For Quick Alerts
ALLOW NOTIFICATIONS  
For Daily Alerts

ಎಲ್ಲಿದೆ 2000 ರೂಪಾಯಿ ನೋಟು, ಕೊನೆಯ ಬಾರಿ ನೋಡಿದ್ದು ಯಾವಾಗ ನೆನಪಿಸಿಕೊಳ್ಳಿ!

|

ನೀವು ಕೊನೆಯ ಬಾರಿಗೆ ಎರಡು ಸಾವಿರ ರೂಪಾಯಿಯನ್ನು ನೋಡಿದ್ದು ಯಾವಾಗ?, ಸರಿಯಾಗಿ ನೆನಪಿಸಿಕೊಳ್ಳಿ. ಎಟಿಎಂಗಳಲ್ಲಿ 2000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ವಿತ್‌ಡ್ರಾ ಮಾಡಿಕೊಂಡರೂ ಕೂಡಾ 2 ಸಾವಿರ ರೂಪಾಯಿಯ ನೋಟು ನೋಡಿಲ್ಲ ಅಲ್ಲವೇ?. ಹಾಗಾದರೆ ಈ ನೋಟು ನೋಡದೆ ಎಷ್ಟು ದಿನಗಳು ಆಗಿದೆ ಎಂಬುವುದು ಖಚಿತ.

500 ಹಾಗೂ 1000 ರೂಪಾಯಿ ನೋಟನ್ನು ಅಪನಗದೀಕರಣ ಮಾಡಿದ ಬಳಿಕ ಜಾರಿಗೆ ತರಲಾದ 500 ರೂಪಾಯಿ ಹಾಗೂ 2000 ರೂಪಾಯಿಯ ನೋಟುಗಳ ಪೈಕಿ ಪ್ರಸ್ತುತ 500 ರೂಪಾಯಿ ನೋಟು ಹೆಚ್ಚಾಗಿ ನಾವು ಕಾಣುತ್ತೇವೆ. ಆದರೆ 2000 ರೂಪಾಯಿ ನೋಟು ಚಲಾವಣೆ ಇತ್ತೀಚೆಗೆ ತೀರಾ ಕಡಿಮೆಯಾಗಿದೆ. ಆದರೆ ಅಷ್ಟಕ್ಕೂ ಈ ನೋಟು ಎಲ್ಲಿದೆ ಎಂಬ ಪ್ರಶ್ನೆ ಕೂಡಾ ಕಾಡುತ್ತೆ ಅಲ್ಲವೇ?

Note Ban: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಏರಿಕೆ!Note Ban: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಏರಿಕೆ!

ಅದಕ್ಕೆ ಕಾರಣ ಕೂಡಾ ಇದೆ. ಕಳೆದ ಮೂರು ವರ್ಷದಿಂದ 2 ಸಾವಿರ ರೂಪಾಯಿಯ ಒಂದು ನೋಟನ್ನು ಕೂಡಾ ಆರ್‌ಬಿಐ ಮುದ್ರಣ ಮಾಡಿ, ಚಲಾವಣೆಗೆ ಬಿಟ್ಟಿಲ್ಲ. ಆದ್ದರಿಂದಾಗಿ ಪ್ರಸ್ತುತ 2 ಸಾವಿರ ರೂಪಾಯಿಯ ನೋಟು ಚಲಾವಣೆಗೆ ಲಭ್ಯವಾಗುತ್ತಿಲ್ಲ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಅಡಿಯಲ್ಲಿ ಲಭ್ಯವಾದ ಸಂಗತಿಯಾಗಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ..

 ನೋಟು ಅಪನಗದೀಕರಣ, ವ್ಯವಸ್ಥೆ ಸ್ಥಿತಿಗತಿ

ನೋಟು ಅಪನಗದೀಕರಣ, ವ್ಯವಸ್ಥೆ ಸ್ಥಿತಿಗತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಕಾಏಕಿ ದೇಶದಲ್ಲಿ ಕೂಡಲೇ ಜಾರಿಗೆ ಬರುವಂತ 500 ಹಾಗೂ 1 ಸಾವಿರ ರೂಪಾಯಿ ನೋಟನ್ನು ಬ್ಯಾನ್ ಮಾಡಿದಾಗ ಹೆಚ್ಚಿನ ಜನರು ಈ ನೋಟನ್ನೇ ಬಳಕೆ ಮಾಡುತ್ತಿದ್ದರು. ಒಟ್ಟು ಚಲಾವಣೆಯಲ್ಲಿರುವ ನೋಟುಗಳ ಪೈಕಿ ಸುಮಾರು ಶೇಕಡ 80ರಷ್ಟು 500, 1000 ರೂಪಾಯಿಯ ನೋಟುಗಳು ಆಗಿತ್ತು. ಆದರೆ ಇದಕ್ಕೆ ಪರ್ಯಾಯವಾಗಿ ಹೊಸ ನೋಟಿನ ಮುದ್ರಣ ಮಾತ್ರ ಹೆಚ್ಚಾಗಿರಲಿಲ್ಲ. ಸರ್ಕಾರ ಯಾವುದೇ ತಯಾರಿಯನ್ನು ನಡೆಸದೆ ಮಾಡಿದ ಘೋಷಣೆಯಿಂದಾಗಿ ಭಾರೀ ಸಂಕಷ್ಟ ಉಂಟಾಗಿತ್ತು. ನೋಟು ಮುದ್ರಣವನ್ನು ಹಗಲು ರಾತ್ರಿ ಮಾಡಿದರೂ ಕೂಡಾ ಪರಿಸ್ಥಿತಿಯನ್ನು ಸರಿದೂಗಿಸಲು ಸಾಧ್ಯವಾಗದ ಸ್ಥಿತಿ ಬಂದೊದಗಿತ್ತು.

