For Quick Alerts
ALLOW NOTIFICATIONS  
For Daily Alerts

ಕೊರೊನಾ ಆರ್ಥಿಕ ಸಂಕಷ್ಟದಲ್ಲಿ 'ಹೆಲಿಕಾಪ್ಟರ್ ಮನಿ' ಚರ್ಚೆ; ಇದೇನು ಗೊತ್ತಾ?

|

ಕೊರೊನಾದಿಂದ ಪೆಟ್ಟು ಬಿದ್ದಿರುವ ದೇಶಗಳ ಆರ್ಥಿಕತೆ ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕಾಗುತ್ತದೆ? ಈ ಪ್ರಶ್ನೆಗೆ ಒಬ್ಬೊಬ್ಬ ತಜ್ಞರ ಉತ್ತರ ಒಂದೊಂದು ಬಗೆಯಲ್ಲಿ ಇದೆ. ಆದರೆ ಅದಾಗಲೇ ಕೆಲವು ತಂತ್ರಗಳನ್ನು ಸಹ ಮುಂದಿಡುತ್ತಿದ್ದಾರೆ. ಅಂಥ ತಂತ್ರಗಳಲ್ಲಿ ಒಂದು 'ಹೆಲಿಕಾಪ್ಟರ್ ಮನಿ'.

ಹೀಗಂದರೆ ಏನು ಗೊತ್ತಾ? ಆಯಾ ದೇಶದ ಕೇಂದ್ರ ಬ್ಯಾಂಕ್ ಅಂದರೆ ರಿಸರ್ವ್ ಬ್ಯಾಂಕ್ ನಿಂದ ಹಣ ವರ್ಗಾವಣೆ ಮಾಡುವುದು. ಆದರೆ ಅದನ್ನು ಸರ್ಕಾರವು ವಾಪಸ್ ಮಾಡುವ ಅಗತ್ಯ ಇಲ್ಲ. ಆ ಮೂಲಕ ಜನರಿಗೆ ಹಣ ದೊರೆಯುವಂತಾಗಿ, ವ್ಯವಸ್ಥೆಯಲ್ಲಿ ಹಣಕಾಸಿನ ಹರಿವು ಜಾಸ್ತಿ ಆಗಬೇಕು. ಆಗ ಜನರು ಹೆಚ್ಚು ಖರ್ಚು ಮಾಡುತ್ತಾರೆ. ಅಲ್ಲಿಗೆ ಆರ್ಥಿಕತೆಗೆ ಉತ್ತೇಜನ ದೊರೆತಂತಾಗುತ್ತದೆ ಎಂಬುದು ಲೆಕ್ಕಾಚಾರ.

3 ವಾರಗಳ ಲಾಕ್ ಡೌನ್ ಸಹಿಸುವ ಸಾಮರ್ಥ್ಯ ಎಷ್ಟು ಮಂದಿಗಿದೆ? : ಸಮೀಕ್ಷೆ3 ವಾರಗಳ ಲಾಕ್ ಡೌನ್ ಸಹಿಸುವ ಸಾಮರ್ಥ್ಯ ಎಷ್ಟು ಮಂದಿಗಿದೆ? : ಸಮೀಕ್ಷೆ

ಈ 'ಹೆಲಿಕಾಪ್ಟರ್ ಮನಿ' ಬಗ್ಗೆ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಪ್ರಶ್ನೋತ್ತರ ಮಾದರಿಯಲ್ಲಿ ಇಲ್ಲಿದೆ ವಿವರಗಳು.

ಹೆಲಿಕಾಪ್ಟರ್ ಮನೆ ಅಂದರೇನು?

ಹೆಲಿಕಾಪ್ಟರ್ ಮನೆ ಅಂದರೇನು?

