For Quick Alerts
ALLOW NOTIFICATIONS  
For Daily Alerts

ಆರೋಗ್ಯ ವಿಮೆ ಕ್ಲೈಮ್‌ ತಿರಸ್ಕೃತವಾಗಿದೆಯೇ?: ಹೀಗೆ ಮಾಡಿ

|

ನಾವು ನಮ್ಮ ಆರೋಗ್ಯ ಹದಗೆಟ್ಟಾಗ ಪ್ರಯೋಜನಕ್ಕೆ ಬರಲಿ ಎಂದು ಆರೋಗ್ಯ ವಿಮೆಯನ್ನು ಮಾಡಿಸಿಕೊಂಡಿರುತ್ತೇವೆ. ಹಾಗಿರುವಾಗ ನಿಮ್ಮ ಆರೋಗ್ಯ ವಿಮಾ ಕ್ಲೈಮ್ ಅನ್ನು ವಿಮಾ ಕಂಪನಿಯು ತಿರಸ್ಕರಿಸಿದಾಗ ನೀವು ಎಷ್ಟು ಸಂಕಟಕ್ಕೆ ಒಳಗಾಗಬಹುದು ಅಲ್ಲವೇ?, ನೀವು ಎಷ್ಟು ಬಾರಿ ಈ ಸನ್ನಿವೇಶವನ್ನು ಎದುರಿಸಿದ್ದೀರಿ, ಒಮ್ಮೆ ಆಲೋಚನೆ ಮಾಡಿ..

ಹಲವಾರು ಮಂದಿ ಕನಿಷ್ಠ ಒಂದು ಬಾರಿ ಆದರೂ ಈ ರೀತಿ ಆರೋಗ್ಯ ವಿಮಾ ಕ್ಲೈಮ್ ತಿರಸ್ಕಾರವಾಗಿ ತೊಂದರೆಗೆ ಒಳಗಾಗಿರುವುದು ಇದೆ. ಇನ್ನು ಕೆಲವರು ಹಲವಾರು ಬಾರಿ ಈ ಅನುಭವವನ್ನು ಹೊಂದಿದ್ದಾರೆ. ನಿಮ್ಮ ಆರೋಗ್ಯ ವಿಮೆ ಕ್ಲೈಮ್ ನಿರಾಕರಿಸಿದಾಗ, ಕ್ಲೈಮ್ ಫಾರ್ಮ್‌ನಲ್ಲಿ ದೋಷಗಳನ್ನು ಇದೆಯೇ ಎಂದು ನೀವು ನೋಡಿಕೊಳ್ಳುವುದು ಪ್ರಾಮುಖ್ಯವಾಗಿದೆ.

 ಪಿಎಂ ಕಿಸಾನ್‌ ಯೋಜನೆ: ಫಲಾನುಭವಿಗಳ ಪಟ್ಟಿಗೆ ನಿಮ್ಮ ಹೆಸರು ಹೀಗೆ ಸೇರಿಸಿ ಪಿಎಂ ಕಿಸಾನ್‌ ಯೋಜನೆ: ಫಲಾನುಭವಿಗಳ ಪಟ್ಟಿಗೆ ನಿಮ್ಮ ಹೆಸರು ಹೀಗೆ ಸೇರಿಸಿ

ಮೂರನೇ ವ್ಯಕ್ತಿಯ ಏಜೆಂಟ್ ಮತ್ತು ಸರಿಯಾದ ದಾಖಲೆಗಳ ಸಹಾಯದಿಂದ ನೀವು ನಿಮ್ಮ ಕ್ಲೈಮ್ ಫಾರ್ಮ್ ಅನ್ನು ಸರಿಪಡಿಸಬಹುದು. ನಿಮ್ಮ ಕ್ಲೈಮ್ ಅನ್ನು ಮೊದಲ ಬಾರಿಗೆಯೇ ನಿರಾಕರಿಸಲು ಹಲವಾರು ಕಾರಣಗಳಿರಬಹುದು. ಜನರು ಹೆಚ್ಚಾಗಿ ಈ ತಪ್ಪುಗಳನ್ನು ಮಾಡುತ್ತಾರೆ. ಯಾವ ತಪ್ಪನ್ನು ನೀವು ಹೆಚ್ಚಾಗಿ ಮಾಡುತ್ತೀರಿ ಹಾಗೂ ಕ್ಲೈಮ್‌ ತಿರಸ್ಕಾರವಾದಾಗ ನೀವು ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.

 ಆರೋಗ್ಯ ವಿಮೆ ಕ್ಲೈಮ್‌ ತಿರಸ್ಕೃತವಾಗಿದೆಯೇ?: ಹೀಗೆ ಮಾಡಿ

ನಿಮ್ಮ ಕ್ಲೈಮ್‌ ಹೇಗೆ ತಿರಸ್ಕಾರವಾಗುತ್ತದೆ?

* ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡುವಾಗ ಮಾಡುವ ತಪ್ಪು
* ಅಸಮರ್ಪಕ ದಾಖಲೆಗಳನ್ನು ಒದಗಿಸುವುದು
* ಪಾಲಿಸಿಯನ್ನು ಖರೀದಿಸುವಾಗ ನೀವು ತಪ್ಪಾದ ವಿವರಗಳನ್ನು ನೀಡುವುದು
* ಪಾಲಿಸಿಯಲ್ಲಿ ಸೇರಿಸದ ಚಿಕಿತ್ಸೆಯನ್ನು ನೀವು ಕ್ಲೈಮ್ ಮಾಡಿರುವಿರಿ
* ಪ್ರೀಮಿಯಂಗಳನ್ನು ಪಾವತಿಸದ ಕಾರಣ ನಿಮ್ಮ ಪಾಲಿಸಿಯು ಲ್ಯಾಪ್ಸ್‌ ಆಗಿರುವುದು

ನಿಮ್ಮ ಕ್ಲೈಮ್‌ ನಿರಾಕರಣೆ ಆಗಲು ಹಲವಾರು ಕಾರಣಗಳು ಇದೆ. ನೀವು ಅದಕ್ಕಾಗಿ ಬಹಳ ಸೂಕ್ಷ್ಮವಾಗಿರಬೇಕಾಗುತ್ತದೆ. ಮೊದಲ ಹಂತವೆಂದರೆ ವಿಮಾದಾರರು ನೀಡಿದ ಮಾಹಿತಿಯನ್ನು ಪರಿಶೀಲಿಸುವುದು. ವಿಮಾ ಕಂಪನಿಯು ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಿದ ಆಧಾರದ ಮೇಲೆ ಉಲ್ಲೇಖಿಸಲಾದ ಎಲ್ಲಾ ಷರತ್ತುಗಳನ್ನು ಓದುವುದು. ನಿಮ್ಮ ಕ್ಲೈಮ್‌ ನಿರಾಕರಣೆ ಆಗಿರುವುದಕ್ಕೆ ಕಾರಣ ಏನು ಎಂದು ಕೂಡಾ ನೀವು ತಿಳಿಯಬಹುದು, ಹಾಗೆಯೇ ನೀವು ಮುಂದೆ ಏನು ಮಾಡಬಹುದು ಎಂದು ಕೂಡಾ ತಿಳಿಯಬಹುದು. ಹಾಗಾದರೆ ಮುಂದೆ ಓದಿ...

 ಆರೋಗ್ಯ ವಿಮೆ ಕ್ಲೈಮ್‌ ತಿರಸ್ಕೃತವಾಗಿದೆಯೇ?: ಹೀಗೆ ಮಾಡಿ

ನಿಮ್ಮಲ್ಲಿರುವ ಆಯ್ಕೆಗಳು ಯಾವುವು ಮತ್ತು ನೀವು ಏನು ಮಾಡಬೇಕು?

ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡುವಲ್ಲಿ ನೀವು ಯಾವುದೇ ತಪ್ಪು ಮಾಡಿದ್ದೀರಾ ಎಂದು ಪರಿಶೀಲಿಸಿ. ತಪ್ಪು ಕಂಡುಬಂದಲ್ಲಿ ನಿಖರವಾದ ಡೇಟಾ ಮತ್ತು ಸರಿಯಾದ ದಾಖಲೆಗಳೊಂದಿಗೆ ಮತ್ತೊಮ್ಮೆ ಕ್ಲೈಮ್ ಅನ್ನು ಸಲ್ಲಿಸಿ. ವಿನಂತಿಸಲಾದ ಎಲ್ಲಾ ದಾಖಲೆಗಳನ್ನು ನೀಡಲು ಪ್ರಯತ್ನಿಸಿ ಮತ್ತು ಅಗತ್ಯವಿದ್ದರೆ, ನಿಖರವಾದ ಕ್ಲೈಮ್ ಅನ್ನು ಸಲ್ಲಿಸಲು ನಿಮಗೆ ತಜ್ಞರಿಂದ ಸಹಾಯ ಪಡೆಯಿರಿ.

