For Quick Alerts
ALLOW NOTIFICATIONS  
For Daily Alerts

ಒಂದು ತಿಂಗಳಲ್ಲೇ 150 ಪರ್ಸೆಂಟ್ ಲಾಭ; ಹೀಗೂ ಹಣ ಮಾಡಬಹುದು

By ಕೆ. ಜಿ. ಕೃಪಾಲ್
|

ಬ್ಯಾಂಕ್ ಗಳಲ್ಲಿ ಅಥವಾ ಪೋಸ್ಟ್ ಆಫೀಸ್ ಗಳಲ್ಲಿ ಎಫ್. ಡಿ., ಆರ್. ಡಿ. ಎಂದು ಮಾಡುವುದು ಬಹಳ ಸುರಕ್ಷಿತ ಹೂಡಿಕೆ. ಅದರ ಮೇಲೆ ಸಿಗುವ ಬಡ್ಡಿ ಬಹಳ ಕಡಿಮೆ (ವರ್ಷಕ್ಕೆ 6ರಿಂದ 9 ಪರ್ಸೆಂಟ್ ಮಧ್ಯೆ). ಆದರೆ ಈಕ್ವಿಟಿ ಷೇರುಗಳು ಕೆಲವು ಸಲ ಒಂದೇ ದಿನದಲ್ಲಿ 10 ಪರ್ಸೆಂಟ್ ಏರಿಕೆ ಕಾಣುವ ಉದಾಹರಣೆ ಸಿಗುತ್ತದೆ.

ಷೇರುಪೇಟೆಯಲ್ಲಿ ಲಾಭ ಬಂದರೆ ಊಹಿಸಲು ಕೂಡ ಆಗದಂಥ ದೊಡ್ಡ ಮಟ್ಟದಲ್ಲಿ, ವಿಪರೀತ ವೇಗದಲ್ಲಿ ಬರುತ್ತದೆ. ಹಣ ಹೋಗಲು ಆರಂಭವಾದರೆ ನೋಡ ನೋಡುತ್ತಿದ್ದಂತೆ ಹೂಡಿದ್ದ ಬಂಡವಾಳವೇ ಕರಗಿಹೋಗುತ್ತದೆ. ಈಗಂತೂ ದಿನದಿನಕ್ಕೂ ಸೆನ್ಸೆಕ್ಸ್ ಸೂಚ್ಯಂಕ ಹೊಸ ಎತ್ತರವನ್ನು ಏರುತ್ತಿದೆ. ಈಗ ಹೂಡಿಕೆ ಮಾಡಬಹುದಾ ಎಂಬ ಪ್ರಶ್ನೆ ಕೆಲವರದು.

ಮಾರುಕಟ್ಟೆ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಇರುವಾಗ ಹೂಡಿಕೆ ಮಾಡಿದರೆ ನಷ್ಟ ಆಗಬಹುದು ಎಂಬ ಆತಂಕ ಅವರದು. ಲಾಭದ ನಿರೀಕ್ಷೆಯಲ್ಲಿ ಕೆಲವರು ಷೇರು ಬೆಲೆಗಳು ಗರಿಷ್ಠ ಮಟ್ಟದಲ್ಲಿ ಇರುವಾಗಲೇ ಖರೀದಿ ಮಾಡುತ್ತಾರೆ. ಉತ್ತಮ ಗುಣಮಟ್ಟದ ಷೇರುಗಳನ್ನು ಖರೀದಿಸಿದಲ್ಲಿ ಒಂದು ವೇಳೆ ತಾತ್ಕಾಲಿಕವಾಗಿ ಬೆಲೆ ಇಳಿಕೆಯಾದರೂ ಮತ್ತೊಮ್ಮೆ ಪುಟಿದೇಳುವ ಅವಕಾಶ ಇರುತ್ತದೆ.

