ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಹಣಕಾಸು ವರ್ಷ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಎಲ್ಲ ವಲಯಗಳು ಈ ಬಜೆಟ್ ಮೇಲೆ ಅತೀ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ. ಈ ಹಿಂದಿನ ಬಜೆಟ್ ಅನ್ನು ಹಲವಾರು ಮಂದಿ ಸಪ್ಪೆ ಬಜೆಟ್ ಎಂದು ಕರೆದಿದ್ದರು. ಆದರೆ ಈ ಬಜೆಟ್ ಲೋಕಸಭೆ ಚುನಾವಣೆಗೂ ಮುನ್ನ ಬರುವ ಕಾರಣ ನಿರೀಕ್ಷೆಗಳು ಹೆಚ್ಚಾಗಿದೆ.
ಈ ಬಜೆಟ್ ಕೇಂದ್ರ ಸರ್ಕಾರದ ಈ ಆಡಳಿತಾವಧಿಯ ಕೊನೆಯ ಬಜೆಟ್ ಆಗಿದೆ. ಮುಂದಿನ ವರ್ಷ ಅಂದರೆ 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನ ಬರುವ ಬಜೆಟ್ ಇದಾದ ಕಾರಣ ಜನರ ನಿರೀಕ್ಷೆಗಳು ಅಧಿಕವಿದೆ. ಸರ್ಕಾರವು ಭಾರತದ ಜನಸಂಖ್ಯೆಯಲ್ಲಿ ಅಧಿಕವಾಗಿರುವ ಮಧ್ಯಮ ವರ್ಗ, ಮೂಲಸೌಕರ್ಯ, ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಆಧ್ಯತೆ ನೀಡುವ ಸಾಧ್ಯತೆಯಿದೆ.
ಆದರೆ ಈ ಬಜೆಟ್‌ಗೂ ಮುನ್ನ ಬಜೆಟ್ ಬಗ್ಗೆ ಕೆಲವೊಂದು ಸಾಮಾನ್ಯ ವಿಷಯಗಳನ್ನು ನಾವು ತಿಳಿಯುವುದು ಬೇಡವೇ?. ಕೇಂದ್ರ ಬಜೆಟ್ ಬಗ್ಗೆ ಸಾಮಾನ್ಯವಾಗಿ ಹಲವಾರು ಪ್ರಶ್ನೆಗಳಿವೆ. ಆ ಪ್ರಶ್ನೆಗಳ ಪೈಕಿ ಕೇಂದ್ರ ಬಜೆಟ್‌ನಲ್ಲಿ ಎಷ್ಟು ವಿಧಗಳಿವೆ ಎಂಬುವುದು ಕೂಡಾ ಒಂದಾಗಿದೆ. ಆದರೆ ಬಜೆಟ್‌ನಲ್ಲಿ ವಿಧಗಳಿವೆ ಎಂದು ತಿಳಿಯದವರು ಕೂಡಾ ಇದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಎಷ್ಟು ವಿಧವಿದೆ, ಏನದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಬ್ಯಾಲೆನ್ಸ್ಡ್ ಬಜೆಟ್ ಎಂದರೇನು?
