For Quick Alerts
ALLOW NOTIFICATIONS  
For Daily Alerts

ಸಾಲ ಬೇಕಾಗಿದೆಯೇ? ಮೊದಲು ಸಿಬಿಲ್ ಸ್ಕೋರ್ ಹೀಗೆ ಪರಿಶೀಲಿಸಿ

|

ನಾವು ಸಾಲವನ್ನು ಪಡೆಯಬೇಕಾದರೆ ಬ್ಯಾಂಕುಗಳು ಮುಖ್ಯವಾಗಿ ಸಿಬಿಲ್ ಸ್ಕೋರ್ ಎಷ್ಟಿದೆ ಎಂದು ಪರಿಶೀಲನೆ ಮಾಡುತ್ತದೆ. ಸಾಲವನ್ನು ಪಡೆಯುವ ಮುನ್ನ ನಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂದು ನೋಡಿಕೊಂಡೇ ಬ್ಯಾಂಕುಗಳು ಸಾಲ ನೀಡುವುದೇ, ಬೇಡವೇ, ಎಷ್ಟು ಬಡ್ಡಿದರ ವಿಧಿಸಬೇಕು ಎಂಬ ನಿರ್ಧಾರಕ್ಕೆ ಬರುತ್ತದೆ.

ನಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ, ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲ ಲಭ್ಯವಾಗಲಿದೆ. ಆದರೆ ನಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ, ಬಡ್ಡಿದರ ಹೆಚ್ಚಾಗಲಿದೆ. ಹಾಗೆಯೇ ಸಾಲ ಪಡೆಯುವುದು ಕೂಡಾ ಕಷ್ಟವಾಗಲಿದೆ. ಕೆಲವು ಬ್ಯಾಂಕುಗಳ ಸಾಲ ನೀಡುತ್ತದೆಯಾದರೂ ಇದಕ್ಕೆ ಬಡ್ಡಿದರ ತೀವ್ರ ಹೆಚ್ಚರಲಿದೆ.

CIBIL ಕ್ರೆಡಿಟ್ ಸ್ಕೋರ್ ಎಂದರೇನು? ಅದನ್ನು ಹೇಗೆ ಹೆಚ್ಚಿಸುವುದುCIBIL ಕ್ರೆಡಿಟ್ ಸ್ಕೋರ್ ಎಂದರೇನು? ಅದನ್ನು ಹೇಗೆ ಹೆಚ್ಚಿಸುವುದು

ಆದರೆ ಈ ಸಿಬಿಲ್ ಸ್ಕೋರ್ ಎಂದರೆ ಏನು ಎಂಬುವುದು ಹಲವಾರು ಮಂದಿಗೆ ತಿಳಿದಿಲ್ಲ. ಹಾಗೆಯೇ ನಾವು ಸಿಬಿಲ್ ಸ್ಕೋರ್ ಅನ್ನು ಹೇಗೆ ಪರಿಶೀಲನೆ ಮಾಡುವುದು ಎಂಬುವುದು ಕೂಡಾ ಹಲವಾರು ಮಂದಿಗೆ ತಿಳಿದಿಲ್ಲ. ಹಾಗಾದರೆ ಈ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡಿದ್ದೇವೆ ಮುಂದೆ ಓದಿ....

 ಸಿಬಿಲ್ ಸ್ಕೋರ್ ಎಂದರೇನು?

ಸಿಬಿಲ್ ಸ್ಕೋರ್ ಎಂದರೇನು?

ಸಿಬಿಲ್ ಸ್ಕೋರ್ ಮೂರು ಅಂಕಿಗಳ ಸಂಖ್ಯೆಯಾಗಿದ್ದು, ಸಾಲವನ್ನು ಪಡೆಯಲು ಸಾಲ ಪಡೆಯುವವರು ಎಷ್ಟು ಅರ್ಹರು ಎಂಬುವುದನ್ನು ಇದು ತೋರಿಸುತ್ತದೆ. ಇದು ವೈಯಕ್ತಿಕ ಸಾಲವಾಗಲಿ, ಗೃಹ ಸಾಲವಾಗಲಿ, ಆಟೋ ಸಾಲವಾಗಲಿ, ಯಾವುದೇ ಸಾಲಕ್ಕೂ ಸಿಬಿಲ್ ಸ್ಕೋರ್ ಮುಖ್ಯವಾಗಿದೆ. ಸಾಲ ನೀಡುವವರು ನಿಮ್ಮ ಸಿಬಿಲ್ ಸ್ಕೋರ್ ಅನ್ನು ಸಾಲ ನೀಡುವ ಸಂದರ್ಭದಲ್ಲಿ ಪರಿಶೀಲನೆ ಮಾಡುತ್ತಾರೆ. ನೀವು ಹೊಸದಾಗಿ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡುವಾಗ ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ ಕಡಿಮೆ ಇರಲಿದೆ. ನೀವು ಉತ್ತಮ ಸಿಬಿಲ್ ಸ್ಕೋರ್ ಹೊಂದಿದ್ದರೆ, ಸಾಲ ಸುಲಭವಾಗಿ ಲಭ್ಯವಾಗಲಿದೆ. ನೀವು ನಿಮ್ಮ ಸಿಬಿಲ್ ಸ್ಕೋರ್ ಬಗ್ಗೆ ತಿಳಿದಿರಬೇಕಾಗಿದೆ. ನೀವು ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡುವ ಮುನ್ನವೇ ಸಿಬಿಲ್ ಸ್ಕೋರ್ ಅನ್ನು ಪರಿಶೀಲನೆ ಮಾಡಿದರೆ ನಿಮ್ಮ ಅರ್ಜಿ ತಿರಸ್ಕೃತವಾಗುವುದನ್ನು ತಪ್ಪಿಸಬಹುದು.

