For Quick Alerts
ALLOW NOTIFICATIONS  
For Daily Alerts

ATM ಅಥವಾ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಮೋಸಕ್ಕೆ ಒಳಗಾಗುವ ಮುನ್ನ ಇಲ್ಲೊಮ್ಮೆ ನೋಡಿ

|

ಇತ್ತೀಚಿನ ದಿನಗಳಲ್ಲಿ ತಂತ್ರಜ್ಙಾನ ಬೆಳೆದಂತೆ ಬ್ಯಾಂಕಿಂಗ್ ವ್ಯವಹಾರಗಳು ಸುಲಭವಾಗುತ್ತಿದೆ. ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತಿವೆ. ಸಮಯದ ಉಳಿತಾಯದ ಜೊತೆಗೆ ಸುಲಭವಾಗಿ ಹಣದ ವರ್ಗಾವಣೆ, ಬಿಲ್ ಪಾವತಿಯನ್ನು ಮಾಡಬಹುದಾಗಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸದಿದ್ದರೆ ಮೋಸಕ್ಕೂ ಒಳಗಾಗಬೇಕಾಗುತ್ತದೆ.

ಬ್ಯಾಂಕಿನಲ್ಲಿ ಸಾಲುಗಟ್ಟಿ ನಿಂತು ಹಣ ಠೇವಣಿ ಮಾಡುವುದು, ಹಣವನ್ನ ಹಿಂತೆಗೆದುಕೊಳ್ಳುತ್ತಿದ್ದ ಕಾಲ ಬದಲಾಗಿದೆ. ATM ಮಷಿನ್ ಗಳು ಬಂದ ಮೇಲಂತೂ ಜನರು ಹಣವನ್ನು ಠೇವಣಿ ಮಾಡುವುದು, ಹಣ ಹಿಂತೆಗೆದುಕೊಳ್ಳಲು ಹೆಚ್ಚು ಸಹಾಯಕವಾಗಿದೆ. ಆದರೆ ATMನಲ್ಲಿ ಹಣ ಹಿಂತೆಗೆದುಕೊಳ್ಳುವ ವೇಳೆ ಕೆಲವು ಮುಂಜಾಗ್ರತಾ ಕ್ರಮ ವಹಿಸದಿದ್ದರೆ ನೀವು ಮೋಸದ ಬಲೆಯಲ್ಲಿ ಬೀಳಬಹುದು.

ಆಂಡ್ರಾಯಿಡ್ ಬಳಕೆದಾರರ ಹಣ ದೋಚಿದೆಯಂತೆ ಈ ಕೀ ಬೋರ್ಡ್ ಅಪ್ಲಿಕೇಷನ್

 

ಹಾಗಿದ್ದರೆ ನೀವು ATM ನಲ್ಲಿ ಹಣವನ್ನು ಹಿಂತೆಗೆದುಕೊಳ್ಳುವಾಗ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ ವ್ಯವಹಾರ ಮಾಡುವಾಗ ಗಮನಿಸಬೇಕಾದ ಕೆಲವು ಅಂಶಗಳು ಕೆಳಗಿವೆ ನೋಡಿ

