For Quick Alerts
ALLOW NOTIFICATIONS  
For Daily Alerts

ಡಿವಿಡೆಂಡ್, ಡಿವಿಡೆಂಡ್ ಇಳುವರಿ ಎಂದರೇನು? ಈ ವರ್ಷ ಲಾಭಾಂಶ ನೀಡಿದ ಕಂಪನಿಗಳಾವು?

By ಸುಶಾಂತ್ ಕಾಳಗಿ
|

ಡಿವಿಡೆಂಡ್ ಮತ್ತು ಡಿವಿಡೆಂಡ್ ಯೀಲ್ಡ್

ಕಂಪನಿಯೊಂದು ತಾನು ಗಳಿಸುವ ಲಾಭದಲ್ಲಿ ಷೇರುದಾರರಿಗೆ ನೀಡುವ ಪಾಲನ್ನು ಡಿವಿಡೆಂಡ್ (ಲಾಭಾಂಶ) ಎನ್ನಲಾಗುತ್ತದೆ. ಬಹುತೇಕ ಇಂಥ ಲಾಭಾಂಶವನ್ನು ವರ್ಷಕ್ಕೊಮ್ಮೆ ಷೇರುದಾರರಿಗೆ ಹಂಚಲಾಗುತ್ತದೆ. ಇನ್ನು ಡಿವಿಡೆಂಡ್ ಇಳುವರಿ ಅಥವಾ ಡಿವಿಡೆಂಡ್ ಯೀಲ್ಡ್ ಎಂದರೆ ಪ್ರತಿವರ್ಷದಲ್ಲಿ ಕಂಪನಿಯ ಷೇರಿನ ಸರಾಸರಿ ಬೆಲೆಯ ಮೇಲೆ ಸಿಗುವ ಲಾಭಾಂಶ ಎಂದರ್ಥ. ಡಿವಿಡೆಂಡ್ ಇಳುವರಿಯನ್ನು ಪ್ರತಿಶತ ಪ್ರಮಾಣದಲ್ಲಿ ಹೇಳಲಾಗುತ್ತದೆ. ಡಿವಿಡೆಂಡ್ ಮೌಲ್ಯವನ್ನು ಕಂಪನಿಯ ಸದ್ಯದ ಷೇರು ಬೆಲೆ ಅಥವಾ ಸದ್ಯದ ಮಾರುಕಟ್ಟೆ ಬೆಲೆಯಿಂದ ಭಾಗಿಸಿದಾಗ ಸಿಗುವ ಪರಿಮಾಣವೇ ಡಿವಿಡೆಂಡ್ ಯೀಲ್ಡ್.

ಡಿವಿಡೆಂಡ್ ಪ್ರತಿಷ್ಠೆ ಹಾಗೂ ವಿಶ್ವಾಸಾರ್ಹತೆಯ ಸಂಕೇತ

ಕೆಲ ಬಹು ಪ್ರತಿಷ್ಠಿತ ಕಂಪನಿಗಳು ಸಾಮಾನ್ಯವಾಗಿ ಡಿವಿಡೆಂಡ್ ನೀಡುತ್ತಿರುತ್ತವೆ. ಹಾಗಂತ ಎಲ್ಲ ಕಂಪನಿಗಳು ಡಿವಿಡೆಂಡ್ ನೀಡುವುದು ಕಡ್ಡಾಯವೇನಲ್ಲ. ಹಾಗೆಯೇ ಡಿವಿಡೆಂಡ್ ನೀಡುವ ಎಲ್ಲ ಕಂಪನಿಗಳು ಒಂದೇ ಪರಿಮಾಣದಲ್ಲಿ ಡಿವಿಡೆಂಡ್ ನೀಡುವುದಿಲ್ಲ. ಸಣ್ಣ ಕಂಪನಿಗಳು ಅಥವಾ ಈಗ ತಾನೇ ಬೆಳೆಯುತ್ತಿರುವ ಕಂಪನಿಗಳು ಸಾಮಾನ್ಯವಾಗಿ ಡಿವಿಡೆಂಡ್ ನೀಡುವುದಿಲ್ಲ. ಏಕೆಂದರೆ ಈ ಕಂಪನಿಗಳು ತಾವು ಗಳಿಸುವ ಲಾಭವನ್ನು ಕಂಪನಿಯ ಇನ್ನಷ್ಟು ಬೆಳವಣಿಗೆಗೆ ಉಪಯೋಗಿಸುವುದು ಮುಖ್ಯವಾಗಿರುತ್ತದೆ. ಆದರೆ ಕಂಪನಿಯೊಂದು ಡಿವಿಡೆಂಡ್ ನೀಡಿದರೆ ಇಕ್ವಿಟಿ ಮಾರುಕಟ್ಟೆಯಲ್ಲಿ ಅದರ ವಿಶ್ವಾಸಾರ್ಹತೆ ಹಾಗೂ ಪ್ರತಿಷ್ಠೆ ಹೆಚ್ಚುತ್ತದೆ. ಇದೇ ಕಾರಣದಿಂದ ಕೆಲವೊಂದು ಸಣ್ಣ ಕಂಪನಿಗಳು ಸಹ ಡಿವಿಡೆಂಡ್ ನೀಡುತ್ತವೆ.