 ಸಿಬಿಲ್ ಸ್ಕೋರ್ ಪರಿಶೀಲನೆ ಮಾಡುವುದು ಹೇಗೆ?

ಸಿಬಿಲ್ ಸ್ಕೋರ್ ಪರಿಶೀಲನೆ ಮಾಡುವುದು ಹೇಗೆ?

ಹಲವಾರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಸಿಬಿಲ್ ಸ್ಕೋರ್ ಅನ್ನು ಉಚಿತವಾಗಿ ಪರಿಶೀಲನೆ ಮಾಡಲು ಅವಕಾಶ ನೀಡುತ್ತದೆ. ಆನ್‌ಲೈನ್‌ನಲ್ಲಿ ನಾವು ಒಂದು ನಿಮಿಷದಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ನೀವು ಸಿಬಿಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ಕೂಡಾ ಸಿಬಿಲ್ ಸ್ಕೋರ್ ಪರಿಶೀಲನೆ ಮಾಡಬಹುದು. ಕೆಲವು ಹಣಕಾಸು ಸಂಸ್ಥೆಗಳು ಉಚಿತ ಸಿಬಿಲ್ ಸ್ಕೋರ್ ಪರಿಶೀಲನೆಗೆ ಅವಕಾಶ ನೀಡುತ್ತದೆ.

ನೀವು ನಿಮ್ಮ ಹೆಸರು, ಇಮೇಲ್ ಐಡಿಯಂತಹ ಸಾಮಾನ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ನಿಮ್ಮ ಹೆಸರು, ಐಡಿ ಪುರಾವೆ (ಆಧಾರ್, ಪ್ಯಾನ್), ಮೊಬೈಲ್ ಸಂಖ್ಯೆ, ವಿಳಾಸ, ಆದಾಯದ ವಿವರವನ್ನು ಭರ್ತಿ ಮಾಡಿದರೆ ನಿಮಗೆ ಸಿಬಿಲ್ ಸ್ಕೋರ್ ಲಭ್ಯವಾಗಲಿದೆ.

 ಉತ್ತಮ ಸಿಬಿಲ್ ಸ್ಕೋರ್ ಎಂದರೇನು?

ಉತ್ತಮ ಸಿಬಿಲ್ ಸ್ಕೋರ್ ಎಂದರೇನು?

ಈ ನಡುವೆ ನಿಮಗೆ ಉತ್ತಮ ಸಿಬಿಲ್ ಸ್ಕೋರ್ ಎಂದರೇನು ಎಂಬ ಪ್ರಶ್ನೆ ಮೂಡಬಹುದು. ನಿಮ್ಮ ಮರುಪಾವತಿ ಸಮಯ, ಸಾಲದ ಬಳಕೆ, ಸಾಲದ ಮಾಹಿತಿ, ಇತರೆ ಅಂಶಗಳನ್ನು ಪರಿಶೀಲಿಸಿ ನಿಮ್ಮ ಕ್ರೆಡಿಟ್ ಸ್ಕೋರ್ ನಿಗದಿ ಮಾಡಲಾಗುತ್ತದೆ. ಇವೆಲ್ಲವೂ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಉಂಟು ಮಾಡಲಿದೆ. ಸಾಮಾನ್ಯವಾಗಿ 850 ಅಥವಾ ಅದಕ್ಕಿಂತ ಅಧಿಕ ಸಿಬಿಲ್ ಸ್ಕೋರ್ ಅತ್ಯುತ್ತಮ ಸಿಬಿಲ್ ಸ್ಕೋರ್ ಆಗಿದೆ. 750 ರಿಂದ 849ರ ನಡುವಿನ ಸಿಬಿಲ್ ಸ್ಕೋರ್ ಅನ್ನು ಉತ್ತಮ ಎಂದು ಪರಿಗಣನೆ ಮಾಡಲಾಗುತ್ತದೆ. 700-749 ಸಿಬಿಲ್ ಸ್ಕೋರ್ ಅನ್ನು ಸಾಮಾನ್ಯ ಎಂದು ಪರಿಗಣನೆ ಮಾಡಲಾಗುತ್ತದೆ. ನೀವು 650ಕ್ಕಿಂತ ಕಡಿಮೆ ಸಿಬಿಲ್ ಸ್ಕೋರ್ ಅನ್ನು ಹೊಂದಿದ್ದರೆ ನೀವು ನಿಮ್ಮ ಸಿಬಿಲ್ ಸ್ಕೋರ್ ಉತ್ತಮ ಮಾಡಲು ಬೇಕಾದ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.

English summary

Want A Loan? Know Steps on How To Check Your CIBIL Credit Score in Kannada

Do you plan to apply for a loan? Read on to know steps on how to check your CIBIL credit score in kannada. Read on.
Story first published: Monday, June 27, 2022, 14:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X