For Quick Alerts
ALLOW NOTIFICATIONS  
For Daily Alerts

ಹೊಸದಾಗಿ ಜಾರಿಯಾದ 7 ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ತಿಳಿಯಿರಿ

|

ಪ್ರತಿ ವರ್ಷವು ಪ್ರಮುಖ ಕಾರ್ಡ್ ನೀಡುವ ಸಂಸ್ಥೆಗಳು ಹೊಸ ಕ್ರೆಡಿಟ್ ಕಾರ್ಡ್ ಅನ್ನು ಜಾರಿಗೆ ತರುತ್ತದೆ. ಕಾರ್ಡ್ ಬಳಕೆದಾರರ ಅಗತ್ಯವನ್ನು ನೋಡಿಕೊಂಡು ಸಂಸ್ಥೆಗಳು ಕಾರ್ಡ್ ಅನ್ನು ಜಾರಿಗೆ ತರುತ್ತದೆ. ಈ ವರ್ಷ ಹಲವಾರು ಕಾರ್ಡ್‌ಗಳನ್ನು ಜಾರಿಗೆ ತರಲಾಗಿದೆ. ಕೆಲವು ಸಂಸ್ಥೆಗಳೊಂದಿಗೆ ಜೊತೆಯಾಗಿ ಏಳು ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ಜಾರಿಯಾಗಿದೆ.

 

ಪೈಸಾ ಬಜಾರ್ ಪ್ರಮುಖ ಏಳು ಕ್ರೆಡಿಟ್ ಕಾರ್ಡ್‌ಗಳನ್ನು ಪಟ್ಟಿ ಮಾಡಿದೆ. ಶುಲ್ಕದ ಲೆಕ್ಕಾಚಾರವನ್ನು ಕೂಡಾ ನೀಡಲಾಗಿದೆ. ಆದರೆ ಯಾವುದೇ ಕ್ರೆಡಿಟ್ ಕಾರ್ಡ್ ಆದರೂ ಜಾಗರೂಕವಾಗಿ, ಜವಾಬ್ದಾರಿಯುತವಾಗಿ ಬಳಕೆ ಮಾಡಬೇಕು ಎಂಬುವುದು ನೆನಪು ಇರಲಿ.

ಈ ಕ್ರೆಡಿಟ್ ಕಾರ್ಡ್‌ಗಿಲ್ಲ ಯುಪಿಐ ವಹಿವಾಟು ಶುಲ್ಕ!ಈ ಕ್ರೆಡಿಟ್ ಕಾರ್ಡ್‌ಗಿಲ್ಲ ಯುಪಿಐ ವಹಿವಾಟು ಶುಲ್ಕ!

ಅತೀ ಕಡಿಮೆ ವಾರ್ಷಿಕ ಶುಲ್ಕವನ್ನು ಹೊಂದಿರುವ ಕಾರ್ಡ್‌ಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ. ಅಕ್ಟೋಬರ್ 6ರವರೆಗಿನ ಪ್ರಮುಖ ಕ್ರೆಡಿಟ್ ಕಾರ್ಡ್‌ಗಳ ಮಾಹಿತಿ ಇಲ್ಲಿದೆ. ಆದರೆ ಯಾವುದೇ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡುವಾಗ ಜಾರಗೂಕರಾಗಿ ಇರಬೇಕು ಎಂಬುವುದು ನೆನಪಿನಲ್ಲಿ ಇರಲಿ. ಏಳು ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಸ್ಟಾಡರ್ಡ್ ಚಾರ್ಟೆಡ್ ಈಜ್‌ಮೈಟ್ರಿಪ್ ಕಾರ್ಡ್