ಷೇರು ಖರೀದಿಗೆ ಇದು ಸೂಕ್ತ ಸಮಯವೇ? ತಿಳಿಯಬೇಕಾದ 4 ಅಂಶಗಳುಷೇರು ಖರೀದಿಗೆ ಇದು ಸೂಕ್ತ ಸಮಯವೇ? ತಿಳಿಯಬೇಕಾದ 4 ಅಂಶಗಳು

ಆದರೆ, ಕಳಪೆ ಕಂಪೆನಿಗಳ ಷೇರುಗಳಲ್ಲಿ ಹಣ ಹೂಡಿದರೆ ಬಂಡವಾಳವೇ ಕರಗಿ ಹೋಗುತ್ತದೆ. ಷೇರು ಮಾರುಕಟ್ಟೆ ಈಗ ಮುಂಚಿನಂತೆ ಕಾರಣಗಳಿಂದಲೇ ಮೇಲೇರುತ್ತಿಲ್ಲ್. ಉತ್ತಮ ಕಂಪೆನಿಯೊಂದು ಅತ್ಯುತ್ತಮ ಫಲಿತಾಂಶ ನೀಡಿದ ನಂತರವೂ ಷೇರಿನ ಬೆಲೆ ಕುಸಿಯುವುದು ಉಂಟು. ಇನ್ನು ಕಳಪೆ ಫಲಿತಾಂಶ ಬಂದ ಮೇಲೂ ಷೇರಿನ ಬೆಲೆ ಏರುವುದೂ ಉಂಟು

ಇಂದಿನ ಷೇರುಪೇಟೆಯಲ್ಲಿ ಹೆಚ್ಚು ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪಾವಧಿಯಲ್ಲೇ ಅದ್ಭುತವಾದ ಲಾಭ ಗಳಿಕೆಯತ್ತ ಗಮನಹರಿಸಲಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಗಳೆಂದರೆ ಯೆಸ್ ಬ್ಯಾಂಕ್, ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್, ಥೈರೋಕೇರ್, ಯುಪಿಎಲ್, ಟೈಟಾನ್, ಇನ್ಫೋಸಿಸ್, ಬಿಪಿಸಿಎಲ್, ಟಾಟಾ ಮೋಟಾರ್, ಟಾಟಾ ಸ್ಟೀಲ್ ಹೀಗೆ ಉದ್ದನೆಯ ಪಟ್ಟಿ ದೊರೆಯುತ್ತದೆ.

