For Quick Alerts
ALLOW NOTIFICATIONS  
For Daily Alerts

ಮತ್ತೆ ಲಾಕ್‌ಡೌನ್ ಮಾಡಿದರೇ ಶೇ 40 ರಷ್ಟು ಸಣ್ಣ ಕೈಗಾರಿಕೆಗಳು ನಾಶ

|

ಬೆಂಗಳೂರು, ಜುಲೈ 11: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮದಿಂದ ಈಗಾಗಲೇ ಶೇ 20 ರಷ್ಟು ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಮತ್ತೊಮ್ಮೆ ಲಾಕ್‌ಡೌನ್ ಮಾಡಿದರೆ ಮತ್ತೆ ಶೇ 20 ರಷ್ಟು ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಲಿವೆ ಎಂದು ರಾಜ್ಯ ಸರ್ಕಾರವನ್ನು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಎಚ್ಚರಿಸಿದೆ.

 

ಈ ಕುರಿತು ಕಾಸಿಯಾ ಅಧ್ಯಕ್ಷ ಕೆ ಬಿ ಅರಸಪ್ಪ ಅವರು ಶುಕ್ರವಾರ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಮತ್ತೆ ಲಾಕ್‌ಡೌನ್ ಮಾಡದಿರುವಂತೆ ಮನವಿ ಸಲ್ಲಿಸಿದ್ದಾರೆ.

 

ಚೀನಾ ವಸ್ತುಗಳನ್ನು ಭಾರತದಲ್ಲಿ ಬಹಿಷ್ಕರಿಸುವುದಕ್ಕೆ ಕಾಸಿಯಾ ವಿರೋಧಚೀನಾ ವಸ್ತುಗಳನ್ನು ಭಾರತದಲ್ಲಿ ಬಹಿಷ್ಕರಿಸುವುದಕ್ಕೆ ಕಾಸಿಯಾ ವಿರೋಧ

ಲಾಕ್‌ಡೌನ್ ಮಾಡದೇ ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕೆ ಬೇರೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಕಾಸಿಯಾ ಅಧ್ಯಕ್ಷರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮತ್ತೆ ಲಾಕ್‌ಡೌನ್ ಮಾಡಿದರೇ ಶೇ 40 ರಷ್ಟು ಸಣ್ಣ ಕೈಗಾರಿಕೆಗಳು ನಾಶ

ಕೊರೊನಾವೈರಸ್ ರೋಗ ಹರಡುವುದನ್ನು ಕೂಡಲೇ ತಡೆಯಲು ಆಗುವುದಿಲ್ಲ. ಹೀಗಾಗಿ ಲಾಕ್‌ಡೌನ್ ಮಾಡುವುದರಿಂದ ಪ್ರಯೋಜನವಿಲ್ಲ. ಕೊರೊನಾ ಜೀವನೋಪಾಯದ ಮೇಲೆ ಮಾಡುವ ಪರಿಣಾಮವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕಾಸಿಯಾ ಮನವಿ ಮಾಡಿದೆ.

English summary

40 Percent of Small Industries Will Be Destroyed If Lockdown Imposed Again in Karnataka

40 Percent Of Small Industries Were Destroyed If Again Imposes The lockdown In Karnataka
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X