Union Budget 2023: ಬಜೆಟ್ ಬಗ್ಗೆ ಹೆಚ್ಚಾಗಿ ಕೇಳುವ ಪ್ರಶ್ನೆಗಳಿವು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023ರಂದು ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಮುಂದಿನ ವರ್ಷದಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣದಿಂದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ 2023-24ನೇ ಸಾಲಿನ ಈ ಬಜೆಟ್ ಅತೀ ಮುಖ್ಯವಾದ ಬಜೆಟ್ ಆಗಿದೆ. ಸಾಮಾನ್ಯವಾಗಿ ಬಜೆಟ್ ಅಂದಾಗ ಜನರಲ್ಲಿ ಹಲವಾರು ಪ್ರಶ್ನೆಗಳು ಇರುತ್ತದೆ.
ಈ ಬಜೆಟ್‌ನಲ್ಲಿ ಎಲ್ಲ ವಲಯವು ಬಜೆಟ್‌ನಿಂದ ಒಂದಲ್ಲ ಒಂದು ನಿರೀಕ್ಷೆಯನ್ನು ಹೊಂದಿದ್ದಾರೆ. ಗೃಹ ಖರೀದಿದಾರರು-ರಿಯಲ್ ಎಸ್ಟೇಟ್ ವಲಯ ಗೃಹ ಸಾಲದ ಬಡ್ಡಿದರ ಇಳಿಕೆ ಮಾಡುವ ನಿರೀಕ್ಷೆಯನ್ನು ಹೊಂದಿದ್ದರೆ, ಗ್ರಾಮೀಣ ವಲಯವು ತಮ್ಮಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿ ಅಧಿಕ ಬಜೆಟ್ ಹಂಚಿಕೆ ಮಾಡಬೇಕು ಎಂಬ ಆಗ್ರಹವನ್ನು ಹೊಂದಿದೆ. ಇನ್ನು ಹಿರಿಯ ನಾಗರಿಕರು ತೆರಿಗೆ ವಿನಾಯಿತಿಯ ಹಲವಾರು ಬೇಡಿಕೆಗಳನ್ನು ಹೊಂದಿದ್ದಾರೆ.
ಈ ನಡುವೆ ಜನರಲ್ಲಿ ಬಜೆಟ್ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳು ಇದೆ. ಜನರು ಸಾಮಾನ್ಯವಾಗಿ ಮತ್ತು ಹೆಚ್ಚಾಗಿ ಬಜೆಟ್ ಸಂಬಂಧಿತ ಈ ಪ್ರಶ್ನೆಗಳನ್ನು ಕೇಳುತ್ತಾರೆ. ಜನರು ಯಾವೆಲ್ಲ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ನಮ್ಮಲ್ಲಿ ಇರುವ ಉತ್ತರವೇನು ತಿಳಿಯೋಣ ಮುಂದೆ ಓದಿ....

ಕೇಂದ್ರ ಬಜೆಟ್ ಬಗ್ಗೆ ಮಾಹಿತಿ
ಕೇಂದ್ರ ಬಜೆಟ್ ಎಂದರೇನು?
ಕೇಂದ್ರ ಬಜೆಟ್ ಭಾರತ ಸರ್ಕಾರದ ವಾರ್ಷಿಕ ಹಣಕಾಸು ಲೆಕ್ಕಾಚಾರವಾಗಿದೆ. ಬಜೆಟ್ ಎಂಬ ಪದವು ಫ್ರೆಂಚ್ ಭಾಷೆಯ "bougette" ದಿಂದ ಬಂದಿದೆ. bougette ಎಂದರೆ ಬ್ಯಾಗ್ ಅಥವಾ ಚೀಲ ಎಂದರ್ಥ. ಇದು ಸರ್ಕಾರದ ಆದಾಯ ಹಾಗೂ ವೆಚ್ಚದ ಹೇಳಿಕೆಯಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿನ ಹಣಕಾಸು ಹಂಚಿಕೆಯ ಪುಸ್ತಕವಾಗಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯಾವಾಗ ಬಜೆಟ್ ಮಂಡಿಸುತ್ತಾರೆ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ರ ಸಾಲಿನ ಕೇಂದ್ರ ಬಜೆಟ್ ಅನ್ನು 2023ರ ಫೆಬ್ರವರಿ 1ರಂದು 11 ಗಂಟೆಗೆ ಮಂಡನೆ ಮಾಡುತ್ತಾರೆ.