ಇದು ಸಾಂಪ್ರದಾಯಿಕ ಅಲ್ಲದ ಹಣಕಾಸು ನಿಯಮ. ಹಳಿ ತಪ್ಪಿದ ಆರ್ಥಿಕತೆಯನ್ನು ಮರಳಿ ಹತೋಟಿಗೆ ತಂದುಕೊಳ್ಳಲು ಬಳಸಲಾಗುತ್ತದೆ. ದೊಡ್ಡ ಮೊತ್ತದ ಹಣವನ್ನು ಮುದ್ರಿಸಿ, ಅದನ್ನು ಜನರಿಗೆ ಹಂಚುವುದು ಸಹ ಈ ವಿಧಾನಗಳಲ್ಲಿ ಒಂದು. ಅಮೆರಿಕದ ಆರ್ಥಿಕ ತಜ್ಞ ಮಿಲ್ಟನ್ ಫ್ರೀಡ್ ಮನ್ 'ಹೆಲಿಕಾಪ್ಟರ್ ಮನಿ' ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು. ಇದರ ಮೂಲ ಅರ್ಥ, ಆಗಸದಿಂದ ಹೆಲಿಕಾಪ್ಟರ್ ಮೂಲಕ ಹಣವನ್ನು ಕೆಳಗೆ ಹಾಕುವುದು ಎಂದಾಗುತ್ತದೆ. ಫ್ರೀಡ್ ಮನ್ ಈ ಪದವನ್ನು ಹೇಗೆ ಬಳಸಿದ್ದು ಅಂದರೆ, ಬಹಳ ಕಷ್ಟದಲ್ಲಿ ಇರುವ ಆರ್ಥಿಕತೆಗೆ ದಿಢೀರನೇ ಹಣವನ್ನು ಪೂರೈಸಿ, ಆ ಸಂದಿಗ್ಧ ಸ್ಥಿತಿಯಿಂದ ಆಚೆಗೆ ತರುವುದು ಎಂಬ ಅರ್ಥದಲ್ಲಿ. ಇದು ಒಂದು ಬಗೆಯ ಶಾಕ್ ಟ್ರೀಟ್ ಮೆಂಟ್. ಆದರೆ ಪಾಸಿಟಿವ್ ದೃಷ್ಟಿಯಿಂದ. ಯಾವುದೇ ದೇಶದ ಕೇಂದ್ರ ಬ್ಯಾಂಕ್ ವೊಂದು ಸರ್ಕಾರದ ಮೂಲಕ ನೇರವಾಗಿ ಹಣಕಾಸಿನ ಪೂರೈಕೆ ಹೆಚ್ಚಿಸುತ್ತದೆ ಮತ್ತು ಬೇಡಿಕೆ ಹಾಗೂ ಹಣದುಬ್ಬರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಹೊಸ ನಗದನ್ನು ಜನರಿಗೆ ವಿತರಿಸುತ್ತದೆ.

ಹೆಲಿಕಾಪ್ಟರ್ ಮನಿ ಈಗೇಕೆ ಚರ್ಚೆಯಲ್ಲಿದೆ?

ಹೆಲಿಕಾಪ್ಟರ್ ಮನಿ ಈಗೇಕೆ ಚರ್ಚೆಯಲ್ಲಿದೆ?

ಕೊರೊನಾ ಹಬ್ಬಿರುವುದರಿಂದ ಆರ್ಥಿಕತೆಗೆ ದಿನದಿಂದ ದಿನಕ್ಕೆ ದೊಡ್ಡ ಮಟ್ಟದ ಪೆಟ್ಟು ಬೀಳುತ್ತಿದೆ. ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಇಂಥ ಸಂಕಷ್ಟದ ಸಮಯದಲ್ಲಿ ಹೆಲಿಕಾಪ್ಟರ್ ಮನಿಯಿಂದ ಸಹಾಯ ಆಗುತ್ತದೆ ಎಂದು ಹೇಳಿದ್ದಾರೆ. ಆ ಕಾರಣಕ್ಕೆ ಹೆಲಿಕಾಪ್ಟರ್ ಮನಿ ಎಂಬುದು ಚರ್ಚೆಯಲ್ಲಿದೆ. ಇನ್ನು ಕ್ವಾಂಟಿಟೆಟಿವ್ ಈಸಿಂಗ್ (ಕ್ಯೂಇ) ಮೂಲಕ ಜಿಡಿಪಿಯ 5% ಅನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಹಾಗಂತ ಇದು ಹೊಸ ವಿಷಯ ಏನಲ್ಲ. ವಿಶ್ವದಾದ್ಯಂತ ಇದನ್ನೇ ಅನುಸರಿಸಲಾಗುತ್ತಿದೆ. ಈಗಿನ ಸಂಕಷ್ಟವನ್ನು ಎದುರಿಸುವುದಕ್ಕೆ ಇರುವ ದಾರಿ ಕೂಡ ಇದೊಂದೇ. ಅದಕ್ಕೆ ಜಿಡಿಪಿಯ 5 ಪರ್ಸೆಂಟ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಬೇಕಾಗುತ್ತದೆ.

ಹೆಲಿಕಾಪ್ಟರ್ ಮನಿ ಹಾಗೂ ಕ್ವಾಂಟಿಟೇಟಿವ್ ಈಸಿಂಗ್ ಎರಡೂ ಒಂದೇನಾ?

ಹೆಲಿಕಾಪ್ಟರ್ ಮನಿ ಹಾಗೂ ಕ್ವಾಂಟಿಟೇಟಿವ್ ಈಸಿಂಗ್ ಎರಡೂ ಒಂದೇನಾ?