ಕೀಪ್ಯಾಡ್ ನಲ್ಲಿ ಸ್ಕಿಮ್ಮರ್ ಇದೆಯಾ ಎಂದು ಪರೀಕ್ಷಿಸಿ

ಕೀಪ್ಯಾಡ್ ನಲ್ಲಿ ಸ್ಕಿಮ್ಮರ್ ಇದೆಯಾ ಎಂದು ಪರೀಕ್ಷಿಸಿ

ಎಟಿಎಂನಲ್ಲಿ ಹಣವನ್ನು ಹಿಂತೆಗೆದುಕೊಳ್ಳಲು ಸೀಕ್ರೆಟ್ ಪಿನ್ ನಮೂದಿಸಬೇಕಾಗುತ್ತದೆ. ಪಿನ್ ನಮೂದಿಸುವುದಕ್ಕೂ ಮುನ್ನ ಕೀಪ್ಯಾಡ್ ಸರಿಯಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸ್ಕಿಮ್ಮರ್ ಎಂಬ ಸಾಧನವನ್ನು ಬಳಸಿ ಜನರಿಗೆ ಮೋಸ ಎಸೆಗಲಾಗುತ್ತಿದೆ. ಕೀಪ್ಯಾಡ್ ರೀತಿಯಲ್ಲಿ ಇರುವ ಸ್ಕಿಮ್ಮರ್ ಸಾಧನವು ನೀವು ನಮೂದಿಸಿದ ಪಿನ್ ಸಂಖ್ಯೆ ಹಾಗೂ ವಿವರಗಳನ್ನು ದಾಖಲಿಸಿಕೊಳ್ಳುತ್ತದೆ. ಹಾಗೆಯೇ ಕಾರ್ಡ್‌ ಸ್ವೈಪ್‌ ಮಾಡುವ ಜಾಗದಲ್ಲೂ ಸ್ಕಿಮ್ಮರ್ ಅಳವಡಿಸಲಾಗುತ್ತದೆ. ಹೀಗಾಗಿ ಪ್ರತಿ ಬಾರಿ ATMಗೆ ತೆರಳಿದಾಗ ಒಮ್ಮೆ ಪರೀಕ್ಷಿಸಿ.

ಯಂತ್ರದ ಹತ್ತಿರ ನಿಂತು ಸೀಕ್ರೆಟ್ ಪಿನ್ ದಾಖಲಿಸಿ

ಯಂತ್ರದ ಹತ್ತಿರ ನಿಂತು ಸೀಕ್ರೆಟ್ ಪಿನ್ ದಾಖಲಿಸಿ

ನಿಮ್ಮ ಕಾರ್ಡ್ ವಿವರಗಳನ್ನು ತಿಳಿಯಲು ಕೆಲವರು ಉತ್ಸುಕರಾಗಿರುತ್ತಾರೆ. ಹೀಗಾಗಿ ಆದಷ್ಟು ATM ಮಷಿನ್ ಗೆ ಹತ್ತಿರವಾಗಿ ನಿಂತು ಹಿಂದಿನ ವ್ಯಕ್ತಿಗೆ ಕಾಣದಂತೆ ನಿಮ್ಮ ವಿವರಗಳನ್ನ ದಾಖಲಿಸಿ

ಪಿನ್‌ ನಂಬರ್‌ ಯಾರೊಂದಿಗೂ ಹಂಚಿಕೊಳ್ಳಬೇಡಿ
 

ಪಿನ್‌ ನಂಬರ್‌ ಯಾರೊಂದಿಗೂ ಹಂಚಿಕೊಳ್ಳಬೇಡಿ

ಮುಖ್ಯವಾದ ಅಂಶ ಅಂದರೆ, ನೀವು ನಿಮ್ಮ ATM ಪಿನ್‌ ನಂಬರ್ ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಲ್ಲದೆ ಕಾರ್ಡ್ ಮೇಲೆ ಪಿನ್ ನಂಬರ್ ಬರೆಯದೇ ನೆನಪಿಟ್ಟುಕೊಳ್ಳುವುದು ಉತ್ತಮ.

ನಿಮ್ಮ ವಹಿವಾಟಿನ ನಂತರ ರಶೀದಿ ಹರಿದು ಹಾಕಿ

ನಿಮ್ಮ ವಹಿವಾಟಿನ ನಂತರ ರಶೀದಿ ಹರಿದು ಹಾಕಿ

ATMನಲ್ಲಿ ವಿವರಗಳನ್ನು ನಮೂದಿಸಿದ ಬಳಿಕ ಕಾರ್ಡ್‌ ಹೊರತೆಗೆಯಿರಿ ಮತ್ತು ನಿಮ್ಮ ವಹಿವಾಟನ್ನು ಪರಿಶೀಲಿಸಿದ ಬಳಿಕ ಬರುವ ರಶೀದಿಯನ್ನು ಹರಿದು ಹಾಕಿ

