For Quick Alerts
ALLOW NOTIFICATIONS  
For Daily Alerts

ವಾಟ್ಸಾಪ್‌ಗೆ ಹೊಸ ಕಮ್ಯೂನಿಟೀಸ್ ಫೀಚರ್; ವಾಟ್ಸಾಪ್ ಗ್ರೂಪ್‌ಗಿಂತ ಇದು ಹೇಗೆ ಭಿನ್ನ?

|

ವಿಶ್ವದ ಅತಿದೊಡ್ಡ ಮೆಸೇಜಿಂಗ್ ಆ್ಯಪ್ ಎನಿಸಿದ ವಾಟ್ಸಾಪ್ ಇದೀಗ ಮತ್ತೊಂದು ಹೊಸ ಫೀಚರ್ ಬಿಡುಗಡೆ ಮಾಡಿದೆ. ವಾಟ್ಸಾಪ್ ಕಮ್ಯೂನಿಟೀಸ್ ಫಿಚರ್ ಅನ್ನು ಬಿಡುಗಡೆ ಮಾಡಿದೆ. ಇಂದಿನಿಂದಲೇ ಈ ಫೀಚರ್ ವಾಟ್ಸಾಪ್‌ನಲ್ಲಿ ಲಭ್ಯ ಇರಲಿದೆ. ಫೇಸ್‌ಬುಕ್, ವಾಟ್ಸಾಪ್, ಇನ್ಸ್‌ಟಾಗ್ರಾಮ್‌ನ ಮಾಲೀಕ ಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಇಂದು ಗುರುವಾರ ವಾಟ್ಸಾಪ್ ಕಮ್ಯೂನಿಟೀಸ್ ಫೀಚರ್ ಅನಾವರಣಗೊಂಡಿರುವುದನ್ನು ಪ್ರಕಟಿಸಿದರು.

ವಾಟ್ಸಾಪ್ ಕಮ್ಯೂನಿಟೀಸ್ ಫೀಚರ್‌ನಿಂದ ಸಮಾನ ಆದ್ಯತೆ ಅಥವಾ ಆಸಕ್ತಿ ಇರುವ ಜನರನ್ನು ಒಂದೆಡೆ ಗುಂಪು ಮಾಡಬಹುದು. ಹಾಗಾದರೆ, ವಾಟ್ಸಾಪ್ ಕಮ್ಯೂನಿಟೀಸ್‌ಗೂ ವಾಟ್ಸಾಪ್ ಗ್ರೂಪ್‌ಗೆ ಏನು ವ್ಯತ್ಯಾಸ? ವಾಟ್ಸಾಪ್ ಗ್ರೂಪ್‌ಗಿಂತ ಕಮ್ಯೂನಿಟೀಸ್ ಹೇಗೆ ಭಿನ್ನ? ಕಂಪ್ಯೂಟರ್‌ನಲ್ಲಿ ಒಂದು ಫೋಲ್ಡರ್ ರಚಿಸಿ, ಅದಕ್ಕೆ ಸಬ್ ಫೋಲ್ಡರ್ ಗಳನ್ನು ರಚಿಸುವ ರೀತಿಯಲ್ಲಿ ವಾಟ್ಸಾಪ್ ಕಮ್ಯೂನಿಟೀಸ್ ಫೀಚರ್ ಅನ್ನು ಬಳಸಬಹುದು.

ಸೆಪ್ಟೆಂಬರ್‌ನಲ್ಲಿ 26 ಲಕ್ಷ ವಾಟ್ಸಾಪ್ ಖಾತೆಗಳು ನಿಷೇಧಸೆಪ್ಟೆಂಬರ್‌ನಲ್ಲಿ 26 ಲಕ್ಷ ವಾಟ್ಸಾಪ್ ಖಾತೆಗಳು ನಿಷೇಧ

ವಾಟ್ಸಾಪ್ ಕಮ್ಯೂನಿಟೀಸ್ ಮತ್ತು ಗ್ರೂಪ್

ವಾಟ್ಸಾಪ್ ಕಮ್ಯೂನಿಟೀಸ್ ಮತ್ತು ಗ್ರೂಪ್

ಒಂದೇ ಅಪಾರ್ಟ್ಮೆಂಟ್‌ನಲ್ಲಿರುವವರದ್ದು ಒಂದು ಸಮುದಾಯ, ಶಾಲೆಯ ಎಲ್ಲಾ ಪೋಷಕರದ್ದು ಒಂದು ಸಮುದಾಯ, ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾದವರದ್ದು ಒಂದು ಸಮುದಾಯ. ಹೀಗೆ ವಾಟ್ಸಾಪ್‌ನಲ್ಲಿ ಕಮ್ಯೂನಿಟೀಸ್ ಅನ್ನು ಸೇರಿಸಬಹುದು. ಹಲವು ಗ್ರೂಪ್‌ಗಳನ್ನು ಒಂದೆಡೆ ಸೇರಿಸಿ ಅಂತರ್ ಗುಂಪು ಸಂವಾದ ನಡೆಸಲು ಅವಕಾಶ ಇದೆ.

ಶಾಲೆಯಲ್ಲಿ ಪೇರೆಂಟ್‌ಗಳಗದ್ದೇ ಒಂದು ಸಮುದಾಯ ಮಾಡಬಹುದು. ಸಣ್ಣ ಸಣ್ಣ ಗುಂಪುಗಳನ್ನು ಸೇರಿಸಿ ದೊಡ್ಡ ಸಮುದಾಯವಾಗಿ ಸೇರಿಸಬಹುದು. ಒಂದು ದೊಡ್ಡ ಸಮುದಾಯದ ಒಳಗೆ ಸಣ್ಣ ಪುಟ್ಟ ಗುಂಪುಗಳನ್ನು ಸೇರಿಸಿ ಸಂವಾದ ನಡೆಸಬಹುದು. 5 ಸಾವಿರ ಜನರ ಒಂದು ವೇದಿಕೆ ಸೃಷ್ಟಿಸಬಹುದು.

 

ವಾಟ್ಸಾಪ್ ಕಮ್ಯೂನಿಟೀಸ್ ಬಳಸುವುದು ಹೇಗೆ?

ವಾಟ್ಸಾಪ್ ಕಮ್ಯೂನಿಟೀಸ್ ಬಳಸುವುದು ಹೇಗೆ?

ವಾಟ್ಸಾಪ್ ಕಮ್ಯೂನಿಟಿ ಫೀಚರ್ ಸದ್ಯಕ್ಕೆ ಎಲ್ಲಾ ಬಳಕೆದಾರರಿಗೂ ಲಭ್ಯ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಇದು ಸಿಗುತ್ತದೆ. ನಿಮ್ಮ ವಾಟ್ಸಾಪ್‌ನಲ್ಲಿ ಈ ಫೀಚರ್ ಇದೆಯಾ ಎಂದು ಪರಿಶೀಲಿಸಿ.

* ಮೊದಲಿಗೆ ವಾಟ್ಸಾಪ್ ತೆರೆದ ಬಳಿಕ ಕೆಳಗೆ ಕಾಣುವ "ನ್ಯೂ ಚ್ಯಾಟ್" ಐಕಾನ್ ಅನ್ನು ಒತ್ತಿರಿ.
* ನಂತರ 'ನ್ಯೂ ಕಮ್ಯೂನಿಟಿ', ಹಾಗು ಬಳಿಕ 'ಗೆಟ್ ಸ್ಟಾರ್ಟೆಡ್' ಒತ್ತಿರಿ.
* ನಂತರ ಕಮ್ಯೂನಿಟಿಗೆ ಹೆಸರು, ವಿವರ ಮತ್ತು ಫೋಟೋ ಒದಗಿಸಿ

ನೀವು ಕಮ್ಯೂನಿಟಿ ರಚಿಸಿದ ಬಳಿಕ 'ನೆಕ್ಸ್ಟ್' ಕ್ಲಿಕ್ ಮಾಡಿ ಅಲ್ಲಿಂದ ಗ್ರೂಪ್‌ಗಳನ್ನು ಸೇರಿಸುತ್ತಾ ಹೋಗಬಹುದು. ಎಲ್ಲಾ ಗ್ರೂಪ್‌ಗಳನ್ನು ಸೇರಿಸಿದ ಬಳಿಕ 'ಕ್ರಿಯೇಟ್' ಕ್ಲಿಕ್ ಮಾಡಿ.

