For Quick Alerts
ALLOW NOTIFICATIONS  
For Daily Alerts

ವಿದೇಶದಲ್ಲಿ ನಿಮ್ಮ ಪಾಸ್‌ಪೋರ್ಟ್ ಕಳೆದು ಹೋದರೆ ಏನ್ ಗತಿ! ಏನು ಮಾಡ್ಬೇಕು?

|

ನೀವು ವಿದೇಶಕ್ಕೆ ತೆರಳಿದ್ದಾಗ ಪಾಸ್‌ಪೋರ್ಟ್ ಅತ್ಯಮೂಲ್ಯವಾದ ದಾಖಲೆಯಾಗಿದೆ. ನೀವು ಯಾವ ದೇಶದ ಪ್ರಜೆ ಎಂದು ಪ್ರತಿನಿಧಿಸಲು ಪ್ರಮುಖ ಆಸ್ತಿಯಾಗಿದೆ. ನಿಮ್ಮ ಅಸ್ತಿತ್ವವನ್ನು ಸಾಬೀತು ಪಡಿಸಲು ಪಾಸ್‌ಪೋರ್ಟ್ ಅತ್ಯವಶ್ಯಕವಾಗಿದೆ.

ಒಂದು ವೇಳೆ ನಿಮ್ಮ ವಿದೇಶ ಪ್ರವಾಸದಲ್ಲಿ ಈ ಅತ್ಯಮೂಲ್ಯ ದಾಖಲೆ ಪಾರ್ಸ್‌ಪೋರ್ಟ್ ಕಳೆದು ಹೋದರೆ ಏನು ಗತಿ? ಅಥವಾ ಕಳ್ಳತನವಾದರೆ ಏನು ಮಾಡಬೇಕು? ವಿದೇಶಕ್ಕೆ ತೆರಳುವ ಎಷ್ಟೋ ಜನರಿಗೆ ಈ ಪ್ರಶ್ನೆಗಳಿಗೆ ಉತ್ತರವೇ ತಿಳಿದಿರುವುದಿಲ್ಲ. ಆದರೂ ಒಂದ್ವೇಳೆ ಹೀಗೆ ಆಗಿದ್ದೇ ಆದಲ್ಲಿ ಭಯ ಪಡಬೇಕಿಲ್ಲ. ಅದಕ್ಕಾಗಿ ಪರ್ಯಾಯ ಮಾರ್ಗಗಳು ಇವೆ. ಅವುಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದ್ದು ಓದಿ.

ಪ್ರವಾಸಕ್ಕೂ ಮೊದಲು ಪಾಸ್‌ಪೋರ್ಟ್ ಮತ್ತೂ ವೀಸಾ ಜೆರಾಕ್ಸ್‌ ಇಟ್ಟುಕೊಳ್ಳಿ
 

ಪ್ರವಾಸಕ್ಕೂ ಮೊದಲು ಪಾಸ್‌ಪೋರ್ಟ್ ಮತ್ತೂ ವೀಸಾ ಜೆರಾಕ್ಸ್‌ ಇಟ್ಟುಕೊಳ್ಳಿ

ನೀವು ಯಾವುದೇ ದೇಶದ ಪ್ರವಾಸಕ್ಕೆ ತೆರಳುವ ಮುನ್ನ ನಿಮ್ಮ ಪಾಸ್‌ಪೋರ್ಟ್‌ ಮತ್ತು ವೀಸಾ ಜೆರಾಕ್ಸ್‌ ಇಟ್ಟುಕೊಂಡರೆ ಉತ್ತಮ. ಈ ಜೆರಾಕ್ಸ್‌ಗಳನ್ನು ನೀವು ಮೂಲ ಪ್ರತಿ(ಒರಿಜಿನಲ್ ಪಾಸ್‌ಪೋರ್ಟ್) ನಿಂದ ಪ್ರತೇಕವಾಗಿ ತೆಗೆದಿಟ್ಟಿರಿ.

ಪಾಸ್‌ಪೋರ್ಟ್ ಮತ್ತು ವೀಸಾ ಜೆರಾಕ್ಸ್ ಇಟ್ಟುಕೊಳ್ಳುವುದರ ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪಾಸ್‌ಪೋರ್ಟ್‌ ಪೋಟೋವನ್ನ ತೆಗೆದುಕೊಂಡಿರಿ. ಇಲ್ಲವೇ ಸ್ಕ್ಯಾನ್ ಮಾಡಿಕೊಂಡು ನಿಮ್ಮ ಇ-ಮೇಲ್‌ಗೆ ಹಾಕಿಕೊಳ್ಳಿ. ಏಕೆಂದರೆ ಪಾಸ್‌ಪೋರ್ಟ್, ವೀಸಾ ಜೊತೆಗೆ ಮೊಬೈಲ್ ಕೂಡ ಕಳೆದುಹೋದ ಸಂದರ್ಭದಲ್ಲಿ ನಿಮ್ಮ ಇ-ಮೇಲ್‌ನಲ್ಲಿ ದಾಖಲೆಗಳು ಸುರಕ್ಷಿತವಾಗಿರುತ್ತದೆ ಮತ್ತು ನೆರವಿಗೆ ಬರುತ್ತದೆ.

