For Quick Alerts
ALLOW NOTIFICATIONS  
For Daily Alerts

ಹಣಕಾಸು ವರ್ಷ- ಅಮೆರಿಕದಲ್ಲಿ ಅಕ್ಟೋಬರ್, ಭಾರತದಲ್ಲಿ ಏಪ್ರಿಲ್‌ನಿಂದ ಶುರು ಯಾಕೆ? ಬೇರೆ ದೇಶಗಳಲ್ಲಿ ಹೇಗಿದೆ?

|

ನೀವು ಸರ್ಕಾರ ಬಿಡುಗಡೆ ಮಾಡುವ ಹಣಕಾಸು ದತ್ತಾಂಶಗಳನ್ನು ನೋಡಿದರೆ ಕ್ಯಾಲಂಡರ್ ವರ್ಷ, ಹಣಕಾಸು ವರ್ಷ ಇತ್ಯಾದಿ ಪದಬಳಕೆಯನ್ನು ಕಂಡಿರುತ್ತೀರಿ. ಕ್ಯಾಲೆಂಡರ್ ಇಯರ್ ಮಾಮೂಲಿಯಂತೆ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಇದ್ದರೆ, ಫೈನಾನ್ಷಿಯಲ್ ಇಯರ್ ಏಪ್ರಿಲ್ 1ರಿಂದ ಮಾರ್ಚ್ 31ರವರೆಗೆ ಇರುತ್ತದೆ.

 

ಹಣಕಾಸು ವರ್ಷದಲ್ಲಿ ಕಂಪನಿಗಳು ಮತ್ತು ಸರ್ಕಾರಗಳು ತಮ್ಮ ವಾರ್ಷಿಕ ಆದಾಯ, ಲಾಭ ನಷ್ಟಗಳ ಲೆಕ್ಕಗಳನ್ನು ನೀಡುತ್ತವೆ. ಆದಾಯ ತೆರಿಗೆ ಇತ್ಯಾದಿ ಎಲ್ಲವೂ ಇದೇ ಹಣಕಾಸು ವರ್ಷದ ಲೆಕ್ಕದಲ್ಲಿ ಸಲ್ಲಿಕೆ ಮಾಡಲಾಗುತ್ತದೆ.

ಆದರೆ, ಏಪ್ರಿಲ್ 1ರಿಂದ ಮಾರ್ಚ್ 31ರವರೆಗಿನ ಹಣಕಾಸು ವರ್ಷ ಎಲ್ಲಾ ದೇಶಗಳಲ್ಲೂ ಇಲ್ಲ. ಅಮೆರಿಕದಲ್ಲಿ ಅಕ್ಟೋಬರ್ 1ರಿಂದ ಹಣಕಾಸು ವರ್ಷ ಆರಂಭವಾಗುತ್ತದೆ. ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಹಣಕಾಸು ವರ್ಷ ಶುರುವಾಗುತ್ತದೆ.

ಭಾರತದಲ್ಲಿ ಯಾಕೆ ಏಪ್ರಿಲ್ 1ರಿಂದ ಹಣಕಾಸು ವರ್ಷ?

ಭಾರತದಲ್ಲಿ ಯಾಕೆ ಏಪ್ರಿಲ್ 1ರಿಂದ ಹಣಕಾಸು ವರ್ಷ?

ಭಾರತದಲ್ಲಿ ಏಪ್ರಿಲ್ 1ರಿಂದ ಯಾಕೆ ಹಣಕಾಸು ವರ್ಷ ಶುರುವಾಗುತ್ತದೆ ಎಂಬುದಕ್ಕೆ ಸ್ಪಷ್ಟ ಕಾರಣಗಳಿಲ್ಲ. ಬ್ರಿಟನ್ ದೇಶದಲ್ಲಿ ಹಿಂದೆ ಏಪ್ರಿಲ್ 1ರಿಂದಲೇ ಹಣಕಾಸು ವರ್ಷ ಆರಂಭವಾಗುತ್ತಿತ್ತು. ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿದ್ದರಿಂದ ಇಲ್ಲಿಯೂ ಅದೇ ಪದ್ಧತಿ ಮುಂದುವರಿದಿರಬಹುದು ಎಂಬ ವಾದವೊಂದು ಇದೆ. ಬ್ರಿಟನ್‌ನಲ್ಲಿ ಈಗ ಏಪ್ರಿಲ್ 6ರಿಂದ ಹಣಕಾಸು ವರ್ಷ ಆರಂಭವಾಗುತ್ತದೆ.

