For Quick Alerts
ALLOW NOTIFICATIONS  
For Daily Alerts

2 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ವಸ್ತು ನಗದು ನೀಡಿ ಖರೀದಿಸಲು ಈ ದಾಖಲೆಗಳು ಅಗತ್ಯ

|

ಓರ್ವ ವ್ಯಕ್ತಿಯು ಎಷ್ಟು ಮೊತ್ತವನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಬಹುದು, ಆದಾಯ ತೆರಿಗೆ ಇಲಾಖೆಯು ಈ ಬಗ್ಗೆ ಯಾವ ನಿಯಮವನ್ನು ಹೊಂದಿದೆ, ನಿಮ್ಮಲ್ಲಿ ಅಗತ್ಯಕ್ಕಿಂತ ಅಧಿಕ ಹಣವಿದ್ದಾಗ ಆದಾಯ ತೆರಿಗೆ ಇಲಾಖೆಗೆ ತಿಳಿದರೆ ಏನಾಗುತ್ತದೆ, ಎಂಬ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ ನೀವು 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಸ್ತು ಖರೀದಿಸುವಾಗ ಕೆಲವು ದಾಖಲೆಗಳನ್ನು ಸಲ್ಲಿಸಬೇಕು ಎಂಬುವುದು ನಿಮಗೆ ತಿಳಿದಿದೆಯೇ?

ನಿಮ್ಮಲ್ಲಿ ಅಷ್ಟು ಪ್ರಮಾಣದಲ್ಲಿ ಹಣವಿದ್ದಾಗ ನಿಮಗೆ ಅಷ್ಟು ಹಣ ಎಲ್ಲಿಂದ ಲಭ್ಯವಾಗಿದೆ ಎಂದು ನೀವು ತಿಳಿಸಬೇಕಾಗುತ್ತದೆ. ಅದಕ್ಕಾಗಿ ದಾಖಲೆಯನ್ನು ಕೂಡಾ ಸಲ್ಲಿಸಬೇಕಾಗುತ್ತದೆ. ಹಾಗೆಯೇ ನೀವು ಸರಿಯಾದ ರೀತಿಯಲ್ಲಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದೀರಾ ಎಂದು ಕೂಡಾ ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಡಿ.31ರಂದು ಐಟಿಆರ್‌ ಫೈಲಿಂಗ್ ಕೊನೆಯ ದಿನ, ಇಲ್ಲಿದೆ ವಿವರಡಿ.31ರಂದು ಐಟಿಆರ್‌ ಫೈಲಿಂಗ್ ಕೊನೆಯ ದಿನ, ಇಲ್ಲಿದೆ ವಿವರ

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟಾಕ್ಸಸ್ ಪ್ರಕಾರ, ನಿಮ್ಮಲ್ಲಿ ಅಷ್ಟು ಪ್ರಮಾಣದಲ್ಲಿ ಹಣ ಎಲ್ಲಿಂದ ಬಂದಿದೆ ಎಂದು ಸರಿಯಾದ ದಾಖಲೆಯನ್ನು ನೀವು ಸಲ್ಲಿಸಲು ಸಾಧ್ಯವಾಗದಿದ್ದರೆ, ಆದಾಯ ತೆರಿಗೆ ಇಲಾಖೆಯು ನಿಮಗೆ ದಂಡವನ್ನು ವಿಧಿಸಬಹುದು. ನಿಮ್ಮಲ್ಲಿರುವ ಮೊತ್ತದ ಸುಮಾರು ಶೇಕಡ 137ರಷ್ಟು ದಂಡವನ್ನು ವಿಧಿಸಬಹುದು. ಹಣವನ್ನು ನೀವು ಹೊಂದಿರುವಾಗ ಕೆಲವೊಂದು ಅಂಶಗಳನ್ನು ತಿಳಿದಿರುವುದು ಮುಖ್ಯವಾಗುತ್ತದೆ.

 2 ಲಕ್ಷ ರೂ ಮೌಲ್ಯದ ವಸ್ತು ನಗದು ನೀಡಿ ಖರೀದಿಸಲು ಈ ದಾಖಲೆಗಳು ಅಗತ್ಯ

ಎಷ್ಟು ಮೊತ್ತದ ವಹಿವಾಟಿಗೆ ದಾಖಲೆ ಸಲ್ಲಿಸಬೇಕಾಗುತ್ತದೆ?

ಒಂದು ಹಣಕಾಸು ವರ್ಷದಲ್ಲಿ ನೀವು 20 ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟನ್ನು ಮಾಡಿದರೆ, ನಿಮಗೆ ದಂಡವನ್ನು ವಿಧಿಸಲಾಗುತ್ತದೆ. ನೀವು 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತವನ್ನು ವಿತ್‌ಡ್ರಾ ಅಥವಾ ಡೆಪಾಸಿಟ್ ಮಾಡಬೇಕಾದರೆ ಪ್ಯಾನ್ ಕಾರ್ಡ್ ಅನ್ನು ಬ್ಯಾಂಕ್‌ಗೆ ಸಲ್ಲಿಸುವುದು ಅತೀ ಮುಖ್ಯವಾಗಿದೆ.

ವ್ಯಕ್ತಿಯು 1,20,000 ರೂಪಾಯಿಗಿಂತ ಅಧಿಕ ಮೊತ್ತವನ್ನು ಡೆಪಾಸಿಟ್ ಮಾಡಿದರೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಸಲ್ಲಿಸಬೇಕಾಗುತ್ತದೆ. ಹಾಗೆಯೇ ನೀವು 2 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ನಗದು ವಹಿವಾಟು ನಡೆಸಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. 2 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತವ ವಹಿವಾಟು ನಗದು ರೂಪದಲ್ಲಿ ನಡೆಸುವುದಾದರೆ ನೀವು ಪ್ಯಾನ್ ಅಥವಾ ಆಧಾರ್ ಕಾರ್ಡ್ ಅನ್ನು ಸಲ್ಲಿಸಬೇಕಾಗುತ್ತದೆ.

ಒಬ್ಬ ವ್ಯಕ್ತಿಯು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ಒಂದು ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟನ್ನು ನಡೆಸಿದರೆ, ಅದು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬರುತ್ತದೆ. ನಿಯಮದ ಪ್ರಕಾರ ನೀವು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳಿಂದ ಎರಡು ಲಕ್ಷ ರೂಪಾಯಿಗಿಂತ ಅಧಿಕ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವಂತಿಲ್ಲ. ಹಾಗೆಯೇ ಬ್ಯಾಂಕ್‌ನಿಂದ ಎರಡು ಕೋಟಿ ರೂಪಾಯಿಗಿಂತ ಅಧಿಕ ಮೊತ್ತವನ್ನು ವಿತ್‌ಡ್ರಾ ಮಾಡಿದರೆ ಟಿಡಿಎಸ್ ಪಾವತಿಸಬೇಕಾಗುತ್ತದೆ.

English summary

You can't buy item worth Rs 2 lakh in cash without Pan, Aadhaar documents

Aadhar is one of the most important documents issued to Indian citizens by the government. You can't buy item worth Rs 2 lakh in cash without Pan, Aadhaar documents.
Story first published: Sunday, January 8, 2023, 10:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X