For Quick Alerts
ALLOW NOTIFICATIONS  
For Daily Alerts

ಕೆಲವೇ ಕ್ಲಿಕ್‌ನಲ್ಲಿ ಸಮೀಪದ ಆಧಾರ್ ಕೇಂದ್ರ ಪತ್ತೆ ಹಚ್ಚುವುದು ಹೇಗೆ?

|

ದೇಶದಾದ್ಯಂತ ಆಧಾರ್ ಕೇಂದ್ರಗಳ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವ, ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಭುವನ್ ಆಧಾರ್ ಪೋರ್ಟಲ್ ಪ್ರಾರಂಭಕ್ಕೆ ಯುಐಡಿಎಐ ಸಜ್ಜಾಗಿದ್ದು, ಇನ್ನು ಕೆಲವೇ ಕ್ಲಿಕ್‌ನಲ್ಲಿ ನಾವು ಸಮೀಪದಲ್ಲಿ ಎಲ್ಲಿ ಆಧಾರ್ ಸೇವಾ ಕೇಂದ್ರ ಇದೆ ಎಂದು ತಿಳಿಯಲು ಸಾಧ್ಯವಾಗಲಿದೆ.

ದೇಶದಲ್ಲಿ ಆಧಾರ್ ನೀಡುವ ಸಂಸ್ಥೆಯಾದ ಯುಐಡಿಎಐ ಮತ್ತು ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ), ಇಸ್ರೋ ಭಾರತದಾದ್ಯಂತ ಆಧಾರ್ ಕೇಂದ್ರಗಳ ಮಾಹಿತಿಯನ್ನು ಒದಗಿಸುವ ಭುವನ್ ಆಧಾರ್ ಪೋರ್ಟಲ್ ಅನ್ನು ಪ್ರಾರಂಭಿಸಲು ತಾಂತ್ರಿಕ ಸಹಯೋಗಕ್ಕೆ ಒಪ್ಪಂದ ಮಾಡಿಕೊಂಡಿದೆ.

ಆಧಾರ್ Face Authentication Service ಬಳಕೆ ಮಾಡುವುದು ಹೇಗೆ?ಆಧಾರ್ Face Authentication Service ಬಳಕೆ ಮಾಡುವುದು ಹೇಗೆ?

ಈ ಪೋರ್ಟಲ್‌ನಲ್ಲಿ ನಾವು ನಮ್ಮ ಸಮೀಪದಲ್ಲಿ ಯಾವ ಆಧಾರ್ ಕೇಂದ್ರ ಇದೆ ಎಂದು ತಿಳಿಯಲು ಸಾಧ್ಯವಾಗಲಿದೆ. "ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಹೈದರಾಬಾದ್‌ನ ಎನ್‌ಆರ್‌ಎಸ್‌ಸಿ, ಇಸ್ರೋ ತಾಂತ್ರಿಕ ಸಹಯೋಗಕ್ಕಾಗಿ ಇಂದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ," ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೆಲವೇ ಕ್ಲಿಕ್‌ನಲ್ಲಿ ಸಮೀಪದ ಆಧಾರ್ ಕೇಂದ್ರ ಪತ್ತೆ ಹಚ್ಚುವುದು ಹೇಗೆ?

ಈ ಒಪ್ಪಂದದ ಸಂದರ್ಭದಲ್ಲಿ ಯುಐಡಿಎಐ ಮತ್ತು ಎನ್‌ಆರ್‌ಎಸ್‌ಸಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಉಲ್ಲೇಖ ಮಾಡಲಾಗಿದೆ. "ನಾಗರಿಕರಿಗೆ ನೀಡುವ ಸೇವೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮತ್ತು ಹೊಸ ಆಧಾರ್ ಕೇಂದ್ರಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹ ಮಾಡಲು ಎನ್‌ಆರ್‌ಎಸ್‌ಸಿ ವೆಬ್‌ ಆಧಾರಿತ ಪೋರ್ಟಲ್ ಅನ್ನು ಕೂಡಾ ಒದಗಿಸುತ್ತದೆ," ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಆದಾಯ ತೆರಿಗೆ ಪೋರ್ಟಲ್ ಪಾಸ್‌ವರ್ಡ್ ಬದಲಾಯಿಸುವುದು ಹೇಗೆ?ಆದಾಯ ತೆರಿಗೆ ಪೋರ್ಟಲ್ ಪಾಸ್‌ವರ್ಡ್ ಬದಲಾಯಿಸುವುದು ಹೇಗೆ?

