For Quick Alerts
ALLOW NOTIFICATIONS  
For Daily Alerts

ಈ ಜನರಿಗೆ ಆಧಾರ್‌ ಅಪ್‌ಡೇಟ್ ಮಾಡಲು ಯುಐಡಿಎಐ ಸೂಚನೆ, ಯಾಕೆ?

|

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಕೆಲವು ಆಧಾರ್ ಕಾರ್ಡ್ ಹೋಲ್ಡರ್‌ಗಳು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡುವಂತೆ ಸೂಚನೆ ನೀಡಿದೆ. ಸುಮಾರು 10 ವರ್ಷಗಳ ಹಿಂದೆ ಯಾರು ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಂಡಿದ್ದರೋ ಅವರು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಬೇಕು ಎಂದು ಯುಐಡಿಎಐ ಹೇಳಿದೆ.

ತಮ್ಮ ದಾಖಲೆಗಳನ್ನು ಮತ್ತೆ ಸಬ್‌ಮಿಟ್ ಮಾಡಿ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದೆ. ಆಧಾರ್‌ ಕಾರ್ಡ್‌ನಲ್ಲಿ ಬಯೋಮೆಟ್ರಿಕ್ ಮಾಹಿತಿಗಳಾದ ಕಣ್ಣಿನ ಸ್ಕ್ಯಾನ್, ಬೆರಳಚ್ಚು, ಫೋಟೋ ಮೊದಲಾದ ಒಬ್ಬ ವ್ಯಕ್ತಿಯ ಮಾಹಿತಿ ಇರುತ್ತದೆ. ಈ ಮಾಹಿತಿಯನ್ನು ಮತ್ತೆ ಅಪ್‌ಡೇಟ್ ಮಾಡಲು ತಿಳಿಸಲಾಗಿದೆ.

ವಾಟ್ಸಾಪ್‌ ಬಳಸಿಕೊಂಡು ಆಧಾರ್, ಪ್ಯಾನ್ ಡೌನ್‌ಲೋಡ್ ಹೀಗೆ ಮಾಡಿವಾಟ್ಸಾಪ್‌ ಬಳಸಿಕೊಂಡು ಆಧಾರ್, ಪ್ಯಾನ್ ಡೌನ್‌ಲೋಡ್ ಹೀಗೆ ಮಾಡಿ

ಸುಮಾರು 12 ವರ್ಷಗಳಿಂದ ದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಬಳಕೆ ಮಾಡಲಾಗುತ್ತಿದೆ. ಈ ಆಧಾರ್ ಕಾರ್ಡ್ ಪ್ರಸ್ತುತ ಜನರ ಪ್ರಮುಖ ದಾಖಲೆಯಾಗಿದೆ. ಎಲ್ಲ ಕಚೇರಿ, ಕೆಲಸಗಳಿಗೂ ಆಧಾರ್ ಕಾರ್ಡ್ ಪ್ರಮುಖವಾಗಿದೆ. ಪ್ರಮುಖವಾಗಿ ಈ ಆಧಾರ್ ಕಾರ್ಡ್ ಸಂಖ್ಯೆಯನ್ನು ಸರ್ಕಾರದ ಯೋಜನೆ ಹಾಗೂ ಸೇವೆಗಳನ್ನು ಪಡೆಯಲು ಬಳಕೆ ಮಾಡಲಾಗುತ್ತದೆ. ಇನ್ನು ಪ್ಯಾನ್ ಜೊತೆ ಎಲ್ಲ ಬ್ಯಾಂಕಿಂಗ್ ಕಾರ್ಯಗಳಿಗೂ ಆಧಾರ್ ಅನ್ನು ಬಳಕೆ ಮಾಡಲಾಗುತ್ತದೆ.

ಈ ಜನರಿಗೆ ಆಧಾರ್‌ ಅಪ್‌ಡೇಟ್ ಮಾಡಲು ಯುಐಡಿಎಐ ಸೂಚನೆ, ಯಾಕೆ?

ಯಾಕಾಗಿ ಆಧಾರ್ ಅಪ್‌ಡೇಟ್?

ನಾವು ಮೊಬೈಲ್ ಫೋನ್‌ಗೆ ಸಿಮ್ ಅನ್ನು ಖರೀದಿ ಮಾಡುವುದರಿಂದ ಹಿಡಿದು, ಕಾರನ್ನು ಖರೀದಿ ಮಾಡುವವರೆಗೂ ಪ್ರಸ್ತುತ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇನ್ನು ಪಾಸ್‌ಪೋರ್ಟ್‌ ಪಡೆಯಲು ಕೂಡಾ ಆಧಾರ್ ಕಾರ್ಡ್ ಅಗತ್ಯವಾಗಿದೆ. ಈ ಆಧಾರ್ ಅಪ್‌ಡೇಟ್ ಆಗದಿದ್ದರೆ ಯಾವುದೇ ಯೋಜನೆಯ ಸವಲತ್ತನ್ನು ಪಡೆಯಲು ಸಾಧ್ಯವಾಗದೆ ಇರಬಹುದು. ಆದ್ದರಿಂದಾಗಿ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡುವುದು ಅತೀ ಮುಖ್ಯವಾಗಿದೆ.

ಉಮಂಗ್ ಆಪ್‌ನಲ್ಲಿ 4 ಆಧಾರ್ ಸೇವೆ ಲಭ್ಯ, ಏನಿದು?ಉಮಂಗ್ ಆಪ್‌ನಲ್ಲಿ 4 ಆಧಾರ್ ಸೇವೆ ಲಭ್ಯ, ಏನಿದು?

ಇನ್ನು ಆಧಾರ್ ಕಾರ್ಡ್ ಅನ್ನು ನಾವು ಶುಲ್ಕವನ್ನು ಪಾವತಿ ಮಾಡಿ ಅಪ್‌ಡೇಟ್ ಮಾಡಿಕೊಳ್ಳಬಹುದು. ನಾವು ಆಧಾರ್ ಸೆಂಟರ್ ಅಥವಾ ಆಧಾರ್ ಕೇಂದ್ರ, ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಆಧಾರ್‌ನಲ್ಲಿ ನಮ್ಮ ಫೋಟೋ, ವಿಳಾಸವನ್ನು ನಾವಾಗಿಯೇ ಆನ್‌ಲೈನ್‌ ಮೂಲಕ ಅಪ್‌ಡೇಟ್ ಮಾಡಿಕೊಳ್ಳಬಹುದು. ಆದರೆ ನಮ್ಮ ಬೆರಳಚ್ಚು ಮೊದಲಾದವುಗಳನ್ನು ಅಪ್‌ಡೇಟ್ ಮಾಡಬೇಕಾದರೆ ನಾವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.

English summary

UIDAI Asks These People To Update Aadhaar Details, Here's Details in Kannada

The Unique Identification Authority of India (UIDAI) has urged a specific chunk of Aadhaar cardholders to get their details updated. Here's details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X