 

50 ಗುಂಪು, 5 ಸಾವಿರ ಜನರು

50 ಗುಂಪು, 5 ಸಾವಿರ ಜನರು

ಒಂದು ಕಮ್ಯೂನಿಟಿ ಅಡಿಯಲ್ಲಿ ನೀವು ಗರಿಷ್ಠ 50 ಗ್ರೂಪ್‌ಗಳನ್ನು ಸೇರಿಸಬಹುದು. 5 ಸಾವಿರ ಸದಸ್ಯರನ್ನು ಸೇರಿಸುವ ಅವಕಾಶ ಇದೆ. ಈ ಮೂಲಕ ಒಂದು ದೊಡ್ಡ ಸಂಸ್ಥೆಯ ಎಲ್ಲಾ ನೌಕರರನ್ನೂ ಒಂದೇ ಕಮ್ಯೂನಿಟಿ ಅಡಿ ತರಲು ಸಾಧ್ಯವಾಗುತ್ತದೆ.

ಈ ವಾಟ್ಸಾಪ್ ಕಮ್ಯೂನಿಟೀಸ್ ಫೀಚರ್‌ನಲ್ಲಿರುವ ಅಂಶಗಳು ಬಹುತೇಕ ವಾಟ್ಸಾಪ್ ಗ್ರೂಪ್ ಚಾಟ್‌ನಲ್ಲಿದ್ದಂತೆಯೇ ಇರುತ್ತವೆ. 32 ಸದಸ್ಯರು ಮಾತ್ರ ವಿಡಿಯೋ ಕಾಲ್ ಮಾಡಬಹುದು. 2ಜಿಬಿ ಗಾತ್ರದವರೆಗಿನ ಫೈಲ್ ಮಾತ್ರ ಶೇರ್ ಮಾಡಬಹುದು. ಯಾವುದೇ ಪೋಸ್ಟ್‌ಗೆ ರಿಯಾಕ್ಷನ್ಸ್ ಇವೆಲ್ಲವೂ ವಾಟ್ಸಾಪ್ ಗ್ರೂಪ್‌ನಲ್ಲಿರುವಂತೆಯೇ ಫೀಚರ್ಸ್‌ನಲ್ಲೂ ಇರುತ್ತವೆ.

 

ಇನ್ನೂ ಬೇರೆ ಹೊಸ ಫೀಚರ್ಸ್

ಇನ್ನೂ ಬೇರೆ ಹೊಸ ಫೀಚರ್ಸ್

ಇದೀಗ ವಾಟ್ಸಾಪ್ ಕಮ್ಯೂನಿಟಿಸ್ ಜೊತೆಗೆ ಕೆಲ ಫೀಚರ್ ಅಪ್‌ಗ್ರೇಡ್ ಕೂಡ ಆಗಿದೆ. ಇನ್-ಚ್ಯಾಟ್ ಪೋಲ್ ರಚಿಸಬಹುದು. ಅಂದರೆ ಗ್ರೂಪ್ ಚ್ಯಾಟ್ ವೇಳೆ ಪೋಲಿಂಗ್ ಹಾಕಬಹುದು. ಜಿಯೋ ಮೀಟ್, ಗೂಗಲ್ ಮೀಟ್‌ನಂತೆ ವಾಟ್ಸಾಪ್‌ನಲ್ಲೂ ವಿಡಿಯೋ ಕಾನ್ಫೆರೆನ್ಸಿಂಗ್ ಮಾಡಬಹುದು 32 ಜನರು ವಿಡಿಯೋ ಕಾಲಿಂಗ್ ಮಾಡಬಹುದು. ಒಂದು ಗ್ರೂಪ್‌ನಲ್ಲಿ 1024 ಜನರನ್ನು ಸೇರಿಸಬಹುದು.

English summary

Whatsapp Communities Feature, How To Use It, How Different From Group, Know in Kannada

Meta-owned messaging app WhatsApp has started rolling out a new Communities feature – aimed at making it easier for a group of people to communicate with each other.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X