ಸ್ಟಾಡರ್ಡ್ ಚಾರ್ಟೆಡ್ ಈಜ್‌ಮೈಟ್ರಿಪ್ ಕಾರ್ಡ್

ಸ್ಟಾಡರ್ಡ್ ಚಾರ್ಟೆಡ್ ಈಜ್‌ಮೈಟ್ರಿಪ್ ಕ್ರೆಡಿಟ್ ಕಾರ್ಡ್ ಹೊಟೇಲ್ ಬುಕ್ಕಿಂಗ್ ಮೇಲೆ ಶೇಕಡ 20ರಷ್ಟು ರಿಯಾಯಿತಿಯನ್ನು ನೀಡುತ್ತದೆ. ಹಾಗೆಯೇ ವಿಮಾನ ಟಿಕೆಟ್ ಬುಕ್ಕಿಂಗ್ ಮೇಲೆ ಶೇಕಡ 10ರಷ್ಟು ರಿಯಾಯಿತಿ ನೀಡುತ್ತದೆ. ಆದರೆ ಈಜ್‌ಮೈಟ್ರಿಪ್ ವೆಬ್‌ಸೈಟ್ ಅಥವಾ ಮೊಬೈಲ್ ಆಪ್‌ ಮೂಲಕ ಬುಕ್ಕಿಂಗ್ ಮಾಡಬೇಕಾಗುತ್ತದೆ. ಇನ್ನು ಈಜ್‌ಮೈಟ್ರಿಪ್‌ನಲ್ಲಿ ಈ ಕ್ರೆಡಿಟ್ ಕಾರ್ಡ್ ಬಳಸಿ ಬಸ್‌ ಟಿಕೆಟ್ ಬುಕ್ ಮಾಡಿದರೆ 125 ರೂಪಾಯಿ ರಿಯಾಯಿತಿ ನೀಡಲಾಗುತ್ತದೆ. ಹೊಟೇಲ್‌ಗಳಲ್ಲಿ ಮಾಡುವ ಖರ್ಚಿಗೆ ಹಾಗೂ ವಿಮಾನ ಟಿಕೆಟ್ ಬುಕ್ಕಿಂಗ್ ಮೇಲೆ ಈ ಕ್ರೆಡಿಟ್ ಕಾರ್ಡ್ ಬಳಕೆದಾರರು ಪ್ರತಿ 100 ರೂಪಾಯಿಗೆ 10x ರಿವಾರ್ಡ್ ಪಡೆಯಬಹುದು. ರಿಟೇಲ್ ಖರ್ಚಿನ ಮೇಲೆ ಪ್ರತಿ 100 ರೂಪಾಯಿಗೆ 2 ಪಾಯಿಂಟ್ ರಿವಾರ್ಡ್ ಪಡೆಯಬಹುದು. ವರ್ಷದಲ್ಲಿ ಎರಡು ಬಾರಿ ಉಚಿತವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭೇಟಿ ನೀಡಬಹುದು ಮತ್ತು ಒಂದು ಬಾರಿ ಸ್ಥಳೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಬಹುದು. ವಾರ್ಷಿಕವಾಗಿ ಈ ಕಾರ್ಡ್‌ ಮೇಲೆ 350 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ವಾರ್ಷಿಕವಾಗಿ 50,000 ರೂಪಾಯಿ ವೆಚ್ಚ ಮಾಡಿದರೆ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.