 2000 ರೂಪಾಯಿಯ ಎಷ್ಟು ನೋಟು ಮುದ್ರಣ?

2000 ರೂಪಾಯಿಯ ಎಷ್ಟು ನೋಟು ಮುದ್ರಣ?

ಎಐಎನ್‌ಎಸ್‌ ಸುದ್ದಿ ಸಂಸ್ಥೆಗೆ ಆರ್‌ಟಿಐಯಲ್ಲಿ ಲಭ್ಯವಾದ ಮಾಹಿತಿ ಪ್ರಕಾರ ಕಳೆದ ಮೂರು ವರ್ಷದಲ್ಲಿ 2 ಸಾವಿರ ರೂಪಾಯಿಯ ಯಾವುದೇ ಹೊಸ ನೋಟಿನ ಮುದ್ರಣ ಮಾಡಲಾಗಿಲ್ಲ. ಅಂದರೆ 2019-20, 2020-21 ಹಾಗೂ 2021-2022ರಲ್ಲಿ 2 ಸಾವಿರ ರೂಪಾಯಿ ನೋಟುಗಳು ಮುದ್ರಣವಾಗಿಲ್ಲ. 2016-17ರಲ್ಲಿ ಆರ್‌ಬಿಐನ ನೋಟು ಮುದ್ರಣ ಲಿಮಿಟೆಡ್ 2000 ರೂಪಾಯಿ ಮೌಲ್ಯದ 3,5429.91 ಕೋಟಿ ನೋಟುಗಳನ್ನು ಮುದ್ರಣ ಮಾಡಿತ್ತು. 2018-19ರಲ್ಲಿ 2000 ರೂಪಾಯಿ ಮೌಲ್ಯದ 466.90 ಕೋಟಿ ನೋಟುಗಳನ್ನು ಮಾತ್ರ ಮುದ್ರಣ ಮಾಡಲಾಗಿದೆ. 2017-18ರಲ್ಲಿ 2000 ರೂಪಾಯಿ ಮೌಲ್ಯದ 1115.07 ಕೋಟಿ ನೋಟುಗಳನ್ನು ಮಾತ್ರ ಮುದ್ರಿಸಲಾಗಿದೆ.

 ನಕಲಿ ನೋಟು ಬಳಕೆಯಲ್ಲಿ ತೀವ್ರ ಹೆಚ್ಚಳ!

ನಕಲಿ ನೋಟು ಬಳಕೆಯಲ್ಲಿ ತೀವ್ರ ಹೆಚ್ಚಳ!

2015ರಲ್ಲಿ ಆರ್‌ಬಿಐ ಹೊಸ ನೋಟುಗಳನ್ನು ಮುದ್ರಣ ಮಾಡಿತ್ತು. ಮಹಾತ್ಮ ಗಾಂಧೀಜಿ ಸರಣಿ-2005ರ ಅಡಿಯಲ್ಲಿ ನೋಟುಗಳನ್ನು ಮುದ್ರಣ ಮಾಡಲಾಗಿತ್ತು. ಜನರು ನಕಲಿ ನೋಟು ಹಾಗೂ ಅಸಲಿ ನೋಟಿನ ನಡುವೆ ಸುಲಭವಾಗಿ ವ್ಯತ್ಯಾಸ ಕಂಡುಹಿಡಿಯಲು ಸಾಧ್ಯವಾಗುವಂತಹ ನಕಲಿ ನೋಟುಗಳು ಆ ಸಂದರ್ಭದಲ್ಲಿ ಚಲಾವಣೆಗೆ ಬಂದಿತ್ತು. 2015ರಲ್ಲಿ ಹೆಚ್ಚಾಗಿ ನಕಲಿ ನೋಟುಗಳು ಕಂಡು ಬಂದಿದೆ. ವರದಿ ಪ್ರಕಾರ 2016ರಲ್ಲಿ 2000 ರೂಪಾಯಿಯ ಹೊಸ ನೋಟು ಮುದ್ರಣವಾಗಿ ಚಲಾವಣೆಗೆ ಬಂದ ಬಳಿಕ 2,272 ನಕಲಿ ನೋಟುಗಳು ಲಭ್ಯವಾಗಿದೆ. 2017ರಲ್ಲಿ 74,898 ನಕಲಿ ನೋಟುಗಳು ಲಭ್ಯವಾಗಿದೆ. 2019ರಲ್ಲಿ 90,566 ನಕಲಿ ನೋಟುಗಳು ಲಭಿಸಿದೆ. 2020ರಲ್ಲಿ 2,44,834 ನಕಲಿ ನೋಟು ದೊರೆತಿದೆ. ಆದಾದ ಬಳಿಕ ಆರ್‌ಬಿಐ 2020ರಲ್ಲಿ ಎಲ್ಲ 2000 ರೂಪಾಯಿ ನೋಟನ್ನು ಜಪ್ತಿ ಮಾಡಿದೆ ಎಂದು ಆರ್‌ಟಿಐಯಲ್ಲಿ ಮಾಹಿತಿ ಲಭಿಸಿದೆ.

English summary

Why are Rs 2000 Currency Notes Missing, Details in Kannada

When did you last see a 2000 Rupee note? Perhaps a very long time ago. Consider now why this might have happened. Here's Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X