ಬ್ಯಾಲೆನ್ಸ್ ಬಜೆಟ್ ಹಣಕಾಸು ಪ್ಲಾನಿಂಗ್ ಅಥವಾ ಬಜೆಟ್ ಪ್ರಕ್ರಿಯೆಯಾಗಿದೆ. ಒಟ್ಟು ಆದಾಯವು ಒಟ್ಟು ವೆಚ್ಚಕ್ಕಿಂತ ಕೊಂಚ ಹೆಚ್ಚಾಗಿದ್ದರೆ ಅಥವಾ ಸರಿಸಮವಾಗಿದ್ದರೆ ಬ್ಯಾಲೆನ್ಸ್ಡ್ ಬಜೆಟ್ (ಹೆಚ್ಚುವರಿ ಉಳಿತಾಯ) ಆಗಿದೆ. ಒಂದು ಹಣಕಾಸು ವರ್ಷದಲ್ಲಿ ಎಲ್ಲ ವೆಚ್ಚ, ಆದಾಯ ಲೆಕ್ಕಾಚಾರದ ಬಳಿಕ ಬ್ಯಾಲೆನ್ಸ್ಡ್ ಬಜೆಟ್ ಅನ್ನು ಲೆಕ್ಕ ಹಾಕಲು ಸಾಧ್ಯವಾಗುತ್ತದೆ. ತೆರಿಗೆಯಿಂದ ಬಂದ ಆದಾಯವು ಸರ್ಕಾರದ ವೆಚ್ಚಕ್ಕೆ ಸರಿಸಮವಾಗಿದ್ದಾಗ ಅಥವಾ ಆದಾಯವು ಹೆಚ್ಚಾಗಿದ್ದಾಗ ಈ ಬ್ಯಾಲೆನ್ಸ್ಡ್ ಬಜೆಟ್ ಅನ್ನು ಲೆಕ್ಕಾಚಾರ ಮಾಡಲಾಗುತ್ತದೆ.
ಸರ್‌ಪ್ಲಸ್ ಬಜೆಟ್ ಎಂದರೇನು?
ವೆಚ್ಚಕ್ಕಿಂತ ಅಧಿಕ ಆದಾಯವಿದ್ದಾಗ ಸರ್‌ಪ್ಲಸ್ ಬಜೆಟ್ ಅನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಸರ್‌ಪ್ಲಸ್ ಬಜೆಟ್ ಸಾಮಾನ್ಯವಾಗಿ ಸರ್ಕಾರದ ಹಣಕಾಸು ಸ್ಥಿತಿಯನ್ನು ತಿಳಿಸುತ್ತದೆ. ಸಾಮಾನ್ಯವಾಗಿ ಬಜೆಟ್ ಸರ್‌ಪ್ಲಸ್‌ಗಿಂತ "ಉಳಿತಾಯ" ಎಂಬ ಶಬ್ಧವನ್ನು ಬಳಸಲಾಗುತ್ತದೆ. ಸರ್ಕಾರವನ್ನು ಸರಿಯಾದ ರೀತಿಯಲ್ಲಿ ನಡೆಸಲಾಗಿದೆ ಎಂಬುವುದಕ್ಕೆ ಈ ಸರ್‌ಪ್ಲಸ್ ಬಜೆಟ್ ಸಾಕ್ಷಿಯಾಗುತ್ತದೆ.
ಡೆಫಿಸಿಟ್ ಬಜೆಟ್ ಎಂದರೇನು?
ಆದಾಯಕ್ಕಿಂತ ಅಧಿಕ ವೆಚ್ಚವಾದಾಗ ಡೆಫಿಸಿಟ್ ಬಜೆಟ್ ಎಂದು ಕರೆಯಲಾಗುತ್ತದೆ. ಹಣಕಾಸು ಸ್ಥಿತಿಯ ಪ್ರತೀಕವಾಗಿದೆ. ಸರ್ಕಾರವು ಹೆಚ್ಚಾಗಿ ಈ ಶಬ್ಧವನ್ನು ಬಜೆಟ್‌ನಲ್ಲಿ ಆದಾಯ ಹಾಗೂ ವೆಚ್ಚದ ನಡುವೆ ಅಸಮತೋಲನ ಇದ್ದಾಗ ಬಳಸುತ್ತದೆ. ಡೆಫಿಸಿಟ್ ಬಜೆಟ್ ಇದ್ದಾಗ ಸರ್ಕಾರದ ಸಾಲ ಹೆಚ್ಚಾಗಿದೆ ಎಂಬುವುದರ ಸೂಚನೆ. ಅಂದರೆ ಆದಾಯ ಕಡಿಮೆಯಾಗಿ, ವೆಚ್ಚ ಹೆಚ್ಚಾಗಿದೆ ಎಂದರ್ಥ.
ಯಾವ ಬಜೆಟ್‌ನಿಂದ ಏನು ಪ್ರಯೋಜನ, ನಷ್ಟ?