ಬಜೆಟ್ ಸೆಷನ್ ಆರಂಭ, ಅಂತ್ಯ ಯಾವಾಗ?
ಬಜೆಟ್ ಸೆಷನ್ ಜನವರಿ 31ರಂದು ಆರಂಭವಾಗಲಿದ್ದು, ಏಪ್ರಿಲ್ 8ರಂದು ಕೊನೆಯಾಗಲಿದೆ.

ಭಾರತದ ಮೊದಲ ಬಜೆಟ್ ಮಂಡನೆ
ಬಜೆಟ್ ಸೆಷನ್‌ನಲ್ಲಿ ರಾಷ್ಟ್ರಪತಿ ಭಾಷಣ ಯಾವಾಗ?
ಬಜೆಟ್ ಸೆಷನ್‌ನಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಮೇಲ್ಮನೆ ಹಾಗೂ ಕೆಳಮನೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜನವರಿ 31ರ ಬೆಳ್ಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ಈ ಭಾಷಣವನ್ನು ಮಾಡಲಿದ್ದಾರೆ.
ಬಜೆಟ್ ಸೆಷನ್‌ನಲ್ಲಿ ಎಷ್ಟು ಹಂತಗಳಿರಲಿದೆ?
ಬಜೆಟ್ ಸೆಷನ್ ಅನ್ನು ಎರಡು ಭಾಗಗಳಾಗಿ ವಿಂಗಡನೆ ಮಾಡಲಾಗುತ್ತದೆ. ಮೊದಲ ಭಾಗವು ಜನವರಿ 31ರಿಂದ ಫೆಬ್ರವರಿ 11ರವರೆಗೆ ನಡೆಯಲಿದೆ. ಎರಡನೇ ಭಾಗವು ಮಾರ್ಚ್ 14ರಿಂದ ಏಪ್ರಿಲ್ 8ರವರೆಗೆ ನಡೆಯಲಿದೆ.
ಭಾರತದ ಮೊದಲ ಬಜೆಟ್ ಮಂಡನೆ ಯಾವಾಗ?
ಭಾರತದ ಮೊದಲ ಬಜೆಟ್ ಮಂಡನೆಯನ್ನು 1947ರಲ್ಲಿ ಮಾಡಲಾಗಿದೆ. ಭಾರತದ ಮೊದಲ ಹಣಕಾಸು ಸಚಿವ ಆರ್ ಕೆ ಷಣ್ಮುಖಂ ಚೆಟ್ಟಿ 1947ರ ನವೆಂಬರ್ 26ರಂದು ಬಜೆಟ್ ಅನ್ನು ಮಂಡಿಸಿದ್ದಾರೆ. 1947-48ರ ಮಧ್ಯಂತರ ಬಜೆಟ್ ಅನ್ನು ಸರ್ಕಾರದ ಸದಸ್ಯ ಲಿಯಾಖತ್ ಅಲಿ ಖಾನ್ ಮಂಡಿಸಿದ್ದಾರೆ.

ಆರ್ಥಿಕ ಸಮೀಕ್ಷೆ ಮಂಡನೆ ವಿವರ
ಮೊದಲ ಬಜೆಟ್ ಮಂಡಿಸಿದವರು ಯಾರು?
ಭಾರತದ ಮೊದಲ ಬಜೆಟ್ ಅನ್ನು 1947ರಲ್ಲಿ ಆರ್ ಕೆ ಷಣ್ಮುಖಂ ಚೆಟ್ಟಿ ಮಂಡಿಸಿದ್ದಾರೆ. ಭಾರತದ ಉದ್ಯಮಿಯು ಆದ ಷಣ್ಮುಖಂ ಚೆಟ್ಟಿ ಭಾರತದ ಮೊದಲ ಹಣಕಾಸು ಸಚಿವರಾಗಿದ್ದಾರೆ. 1959-1961ರಿಂದ 1963-1964ರವರೆಗೆ ಮುರಾರ್ಜಿ ದೇಸಾಯಿ ಬಜೆಟ್ ಮಂಡನೆಯನ್ನು ಮಾಡಿದ್ದಾರೆ. 1962-1963ರ ಮಧ್ಯಂತರ ಬಜೆಟ್ ಅನ್ನು ಕೂಡಾ ಅವರೇ ಮಂಡಿಸಿದ್ದಾರೆ.