ಇನ್ನೊಂದು ಕಾರಣ ಎಂದರೆ ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿ ಹಬ್ಬವು ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುತ್ತದೆ. ಭಾರತ ಹಿಂದೆ ಬಹುತೇಕ ಕೃಷಿ ಆಧಾರಿತ ದೇಶವಾದ್ದರಿಂದ ಮತ್ತು ಬೆಳೆ ಋತು ಏಪ್ರಿಲ್‌ನಿಂದ ಆರಂಭವಾಗುತ್ತಿದ್ದರಿಂದ ಏಪ್ರಿಲ್ 1ರಿಂದಲೇ ಹಣಕಾಸು ವರ್ಷವನ್ನು ಆರಂಭಿಸಲು ನಿರ್ಧರಿಸಿದ್ದಿರಬಹುದು.

ಜನವರಿ ಅಥವಾ ಅಕ್ಟೋಬರ್‌ನಿಂದ ಹಣಕಾಸು ವರ್ಷ ಪ್ರಾರಂಭಿಸದೇ ಇರುವುದಕ್ಕೆ ಬಹುಶಃ ಹಬ್ಬಗಳ ಋತು ಕಾರಣವಿದ್ದಿರಬಹುದು. ಭಾರತದಲ್ಲಿ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಹಬ್ಬದ ಋತು ಇದೆ. ಈ ವೇಳೆ ವ್ಯಾಪಾರ ವಹಿವಾಟ ಬಹಳ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಲೆಕ್ಕಗಳನ್ನು ಪೂರ್ಣಗೊಳಿಸಲು ಕಷ್ಟವಾಗುತ್ತದೆ. ಹೀಗಾಗಿ, ಏಪ್ರಿಲ್ 1ರಿಂದ ಹಣಕಾಸು ವರ್ಷ ಆರಂಭಿಸಿರಬಹುದು.

ಒಂದು ವರ್ಷವನ್ನು ನಾಲ್ಕು ತ್ರೈಮಾಸಿಕ ಅವಧಿಗಳಾಗಿ ವಿಭಾಗಿಸಲಾಗುತ್ತದೆ. ಜನವರಿಯಿಂದ ಮಾರ್ಚ್‌ವರೆಗೆ ಒಂದು ಅವಧಿ, ಏಪ್ರಿಲ್‌ನಿಂದ ಜೂನ್‌ವರೆಗೆ ಇನ್ನೊಂದು, ಜುಲೈನಿಂದ ಸೆಪ್ಟೆಂಬರ್‌ವರೆಗೆ ಮತ್ತೊಂದು, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಮಗದೊಂದು ತ್ರೈಮಾಸಿಕ ಅವಧಿ ಇದೆ. ಬೇರೆ ಬೇರೆ ದೇಶಗಳಲ್ಲಿ ಹಣಕಾಸು ವರ್ಷದ ಆರಂಭ ಈ ನಾಲ್ಕು ಅವಧಿಯ ಪೈಕಿ ಒಂದರದ್ದಾಗಿರುತ್ತದೆ. ಇರಾನ್ ಮೊದಲಾದ ಕೆಲ ದೇಶಗಳಲ್ಲಿ ಮಾತ್ರ ವಿಭಿನ್ನ ದಿನಗಳಲ್ಲಿ ಹಣಕಾಸು ವರ್ಷ ಆರಂಭವಾಗುತ್ತದೆ.

ಭಾರತದಲ್ಲಿಯಂತೆ ಇನ್ನೂ ಹಲವು ದೇಶಗಳಲ್ಲಿ ಏಪ್ರಿಲ್ 1ರಿಂದ ಹಣಕಾಸು ವರ್ಷ ಆರಂಭವಾಗುತ್ತದೆ. ಚೀನಾ ಮೊದಲಾದ ಹಲವು ದೇಶಗಳಲ್ಲಿ ಕ್ಯಾಲೆಂಡರ್ ವರ್ಷದಂತೆ ಜನವರಿ 1ರಿಂದಲೇ ಹಣಕಾಸು ವರ್ಷ ಇರುತ್ತದೆ. ವಿಶ್ವದ ಬಹುದೇಶಗಳಲ್ಲಿ ಕ್ಯಾಲೆಂಡರ್ ವರ್ಷವೇ ಹಣಕಾಸು ವರ್ಷವಾಗಿದೆ.