ಡಿವಿಡೆಂಡ್ ಯೀಲ್ಡ್ ಫಂಡ್ ಮ್ಯಾನೇಜರುಗಳು ತಮ್ಮ ಶೇ 70 ಕ್ಕಿಂತಲೂ ಹೆಚ್ಚಿನ ಬಂಡವಾಳವನ್ನು ಅತಿ ಹೆಚ್ಚು ಡಿವಿಡೆಂಡ್ ನೀಡುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಇನ್ನುಳಿದ ಬಂಡವಾಳವನ್ನು ಉತ್ತಮ ಹಾಗೂ ಸ್ಥಿರ ಬೆಳವಣಿಗೆಯ ದಾಖಲೆ ಹೊಂದಿರುವ ಕಂಪನಿಗಳಲ್ಲಿ ಹೂಡಲಾಗುತ್ತದೆ.

ಈ ವರ್ಷ ಡಿವಿಡೆಂಡ್ ನೀಡುತ್ತಿರುವ ಪ್ರಮುಖ ಕಂಪನಿಗಳಿವು

ಡಿವಿಡೆಂಡ್ ಏಕೆ ಪಾವತಿಸಬೇಕು?

ಕಂಪನಿಯು ಷೇರುದಾರರಿಗೆ ಡಿವಿಡೆಂಡ್ ನೀಡುವುದಾದರೂ ಏಕೆ? ಡಿವಿಡೆಂಡ್ ನೀಡುವುದರಿಂದ ಕಂಪನಿಗೆ ಹೊಸ ಬಂಡವಾಳದಾರರು ಬರುತ್ತಾರೆ ಹಾಗೂ ಈಗಿರುವ ಬಂಡವಾಳದಾರರನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ಡಿವಿಡೆಂಡ್ ನೀಡುವಿಕೆಯು ಕಂಪನಿಯು ಆರ್ಥಿಕವಾಗಿ ತುಂಬಾ ಸದೃಢವಾಗಿದೆ ಎಂಬುದನ್ನು ಸೂಚಿಸುತ್ತದೆ ಹಾಗೂ ಬಂದ ಲಾಭದ ಲಾಭಾಂಶವನ್ನು ಷೇರುದಾರರಿಗೆ ಹಂಚಲು ಕಂಪನಿ ಸಶಕ್ತವಾಗಿದೆ ಎಂದು ಸಾಬೀತುಪಡಿಸುತ್ತದೆ. ಮಾರುಕಟ್ಟೆಯಲ್ಲಿ ಕಂಪನಿಯು ತುಂಬಾ ಪ್ರಬಲವಾಗಿದೆ ಹಾಗೂ ಮತ್ತಷ್ಟು ಬೆಳವಣಿಗೆಯ ಅವಕಾಶಗಳನ್ನು ಹೊಂದಿದೆ ಎಂಬುದು ಕೂಡ ಇದರಿಂದ ನಿರೂಪಿಸಲ್ಪಡುತ್ತದೆ. ಇನ್ನು ಡಿವಿಡೆಂಡ್ ನೀಡುತ್ತ ಹೋದಂತೆ ಅದಕ್ಕೆ ತಕ್ಕಂತೆ ಷೇರು ಬೆಲೆಯೂ ಹೆಚ್ಚಾಗುತ್ತ ಸಾಗುತ್ತದೆ. ಷೇರಿನ ಬೆಲೆ ಹೆಚ್ಚಾದಂತೆ ಡಿವಿಡೆಂಡ್ ಯೀಲ್ಡ್ ಕಡಿಮೆಯಾಗುತ್ತದೆ ಹಾಗೂ ಷೇರು ಬೆಲೆ ಕಡಿಮೆಯಾದಂತೆ ಡಿವಿಡೆಂಡ್ ಯೀಲ್ಡ್ ಹೆಚ್ಚಾಗುತ್ತದೆ.

ಸಾಮಾನ್ಯ ಡಿವಿಡೆಂಡ್ ಮತ್ತು ಅರ್ಹ ಡಿವಿಡೆಂಡ್ (Ordinary dividends and qualified dividends)

ಸಾಮಾನ್ಯ ಡಿವಿಡೆಂಡ್ ಮತ್ತು ಅರ್ಹ ಡಿವಿಡೆಂಡ್ ಹೀಗೆ ಎರಡು ರೀತಿಯ ಡಿವಿಡೆಂಡ್‌ಗಳನ್ನು ನೀಡಲಾಗುತ್ತದೆ. ಸಾಮಾನ್ಯ ಅಥವಾ ಆರ್ಡಿನರಿ ಡಿವಿಡೆಂಡ್ ಗಳ ಮೇಲೆ ನಿಗದಿತ ಆದಾಯದಂತೆ ತೆರಿಗೆ ವಿಧಿಸಲಾಗುತ್ತದೆ. ಅರ್ಹ ಅಥವಾ ಕ್ವಾಲಿಫೈಡ್ ಡಿವಿಡೆಂಡ್ ಗಳಿಗೆ ಕ್ಯಾಪಿಟಲ್ ಗೇನ್ಸ್ ಮಾದರಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ.

ಡಿವಿಡೆಂಡ್ಗಳ ರೆಕಾರ್ಡ್ ಡೇಟ್ ಮತ್ತು ಎಕ್ಸ್ ಡೇಟ್

ಷೇರುಧಾರಕರ ದೃಷ್ಟಿಯಿಂದ ರೆಕಾರ್ಡ್ ಡೇಟ್ ಮತ್ತು ಎಕ್ಸ್ ಡೇಟ್ ಇವೆರಡೂ ಬಹಳ ಮುಖ್ಯವಾಗಿವೆ. ಕಂಪನಿಯ ದಾಖಲೆಗಳ ಪ್ರಕಾರ ಷೇರುದಾರನೊಬ್ಬ ಡಿವಿಡೆಂಡ್ ಪಡೆಯಬೇಕಾದರೆ ಯಾವ ದಿನಾಂಕದಿಂದ ಆತ ಷೇರುದಾರನಾಗಿರಬೇಕು ಎಂಬುದು ರೆಕಾರ್ಡ್ ಡೇಟ್ ಎಂದು ಕರೆಯಲ್ಪಡುತ್ತದೆ. ಇನ್ನು ಎಕ್ಸ್ ಡೇಟ್ ಎಂಬುದು ಘೋಷಿತ ರೆಕಾರ್ಡ್ ಡೇಟ್ ನ ಒಂದು ಮುಂಚಿನ ವ್ಯವಹಾರದ ದಿನವಾಗಿರುತ್ತದೆ.

ಒಂದು ವೇಳೆ ನೀವು ಎಕ್ಸ್ ಡೇಟ್ ಅಥವಾ ಅದರ ನಂತರ ಷೇರನ್ನು ಖರೀದಿಸಿದರೆ ನೀವು ಡಿವಿಡೆಂಡ್ ಪಡೆಯಲು ಅರ್ಹರಾಗಿರುವುದಿಲ್ಲ. ಹಾಗೆಯೇ ಈ ಷೇರನ್ನು ಮಾರಿದವರಿಗೂ ಡಿವಿಡೆಂಡ್ ಸಿಗಲ್ಲ. ಅಂದರೆ ಎಕ್ಸ್ ಡಿವಿಡೆಂಟ್ ದಿನಾಂಕದಂದು ಕಂಪನಿಯ ಡಿವಿಡೆಂಡ್ ಪಾವತಿಸುವ ಅವಧಿ ಮುಗಿದುಹೋಗಿರುತ್ತದೆ. ಹೀಗಾಗಿ ಡಿವಿಡೆಂಡ್ ಪಾವತಿಸುವ ಕಂಪನಿಗಳ ಷೇರುಗಳನ್ನು ಎಕ್ಸ್ ಡಿವಿಡೆಂಡ್ ದಿನಾಂಕದ ಮುಂಚೆ ಹಿಡಿದಿಟ್ಟುಕೊಳ್ಳುವುದು ಷೇರುದಾರರಿಗೆ ಆಕರ್ಷಕವಾಗಿರುತ್ತದೆ.

ಈ ವರ್ಷ ಡಿವಿಡೆಂಡ್ ನೀಡುತ್ತಿರುವ ಪ್ರಮುಖ ಕಂಪನಿಗಳು

ಡಿವಿಡೆಂಡ್ ಪಾವತಿಸುವ ಬಗ್ಗೆ ಬೋರ್ಡ್ ಮೀಟಿಂಗ್ ನಡೆಸಿದ ನಂತರ ಕಂಪನಿಗಳು ಈ ಬಗ್ಗೆ ನಿರ್ಧಾರ ಪ್ರಕಟಿಸುತ್ತವೆ. 2022 ರ ಸಾಲಿಗೆ ಡಿವಿಡೆಂಡ್ ನೀಡುವುದಾಗಿ ಈಗಾಗಲೇ ಹಲವಾರು ಕಂಪನಿಗಳು ಘೋಷಿಸಿವೆ. ಪ್ರತಿ ಷೇರಿಗೆ ನಿರ್ದಿಷ್ಟ ಮೊತ್ತದ ಡಿವಿಡೆಂಡ್ ನೀಡುವುದಾಗಿ 2022 ರಲ್ಲಿ ಪ್ರಕಟಣೆ ಮಾಡಿದ ಕೆಲ ಪ್ರಖ್ಯಾತ ಕಂಪನಿಗಳ ಮಾಹಿತಿ ಇಲ್ಲಿದೆ ನೋಡಿ:

ಎಲ್ ಆ್ಯಂಡ್ ಟಿ ಕಂಪನಿಯು ಜನವರಿ 25, 2022 ಎಕ್ಸ್ ಡೇಟ್ ಆಗಿರುವಂತೆ ಮಧ್ಯಂತರ ಡಿವಿಡೆಂಡ್ ನೀಡುವುದಾಗಿ ಘೋಷಿಸಿದೆ.

ಎಚ್ ಸಿ ಎಲ್ ಟೆಕ್ ಕಂಪನಿಯು ಜನವರಿ 20, 2022 ಎಕ್ಸ್ ಡೇಟ್ ಆಗಿರುವಂತೆ ಮಧ್ಯಂತರ ಡಿವಿಡೆಂಡ್ ನೀಡುವುದಾಗಿ ಘೋಷಿಸಿದೆ.

ಸೀಮೆನ್ಸ್ ಕಂಪನಿಯು ಜನವರಿ 20, 2022 ಎಕ್ಸ್ ಡೇಟ್ ಆಗಿರುವಂತೆ ಅಂತಿಮ ಡಿವಿಡೆಂಡ್ ನೀಡುವುದಾಗಿ ಘೋಷಿಸಿದೆ.

ಇನ್ಫೊ ಎಡ್ಜ್ ಕಂಪನಿಯು ಜನವರಿ 27, 2022 ಎಕ್ಸ್ ಡೇಟ್ ಆಗಿರುವಂತೆ ಮಧ್ಯಂತರ ಡಿವಿಡೆಂಡ್ ನೀಡುವುದಾಗಿ ಘೋಷಿಸಿದೆ.

ಸಾರ್ಥಕ್ ಮೆಟಲ್ಸ್ ಕಂಪನಿಯು ಜನವರಿ 12, 2022 ಎಕ್ಸ್ ಡೇಟ್ ಆಗಿರುವಂತೆ ಮಧ್ಯಂತರ ಡಿವಿಡೆಂಡ್ ನೀಡುವುದಾಗಿ ಘೋಷಿಸಿದೆ.

ರೇಲಟೆಲ್ ಕಂಪನಿಯು ಜನವರಿ 20, 2022 ಎಕ್ಸ್ ಡೇಟ್ ಆಗಿರುವಂತೆ ಮಧ್ಯಂತರ ಡಿವಿಡೆಂಡ್ ನೀಡುವುದಾಗಿ ಘೋಷಿಸಿದೆ.

ಈ ಎಲ್ಲ ಕಂಪನಿಗಳು ತಮ್ಮ ಡಿವಿಡೆಂಡ್ ಮೊತ್ತವನ್ನು ಇನ್ನಷ್ಟೇ ಘೋಷಿಸಬೇಕಿದೆ.

English summary

What Is Dividend And Dividend Yield In Stocks: Companies Paying Dividend In 2022 To Investors

What Is Dividend And Dividend Yield In Stocks: Companies Paying Dividend In 2022 To Investors - Here is a detailed guide in Kannada.
Story first published: Saturday, January 8, 2022, 19:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X