For Quick Alerts
ALLOW NOTIFICATIONS  
For Daily Alerts

ಪಿಎಂ ಜನ-ಧನ ಯೋಜನೆಯ ವಿಶೇಷ ಪ್ರಯೋಜನ: ಮಿಸ್‌ ಮಾಡ್ಕೋಬೇಡಿ!

|

ಪ್ರಧಾನ ಮಂತ್ರಿ ಜನ-ಧನ ಯೋಜನೆ (ಪಿಎಂಜೆಡಿವೈ) ಕೇಂದ್ರ ಸರ್ಕಾರದ ಹಣಕಾಸು ಯೋಜನೆಯಾಗಿದೆ. ಇದು ಪ್ರಮುಖವಾಗಿ ಮಹಿಳೆಯರಿಗೆ ಧನ ಸಹಾಯ ಮಾಡುವ ನಿಟ್ಟಿನಲ್ಲಿ ಆರಂಭ ಮಾಡಲಾದ ಯೋಜನೆಯಾಗಿದೆ. ಇದರಲ್ಲಿ ವಿಶೇಷ ಪ್ರಯೋಜನಗಳು ಇದೆ. ನೀವು ಮಿಸ್ ಮಾಡ್ಕೋಬೇಡಿ.

2014ರಲ್ಲಿ ಪ್ರಧಾನ ಮಂತ್ರಿ ನರೇದ್ರ ಮೋದಿ ಈ ಯೋಜನೆಯನ್ನು ಆರಂಭ ಮಾಡಿದ್ದಾರೆ. ಎಲ್ಲಾ ಜನರು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎಂಬುವುದು ಇದರ ಮುಖ್ಯ ಉದ್ದೇಶವಾಗಿದೆ. ಪಿಎಂಜೆಡಿವೈ ಮೂಲಕ ಜನರು ಬ್ಯಾಂಕಿಂಗ್, ಉಳಿತಾಯ, ಠೇವಣಿ ಖಾತೆ, ಹಣ ರವಾನೆ, ಪಿಂಚಣಿ, ಕ್ರೆಡಿಟ್ ವಿಮೆ ಮಾಡಲಾಗುತ್ತದೆ. ನಾವು ಯಾವುದೇ ಬ್ಯಾಂಕ್‌ನಲ್ಲಿ ಪ್ರಧಾನ ಮಂತ್ರಿ ಜನ-ಧನ ಯೋಜನೆ ಖಾತೆಯನ್ನು ತೆರೆಯಬಹುದಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ: ಮೂವರು ಹೆಣ್ಣು ಮಕ್ಕಳಿಗೂ ಹೇಗೆ ಅನ್ವಯವಾಗುತ್ತದೆ ಎಂದು ತಿಳಿಯಿರಿಸುಕನ್ಯಾ ಸಮೃದ್ಧಿ ಯೋಜನೆ: ಮೂವರು ಹೆಣ್ಣು ಮಕ್ಕಳಿಗೂ ಹೇಗೆ ಅನ್ವಯವಾಗುತ್ತದೆ ಎಂದು ತಿಳಿಯಿರಿ

ಈ ಖಾತೆಗೆ ಯಾವುದೇ ಕನಿಷ್ಠ ಮಿತಿ ಇಲ್ಲ. ಹಾಗೆಯೇ ಈ ಖಾತೆಗೂ ಕೂಡಾ ಸಾಮಾನ್ಯ ಉಳಿತಾಯ ಖಾತೆಯಂತೆ ಬಡ್ಡಿದರವನ್ನು ಜಮೆ ಮಾಡಲಾಗುತ್ತದೆ. ವಾರ್ಷಿಕವಾಗಿ ಶೇಕಡ 3ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ ಈ ಖಾತೆಗೆ ಚೆಕ್ ಬುಕ್ ಅನ್ನು ನೀಡಲಾಗುವುದಿಲ್ಲ. ಈ ಯೋಜನೆಯಲ್ಲಿ ಏನೆಲ್ಲ ವಿಶೇಷ ಪ್ರಯೋಜನ ಇದೆ, ಯಾರೆಲ್ಲಾ ಈ ಖಾತೆಯನ್ನು ತೆರೆಯಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಸ್ವಾಭಿಮಾನ ಯೋಜನೆಗಿಂತ ಪಿಎಂ ಜನ-ಧನ ಯೋಜನೆ ಹೇಗೆ ಭಿನ್ನ