ರಾಯಭಾರ ಕಚೇರಿ ದೂರವಾಣಿ, ವಿಳಾಸ ಪಟ್ಟಿ ಮಾಡಿಕೊಳ್ಳಿ

ರಾಯಭಾರ ಕಚೇರಿ ದೂರವಾಣಿ, ವಿಳಾಸ ಪಟ್ಟಿ ಮಾಡಿಕೊಳ್ಳಿ

ನೀವು ಭೇಟಿ ಮಾಡಲು ಉದ್ದೇಶಿಸಿರುವ ದೇಶದ ಭಾರತೀಯ ರಾಯಭಾರ ಕಚೇರಿ ಮತ್ತು ರಾಜತಾಂತ್ರಿಕ ಕಚೇರಿಗಳ ದೂರವಾಣಿ ಮತ್ತು ವಿಳಾಸವನ್ನು ನೀವು ಪ್ರವಾಸಕ್ಕೆ ತೆರಳುವು ಮುನ್ನವೇ ಬರೆದಿಟ್ಟುಕೊಂಡಿದ್ದರೆ ಉತ್ತಮ. ಇದು ಕಷ್ಟಕಾಲದಲ್ಲಿ ನೆರವಿಗೆ ಬರಬಹುದು.

ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ಪ್ರವಾಸ ವಿಮೆ ಮಾಡಿಸಿದ್ರೆ ಉತ್ತಮ

ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ಪ್ರವಾಸ ವಿಮೆ ಮಾಡಿಸಿದ್ರೆ ಉತ್ತಮ

ಯಾವುದೇ ದೇಶಕ್ಕೆ ಪ್ರವಾಸ ಕೈಗೊಳ್ಳುವ ಮೊದಲು ವಿಮೆ ಮಾಡಿಸಿದರೆ ನಿಮಗೆ ಉತ್ತಮ ಪರಿಹಾರ ದೊರಕುವುದು. ಅನೇಕ ವಿಮಾ ಕಂಪನಿಗಳು ನಿಮ್ಮ ವಿದೇಶ ಪ್ರವಾಸಕ್ಕೆ ವಿಮಾ ಸೌಲಭ್ಯಗಳನ್ನು ನೀಡುತ್ತವೆ.

ಬೆಲೆಬಾಳುವ ವಸ್ತುಗಳ ಜೊತೆಗೆ ನಿಮ್ಮ ಪಾಸ್‌ಪೋರ್ಟ್, ವೀಸಾಗಳಿಗೂ ಸಮಗ್ರ ಪ್ರವಾಸ ವಿಮೆ ಆಯ್ಕೆ ಮಾಡಿಕೊಂಡರೆ ಉತ್ತಮ.

ಪಾಸ್‌ಪೋರ್ಟ್ ಕಳೆದುಹೋದರೆ ವಿಮಾ ಕಂಪನಿಗೆ ಹೇಗೆ ಗೊತ್ತಾಗುತ್ತೆ?
 

ಪಾಸ್‌ಪೋರ್ಟ್ ಕಳೆದುಹೋದರೆ ವಿಮಾ ಕಂಪನಿಗೆ ಹೇಗೆ ಗೊತ್ತಾಗುತ್ತೆ?

ಪ್ರವಾಸ ವಿಮೆಯು ನೀವು ಪಾಸ್‌ಪೋರ್ಟ್ ಕಳೆದುಕೊಂಡರೆ ನೆರವಿಗೆ ಬರುತ್ತದೆ. ಆದರೆ ನೀವು ವಿಮೆ ಪಡೆಯುವ ಕಾಲಕ್ಕೆ ಎಸ್‌ಎಂಎಸ್, ಮಿಸ್ಡ್‌ಕಾಲ್ ಸೌಲಭ್ಯಗಳನ್ನು ಆಯ್ಕೆ ಮಾಡಿಕೊಂಡಿದ್ದರೆ ಉತ್ತಮ. ಏಕೆಂದರೆ ಒಂದು ಮಿಸ್ಡ್‌ ಕಾಲ್ ನೀಡಿದರೆ ಹತ್ತು, ಹದಿನೈದು ನಿಮಿಷದಲ್ಲಿ ವಿಮಾ ಕಂಪನಿಯು ನಿಮ್ಮನ್ನು ಸಂಪರ್ಕಿಸುತ್ತದೆ. ಹೀಗಾಗಿ ವಿಮೆ ಮಾಡಿಸಿದರೆ ವಿಮಾ ಕಂಪನಿಯ ಫ್ರೀ ಹೆಲ್ಪ್‌ಲೈನ್ ನಂಬರ್ ಬರೆದಿಟ್ಟುಕೊಂಡಿರಿ.