 ಟಾಟಾ ನಿಯೋ ಪ್ಲಸ್ ಎಚ್‌ಡಿಎಫ್‌ಸಿ ಕಾರ್ಡ್
 

ಟಾಟಾ ನಿಯೋ ಪ್ಲಸ್ ಎಚ್‌ಡಿಎಫ್‌ಸಿ ಕಾರ್ಡ್

ಟಾಟಾ ನಿಯೋ ಪ್ಲಸ್ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಟಾಟಾ ನಿಯೋ (Tata Neu) ಆಪ್‌ನಲ್ಲಿ ವೆಲ್‌ಕಮ್ ಬೆನಿಫಿಟ್ ರೂಪದಲ್ಲಿ 499 ನಿಯೋ ಕಾಯಿನ್‌ಗಳನ್ನು ನೀಡಲಾಗುತ್ತದೆ. ಟಾಟಾ ನಿಯೋ ಹಾಗೂ ಟಾಟಾ ಬ್ರಾಂಡ್‌ ಅನ್ನು ಇಎಂಐ ಇಲ್ಲದೆ ಈ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ ಶೇಕಡ 2ರಷ್ಟು ಕ್ಯಾಷ್‌ಬ್ಯಾಕ್ ನೀಡಲಾಗುತ್ತದೆ. ವಹಿವಾಟಿನಲ್ಲಿ ಶೇಕಡ 5ರಷ್ಟು ಕ್ಯಾಷ್‌ಬ್ಯಾಕ್ ಕೂಡಾ ನೀಡಲಾಗುತ್ತದೆ. ವಾರ್ಷಿಕವಾಗಿ ನಾಲ್ಕು ಬಾರಿ ಸ್ಥಳೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಬಂಕ್‌ಗಳಲ್ಲಿ ಇಂಧನ ಹಾಕಿಸಿದರೆ ಶೇಕಡ 1ರಷ್ಟು ರಿಯಾಯಿತಿ ಇದೆ. ಈ ಕಾರ್ಡ್‌ನ ವಾರ್ಷಿಕ ಶುಲ್ಕ 499 ರೂಪಾಯಿ ಆಗಿದೆ. ವಾರ್ಷಿಕವಾಗಿ 1 ಲಕ್ಷ ರೂಪಾಯಿ ಕ್ರೆಡಿಟ್ ಕಾರ್ಡ್ ಮೂಲಕ ವಹಿವಾಟು ನಡೆಸಿದರೆ ವಾರ್ಷಿಕ ಶುಲ್ಕ ಮನ್ನಾ ಮಾಡಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಕ್ರೆಡಿಟ್ ಸ್ಕೋರ್ ಹೀಗೆ ಹೆಚ್ಚಿಸಿ!ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಕ್ರೆಡಿಟ್ ಸ್ಕೋರ್ ಹೀಗೆ ಹೆಚ್ಚಿಸಿ!

 ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕ್ ಸಿಗ್ನೇಚರ್ ಕಾರ್ಡ್

ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕ್ ಸಿಗ್ನೇಚರ್ ಕಾರ್ಡ್

ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕ್ ಸಿಗ್ನೇಚರ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿ ಮೇಲೆ ಶೇಕಡ 10ರಷ್ಟು ಕ್ಯಾಷ್‌ಬ್ಯಾಕ್ ನೀಡಲಾಗುತ್ತದೆ. 30 ದಿನದಲ್ಲಿ ಮಾಡುವ 3 ವಹಿವಾಟಿಗೆ 2,500 ರಿವಾರ್ಡ್ ಪಾಯಿಂಟ್ ಲಭ್ಯವಾಗುತ್ತದೆ. ಬಿಗ್‌ಬಾಸ್ಕೆಟ್, ಟಾಟಾ 1ಎಂಜಿ, ಅರ್ಬನ್ ಕಂಪನಿ, ಮಿಂತ್ರಾ, ಜೊಮ್ಯಾಟೋದಲ್ಲಿ ಖರ್ಚು ಮಾಡುವ ಪ್ರತಿ 100 ರೂಪಾಯಿಗೆ 10 ರಿವಾರ್ಡ್ ಪಾಯಿಂಟ್ ಲಭ್ಯವಾಗುತ್ತದೆ. ವಾರ್ಷಿಕವಾಗಿ ನಾಲ್ಕು ಬಾರಿ ಸ್ಥಳೀಯ ವಿಮಾನ ನಿಲ್ದಾಣಕ್ಕೆ ಭೇಟಿ ಅವಕಾಶವಿದೆ. 4,000 ಪಾರ್ಟ್‌ನರ್ ರೆಸ್ಟೋರೆಂಟ್‌ಗಳಲ್ಲಿ ಶೇಕಡ 15ರಷ್ಟು ಆಫರ್‌ ನೀಡಲಾಗುತ್ತದೆ. ಬಂಕ್‌ಗಳಲ್ಲಿ ಇಂಧನ ಹಾಕಿಸಿದರೆ ಶೇಕಡ 1ರಷ್ಟು ಶುಲ್ಕ ಮನ್ನಾ ಮಾಡಲಾಗುತ್ತದೆ. ವಾರ್ಷಿಕ ಶುಲ್ಕ 500 ರೂಪಾಯಿ ಆಗಿದೆ.