ಸ್ವಾಭಿಮಾನ ಯೋಜನೆಗಿಂತ ಪಿಎಂ ಜನ-ಧನ ಯೋಜನೆ ಹೇಗೆ ಭಿನ್ನ

ಆರಂಭದಲ್ಲಿ ಈ ಯೋಜನೆಯು ಗ್ರಾಮೀಣ ಜನರ ಮೇಲೆ ಕೇಂದ್ರೀಕರಿಸಿತ್ತು. ಆದರೆ ಈಗ ಎಲ್ಲಾ ವಯಸ್ಕ ಜನರ ಮೇಲೆ ಕೇಂದ್ರೀಕರಿಸಿದೆ. ಇದು ಗ್ರಾಮೀಣ ಹಾಗೂ ನಗರದ ಜನರ ಮೇಲೆ ಕೇಂದ್ರೀಕರಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್‌ಸೈಟ್ ಪ್ರಕಾರ ದೇಶದ ಎಲ್ಲಾ ವಯಸ್ಕರು ಬ್ಯಾಂಕ್ ಖಾತೆಯನ್ನು ಹೊಂದುವಂತೆ ನೋಡಿಕೊಳ್ಳುವುದು ಇದರ ಗುರಿಯಾಗಿದೆ. ಈ ಹಿಂದೆ ಎಲ್ಲ ಮನೆಗೂ ಒಂದು ಬ್ಯಾಂಕ್ ಖಾತೆ ಇರಬೇಕು ಎಂಬ ಗುರಿಯನ್ನು ಹೊಂದಲಾಗಿತ್ತು. ಆದರೆ ಈಗ ಎಲ್ಲ ವಯಸ್ಕರು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎಂಬ ಉದ್ದೇಶವನ್ನು ಹೊಂದಲಾಗಿದೆ.

PM Kisan Yojana KYC last date : ರೈತರಿಗೆ ಸಿಹಿಸುದ್ದಿ: ಪಿಎಂ ಕಿಸಾನ್ ಯೋಜನೆ ಇಕೆವೈಸಿ ಮತ್ತೆ ವಿಸ್ತರಣೆPM Kisan Yojana KYC last date : ರೈತರಿಗೆ ಸಿಹಿಸುದ್ದಿ: ಪಿಎಂ ಕಿಸಾನ್ ಯೋಜನೆ ಇಕೆವೈಸಿ ಮತ್ತೆ ವಿಸ್ತರಣೆ

 ಪಿಎಂಜಿಡಿವೈ ಖಾತೆಯನ್ನು ಯಾರು ತೆರೆಯಬಹುದು?

ಪಿಎಂಜಿಡಿವೈ ಖಾತೆಯನ್ನು ಯಾರು ತೆರೆಯಬಹುದು?

ಯಾವುದೇ ವ್ಯಕ್ತಿಯು ಪ್ರಧಾನ ಮಂತ್ರಿ ಜನ ಧನ ಯೋಜನೆಯ ಅಡಿಯಲ್ಲಿ ಖಾತೆಯನ್ನು ತೆರೆಯಬಹುದು. ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ನೀವು ವ್ಯಾಪಾರ ಖಾತೆಯನ್ನು ಹೊಂದುವುದಾದರೆ ಮಾತ್ರ ಅದಕ್ಕೆ 10 ವರ್ಷ ಅಥವಾ ಅದಕ್ಕಿಂತ ಅಧಿಕ ವಯಸ್ಸಿನ ಮಿತಿ ಇದೆ. ಇನ್ನು ಪ್ರಧಾನ ಮಂತ್ರಿ ಜನ ಧನ ಯೋಜನೆಯ ಅಡಿಯಲ್ಲಿ ನೀವು ಜಂಟಿ ಖಾತೆಯನ್ನು ಕೂಡಾ ತೆರೆಯುವ ಅವಕಾಶವಿದೆ. ಯಾವುದೇ ಬ್ರಾಂಚ್‌ನಲ್ಲಿ ಜಂಟಿ ಖಾತೆಯನ್ನು ತೆರೆಯಬಹುದು.

