For Quick Alerts
ALLOW NOTIFICATIONS  
For Daily Alerts

ಪಿಂಚಣಿದಾರರ ಪಿಪಿಓ ನಂಬರ್ ಎಂದರೇನು? ಪಿಪಿಓ ನಂಬರ್ ಇಲ್ಲದಿದ್ದರೆ ಏನಾಗುತ್ತೆ?

|

ಪೆನ್ಷನ್ ಪೇಮೆಂಟ್ ಆರ್ಡರ್ (PPO) ಎಂಬುದು 12 ಅಂಕಿಗಳ ಒಂದು ಸಂಖ್ಯೆಯಾಗಿದ್ದು, ನಿವೃತ್ತಿ ವೇತನ ಪಡೆಯಲು ಸಹಾಯ ಮಾಡುತ್ತದೆ. ಉದ್ಯೋಗಿಯೊಬ್ಬನು ನಿವೃತ್ತನಾದ ನಂತರ ಈ ನಂಬರ್ ನೀಡಲಾಗುತ್ತದೆ.

ಪಿಪಿಓ ಅನುಕೂಲತೆಗಳು: ವ್ಯಕ್ತಿಯೊಬ್ಬ ಪೆನ್ಷನ್ ಪಡೆಯಬೇಕಾದರೆ ಪಿಪಿಓ ನಂಬರ್ ಅಗತ್ಯವಾಗಿಬೇಕು. ಒಂದು ವೇಳೆ ಈ ನಂಬರ್ ಮರೆತು ಹೋದಲ್ಲಿ ಅಥವಾ ಕಳೆದು ಹೋದಲ್ಲಿ ನಿಮ್ಮ ಪೆನ್ಷನ್ ನಿಂತು ಹೋಗಬಹುದು. ಪಿಂಚಣಿ ಬಟವಾಡೆಯು ಅಬಾಧಿತವಾಗಿ ಮುಂದುವರೆಯಲು ಪ್ರತಿವರ್ಷವೂ ಪಿಂಚಣಿದಾರನೊಬ್ಬ ಜೀವಿತ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಇದನ್ನು ಸಲ್ಲಿಸಲು ಪಿಪಿಓ ನಂಬರ್ ಬೇಕಾಗುತ್ತದೆ. ಜೀವಿತ ಪ್ರಮಾಣಪತ್ರ ಅಥವಾ ಜೀವಿತ ದಾಖಲೆ ಇಲ್ಲದೇ ಹೋದರೆ ಪಿಂಚಣಿ ಬರುವುದು ಬಂದ್ ಆಗಬಹುದು. ಪಿಪಿಓ ನಂಬರ್ ಬಳಸಿ ನಿವೃತ್ತ ಉದ್ಯೋಗಿಯು ತನ್ನ ಪಿಂಚಣಿ ಖಾತೆಯನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸಬಹುದು. ಇನ್ನು ಪಿಂಚಣಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಪಿಪಿಓ ನಂಬರ್ ನಮೂದಿಸಿ ದೂರು ದಾಖಲಿಸಬಹುದು.

ಕೇಂದ್ರ ಪಿಂಚಣಿ ಲೆಕ್ಕ ಕಚೇರಿ ಜೊತೆ ವ್ಯವಹಾರ

ಕೇಂದ್ರ ಪಿಂಚಣಿ ಲೆಕ್ಕ ಕಚೇರಿ ಜೊತೆ ವ್ಯವಹಾರ

ಕೇಂದ್ರ ಪಿಂಚಣಿ ಲೆಕ್ಕ ಕಚೇರಿ (Central Pension Accounting Office -CPAO) ಯೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸಬೇಕಾದಾಗ ಸಹ ಪಿಪಿಓ ನಂಬರ್ ಅಗತ್ಯ. ಸಿಪಿಎಓ ಇದು ಪಿಂಚಣಿ ಅನುಮೋದನೆ ಪ್ರಾಧಿಕಾರ ಮತ್ತು ಪಿಂಚಣಿ ಪಾವತಿಸುವ ಪ್ರಾಧಿಕಾರಗಳ (ವೇತನ ಮತ್ತು ಲೆಕ್ಕಪತ್ರ ಕಚೇರಿ) ಮತ್ತು ಪಿಂಚಣಿ ಬಟವಾಡೆ ಮಾಡುವ ಬ್ಯಾಂಕುಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತದೆ.

ನಿರ್ಬಾಧ ಸೇವಾ ಬಳಸಿ ಪಿಪಿಓ ನಂಬರ್ ಪಡೆಯುವುದು: ಇಪಿಎಫ್ಓ ಕಚೇರಿಯ ಅಧೀನದ ನಿರ್ಬಾಧ ಸೇವಾ ಮೂಲಕ ನಿವೃತ್ತ ನೌಕರನೊಬ್ಬ ತನ್ನ ನಿವೃತ್ತಿಯ ದಿನದಂದು ಪೆನ್ಷನ್ ಆರ್ಡರ್ ನಂಬರ್ (ಪಿಪಿಓ) ಪಡೆಯಬಹುದು.