 ಏರ್‌ಟೆಲ್ ಆಕ್ಸಿಸ್ ಕ್ರೆಡಿಟ್ ಕಾರ್ಡ್

ಏರ್‌ಟೆಲ್ ಆಕ್ಸಿಸ್ ಕ್ರೆಡಿಟ್ ಕಾರ್ಡ್

ಏರ್‌ಟೆಲ್ ಆಕ್ಸಿಸ್ ಕ್ರೆಡಿಟ್ ಕಾರ್ಡ್ ಏರ್‌ಟೆಲ್ ಮೊಬೈಲ್, ಬ್ರಾಡ್‌ಬ್ಯಾಂಡ್, ವೈಫೈ, ಡಿಟಿಎಚ್‌ ಮೇಲೆ ಶೇಕಡ 25ರಷ್ಟು ಕ್ಯಾಷ್‌ಬ್ಯಾಕ್ ನೀಡುತ್ತದೆ. ಗ್ಯಾಸ್, ಎಲೆಕ್ಟ್ರಿಸಿಟಿ ಮೊದಲಾದ ಬಿಲ್‌ಗಳ ಪಾವತಿಗಳ ಮೇಲೆ ಶೇಕಡ 10ರಷ್ಟು ಕ್ಯಾಷ್‌ಬ್ಯಾಕ್ ನೀಡಲಾಗುತ್ತದೆ. ಇನ್ನು ಸ್ವಿಗ್ಗಿ, ಜೊಮ್ಯಾಟೋ, ಬಿಗ್‌ಬಾಸ್ಕೆಟ್‌ನಲ್ಲಿ ಈ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ ನಡೆಸುವ ವಹಿವಾಟಿಗೆ ಶೇಕಡ 10ರಷ್ಟು ಕ್ಯಾಷ್‌ಬ್ಯಾಕ್ ನೀಡಲಾಗುತ್ತದೆ. ವಾರ್ಷಿಕವಾಗಿ ನಾಲ್ಕು ಬಾರಿ ಸ್ಥಳೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಅವಕಾಶವಿದೆ. 4,000 ಪಾರ್ಟ್‌ನರ್ ರೆಸ್ಟೋರೆಂಟ್‌ಗಳಲ್ಲಿ ಶೇಕಡ 20ರಷ್ಟು ಆಫರ್‌ ನೀಡಲಾಗುತ್ತದೆ. ವಾರ್ಷಿಕ ಶುಲ್ಕ 500 ರೂಪಾಯಿ ಆಗಿದೆ.