ಯೆಸ್ ಬ್ಯಾಂಕ್

ಯೆಸ್ ಬ್ಯಾಂಕ್

ಈ ಕಂಪೆನಿಯ ಷೇರಿನ ಬೆಲೆ ಅಕ್ಟೋಬರ್ ಆರಂಭದಲ್ಲಿ ರು.29ರ ವಾರ್ಷಿಕ ಕನಿಷ್ಠಕ್ಕೆ ಕುಸಿದು, ನಂತರ ಕೇವಲ ಕೆಲವೇ ವಾರಗಳಲ್ಲಿ ರು. 78ರವರೆಗೂ ಏರಿಕೆ ಕಂಡು, ಈಗ ಕೆಲವು ದಿನಗಳಿಂದ ಅಂದರೆ ಅಕ್ಟೋಬರ್ 31ರಂದು ರು. 55 ರಿಂದ 77 ರವರೆಗೂ ಏರಿಳಿತ ಪ್ರದರ್ಶಿಸಿದೆ. ಈ ಏರಿಕೆಯನ್ನು ಪರ್ಸಂಟೇಜ್ ಗೆ ಬದಲಿಸಿ ಲೆಕ್ಕ ಹಾಕಿ. 150 ಪರ್ಸೆಂಟ್ ಗೂ ಹೆಚ್ಚು ಲಾಭ. 29 ಸಾವಿರ ರುಪಾಯಿ ಹೂಡಿಕೆ ಮಾಡಿದವರಿಗೆ ಒಂದೆರಡು ತಿಂಗಳಲ್ಲೇ 78 ಸಾವಿರ ರುಪಾಯಿ ಸಿಕ್ಕಿರುತ್ತದೆ. ನವೆಂಬರ್ 4ರಂದು ಮತ್ತೊಮ್ಮೆ ರು.60ರಿಂದ ರು.71ರ ವರೆಗೂ, ನವೆಂಬರ್ 8ರಂದು ರು.64 ರ ಸಮೀಪದಿಂದ ರು.72ರವರೆಗೂ ಏರಿಳಿತ ಪ್ರದರ್ಶಿಸಿದೆ. ಅಂದರೆ ಒಂದು ದಿನದಲ್ಲೇ 10ರಿಂದ 15 ಪರ್ಸೆಂಟ್ ಲಾಭ ಗಳಿಕೆಗೆ ಅವಕಾಶ. ಹೀಗೆ ಏರಿಳಿತ ಪ್ರದರ್ಶಿಸುವುದಕ್ಕೆ ಕಾರಣಗಳು ವೈವಿಧ್ಯಮಯವಾಗಿದ್ದರೂ ಮಾರುಕಟ್ಟೆಯಲ್ಲಿ ಲಾಭ ಪಡೆಯುವ ಸಾಹಸಿಗರು ಲಾಭ ಪಡೆದುಕೊಳ್ಳುತ್ತಲೇ ಇರುತ್ತಾರೆ.

ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್

ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್

ಈ ಕಂಪೆನಿಯ ಷೇರಿನ ಬೆಲೆ ಕಳೆದ ಮೂರು ತಿಂಗಳಲ್ಲಿ ರು.575ರ ಸಮೀಪದಿಂದ ರು.166ರ ವರೆಗೆ ಕುಸಿದು, ಈಗ ಕೆಲವು ದಿನಗಳಿಂದ ರಭಸದ ಏರಿಳಿತಗಳನ್ನು ಪ್ರದರ್ಶಿಸುತ್ತಿದೆ. ನವೆಂಬರ್ 1ರಂದು ರು.207ರ ಸಮೀಪದಿಂದ ರು.231ರ ವರೆಗೂ ಏರಿಳಿತ ಕಂಡಿದೆ. ಅಂದರೆ ಒಂದೇ ದಿನದಲ್ಲಿ 10 ಪರ್ಸೆಂಟ್ ಏರಿಳಿತ. ನವೆಂಬರ್ 4ರಂದು ರು.214ರ ಸಮೀಪದಿಂದ ರು. 228ರ ವರೆಗೂ, 5ರಂದು ರು.217 ರ ಸಮೀಪದಿಂದ ರು. 232ರ ವರೆಗೂ, 6ರಂದು ರು.216ರಿಂದ ರು. 238ರ ಅಂತರದಲ್ಲಿ ಏರಿಳಿತಗಳನ್ನು ಪ್ರದರ್ಶಿಸಿದೆ. ನವೆಂಬರ್ 7ರಂದು ಕಂಪನಿ ಪ್ರಕಟಿಸಿದ ಫಲಿತಾಂಶದಲ್ಲಿ ಹಿಂದಿನ ತ್ರೈಮಾಸಿಕದಲ್ಲಿ ರು.8ರಂತೆ ನೀಡಿದ್ದ ಲಾಭಾಂಶವನ್ನು ರು.7ಕ್ಕೆ ಇಳಿಸಿದರೂ ಪೇಟೆಯ ಬೆಂಬಲ ಪಡೆದುಕೊಂಡು ರು.228ರಿಂದ ರು.255 ರವರೆಗೂ ಏರಿಳಿತ ಪ್ರದರ್ಶಿಸಿದೆ. ಶುಕ್ರವಾರ- ನವೆಂಬರ್ 8ರಂದು ರು. 228ರ ಸಮೀಪದಿಂದ ರು. 260 ರವರೆಗೂ ಏರಿಳಿತ ಪ್ರದರ್ಶಿಸಿದೆ. ಅಂದರೆ ಬಹಳ ಕಡಿಮೆ ಅವಧಿಯಲ್ಲೇ ಹೆಚ್ಚು ಬಾರಿ ಮಾರಲು- ಖರೀದಿಸಲು, ಅ ಮೂಲಕ ಲಾಭ ಪಡೆಯಲು ಅವಕಾಶ ಕಲ್ಪಿಸಿದೆ. ಈ ಕಂಪೆನಿ ದೀರ್ಘ ಕಾಲದಲ್ಲಿ ಯಾವ ರೀತಿ ಸ್ಪಂದಿಸಬಹುದು ಎಂಬ ಗೊಂದಲ ಇದ್ದೇ ಇದೆ. ಏಕೆಂದರೆ ಈ ಕಂಪೆನಿ ವಿರುದ್ಧ ಆರೋಪಗಳು ಬಂದಿದೆ. ಇದೇ ವಲಯದ ಇತರೆ ಕಂಪನಿಗಳು ಎದುರಿಸುತ್ತಿರುವ ಪರಿಸ್ಥಿತಿಯಿಂದಾಗಿ ದೀರ್ಘಕಾಲದ ಚಿಂತನೆಗೆ ಅವಕಾಶ ಇಲ್ಲದಂತೆ ಮಾಡಿದೆ.