ನೆಟ್‌ ಬ್ಯಾಂಕಿಂಗ್-ಮೊಬೈಲ್‌ ಬ್ಯಾಂಕಿಂಗ್ ಪಾಸ್‌ವರ್ಡ್‌ ಬೇರೆಯಿರಲಿ

ನೆಟ್‌ ಬ್ಯಾಂಕಿಂಗ್-ಮೊಬೈಲ್‌ ಬ್ಯಾಂಕಿಂಗ್ ಪಾಸ್‌ವರ್ಡ್‌ ಬೇರೆಯಿರಲಿ

ನೀವು ನೆಟ್‌ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಎರಡನ್ನೂ ಬಳಸುತ್ತಿದ್ದರೆ, ಸುರಕ್ಷತಾ ದೃಷ್ಟಿಯಿಂದ ಎರಡು ವಿಭಿನ್ನ ಪಾಸ್‌ವರ್ಡ್‌ ಇರಿಸಿಕೊಂಡರೆ ಉತ್ತಮ. ನೀವು ಮೊಬೈಲ್ ಬ್ಯಾಂಕಿಂಗ್ ಮಾಡುವಾಗ ಎಂ-ಪಿನ್ ಇರುತ್ತದೆ. ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಗ್ರಾಹಕರು ಮೋಸ ಹೋಗಬಾರದೆಂದು ನೋದಾಂಯಿಸಲ್ಪಟ್ಟ ಪೋನ್ ನಂಬರ್‌ ಹೊಂದಿದ ಮೊಬೈಲ್‌ನಷ್ಟೇ ಬ್ಯಾಂಕಿಂಗ್ ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡಿಕೊಳ್ಳಲು ಬ್ಯಾಂಕ್‌ಗಳು ಅನುಮತಿ ನೀಡುತ್ತವೆ.

'Remember password' ಎಂಬ ಟ್ಯಾಬ್ ಕ್ಲಿಕ್ ಮಾಡಬೇಡಿ

'Remember password' ಎಂಬ ಟ್ಯಾಬ್ ಕ್ಲಿಕ್ ಮಾಡಬೇಡಿ

ಯಾವುದೇ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಕಿಂಗ್‌ನಲ್ಲಿ ನಿಮ್ಮ ಐಡಿ ಹಾಗೂ ಪಾಸ್‌ವರ್ಡ್ ನಮೂದಿಸಿದ ಬಳಿಕ ಸ್ವಯಂ ಉಳಿಸುವ ಆಯ್ಕೆ ಮಾಡಿಕೊಳ್ಳದಿರಿ. ಏಕೆಂದರೆ ಅದು ತಿಳಿಯದೇ ಮೋಸದ ವಹಿವಾಟಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ 'ಪಾಸ್‌ವರ್ಡ್‌ ನೆನಪಿಡಿ' (Remember password) ಎಂದು ಹೇಳುವ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಡಿ.

ಬ್ಯಾಂಕಿನಿಂದ Notification ಬರುವುದನ್ನ ಖಚಿತಪಡಿಸಿಕೊಳ್ಳಿ

ಬ್ಯಾಂಕಿನಿಂದ Notification ಬರುವುದನ್ನ ಖಚಿತಪಡಿಸಿಕೊಳ್ಳಿ

ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ನಿಮ್ಮ ಬ್ಯಾಂಕಿಂಗ್ ಅಧಿಸೂಚನೆಯನ್ನು (Notification) ಪಡೆದುಕೊಳ್ಳುವುದನ್ನ ಪರೀಕ್ಷಿಸಿಕೊಳ್ಳಿ. ಅಂದರೆ ನೀವು ತಪ್ಪಾಗಿ ಲಾಗಿನ್ ಆಗಿದ್ದಲ್ಲಿ ಅಧಿಸೂಚನೆ (Notification) ಬರುತ್ತಿದೆಯಾ ಅಥವಾ ಇಲ್ಲವಾ ಎಂದು ಖಚಿತಪಡಿಸಿಕೊಳ್ಳಿ.

ಮೊಬೈಲ್ ಆ್ಯಪ್ ಅಪ್‌ಡೇಟ್ ಮಾಡುತ್ತಿರಬೇಕು

ಮೊಬೈಲ್ ಆ್ಯಪ್ ಅಪ್‌ಡೇಟ್ ಮಾಡುತ್ತಿರಬೇಕು

ಆದಷ್ಟು ಮೊಬೈಲ್ ಆ್ಯಪ್ ಗಳನ್ನು ಅಪ್‌ಡೇಟ್ ಮಾಡುತ್ತಿರಿ ಮತ್ತು ವೈ-ಫೈ ಸಂಪರ್ಕ ಸಿಕ್ಕಾಗ ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುವಂತೆ ನೀವು ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು.

English summary

These Are The Steps To Avoid Mobile Banking Scams and Withdrawing Funds At ATM

withdrawing funds at ATM or Doing mobile banking, these are the steps to avoid scam
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more