 ಕ್ಯಾಷ್‌ಬ್ಯಾಕ್ ಎಸ್‌ಬಿಐ ಕಾರ್ಡ್

ಕ್ಯಾಷ್‌ಬ್ಯಾಕ್ ಎಸ್‌ಬಿಐ ಕಾರ್ಡ್

ಕ್ಯಾಷ್‌ಬ್ಯಾಕ್ ಎಸ್‌ಬಿಐ ಕಾರ್ಡ್ ಆನ್‌ಲೈನ್ ವಹಿವಾಟಿನ ಮೇಲೆ ಶೇಕಡ 5ರಷ್ಟು ಕ್ಯಾಷ್‌ಬ್ಯಾಕ್ ನೀಡುತ್ತದೆ. ಆಫ್‌ಲೈನ್ ವಹಿವಾಟಿನ ಮೇಲೆ ಶೇಕಡ 1ರಷ್ಟು ಕ್ಯಾಷ್‌ಬ್ಯಾಕ್ ನೀಡುತ್ತದೆ. ವಾರ್ಷಿಕವಾಗಿ ನಾಲ್ಕು ಬಾರಿ ಸ್ಥಳೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಅವಕಾಶವಿದೆ. ಬಂಕ್‌ಗಳಲ್ಲಿ ಇಂಧನ ಹಾಕಿಸಿದರೆ ಶೇಕಡ 1ರಷ್ಟು ಶುಲ್ಕ ಮನ್ನಾ ಮಾಡಲಾಗುತ್ತದೆ. ವಾರ್ಷಿಕ ಶುಲ್ಕ 999 ರೂಪಾಯಿ ಆಗಿದೆ. 2 ಲಕ್ಷ ರೂಪಾಯಿಗಿಂತ ಅಧಿಕ ಕ್ರೆಡಿಟ್ ಕಾರ್ಡ್ ವಹಿವಾಟು ನಡೆಸಿದರೆ ವಾರ್ಷಿಕ ಶುಲ್ಕ ಮನ್ನಾ ಮಾಡಲಾಗುತ್ತದೆ.

ನೇಚರ್ಸ್ ಬಾಸ್ಕೆಟ್ ಎಸ್‌ಬಿಐ ಕಾರ್ಡ್

ನೇಚರ್ಸ್ ಬಾಸ್ಕೆಟ್ ಎಸ್‌ಬಿಐ ಕಾರ್ಡ್

ನೇಚರ್ಸ್ ಬಾಸ್ಕೆಟ್ ಎಸ್‌ಬಿಐ ಕಾರ್ಡ್ ಪಡೆದವರಿಗೆ ವೆಲ್‌ಕಮ್ ಬೆನಿಫಿಟ್ ಆಗಿ 1,500 ರೂಪಾಯಿ ಮೌಲ್ಯದ ಗಿಫ್ಟ್ ವೋಚರ್ ಅನ್ನು ನೀಡಲಾಗುತ್ತದೆ. ನೇಚರ್ ಬಾಸ್ಕೆಟ್‌ನ ಕಾರ್ಯಕ್ರಮ Epicure ಗೆ ಆಕ್ಸಸ್ ಲಭ್ಯವಾಗಲಿದೆ. ನೇಚರ್ ಬಾಸ್ಕೆಟ್‌ನಲ್ಲಿ ವೆಚ್ಚ ಮಾಡಿದ ಪ್ರತಿ 100 ರೂಪಾಯಿಗೆ 10 ಪಾಯಿಂಟ್ ರಿವಾರ್ಡ್ ನೀಡಲಾಗುತ್ತದೆ. ಊಟ, ಸಿನಿಮಾ, ಮನರಂಜನೆ, ಅಂತರಾಷ್ಟ್ರೀಯ ವೆಚ್ಚದ ಪ್ರತಿ 100 ರೂಪಾಯಿಗೆ 5 ಪಾಯಿಂಟ್ ರಿವಾರ್ಡ್ ನೀಡಲಾಗುತ್ತದೆ. ವಾರ್ಷಿಕವಾಗಿ ನಾಲ್ಕು ಬಾರಿ ಸ್ಥಳೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಅವಕಾಶವಿದೆ. ಬಂಕ್‌ಗಳಲ್ಲಿ ಇಂಧನ ಹಾಕಿಸಿದರೆ ಶೇಕಡ 1ರಷ್ಟು ಶುಲ್ಕ ಮನ್ನಾ ಮಾಡಲಾಗುತ್ತದೆ. ವಾರ್ಷಿಕ ಶುಲ್ಕ 1,499 ರೂಪಾಯಿ ಆಗಿದೆ. 2 ಲಕ್ಷ ರೂಪಾಯಿಗಿಂತ ಅಧಿಕ ಕ್ರೆಡಿಟ್ ಕಾರ್ಡ್ ವಹಿವಾಟು ನಡೆಸಿದರೆ ವಾರ್ಷಿಕ ಶುಲ್ಕ ಮನ್ನಾ ಮಾಡಲಾಗುತ್ತದೆ.