ಪ್ರವಾಸ ವಿಮೆ ಮಾಡಿಸುವುದರಿಂದ ಏನೇನು ಅನುಕೂಲ?

ಪ್ರವಾಸ ವಿಮೆ ಮಾಡಿಸುವುದರಿಂದ ಏನೇನು ಅನುಕೂಲ?

ಪಾಸ್‌ಪೋರ್ಟ್ ಕಳೆದು ಹೋದರೆ ವಿಮಾ ಕಂಪನಿಯ ಫ್ರೀ ಹೆಲ್ಪ್‌ಲೈನ್ ನಂಬರ್ ಕರೆ ಮಾಡಿ ಸಂಪರ್ಕಿಸಿ. ಆಗ ವಿಮಾ ಕಂಪನಿಯು ತಾತ್ಕಾಲಿಕ ಪಾಸ್‌ಪೋರ್ಟ್ ಇಲ್ಲವೆ ತ್ವರಿತ ಪ್ರಯಾಣ ದಾಖಲೆ ಪಡೆಯಲು ಅಗತ್ಯವಾದ ಮಾರ್ಗದರ್ಶನ ನೀಡುತ್ತದೆ. ಜೊತೆಗೆ ಭಾರತೀಯ ರಾಯಭಾರ ಕಚೇರಿ ವಿಳಾಸವನ್ನು ನೀಡುತ್ತದೆ.

ಪಾಸ್‌ಪೋರ್ಟ್ ಕಳೆದು ಹೋದರೆ ತಕ್ಷಣವೇ ಮಾಡಬೇಕಾದ ಕಾರ್ಯಗಳು

ಪಾಸ್‌ಪೋರ್ಟ್ ಕಳೆದು ಹೋದರೆ ತಕ್ಷಣವೇ ಮಾಡಬೇಕಾದ ಕಾರ್ಯಗಳು

ಪಾಸ್‌ಪೋರ್ಟ್ ಕಳೆದು ಹೋದರೆ ನೀವಿರುವ ಸ್ಥಳದ ಸಮೀಪದ ಪೊಲೀಸ್ ಠಾಣೆಯಲ್ಲಿ ತಕ್ಷಣವೇ ದೂರು ನೀಡುವುದನ್ನು ಮರೆಯಬಾರದು. ಇದು ಕಡ್ಡಾಯವು ಹೌದು. ಪಾಸ್‌ಪೋರ್ಟ್ ಮತ್ತು ಇತರೆ ದಾಖಲೆಗಳನ್ನು ಹುಡುಕಿಕೊಡುವಂತೆ ದೂರು ನೀಡಿ. ದೂರು ನೀಡಿದ ಬಳಿಕ ಹಿಂಬರಹ ಪ್ರತಿಯನ್ನು ಜೋಪಾನವಾಗಿ ಇಟ್ಟುಕೊಳ್ಳಿ.

ಏಕೆಂದರೆ ವಿದೇಶದಲ್ಲಿರುವ ರಾಯಭಾರಿ ಕಚೇರಿಯಿಂದ ಮತ್ತೊಂದು ತಾತ್ಕಾಲಿಕ ಅಥವಾ ಡುಪ್ಲಿಕೇಟ್ ಪಾಸ್‌ಪೋರ್ಟ್ ಪಡೆಯಲು ನೀವು ನೀಡಿದ ದೂರಿನ ಪ್ರತಿ ಅಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ನೀವು ಪೊಲೀಸ್ ಠಾಣೆಯಲ್ಲಿ ತಕ್ಷಣವೇ ದೂರು ನೀಡಿ ಹಿಂಬರಹ ಪ್ರತಿ ಪಡೆದುಕೊಳ್ಳಬೇಕು.

English summary

What To Do If You Lose Your Passport Abroad

Your passport is one of the most important documents for you when travelling abroad. If you lose your passport dont worry read this article
Story first published: Wednesday, February 12, 2020, 13:31 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more