For Quick Alerts
ALLOW NOTIFICATIONS  
For Daily Alerts

ಆರ್‌ಬಿಐನಲ್ಲಿ ಕೆಲಸ ಮಾಡಬೇಕೆ?: ಇಂಟರ್ನ್‌ಶಿಪ್‌ಗೆ ಹೀಗೆ ಅರ್ಜಿ ಸಲ್ಲಿಸಿ

|

ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಇಂಟರ್ನ್‌ಶಿಪ್‌ ಮಾಡಲು ವಿದ್ಯಾರ್ಥಿಗಳಿಗೆ ಹಾಗೂ ಇತ್ತೀಚೆಗೆ ಶಿಕ್ಷಣ ಮುಗಿಸಿಕೊಂಡವರಿಗೆ ಅವಕಾಶ ದೊರೆಯಲಿದೆ. ಈ ಇಂಟರ್ನ್‌ಶಿಪ್‌ಗೆ ವಿದ್ಯಾರ್ಥಿಗಳು ಮತ್ತು ಹೊಸಬರು ಇಬ್ಬರೂ ಅರ್ಜಿ ಸಲ್ಲಿಸಬಹುದು.

ವಾರ್ಷಿಕ ಬೇಸಿಗೆ ಇಂಟರ್ನ್‌ಶಿಪ್ ಕಾರ್ಯಕ್ರಮವು ಏಪ್ರಿಲ್ 2022 ರಿಂದ ಪ್ರಾರಂಭವಾಗಲಿದೆ. ಹಣಕಾಸು, ಅರ್ಥಶಾಸ್ತ್ರ, ಕಾನೂನು, ಬ್ಯಾಂಕಿಂಗ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅರ್ಜಿಯನ್ನು ಮುಕ್ತವಾಗಿ ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 ಆಗಿದೆ.

ಈ ವಾರ್ಷಿಕ ಬೇಸಿಗೆ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ ಒಟ್ಟು 125 ಇಂಟರ್ನ್‌ಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 20,000 ರೂಪಾಯಿ ನೀಡಲಾಗುತ್ತದೆ. ಇನ್ನು ಟ್ರೇನಿಗಳು ಪ್ರಯಾಣದ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ. ಹಾಗೆಯೇ ವಸತಿ ವ್ಯವಸ್ಥೆಯನ್ನು ಕೂಡಾ ಅಭ್ಯರ್ಥಿಗಳೇ ಮಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಮಾನದಂಡವೇನು, ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.

ಆರ್‌ಬಿಐನಲ್ಲಿ ಇಂಟರ್ನ್‌ಶಿಪ್‌ಗಾಗಿ ಹೀಗೆ ಅರ್ಜಿ ಸಲ್ಲಿಸಿ

ಯಾರು ಅರ್ಜಿ ಸಲ್ಲಿಸಬಹುದು?

ಯಾರು ಅರ್ಜಿ ಸಲ್ಲಿಸಬಹುದು?

ಸ್ಥಳೀಯವಾಗಿ ಮ್ಯಾನೇಜ್‌ಮೆಂಟ್, ವಾಣಿಜ್ಯ, ಸ್ಟಾಟಿಸ್ಟಿಕ್ಸ್‌, ಕಾನೂನು, ಅರ್ಥಶಾಸ್ತ್ರ, ಬ್ಯಾಂಕಿಂಗ್, ಹಣಕಾಸು, ಅರ್ಥಶಾಸ್ತ್ರ ವಿಚಾರದಲ್ಲಿ ಐದು ವರ್ಷಗಳ ಕಾಲ ಅಥವಾ ಸ್ನಾತಕೋತ್ತರ ಪದವಿಯನ್ನು ಪ್ರತಿಷ್ಠಿತ ಕಾಲೇಜುಗಳು, ಸಂಸ್ಥೆಗಳಿಂದ ಪಡೆದಿದ್ದರೆ ಈ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗೆಯೇ ಪ್ರತಿಷ್ಠಿತ ಕಾಲೇಜುಗಳು, ಸಂಸ್ಥೆಗಳಿಂದ ಪದವಿಯನ್ನು ಮ್ಯಾನೇಜ್‌ಮೆಂಟ್, ವಾಣಿಜ್ಯ, ಸ್ಟಾಕಿಸ್ಟಿಕ್ಸ್‌, ಕಾನೂನು, ಅರ್ಥಶಾಸ್ತ್ರ, ಬ್ಯಾಂಕಿಂಗ್, ಹಣಕಾಸು, ಅರ್ಥಶಾಸ್ತ್ರ ವಿಚಾರದಲ್ಲಿ ಪಡೆದಿದ್ದರೂ ಕೂಡಾ ಅರ್ಹರಾಗುತ್ತಾರೆ. ಈ ಅಭ್ಯರ್ಥಿಗಳು ಬೇಸಿಗೆಯ ಇಂಟರ್ನ್‌ಶಿಪ್‌ಗೆ ತಮ್ಮ ಅಂತಿಮ ವರ್ಷ ಅಥವಾ ಸೆಮಿಸ್ಟರ್‌ ಅವಧಿಯಲ್ಲಿ ಅರ್ಜಿ ಸಲ್ಲಿಸಬಹುದು.

ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರೆ..

ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರೆ..

ಹಣಕಾಸು, ಬ್ಯಾಂಕಿಂಗ್, ಅರ್ಥಶಾಸ್ತ್ರ, ನಿರ್ವಹಣೆ, ಕಾನೂನು ವಿಚಾರದಲ್ಲಿ ಐದು ವರ್ಷಗಳ ಕಾಲ ವಿದೇಶದಲ್ಲಿ ವಿದ್ಯಾರ್ಜನೆ ಮಾಡಿದ್ದರೂ ಕೂಡಾ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಪಡೆಯುತ್ತಾರೆ. ವಿದೇಶದಲ್ಲಿರುವ ವಿಶ್ವವಿದ್ಯಾಲಯಗಳು/ಸಂಸ್ಥೆಗಳಲ್ಲಿ ಯಾವುದೇ ಸಂಬಂಧಿತ ಕ್ಷೇತ್ರಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

125 ಮಂದಿ ಇಂಟರ್ನ್‌ಶಿಪ್‌ಗೆ ಆಯ್ಕೆ

125 ಮಂದಿ ಇಂಟರ್ನ್‌ಶಿಪ್‌ಗೆ ಆಯ್ಕೆ

125 ಮಂದಿಯನ್ನು ಆರ್‌ಬಿಐ ಮೊದಲು ಶಾರ್ಟ್‌ಲಿಸ್ಟ್‌ ಮಾಡಲಿದೆ, ಇದರಲ್ಲಿ ಯಾರ ಹೆಸರು ಇದೆಯೋ ಆ ವಿದ್ಯಾರ್ಥಿಗಳಿಗೆ 2022 ರ ಜನವರಿ ಅಥವಾ ಫೆಬ್ರವರಿಯಲ್ಲಿ ದೇಶದಾದ್ಯಂತ ಇರುವ ಯಾವುದೇ ಆರ್‌ಬಿಐ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಆ ಬಳಿಕ ಆರ್‌ಬಿಐ ಬೇಸಿಗ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಫೆಬ್ರವರಿ ಅಥವಾ ಮಾರ್ಚ್ 2022 ರಲ್ಲಿ ಪ್ರಕಟಿಸಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಹಣಕಾಸು, ಬ್ಯಾಂಕಿಂಗ್, ಅರ್ಥಶಾಸ್ತ್ರ, ನಿರ್ವಹಣೆ, ಕಾನೂನು ವಿಚಾರದಲ್ಲಿ ಐದು ವರ್ಷಗಳ ಕಾಲ ಅಥವಾ ಮೂರು ವರ್ಷಗಳ ಕಾಲ ವಿದ್ಯಾಭ್ಯಾಸವನ್ನು ಪಡೆದವರು ಈ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಅರ್ಹ ಭಾರತೀಯ ವಿದ್ಯಾರ್ಥಿಗಳು ಆನ್‌ಲೈನ್ ವೆಬ್-ಆಧಾರಿತ ಅರ್ಜಿ ನಮೂನೆಯ ಮೂಲಕ ತಮ್ಮ ಸಂಸ್ಥೆಗಳ ಮೂಲಕ "ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಂತ್ರಣ ಕಚೇರಿಗಳಿಗೆ" ಬೇಸಿಗೆಯ ಇಂಟರ್ನ್‌ಶಿಪ್‌ಗಾಗಿ ಅರ್ಜಿ ಸಲ್ಲಿಸಬೇಕು. ಅರ್ಹತೆ ಹೊಂದಿರುವ ವಿದೇಶಿ ವಿದ್ಯಾರ್ಥಿಗಳು, ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಮತ್ತು ವಿಳಾಸಕ್ಕೆ ಕಳುಹಿಸಬೇಕು. ಅರ್ಜಿಯ ಮುಂಗಡ ಪ್ರತಿಯನ್ನು cgminchrmd@rbi.org.in. ಗೆ ಇ-ಮೇಲ್ ಮಾಡಬಹುದು.

ವಿಳಾಸ: ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯ ಜನರಲ್ ಮ್ಯಾನೇಜರ್ ಮಾನವ ಸಂಪನ್ಮೂಲ ನಿರ್ವಹಣೆ ಇಲಾಖೆ (ತರಬೇತಿ ಮತ್ತು ಅಭಿವೃದ್ಧಿ ವಿಭಾಗ), ಕೇಂದ್ರ ಕಚೇರಿ, 21 ನೇ ಮಹಡಿ, ಕೇಂದ್ರ ಕಚೇರಿ ಕಟ್ಟಡ, ಶಾಹಿದ್ ಭಗತ್ ಸಿಂಗ್ ರಸ್ತೆ, ಮುಂಬೈ - 400 001.

English summary

Want to Work at RBI? Here's How Students, Freshers Can Apply for Internship, Explained in Kannada

Want to Work at RBI? Here's How Can Apply for Internship, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X