ಥೈರೋಕೇರ್ ಟೆಕ್ನಾಲಜೀಸ್

ಥೈರೋಕೇರ್ ಟೆಕ್ನಾಲಜೀಸ್

ಈ ಕಂಪೆನಿಯ ಷೇರಿನ ಬೆಲೆ ಕಳೆದ ಒಂದು ತಿಂಗಳಿನಲ್ಲಿ ರು.487ರ ಸಮೀಪದಿಂದ ರು. 604ರ ಅಂತರದ ಏರಿಳಿತ ಪ್ರದರ್ಶಿಸಿದೆ. ಕಂಪೆನಿಯ ಫಲಿತಾಂಶ ಕಳೆದ ತ್ರೈಮಾಸಿಕಕ್ಕಿಂತ ಉತ್ತಮವಾಗಿದ್ದು, ಪ್ರತಿ ಷೇರಿಗೆ ರು. 5ರಂತೆ ಲಾಭಾಂಶ ಪ್ರಕಟಿಸಿದೆ. ಆದರೂ ಗುರುವಾರ ರು. 553ರಿಂದ ರು. 604ರವರೆಗೂ ಮತ್ತು ಶುಕ್ರವಾರ ರು. 542ರ ಸಮೀಪದಿಂದ ರು. 604ರ ಅಂತರದಲ್ಲಿ ಷೇರಿನ ಬೆಲೆಯು ಚಲನೆ ಪ್ರದರ್ಶಿಸಿದೆ. ಇನ್ನು ಇನ್ಫೋಸಿಸ್ ಕಂಪೆನಿಯ ಬಗ್ಗೆ ನಡೆಯುತ್ತಿರುವ ತನಿಖೆ ಪೂರ್ತಿಯಾಗದಿದ್ದರೂ ಪೇಟೆ ವಿವಿಧ ಬೆಳವಣಿಗೆಗಳ ಆಧರಿಸಿ ಹೆಚ್ಚಿನ ಏರಿಳಿತ ಪ್ರದರ್ಶಿಸಿದೆ. ಟೈಟಾನ್ ಕಂಪೆನಿಯು ಹಿಂದೆ ನೀಡಿದ್ದ ಗೈಡನ್ಸ್ ಅನ್ನು ತಲುಪಲು ಅಸಮರ್ಥವಾದ ಕಾರಣ ಮತ್ತು ಮುಂದಿನ ಗೈಡನ್ಸ್ ಪ್ರಮಾಣ ಇಳಿಕೆ ಮಾಡಿದ ಕಾರಣ ಬೆಲೆಯಲ್ಲಿ ಭಾರಿ ಕುಸಿತ ಪ್ರದರ್ಶಿಸಿದೆ.