ಕ್ವಾಂಟಿಟೇಟಿವ್ ಈಸಿಂಗ್ ಅಂದರೆ, ಕೇಂದ್ರ ಬ್ಯಾಂಕ್ ಗಳು ಮುದ್ರಿಸಿರುವ ನೋಟುಗಳನ್ನು ಸರ್ಕಾರದ ಬಾಂಡ್ ಗಳನ್ನು ಖರೀದಿಸಲು ಬಳಸಲಾಗುತ್ತದೆ. ಆದರೆ ಎಲ್ಲರೂ ಹೇಳುವ ಹಾಗೆ ಈ ಕ್ಯೂಈ ಅನ್ನು ಹೆಲಿಕಾಪ್ಟರ್ ಮನಿ ಅನ್ನೋದಿಕ್ಕೆ ಸಾಧ್ಯವಿಲ್ಲ. ಕ್ಯೂಇ ನಿಖರ ಅರ್ಥ ಇಷ್ಟೆ: ಸರ್ಕಾರದ ವಿತ್ತೀಯ ಕೊರತೆ ನಿವಾರಿಸಲು ಕೇಂದ್ರ ಬ್ಯಾಂಕ್ ನೋಟು ಮುದ್ರಿಸುತ್ತದೆ. ಆದರೆ ಬಾಂಡ್ ಮೂಲಕವಾಗಿ ಕೇಂದ್ರ ಬ್ಯಾಂಕ್ ಖರೀದಿಸುವ ಆಸ್ತಿಯನ್ನು ವಾಪಸ್ ಪಡೆಯಲು ಸರ್ಕಾರ ಹಣ ಮರುಪಾವತಿಸಬೇಕು. ಹೆಲಿಕಾಪ್ಟರ್ ಮನಿ ಅಂದರೆ ಸರ್ಕಾರದ ಸಾಲಕ್ಕೆ ನೇರವಾಗಿ ಕೇಂದ್ರಬ್ಯಾಂಕ್ ಹಣ ನೀಡುತ್ತದೆ. ಇದನ್ನು ವಾಪಸ್ ಮಾಡಬೇಕಿಲ್ಲ.

ಹೆಲಿಕಾಪ್ಟರ್ ಮನಿಯನ್ನು ಜಪಾನ್ ಬಳಸುತ್ತಿದೆಯಾ?

ಹೆಲಿಕಾಪ್ಟರ್ ಮನಿಯನ್ನು ಜಪಾನ್ ಬಳಸುತ್ತಿದೆಯಾ?

ಕೆಲವು ತಜ್ಞರ ಪ್ರಕಾರ, ಈಗಿನ ಆರ್ಥಿಕ ಸಮಸ್ಯೆ ನಿವಾರಣೆಗೆ ಜಪಾನ್ ನಿಂದ ಹೆಲಿಕಾಪ್ಟರ್ ಮನಿಯಂಥದ್ದೇ ಬಳಸಲಾಗುತ್ತಿದೆ. ಎಲ್ಲಿ ಬಾಂಡ್ ಮೇಲೆ ದರ ಹೆಚ್ಚಾಗುತ್ತಾ ಹೋಗುತ್ತದೋ ಎಂಬ ಚಿಂತೆಯಿಲ್ಲದೆ ಖರ್ಚು ಮಾಡಲು ಸಾಧ್ಯವಿರುವುದು ಹೆಲಿಕಾಪ್ಟರ್ ಮನಿಗೆ ಮಾತ್ರ. ಏಕೆಂದರೆ ಬಾಂಡ್ ವಿತರಿಸಿದರೆ ಅದಕ್ಕೆ ರಿಟರ್ನ್ಸ್ ಕೊಡಲೇಬೇಕಾಗುತ್ತದೆ. ಆದರೆ ಹೆಲಿಕಾಪ್ಟರ್ ಮನಿ ನೀಡುವುದನ್ನು ಬ್ಯಾಂಕ್ ಆಫ್ ಜಪಾನ್ ಅಲ್ಲಗಳೆದಿದೆ. ಈಗಲೂ ಬ್ಯಾಂಕ್ ಆಫ್ ಜಪಾನ್ ಮಾರ್ಕೆಟ್ ನಲ್ಲಿ ಬಾಂಡ್ ಖರೀದಿ ಮಾಡುತ್ತದೆ. ನೇರವಾಗಿ ಸರ್ಕಾರದ ಸಾಲವನ್ನು ಅಂಡರ್ ರೈಟ್ ಮಾಡುವುದಿಲ್ಲ ಎಂದಿದೆ. ಹೀಗೆ ಮಾಡಿದರೆ ಹೂಡಿಕೆದಾರರ ವಿಶ್ವಾಸ ಕರಗುತ್ತದೆ ಎಂದು ಕೂಡ ಹೀಗೆ ಹೇಳಿದೆ ಎನ್ನಲಾಗುತ್ತಿದೆ.

English summary

What Is Helicopter Money? How It Helps Economy?

During Corona lock down "Helicopter Money" coming in to discussion. What is this and how it helps to economy? Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X