ಬ್ಯಾಲೆನ್ಸ್ಡ್ ಬಜೆಟ್: ಹಣಕಾಸು ಸ್ಥಿರತೆಯ ಪ್ರತೀಕ ಇದಾಗಿದೆ. ಹಾಗೆಯೇ ಪ್ರಯೋಜನಕ್ಕೆ ಬಾರದ ವೆಚ್ಚವನ್ನು ಮಾಡಿಲ್ಲ ಎಂಬುವುದನ್ನು ಸೂಚಿಸುತ್ತದೆ. ಆದರೆ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಬಹುದು. ಜನ ಕಲ್ಯಾಣ ಕಾರ್ಯಗಳಿಗೆ ನಿರ್ಬಂಧ ಉಂಟಾಗಬಹುದು.
ಸರ್‌ಪ್ಲಸ್ ಬಜೆಟ್: ಸರ್‌ಪ್ಲಸ್ ಬಜೆಟ್‌ನಿಂದ ಸಹಾಯವಾಗಲಿದೆ. ಮುಂದಿನ ಹಣಕಾಸು ವರ್ಷದ ಅಭಿವೃದ್ಧಿಗೆ ಸಹಾಯವಾಗಲಿದೆ. ಸರ್ಕಾರದ ಸಾಲವು ಕಡಿಮೆಯಾಗಲಿದೆ. ಬಡ್ಡಿದರವು ಕೂಡಾ ಕಡಿಮೆಯಾಗಲಿದೆ. ಆದರೆ ಇದರಿಂದ ಕೆಟ್ಟ ಪರಿಣಾಮ ಕೂಡಾ ಇದೆ. ಸಾರ್ವಜನಿಕ ಸೇವೆಯ ಗುಣಮಟ್ಟ ಕಡಿಮೆಯಾಗಬಹುದು. ಸರ್ಕಾರವು ಕಡಿಮೆ ಖರ್ಚು ಮಾಡಿರುವ ಕಾರಣದಿಂದಾಗಿ ಎಲ್ಲ ಅಗತ್ಯ ಅಭಿವೃದ್ಧಿ ಆಗದಿರಬಹುದು. ಈ ಸಂದರ್ಭದಲ್ಲೇ ಹಣದುಬ್ಬರದ ವಿರುದ್ಧದ ಹೋರಾಟಕ್ಕೆ ಸಹಕಾರಿಯಾಗಲಿದೆ. ಆದರೆ ಆರ್ಥಿಕ ಕುಸಿತ ಕೂಡಾ ಉಂಟಾಗಲಿದೆ.
ಡೆಫಿಸಿಟ್ ಬಜೆಟ್: ಡೆಫಿಸಿಟ್ ಬಜೆಟ್ ಉದ್ಯಮ, ವೈಯಕ್ತಿಕವಾಗಿ ಮತ್ತು ಒಟ್ಟಾರೆ ಆರ್ಥಿಕತೆಗೆ ಪ್ರಭಾವ ಬೀರಲಿದೆ. ಡೆಫಿಸಿಟ್ ಬಜೆಟ್ ಆದಾಗ ಸರ್ಕಾರವು ತೆರಿಗೆಯನ್ನು ಹೆಚ್ಚಿಸಬೇಕಾಗಬಹುದು. ಹಣದುಬ್ಬರಕ್ಕೂ ಕೂಡಾ ಕಾರಣವಾಗುತ್ತದೆ. ಆದರೆ ಡೆಫಿಸಿಟ್ ಬಜೆಟ್ ಇದ್ದಾಗ ಸರ್ಕಾರವು ಅಧಿಕವಾಗಿ ಜನರಿಗೆ ಉಪಯುಕ್ತವಾಗುವ ಸೌಲಭ್ಯಗಳಿಗೆ ವೆಚ್ಚ ಮಾಡಿರುವ ಸಾಧ್ಯತೆಯಿರುತ್ತದೆ. ಇದರಿಂದಾಗಿ ಜನರಿಗೆ ಸಹಾಯವಾಗಬಹುದು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್‌ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications