For Quick Alerts
ALLOW NOTIFICATIONS  
For Daily Alerts

e PAN Card ಡೌನ್ ಲೋಡ್ ಮಾಡುವುದು ಹೇಗೆ?

|

ಬ್ಯಾಂಕಿಂಗ್ ಸಂಬಂಧಿತ ವಿವಿಧ ಸೇವೆ, ಸೌಲಭ್ಯಗಳನ್ನು ಪಡೆಯಲು Permanent Account Number(PAN) ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಪ್ಯಾನ್ ಕಾರ್ಡ್ ಪಡೆಯುವುದು ಈಗ ಸುಲಭವಾಗಿದೆ. ಉಚಿತವಾಗಿ ಇ-ಪ್ಯಾನ್ ಕಾರ್ಡ್ ನೀಡುವ ಪ್ರಕ್ರಿಯೆ ಬಗ್ಗೆ ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ. ನಿಮ್ಮ ಎಲ್ಲಾ ತೆರಿಗೆ-ಸಂಬಂಧಿತ ಮಾಹಿತಿಯನ್ನು ಈ 10-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್‌ನಲ್ಲಿ ಸಂಗ್ರಹಿಸಲಾಗಿದೆ.ಇ-ಪ್ಯಾನ್ ಕಾರ್ಡ್ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಲು ಮತ್ತು ಅದನ್ನು ನಿಮ್ಮ ಮೊಬೈಲ್ ನಲ್ಲಿ ಸಂಗ್ರಹಿಸಲು ಸಾಧ್ಯವಾಗಿಸಿದೆ. ಯಾವಾಗ ಮತ್ತು ಎಲ್ಲಿ ಬೇಕಾದರೂ ಇ ಪ್ಯಾನ್ ಅಧಿಕೃತವಾಗಿ ಬಳಸಬಹುದಾಗಿದೆ.

 

ಏನಿದು ಇ ಪ್ಯಾನ್: ಎಲೆಕ್ಟ್ರಾನಿಕ್-ಪ್ಯಾನ್ ಕಾರ್ಡ್ ಇದರ ವಿಸ್ತೃತ ರೂಪ. ಇ ಪ್ಯಾನ್ ಸೌಲಭ್ಯ ಸಂಪೂರ್ಣವಾಗಿ ಉಚಿತವಾಗಿದೆ. ಪ್ಯಾನ್ ಕಾರ್ಡ್ ಕಳೆದುಕೊಂಡವರು ಕೂಡಾ ಸುಲಭವಾಗಿ ಕೆಲ ನಿಮಿಷಗಳಲ್ಲಿ ಬದಲಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು. ಹಾಲಿ ಪ್ಯಾನ್ ಕಾರ್ಡ್ ಹೊಂದಿರುವವರು ಹಾಗೂ ಹೊಸ ಪ್ಯಾನ್ ಕಾರ್ಡ್ ದಾರರು ಇ ಪ್ಯಾನ್ ಪಡೆದುಕೊಳ್ಳಬಹುದು.

ಇ ಪ್ಯಾನ್ ಕಾರ್ಡ್ ವಿಶೇಷ ಹೇಗೆ?
* ಇ ಪ್ಯಾನ್ ಅರ್ಜಿಯಲ್ಲಿ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ.
* ಆಧಾರ್ ಸಂಖ್ಯೆಗೆ ಜೋಡಿಸಿರುವ ಅಧಿಕೃತ ಫೋನ್ ನಂಬರ್ ಪರಿಶೀಲಿಸಲಾಗುವುದು
* ನಿಮ್ಮ ಅಧಿಕೃತ ಫೋನ್ ನಂಬರ್ ಗೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಬರಲಿದೆ.
* ಯಾವುದೇ ಬೇರೆ ದಾಖಲೆ ಒದಗಿಸುವ ಅಗತ್ಯವಿಲ್ಲ.
* ಹೊಸ PAN ಸೃಷ್ಟಿಯಾಗುತ್ತಿದ್ದಂತೆ, ಡಿಜಿಟಲ್ ಸಹಿಯುಳ್ಳ ಇ-ಪ್ಯಾನ್ ವಿತರಿಸಲಾಗುವುದು.
* ಇದು ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತದೆ. ಇದರಲ್ಲಿ ಭೌಗೋಳಿಕ ಮಾಹಿತಿ, ಅರ್ಜಿದಾರರನ ಭಾವಚಿತ್ರ ಇರಲಿದೆ. ಎಲ್ಲಾ ಮಾಹಿತಿಯೂ encrypt ಆಗಿರುವುದರಿಂದ ಮಾಹಿತಿ ಸುರಕ್ಷವಾಗಿರಲಿದೆ.

ಇ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ? ಪ್ಯಾನ್ ನಂಬರ್ ಹಾಗೂ ಸ್ವೀಕೃತಿ ನಂಬರ್ ಎರಡು ವಿಧಾನ ಬಳಸಿ ಪಡೆಯಬಹುದು.

ಇ ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡುವುದು ಹೇಗೆ?