 ಸ್ಪೈಸ್‌ಜೆಟ್ ಆಕ್ಸಿಸ್ ಬ್ಯಾಕ್ ವೊಯೇಜ್ ಬ್ಲಾಕ್ ಕಾರ್ಡ್

ಸ್ಪೈಸ್‌ಜೆಟ್ ಆಕ್ಸಿಸ್ ಬ್ಯಾಕ್ ವೊಯೇಜ್ ಬ್ಲಾಕ್ ಕಾರ್ಡ್

ಸ್ಪೈಸ್‌ಜೆಟ್ ಆಕ್ಸಿಸ್ ಬ್ಯಾಕ್ ವೊಯೇಜ್ ಬ್ಲಾಕ್ ಕ್ರೆಡಿಟ್ ಕಾರ್ಡ್‌ ಬಳಕೆದಾರರಿಗೆ 4,000 ರೂಪಾಯಿ ಮೌಲ್ಯದ ವೋಚರ್‌ ಅನ್ನು ವೆಲ್‌ಕಮ್ ಬೆನಿಫಿಟ್ ರೂಪದಲ್ಲಿ ನೀಡಲಾಗುತ್ತದೆ. ಸ್ಪೈಸ್‌ ಕ್ಲಬ್ ಗೋಲ್ಡ್ ಮೆಂಬರ್‌ಶಿಒಪ್ ಕೂಡಾ ಲಭ್ಯವಾಗಲಿದೆ. ಸ್ಪೈಸ್‌ಜೆಟ್ ಮೊಬೈಲ್ ಅಪ್ಲಿಕೇಷನ್ ಅಥವಾ ವೆಬ್‌ಸೈಟ್‌ನಲ್ಲಿ ವ್ಯಯಿಸುವ ಪ್ರತಿ 200 ರೂಪಾಯಿಗೆ 28 ಸ್ಪೈಸ್‌ ಕ್ಲಬ್ ಪಾಯಿಂಟ್ ಅನ್ನು ನೀಡಲಾಗುತ್ತದೆ. ಆನ್‌ಲೈನ್ ಫುಡ್ ಆರ್ಡರ್, ಬಿಲ್ ಪಾವತಿ, ಮನರಂಜನೆಗೆ ವ್ಯಯಿಸುವ ಪ್ರತಿ 200 ರೂಪಾಯಿಗೆ 12 ಸ್ಪೈಸ್‌ ಕ್ಲಬ್ ಪಾಯಿಂಟ್ ಅನ್ನು ನೀಡಲಾಗುತ್ತದೆ. ವಾರ್ಷಿಕವಾಗಿ 2 ಲಕ್ಷ ರೂಪಾಯಿ ಕ್ರೆಡಿಟ್ ಕಾರ್ಡ್ ವಹಿವಾಟು ನಡೆಸಿದರೆ 4,000 ಸ್ಪೈಸ್‌ ಕ್ಲಬ್ ಪಾಯಿಂಟ್ ಲಭ್ಯವಾಗಲಿದೆ. ವಾರ್ಷಿಕವಾಗಿ ಎಂಟು ಬಾರಿ ಸ್ಥಳೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಅವಕಾಶವಿದೆ. 4,000 ಪಾರ್ಟ್‌ನರ್ ರೆಸ್ಟೋರೆಂಟ್‌ಗಳಲ್ಲಿ ಶೇಕಡ 20ರಷ್ಟು ಆಫರ್‌ ನೀಡಲಾಗುತ್ತದೆ. ವಾರ್ಷಿಕ ಶುಲ್ಕ 2,000 ರೂಪಾಯಿ ಆಗಿದೆ.

English summary

This Seven Credit Cards Newly Launched, Explained Details in Kannada

Every year, leading card issuers launch new credit cards to keep up with the varying needs and requirements of card users. This Seven Credit Cards Newly Launched, Explained Details in Kannada,
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X