ದಲ್ಲಾಳಿಗಳ ಮಾರ್ಗದರ್ಶನ ಪಡೆದು ಮುಂದುವರಿಯಿರಿ

ದಲ್ಲಾಳಿಗಳ ಮಾರ್ಗದರ್ಶನ ಪಡೆದು ಮುಂದುವರಿಯಿರಿ

ಯುಪಿಎಲ್ , ಭಾರತ್ ಫೋರ್ಜ್, ಮಾರಿಕೊ, ಮುಂತಾದವುಗಳು ಸಹ ಹೆಚ್ಚು ಕುಸಿತ ಕಂಡಿವೆ. ಇಷ್ಟು ಕುಸಿತ ಕಂಡಾಗ, ಪೇಟೆಯು ಉತ್ತಮ ವಾತಾವರಣದಲ್ಲಿರುವಾಗ ಇವು ಉತ್ತಮ ವ್ಯಾಲ್ಯು ಪಿಕ್ (ಖರೀದಿಗೆ ಉತ್ತಮ ಆಯ್ಕೆ) ಆಗಿವೆ. ಮುಂದಿನ ದಿನಗಳಲ್ಲಿ ಹೊಸ ಬೆಳವಣಿಗೆಯಿಂದ ಬ್ರೋಕಿಂಗ್ ಸಂಸ್ಥೆಯು 'ಬೈ' ರೇಟಿಂಗ್ ಕೊಟ್ಟಲ್ಲಿ ಮತ್ತೆ ಮಿಂಚಿನ ವೇಗದಲ್ಲಿ ಚೇತರಿಕೆ ಕಾಣುವುದರಲ್ಲಿ ಅನುಮಾನವೇ ಇಲ್ಲ. ರೇಟಿಂಗ್ ಎಂಬುದಕ್ಕೆ ಕಾಲ ಮಿತಿಯಿಲ್ಲ. ಯಾವಾಗ ಬೇಕಾದರೂ ಬದಲಾಗಬಹುದು. ಒಟ್ಟಿನಲ್ಲಿ ಉತ್ತಮ ಕಂಪೆನಿಗಳಲ್ಲಿ ಅವಕಾಶವಾದಿಗಳಾಗಿರಿ, ಉತ್ತಮ ಫಲಿತಾಂಶ ಪಡೆಯಬಹುದು. ಸೆನ್ಸೆಕ್ಸ್, ನಿಫ್ಟಿ ಗಳು ಉತ್ತುಂಗದಲ್ಲಿವೆ ಎಂಬುದು ನಗಣ್ಯ. ಇಲ್ಲಿ ನಿಮಗೆ ನೀಡಿರುವುದು ಉದಾಹರಣೆಗಳೇ ವಿನಾ ಷೇರು ಖರೀದಿಗೆ ಶಿಫಾರಸು ಅಲ್ಲ. ಆದ್ದರಿಂದ ಹೂಡಿಕೆ ಮುನ್ನ ಕಂಪೆನಿಯ ಬಗ್ಗೆ ಸರಿಯಾದ ಮಾಹಿತಿ ತಿಳಿದು, ಷೇರು ದಲ್ಲಾಳಿಗಳ ಬಳಿ ಮಾರ್ಗದರ್ಶನ ಪಡೆದು ಮುಂದುವರಿಯುವುದೇ ನಿಮ್ಮದೇ ಜವಾಬ್ದಾರಿ.

English summary

You Can Earn 150 Percent Profit Within A Month; Know How?

Indian stock market giving an opportunity to earn big profits within short span of time. Know how?
Story first published: Sunday, November 10, 2019, 12:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X