* UTI-ITSL ಮೂಲಕ ಹೊಸ ಪ್ಯಾನ್ ಪಡೆಯಲು ಬಯಸುವವರು ಹಾಗೂ ಪ್ಯಾನ್ ಕಾರ್ಡಿನಲ್ಲಿ ಬದಲಾವಣೆ ಬಯಸುವವರು ಆನ್ ಲೈನ್‌ನಲ್ಲಿ ಇ-ಪ್ಯಾನ್ ಕಾರ್ಡ್ NSDL ಹಾಗೂ UTIITSL ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ (https://www.onlineservices.nsdl.com/paam/requestAndDownloadEPAN.html)

 

* ಡೌನ್ ಲೋಡ್ ಇ ಪ್ಯಾನ್ ಕಾರ್ಡ್ ಕ್ಲಿಕ್ ಮಾಡಿ
* ಚಾಲ್ತಿ ಪ್ಯಾನ್ ಬದಲಾವಣೆ ಬಯಸುವವರು PAN, ಆಧಾರ್, ಹುಟ್ಟಿದ ದಿನಾಂಕ. ಇತ್ಯಾದಿ ಪ್ರಮುಖ ಮಾಹಿತಿ ನೀಡಿ.
* ನಿಗದಿತ ಶುಲ್ಕವನ್ನು ಡೆಬಿಟ್/ ಕ್ರೆಡಿಟ್, ಡಿಡಿ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಪಾವತಿಸಿ.
* 15 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಕಳಿಸಲಾಗುತ್ತದೆ.
* ಪರಿಶೀಲನೆ ನಂತರ ನಿಮ್ಮ ಪ್ಯಾನ್ ಕಾರ್ಡ್ ನಿಮ್ಮ ಅಧಿಕೃತ ವಿಳಾಸವನ್ನು ತಲುಪಲಿದೆ. ಆದರೆ,ಇ ಪ್ಯಾನ್ ತಕ್ಷಣವೇ ಸಿಗುವುದರಿಂದ ಆದಾಯ ತೆರಿಗೆ ಇಲಾಖೆಯು ಕಾರ್ಡ್ ಗಳನ್ನು ಮನೆ ವಿಳಾಸಕ್ಕೆ ಕಳಿಸುವ ಅಗತ್ಯವಿಲ್ಲ.

ಪ್ಯಾನ್ ನಂಬರ್ ಬಳಸಿ ಡೌನ್ ಲೋಡ್ ಹೀಗೆ ಮಾಡಿ:
ಹಂತ: 1 ಪ್ಯಾನ್ ಕಾರ್ಡ್‌ನ 10-ಅಂಕಿಯ ಆಲ್ಫಾನ್ಯೂಮರಿಕ್ ಸಂಖ್ಯೆಯನ್ನು ಸಲ್ಲಿಸಿ

ಹಂತ: 2 ನಂತರ, ನಿಮ್ಮ ಹೆಸರು, ಜನ್ಮ ದಿನಾಂಕ, ಕ್ಯಾಚ್ ಕೋಡ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ (ವ್ಯಕ್ತಿಗಳಿಗೆ ಮಾತ್ರ).

ಹಂತ: 3 ವಿನಂತಿಸಿದ ಮಾಹಿತಿಯನ್ನು ಒದಗಿಸಿದ ನಂತರ ಮತ್ತು ಸೂಚನೆಗಳನ್ನು ಓದಿದ ನಂತರ, ಬಾಕ್ಸ್ ಅನ್ನು ಪರಿಶೀಲಿಸಿ.

ಹಂತ: 4 ಕ್ಯಾಪ್ಚಾವನ್ನು ಭರ್ತಿ ಮಾಡಿ, ನಂತರ "Submit" ಆಯ್ಕೆಮಾಡಿ.

ಹಂತ:5 ನಿಮ್ಮ ಇ-ಪ್ಯಾನ್ ಕಾರ್ಡ್‌ನ ಪಿಡಿಎಫ್ ಪರದೆಯ ಮೇಲೆ ಕಾಣಿಸುತ್ತದೆ.

ಹಂತ:6 ಇ-ಪ್ಯಾನ್ ಡೌನ್‌ಲೋಡ್ ಮಾಡಲು, ಡೌನ್‌ಲೋಡ್ PDF ಅನ್ನು ಕ್ಲಿಕ್ ಮಾಡಿ.

***

ಇ ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡುವುದು ಹೇಗೆ?

ಇದೇ ವಿಧಾನದಲ್ಲಿ ಸ್ವೀಕೃತಿ ಸಂಖ್ಯೆ (acknowledgement number) ಬಳಸಿ ಇ ಪ್ಯಾನ್ ಡೌನ್ ಮಾಡಿ

ಹಂತ: 1 ಸ್ವೀಕೃತಿ ಸಂಖ್ಯೆಯನ್ನು ಹಾಕಿ.

ಹಂತ: 2 ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.

ಹಂತ: 3 Submitಬಟನ್ ಅನ್ನು ಆಯ್ಕೆ ಮಾಡಿ.

ಹಂತ: 4 ನಿಮ್ಮ ಇ-ಪ್ಯಾನ್ ಕಾರ್ಡ್‌ನ PDF ಅನ್ನು ಪರದೆಯ ಮೇಲೆ ತೋರಿಸಲಾಗುತ್ತದೆ.

ಹಂತ: 5 ಇ-ಪ್ಯಾನ್ ಡೌನ್‌ಲೋಡ್ ಮಾಡಲು, ಡೌನ್‌ಲೋಡ್ PDF ಅನ್ನು ಕ್ಲಿಕ್ ಮಾಡಿ.

English summary

What is e-Pan Card and How to Download it Online, Here is step-by-step tutorial

Permanent Account Number or PAN card is now avaiable in e-Pan Card Version. This easily accessible e-PAN card PDF can be downloaded
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X