 ಯಾವೆಲ್ಲಾ ವಿಶೇಷ ಪ್ರಯೋಜನವಿದೆ?

ಯಾವೆಲ್ಲಾ ವಿಶೇಷ ಪ್ರಯೋಜನವಿದೆ?

ಪ್ರಧಾನ ಮಂತ್ರಿ ಜನ ಧನ ಯೋಜನೆಯಲ್ಲಿ ನೇರ ಹಾಗೂ ವಿಶೇಷ ಪ್ರಯೋಜನಗಳು ಇದೆ. ಆ ಪ್ರಯೋಜನಗಳನ್ನು ನಾವು ಈ ಕೆಳಗೆ ಪಟ್ಟಿ ಮಾಡಿದ್ದೇವೆ.

1. ಪಿಎಂಜೆಡಿವೈ ಅಡಿಯಲ್ಲಿ ಬ್ಯಾಂಕ್‌ನಲ್ಲಿ ತೆರೆಯಲಾಗುವ ಖಾತೆಯಲ್ಲಿ ಡೆಪಾಸಿಟ್ ಮಾಡಲಾಗುವ ಹಣದ ಮೇಲೆ ಬಡ್ಡಿದರ ಲಭ್ಯವಾಗಲಿದೆ.
2. 1 ಲಕ್ಷದವರೆಗೆ ನೀವು ಅಪಘಾತ ವಿಮೆಯನ್ನು ನೀವು ಪಡೆಯಬಹುದು. 28.08.2018ರ ಬಳಿಕ ತೆರೆದ ಖಾತೆಗೆ 2 ಲಕ್ಷ ರೂಪಾಯಿ ವಿಮೆಯನ್ನು ಕೋರುವ ಅವಕಾಶವಿದೆ.
3. ಯಾವುದೇ ಕನಿಷ್ಠ ಬ್ಯಾಲೆನ್ಸ್ ಮಿತಿ ಇಲ್ಲ. ಜಿರೋ ಅಮೌಂಟ್ ಅಕೌಂಟ್ ಇದಾಗಿದೆ.
4. ಭಾರತದಾದ್ಯಂತ ಹಣವನ್ನು ಸುಲಭವಾಗಿ ವರ್ಗಾವಣೆ ಮಾಡುವ ಅವಕಾಶ ನೀಡುತ್ತದೆ. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವವರಿಗೆ ಈ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ.
5. ಆರು ತಿಂಗಳುಗಳ ಕಾಲ ಈ ಖಾತೆಯಲ್ಲಿ ಯಶಸ್ವಿ ವಹಿವಾಟು ನಡೆದರೆ, ಓವರ್‌ಡ್ರಾಫ್ಟ್ ಸೌಲಭ್ಯ ಲಭ್ಯವಾಗಲಿದೆ. ಇದಕ್ಕೆ ಅರ್ಹತಾ ಮಾನದಂಡವಿದೆ.
6. ಪಿಂಚಣಿ ಹಾಗೂ ವಿಮೆಯ ಮೊತ್ತ ಈ ಖಾತೆಗೆ ಜಮೆ ಆಗಲಿದೆ.

English summary

Special Benefits Of Pradhan Mantri Jan-Dhan Yojna; Explained in Kannada

Pradhan Mantri Jan-Dhan Yojana (PMJDY) is a National Mission on Financial Inclusion. Special Benefits Of Pradhan Mantri Jan-Dhan Yojana, Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X