ಹಾಗಾದರೆ ನಾವು ನಮ್ಮ ಸಮೀಪದ ಆಧಾರ್ ಸೇವಾ ಕೇಂದ್ರಗಳ ಬಗ್ಗೆ ಹೇಗೆ ಕೆಲವೇ ಕ್ಲಿಕ್‌ಗಳಲ್ಲಿ ಮಾಹಿತಿಯನ್ನು ಪಡೆಯುವುದು, ಯಾವೆಲ್ಲಾ ಹಂತವನ್ನು ಪಾಲನೆ ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

ಸಮೀಪದ ಆಧಾರ್ ಕೇಂದ್ರ ಪತ್ತೆ ಹಚ್ಚುವುದು ಹೇಗೆ?

1. https://bhuvan.nrsc.gov.in/aadhaar/ ಗೆ ಭೇಟಿ ನೀಡಿ
2. ಸ್ಕ್ರೀನ್‌ನ ಎಡ ಭಾಗದಲ್ಲಿ ನಾಲ್ಕು ಡ್ರಾಪ್‌ಡೌನ್ ಆಯ್ಕೆಗಳು ಇರಲಿದೆ
3. ಸಮೀಪದ ಸೇವಾ ಕೇಂದ್ರದ ಬಗ್ಗೆ ಮಾಹಿತಿಗೆ Centers Nearby ಆಯ್ಕೆ ಮಾಡಿ
4. enter city or location ನಲ್ಲಿ ಸ್ಥಳ ಅಥವಾ ನಗರ ಹಾಕಿ ಸರ್ಚ್ ಮಾಡಿದರೆ ಮಾಹಿತಿ ಲಭ್ಯ (ನೀವು ಕಿಲೋ ಮೀಟರ್ ಬದಲಾವಣೆ ಮಾಡಿಕೊಳ್ಳಬಹುದು)
5. Search by Aadhaar Seva Kendra ಎಂದು ಉಲ್ಲೇಖ ಮಾಡಿ ನೀವು ಕೇಂದ್ರ ಪತ್ತೆ ಹಚ್ಚಬಹುದು. ಇಲ್ಲಿ ಆಧಾರ್ ಸೇವಾ ಕೇಂದ್ರದ ಹೆಸರು ಉಲ್ಲೇಖ ಮಾಡಬೇಕಾಗುತ್ತದೆ.
6. Search by PIN Code ಮೂಲಕವೂ ಕೇಂದ್ರದ ಮಾಹಿತಿ ಪಡೆಯಬಹುದು. ಇಲ್ಲಿ ಪಿನ್ ಕೋಡ್ ಹಾಕಿ ಕೇಂದ್ರದ ವಿವರ ಪಡೆಯಬಹುದು.
7. State-wise Aadhaar Seva Kendraದಲ್ಲಿ ನೀವು ರಾಜ್ಯ, ಜಿಲ್ಲೆ, ತಾಲೂಕು, ವಿಧ ವಿವರ ಹಾಕಿ ಸೇವಾ ಕೇಂದ್ರ ಪತ್ತೆ ಹಚ್ಚ ಬಹುದು

English summary

UIDAI-ISRO Portal: Locate Your Nearest Aadhaar Center, Steps Explained in kannada

Bhuvan Aadhaar portal: Now Locate Your Nearest Aadhaar Center In Just Few Clicks, Steps Explained Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X