 

ಏಪ್ರಿಲ್ 1ರಿಂದ ಮಾರ್ಚ್ 31ರ ಹಣಕಾಸು ವರ್ಷ ಇರುವ ದೇಶಗಳು
 

ಏಪ್ರಿಲ್ 1ರಿಂದ ಮಾರ್ಚ್ 31ರ ಹಣಕಾಸು ವರ್ಷ ಇರುವ ದೇಶಗಳು

* ಭಾರತ, ಜಪಾನ್, ಕೆನಡಾ, ಸೌತ್ ಆಫ್ರಿಕಾ, ನ್ಯೂಜಿಲೆಂಡ್, ಆಂಟಿಗುವಾ ಅಂಡ್ ಬರ್ಬುಡಾ, ಬಾರ್ಬಡೋಸ್, ಬೆಲಿಜೆ, ಬೋಟ್ಸವಾನ, ಬ್ರೂನೆ, ಸ್ವಾಜಿಲ್ಯಾಂಡ್, ಜಮೈಕಾ, ಕುವೇತ್, ಲೆಸೋತೋ, ನಮೀಬಿಯಾ, ಕತಾರ್, ಸೇಂಟ್ ಲೂಸಿಯಾ, ಸಿಂಗಾಪುರ.

ಜುಲೈ 1ರಿಂದ ಹಣಕಾಸು ವರ್ಷವಿರುವ ದೇಶಗಳು
* ಆಸ್ಟ್ರೇಲಿಯಾ, ಬಾಂಗ್ಲಾದೇಶ, ಬಹಮಾಸ್, ಭೂತಾನ್, ಕ್ಯಾಮರೂನ್, ಈಜಿಪ್ಟ್, ಕೀನ್ಯಾ, ಮಲಾವಿ, ಮಾರಿಷಸ್, ನೌರು, ಪಾಕಿಸ್ತಾನ, ಟೋಂಗಾ, ಉಗಾಂಡ, ತಾಂಜಾನಿಯಾ

ಆಗಸ್ಟ್ 1ರಿಂದ ಹಣಕಾಸು ವರ್ಷ ಇರುವ ದೇಶಗಳು
* ಅಮೆರಿಕ, ಹೈತಿ, ಲಾವೋ, ಮಾರ್ಷನ್ ಐಲೆಂಡ್ಸ್, ಮೈಕ್ರೋನೇಷ್ಯಾ, ಮಯನ್ಮಾರ್, ಪಲಾವೋ, ಥಾಯ್ಲೆಂಡ್, ಟ್ರಿನಿಡಾಡ್ ಟೊಬಾಗೊ.

 

ಬೇರೆ ದಿನಾಂಕಗಳಲ್ಲಿ ಹಣಕಾಸು ವರ್ಷ ಇರುವ ದೇಶಗಳು

ಬೇರೆ ದಿನಾಂಕಗಳಲ್ಲಿ ಹಣಕಾಸು ವರ್ಷ ಇರುವ ದೇಶಗಳು

ನೇಪಾಳ: ಜುಲೈ 16
ಅಫ್ಗಾನಿಸ್ತಾನ: ಡಿಸೆಂಬರ್ 21
ಇರಾನ್: ಮಾರ್ಚ್ 21
ಬ್ರಿಟನ್: ಏಪ್ರಿಲ್ 6
ಇಥಿಯೋಪಿಯಾ: ಜುಲೈ 8
ಸಮೋವಾ: ಜೂನ್ 1

ಈ ಮೇಲಿನ ಪಟ್ಟಿಗಳಲ್ಲಿ ಇಲ್ಲದ ದೇಶಗಳಲ್ಲಿ ಹಣಕಾಸು ವರ್ಷ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಇರುತ್ತದೆ.

 

English summary

Why India's Financial Year Starts From April 1st, Why Its Different In Other Countries

Financial year in India is from April 1st to March 31st. Most of the nations have financial year same as calender year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X