ಆರ್ಥಿಕ ಸಮೀಕ್ಷೆ ವರದಿ ಯಾವಾಗ ಲಭ್ಯ?
ಜನವರಿ 31ರಂದು ಆರಂಭವಾಗುವ ಬಜೆಟ್ ಸೆಷನ್‌ನಲ್ಲಿ ಆರ್ಥಿಕ ಸಮೀಕ್ಷೆ ವರದಿ ಮಂಡಿಸಲಾಗುತ್ತದೆ. ಇದರ ವರದಿ ವೆಬ್‌ಸೈಟ್ ಮೂಲಕ ಲಭ್ಯವಾಗಲಿದೆ.
ಆರ್ಥಿಕ ಸಮೀಕ್ಷೆ ಎಂದರೇನು?
ವಾರ್ಷಿಕ ಆರ್ಥಿಕ ಬೆಳವಣಿಗೆಯ ಒಂದು ವರದಿಯೇ ಆರ್ಥಿಕ ಸಮೀಕ್ಷೆ ಆಗಿದೆ. ಇದರಲ್ಲಿ ದೇಶದ ಸವಾಲುಗಳು ಹಾಗೂ ಸಮಸ್ಯೆಗೆ ಪರಿಹಾರಗಳು ಉಲ್ಲೇಖಿಸಲಾಗಿರುತ್ತದೆ. ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ ಅನಂತ ನಾಗೇಶ್ವರನ್ ಈ ಸಮೀಕ್ಷೆಯನ್ನು ತಯಾರಿ ಮಾಡುತ್ತಾರೆ.

ಬಜೆಟ್ ತಯಾರಿ ಬಗ್ಗೆ ಮಾಹಿತಿ
ವಾರ್ಷಿಕ ಬಜೆಟ್‌ಗೆ ಸರ್ಕಾರ ತಯಾರಿ ನಡೆಸುವುದು ಯಾವಾಗ?
ಸರ್ಕಾರವು 2023-24ನೇ ಸಾಲಿನ ಬಜೆಟ್‌ಗೆ ಅಕ್ಟೋಬರ್ 10, 2022ರಿಂದ ತಯಾರಿ ಆರಂಭಿಸಿದೆ. ವಾರ್ಷಿಕ ಬಜೆಟ್ ಪಟ್ಟಿ ಮಾಡಲು ಆರಂಭಿಸಿದೆ.
ಬಜೆಟ್ ಪಟ್ಟಿ ಮಾಡುವುದು ಯಾರು?
ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ಇಲಾಖೆಯ (ಡಿಇಎ) ಬಜೆಟ್ ವಿಭಾಗವು ಬಜೆಟ್ ಅನ್ನು ತಯಾರಿಸುತ್ತದೆ. ಬಜೆಟ್ ಪಟ್ಟಿಯನ್ನು ಮಾಡುತ್ತದೆ.
ಯಾವ ತಿಂಗಳಲ್ಲಿ ಬಜೆಟ್ ಘೋಘಿಸಲಾಗಿದೆ?
ಭಾರತದ ಸಂವಿಧಾನದ ವಿಧಿ 112ರ ಅಡಿಯಲ್ಲಿ ಕೇಂದ್ರ ಬಜೆಟ್ ಅನ್ನು ಪ್ರತಿ ವರ್ಷವೂ ಕೂಡಾ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವರು ಮಂಡಿಸುತ್ತಾರೆ.
ಭಾರತದಲ್ಲಿ ಎಷ್ಟು ಬಜೆಟ್ ಇದೆ?
ಭಾರತದಲ್ಲಿ ಮೂರು ರೀತಿಯ ಬಜೆಟ್ ಇದೆ. ಹೆಚ್ಚುವರಿ ಬಜೆಟ್, ಬ್ಯಾಲೆನ್ಸ್ ಬಜೆಟ್ ಹಾಗೂ ವಿತ್ತೀಯ ಕೊರತೆಯ ಬಜೆಟ್ ಆಗಿದೆ.