿ 35 ರೂ. ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?

ಎಸ್‌ಬಿಐ ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. "ನಿಮ್ಮ ಬ್ಯಾಂಕ್‌ ಈಗ ವಾಟ್ಸಾಪ್‌ನಲ್ಲಿದೆ. ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿಯಲು ಹಾಗೂ ನಿಮ್ಮ ಖಾತೆಯ ಮಿನಿ ಸ್ಟೇಟ್‌ಮೆಂಟ್ ಅನ್ನು ಪಡೆಯಲು ಈ ಮೂಲಕ ಸಾಧ್ಯವಾಗಲಿದೆ," ಎಂದು ಎಸ್‌ಬಿಐ ಹೇಳಿದೆ. ಹಾಗಾದರೆ ಈ ವಿಧಾನವನ್ನು ಹೇಗೆ ಬಳಕೆ ಮಾಡುವುದು, ಹಂತ ಹಂತವಾಗಿ ತಿಳಿಯೋಣ ಮುಂದೆ ಓದಿ.....

 ಮೊದಲ ಹಂತ: ರಿಜಿಸ್ಟ್ರೇಷನ್

ಮೊದಲ ಹಂತ: ರಿಜಿಸ್ಟ್ರೇಷನ್

ನೀವು ಈ ಸೇವೆಯನ್ನು ಪಡೆಯಬೇಕಾದರೆ ಮೊದಲು ಎಸ್‌ಬಿಐ ವಾಟ್ಸಾಪ್‌ ಬ್ಯಾಂಕಿಂಗ್‌ನಲ್ಲಿ ರಿಜಿಸ್ಟಾರ್ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು WAREG ಎಂದು ಟೈಪ್ ಮಾಡಿ ಒಂದು ಸ್ಪೇಸ್ ನೀಡಿ ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸಿ, 7208933148ಗೆ ಎಸ್‌ಎಂಎಸ್ ಮಾಡಬೇಕಾಗುತ್ತದೆ. ಆದರೆ ನಿಮ್ಮ ಎಸ್‌ಬಿಐ ಖಾತೆಗೆ ಯಾವ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆಯೋ ಅದರಿಂದಲೇ ನೀವು ಈ ಎಸ್‌ಎಂಎಸ್ ಕಳುಹಿಸಬೇಕು.

<br />ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ಹೆಚ್ಚು ನೋಡುತ್ತಾರೆ? ತಿಳಿಯಲು, ಈ ರೀತಿ ಚೆಕ್‌ ಮಾಡಿ
ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ಹೆಚ್ಚು ನೋಡುತ್ತಾರೆ? ತಿಳಿಯಲು, ಈ ರೀತಿ ಚೆಕ್‌ ಮಾಡಿ

 ಹಂತ ಎರಡು: ನಿಮಗೆ ಬರಲಿದೆ ವಾಟ್ಸಾಪ್ ಸಂದೇಶ

ಹಂತ ಎರಡು: ನಿಮಗೆ ಬರಲಿದೆ ವಾಟ್ಸಾಪ್ ಸಂದೇಶ

ನೀವು ಎಸ್‌ಎಂಎಸ್ ಕಳುಹಿಸಿದ ಮೊದಲ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣವಾದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಸಂದೇಶ ಬರಲಿದೆ. ನಿಮಗೆ 90226 90226 ಅಂಕಿಯಿಂದ ವಾಟ್ಸಾಪ್ ಸಂದೇಶ ಬರಲಿದೆ. ಈ ಸಂಖ್ಯೆಯನ್ನು ನೀವು ಸೇವ್ ಮಾಡಿಕೊಳ್ಳಬಹುದು.

 ಹಂತ ಮೂರು: ವಾಟ್ಸಾಪ್ ಬ್ಯಾಂಕಿಂಗ್ ಹೀಗೆ ಮಾಡಿ
 

ಹಂತ ಮೂರು: ವಾಟ್ಸಾಪ್ ಬ್ಯಾಂಕಿಂಗ್ ಹೀಗೆ ಮಾಡಿ

ನೀವು ವಾಟ್ಸಾಪ್ ಬ್ಯಾಂಕಿಂಗ್ ಮಾಡಲು ಬಯಸಿದರೆ Hi SBI ಎಂದು 90226 90226 ಸಂಖ್ಯೆಗೆ ವಾಟ್ಸಾಪ್ ಮಾಡಿ. ನೀವು ಮೆಸೇಜ್ ಮಾಡಿದ ಬಳಿಕ ಈ ಕೆಳಗಿನ ಸಂದೇಶ ನಿಮಗೆ ಬರಲಿದೆ.

Dear Customer,
Welcome to SBI Whatsapp Banking Services!
Please choose from any of the options below.
1. Account Balance
2. Mini Statement
3. De-register from WhatsApp Banking

ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿಯಲು ಬಯಸಿದರೆ 1 ಎಂದು ಕಳುಹಿಸಿ. ಮಿನಿ ಸ್ಟೇಟ್‌ಮೆಂಟ್ ಪಡೆಯಲು ಬಯಸಿದರೆ 2 ಎಂದು ಕಳುಹಿಸಿ. ವಾಟ್ಸಾಪ್‌ ರಿಜಿಸ್ಟಾರ್ ಅನ್ನು ಮರುಪಡೆಯಲು ಬಯಸಿದರೆ 3 ಎಂದು ಕಳುಹಿಸಿ.

 

 ಎಸ್‌ಬಿಐ ಕಾರ್ಡ್ ವಾಟ್ಸಾಪ್ ಬಗ್ಗೆ ತಿಳಿಯಿರಿ

ಎಸ್‌ಬಿಐ ಕಾರ್ಡ್ ವಾಟ್ಸಾಪ್ ಬಗ್ಗೆ ತಿಳಿಯಿರಿ

ಇನ್ನು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಎಸ್‌ಬಿಐ ವಾಟ್ಸಾಪ್ ಸೇವೆಯನ್ನು ನೀಡಲಿದೆ. ತಮ್ಮ ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ ಪಡೆಯಲು ಈ ವಾಟ್ಸಾಪ್ ಸೇವೆಯನ್ನು ಕ್ರೆಡಿಟ್ ಕಾರ್ಡ್ ಹೊಂದಿರುವವರು ಬಳಕೆ ಮಾಡಬಹುದು. ಇದಕ್ಕಾಗಿ OPTIN ಎಂದು 9004022022 ಗೆ ವಾಟ್ಸಾಪ್ ಮಾಡಬೇಕಾಗುತ್ತದೆ. ನೀವು ಈ ಸೇವೆಗೆ ಸೈನ್‌ಅಪ್ ಆಗಲು 08080945040 ಗೆ ಮಿಸ್ಡ್‌ ಕಾಲ್ ನೀಡಬಹುದು.

English summary

SBI WhatsApp Banking Service Launched: How to Check Account Balance; explained in kannada

The State Bank of India (SBI) Banking: How to Use, Steps Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X