 

ಇಪಿಎಫ್ಓ ವೆಬ್‌ಸೈಟ್‌ನಲ್ಲಿ PPO

ಇಪಿಎಫ್ಓ ವೆಬ್‌ಸೈಟ್‌ನಲ್ಲಿ PPO

ಹಾಗೆಯೇ ಇಪಿಎಫ್ಓ ವೆಬ್‌ಸೈಟ್‌ನಲ್ಲಿ 'Know Your PPO Number' ಆಯ್ಕೆ ಬಳಸಿ ಪಿಪಿಓ ನಂಬರ್ ತಿಳಿಯಬಹುದು.
* ಈ ವಿಧಾನದಲ್ಲಿ ಪಿಪಿಓ ನಂಬರ್ ತಿಳಿಯಲು ಮೊದಲಿಗೆ ಇಪಿಎಫ್ಓ ವೆಬ್‌ಸೈಟ್‌ಗೆ (epfindia.gov.in) ಭೇಟಿ ನೀಡಿ.
* ಅಲ್ಲಿ ಕಾಣುವ 'Online Services' ವಿಂಡೋನಲ್ಲಿ 'Pensioners Portal' ಕ್ಲಿಕ್ ಮಾಡಿ.
* ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ 'Know Your PPO Number' ಆಯ್ಕೆ ಮಾಡಿಕೊಂಡು, ನಿಮ್ಮ ಪಿಂಚಣಿ ಖಾತೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ನಂಬರ್ ನಮೂದಿಸಿ.
* ನಿರ್ದಿಷ್ಟ ಪಿಎಫ್ ಸಂಖ್ಯೆ ಅಥವಾ ಮೆಂಬರ್ ಐಡಿ ಯನ್ನು ಸಹ ಬಳಸಬಹುದು. ಈ ಎಲ್ಲ ವಿವರಗಳನ್ನು ನೀಡಿದ ನಂತರ ಪಿಪಿಓ ನಂಬರ್ ನಿಮಗೆ ಸಿಗುತ್ತದೆ.

ಪಿಪಿಓಗೆ ಸಂಬಂಧಿಸಿದ ವಿಚಾರಣೆ

ಪಿಪಿಓಗೆ ಸಂಬಂಧಿಸಿದ ವಿಚಾರಣೆ

ಇತರೆ ಇಪಿಎಫ್ ಹಾಗೂ ಪಿಂಚಣಿಗೆ ಸಂಬಂಧಿಸಿದ ವಿಷಯಗಳ ಹೊರತಾಗಿಯೂ ವ್ಯಕ್ತಿಯೊಬ್ಬ ಆನ್‌ಲೈನ್ ಮೂಲಕ ಪಿಪಿಓ ಬಗ್ಗೆ ಮಾಹಿತಿ ಪಡೆಯಬಹುದು. ಇಪಿಎಫ್ಓ ವೆಬ್‌ಸೈಟ್‌ನಲ್ಲಿ (epfindia.gov.in) ಹೋಂ ಪೇಜ್‌ನಲ್ಲಿ ಕಾಣಿಸುವ 'Pensioners' Portal' ಆಯ್ಕೆ ಮಾಡಬೇಕು. ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ PPO Enquiry ಅಥವಾ Payment Enquiry link ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಪಿಂಚಣಿ ಪಾವತಿಸುವ ಕಚೇರಿ ಹಾಗೂ ಕಚೇರಿಯ ಐಡಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜನ್ಮ ದಿನಾಂಕ ಹಾಗೂ ಪಿಪಿಓ ಸಂಖ್ಯೆ ನಮೂದಿಸಿ ಪಿಪಿಓ ವಿಚಾರಣೆಗಾಗಿ ಸಬ್ಮಿಟ್ ಕ್ಲಿಕ್ ಮಾಡಬೇಕು.

ಪಿಪಿಓ ಸಂಖ್ಯೆಯ ಸ್ಥಿತಿಯನ್ನು ತಿಳಿಯಬಹುದು

ಪಿಪಿಓ ಸಂಖ್ಯೆಯ ಸ್ಥಿತಿಯನ್ನು ತಿಳಿಯಬಹುದು

"know your status" ಆಯ್ಕೆ ಬಳಸಿ ಯಾರು ಬೇಕಾದರೂ ಯಾವುದೇ ಪಿಪಿಓ ಸಂಖ್ಯೆಯ ಸ್ಥಿತಿಯನ್ನು ತಿಳಿಯಬಹುದು ಎಂದು ಸಿಪಿಎಓ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ, ಪಿಂಚಣಿದಾರರು ತಮ್ಮ ಪಿಪಿಓ ಪ್ರತಿಯನ್ನು ಹಾಗೂ ಸಿಪಿಎಓ ಕಾಲಕಾಲಕ್ಕೆ ಹೊರಡಿಸಿದ ತಿದ್ದುಪಡಿಗಳನ್ನು ಲಾಗಿನ್ ಹಾಗೂ ಪಾಸ್‌ವರ್ಡ್‌ಗಳನ್ನು ಬಳಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೀಗೆ ಮಾಡುವ ಮುನ್ನ ಪಿಂಚಣಿದಾರರು ಮೊದಲಿಗೆ ಇಪಿಎಓ ವೆಬ್ಸೈಟಿನಲ್ಲಿ ನೋಂದಣಿ ಮಾಡಿಕೊಳ್ಳುವುದು ಅಗತ್ಯ. ಇಪಿಎಓ ವೆಬ್ಸೈಟ್ ವಿಳಾಸ : www.cpao.nic.in.

English summary

What Is A PPO Number For Pensioners, Benefits For Life-Proof, 'Nirbadh Sewa' To Get PPO

What Is A PPO Number For Pensioners? Here is step by step guide in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X