ಇನ್ನು ಈ ವಿಮೆಯು ಅನಗತ್ಯವೆಂದು ಪರಿಗಣಿಸಲ್ಪಟ್ಟ ಕಾರಣ ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಿದರೆ, ಒಂದು ನಿರ್ದಿಷ್ಟ ಚಿಕಿತ್ಸೆ ಅಗತ್ಯವಿಲ್ಲ ಎಂದು ವಿಮಾದಾರರು ನಂಬಿದರೆ ಕೂಡಾ ಕ್ಲೈಮ್‌ ತಿರಸ್ಕಾರ ಆಗಬಹುದು. ಅಂದರೆ ನೀವು ಯಾವ ಚಿಕಿತ್ಸೆಗಾಗಿ ವಿಮೆ ಕ್ಲೈಮ್‌ ಮಾಡುತ್ತೀರೋ ಆ ಚಿಕಿತ್ಸೆ ವಿಮೆಯಲ್ಲಿ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ, ಚಿಕಿತ್ಸೆಯನ್ನು ಸಮರ್ಥಿಸಲು ಮತ್ತು ಕ್ಲೈಮ್ ಮಾಡಲು ನಿಮ್ಮ ವೈದ್ಯರ ರೋಗನಿರ್ಣಯ ಮತ್ತು ಪ್ರಿಸ್ಕ್ರಿಪ್ಷನ್ ವರದಿಗಳನ್ನು ನೀವು ಸಲ್ಲಿಸಬಹುದು.

ಜ.19: ಕಚ್ಚಾ ತೈಲ ದರ ಅಧಿಕವಾದ್ರೂ ಪೆಟ್ರೋಲ್, ಡೀಸೆಲ್ ದರ ಸ್ಥಿರಜ.19: ಕಚ್ಚಾ ತೈಲ ದರ ಅಧಿಕವಾದ್ರೂ ಪೆಟ್ರೋಲ್, ಡೀಸೆಲ್ ದರ ಸ್ಥಿರ

ಹಕ್ಕು ಏಕೆ ನ್ಯಾಯಸಮ್ಮತವಾಗಿದೆ ಅಥವಾ ಮಾನ್ಯವಾಗಿದೆ ಎಂದು ತಿಳಿಸುವ ಹೇಳಿಕೆಯೊಂದಿಗೆ ನೀವು ಇಮೇಲ್‌ ಮಾಡಬಹುದು ಅಥವಾ ಪತ್ರವನ್ನು ಕಳುಹಿಸಬಹುದು. ಅಲ್ಲದೆ, ಆರೋಪವನ್ನು ರುಜುವಾತುಪಡಿಸಲು ಸಂಬಂಧಿತ ದಾಖಲಾತಿಗಳನ್ನು ಲಗತ್ತಿಸಿ, ಜೊತೆಗೆ ಪರವಾನಗಿ ಪಡೆದ ವೈದ್ಯಕೀಯ ವೈದ್ಯರ ವೈದ್ಯಕೀಯ ಅಭಿಪ್ರಾಯವನ್ನು ಲಗತ್ತಿಸಬೇಕು. ಒಟ್ಟಾರೆಯಾಗಿ, ನಿಮ್ಮ ವಿಮೆದಾರರಿಗೆ ನೀವು ಮನವರಿಕೆ ಮಾಡಬೇಕು ಮತ್ತು ನಿಮ್ಮ ಕ್ಲೈಮ್ ಮಾನ್ಯವಾಗಿರುವ ಆಧಾರದ ಮೇಲೆ ವಿವರಿಸಬೇಕು.

ಇನ್ನು ನೀವು ಈ ಕ್ಲೈಮ್‌ ಪಡೆಯುವ ವಿಚಾರದಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಭಾವಿಸಿದರೆ ನೀವು ಆ ಸಂದರ್ಭದಲ್ಲಿ ಒಂಬುಡ್ಸ್‌ಮನ್‌ ಕಚೇರಿಗೆ ಭೇಟಿ ನೀಡಬಹುದು. ನಿಮ್ಮ ವಿಮಾದಾರರೊಂದಿಗಿನ ನಿಮ್ಮ ವಿವಾದವು ಇತ್ಯರ್ಥ ಮಾಡಿಲ್ಲ ಅಥವಾ 30 ದಿನಗಳಲ್ಲಿ ನಿಮ್ಮ ಕ್ಲೈಮ್‌ಗೆ ವಿಮಾದಾರರು ಪ್ರತಿಕ್ರಿಯಿಸದಿದ್ದರೆ ನೀವು ಒಂಬುಡ್ಸ್‌ಮನ್‌ಗೆ ಭೇಟಿ ನೀಡಿ ದೂರು ಸಲ್ಲಿಸಬಹುದು. ನಿಮ್ಮ ಆರೋಗ್ಯ ವಿಮಾದಾರರಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಿದ ಮೂವತ್ತು ದಿನಗಳೊಳಗೆ ವಿಮಾ ಒಂಬುಡ್ಸ್‌ಮನ್ ಕಚೇರಿಯಲ್ಲಿ ದೂರನ್ನು ಸಲ್ಲಿಸಲು ಈ ಸಂಸ್ಥೆಯು ನಿಮಗೆ ಅನುಮತಿಸುತ್ತದೆ.

English summary

What To Do If Your Health Insurance Claim Get Rejected? Know Details in Kannada

What To Do If Your Health Insurance Claim Get Rejected?, Follow These Steps.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X