For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಇಂಡಿಯಾ ಮೂಲಕ 1 ಕೋಟಿ ರು.ಗೂ ಹೆಚ್ಚು ಬಿಜಿನೆಸ್ ಮಾಡಿದವರು 4152 ಮಂದಿ

By ಅನಿಲ್ ಆಚಾರ್
|

ಅಮೆಜಾನ್ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ನಲ್ಲಿ ಸಣ್ಣ- ಮಧ್ಯಮ ಗಾತ್ರದ ಮಾರಾಟಗಾರರು 2020ರಲ್ಲಿ ಸಾಧಿಸಿರುವ ಬೆಳವಣಿಗೆ ಬಗ್ಗೆ ವಾರ್ಷಿಕ ವರದಿಯನ್ನು ಭಾನುವಾರ ನೀಡಿದೆ. 4152 ಮಾರಾಟಗಾರರು 1 ಕೋಟಿ ರುಪಾಯಿಗೂ ಹೆಚ್ಚು ಮೊತ್ತದ ಮಾರಾಟ ಮಾಡಿದ್ದಾರೆ. ಒಟ್ಟಾರೆಯಾಗಿ ಕೋಟಿ ರುಪಾಯಿಗಿಂತ ಹೆಚ್ಚಿನ ಮಾರಾಟ ಮಾಡಿದವರ ಪ್ರಮಾಣ ಕಳೆದ ವರ್ಷಕ್ಕಿಂತ (YoY) 29% ಬೆಳವಣಿಗೆ ಕಂಡಿದೆ.

 

ಇನ್ನು ಕಂಪೆನಿಯ ಇತರ ಪ್ರಮುಖ ಸಾಧನೆಗಳ ಬಗ್ಗೆಯೂ ವರದಿ ಪ್ರಕಟಿಸಲಾಗಿದೆ. 2020ರಲ್ಲಿ 1.5 ಲಕ್ಷ ಮಾರಾಟಗಾರರು ಸೇರ್ಪಡೆಯಾಗಿದ್ದಾರೆ, 50 ಸಾವಿರಕ್ಕೂ ಹೆಚ್ಚು ಹಿಂದಿ ಮತ್ತು ತಮಿಳಿನಲ್ಲಿ ಸೇರಿಕೊಂಡಿದ್ದಾರೆ. ಅಮೆಜಾನ್ ಮಾರ್ಕೆಟ್ ಪ್ಲೇಸ್ ಕಳೆದ ವರ್ಷಕ್ಕಿಂತ ಈ ವರ್ಷ 85% ವ್ಯವಹಾರ ಹೆಚ್ಚಾಗಿದೆ.

 

ಅಮೆಜಾನ್ ನಿಂದ ಆನ್ ಲೈನ್ ಫಾರ್ಮಸಿ ಶುರುಅಮೆಜಾನ್ ನಿಂದ ಆನ್ ಲೈನ್ ಫಾರ್ಮಸಿ ಶುರು

ಜಾಗತಿಕವಾಗಿ 70 ಸಾವಿರ ರಫ್ತುದಾರರು ಇ ಕಾಮರ್ಸ್ ರಫ್ತುದಾರರ ರಫ್ತು 2 ಬಿಲಿಯನ್ ಯುಎಸ್ ಡಿ ದಾಟಿದೆ. ಅಲೆಕ್ಸಾಗಾಗಿ ಜಾಗತಿಕವಾಗಿ ಭಾರತದಿಂದ 1 ಲಕ್ಷ ಡೆವಲಪರ್ಸ್ ಕೆಲಸ ಮಾಡುತ್ತಿದ್ದಾರೆ.

ಅಮೆಜಾನ್ ಮೂಲಕ 1 ಕೋಟಿ ರು.ಗೂ ಹೆಚ್ಚು ಬಿಜಿನೆಸ್ ಮಾಡಿದವರು 4152 ಮಂದಿ

ಅಮೆಜಾನ್ ಇಂಡಿಯಾ ಹೇಳಿಕೆ ಪ್ರಕಾರ, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು ಅಂದರೆ ಮಾರಾಟಗಾರರು, ಡೆಲಿವರಿ, ಸಾಗಣೆ ಸಹಭಾಗಿಗಳು, ನೆರೆಮನೆಯ ಮಳಿಗೆಗಳು, ಎಂಟರ್ ಪ್ರೈಸಸ್, ಡೆವಲಪರ್ಸ್, ಲೇಖಕರು ಮತ್ತಿತರರು ಎಲ್ಲ ಸೇರಿ ಕಂಪೆನಿಯು ಇಂಥ ಹತ್ತು ಲಕ್ಷ ಸಹಭಾಗಿತ್ವ ಹೊಂದಿದೆ. ಅಮೆಜಾನ್ ಮಾರ್ಕೆಟ್ ಪ್ಲೇಸ್ ನಲ್ಲಿ 7 ಲಕ್ಷಕ್ಕೂ ಅಧಿಕ ಮಾರಾಟಗಾರರಿದ್ದಾರೆ.

ಸಹೇಲಿ ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ಉದ್ಯಮಿಗಳು ಹದಿನೈದು ಪಟ್ಟು ಬೆಳವಣಿಗೆಯನ್ನು ಕಂಡಿದ್ದಾರೆ. ಇನ್ನು ನೇಕಾರರು ಹಾಗೂ ಕಲಾವಿದರು ಕರಿಗರ್ ಕಾರ್ಯಕ್ರಮದ ಅಡಿಯಲ್ಲಿ 2.8 ಪಟ್ಟು ಬೆಳವಣಿಗೆ ಕಂಡಿದ್ದಾರೆ. ಅಮೆಜಾನ್ ನಿಂದ ಟಾಪ್ ಹತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಅತಿ ಹೆಚ್ಚು ಮಾರಾಟಗಾರರಿದ್ದಾರೆ ಎಂದು ತಿಳಿಸಿದೆ.

ದೆಹಲಿಯಲ್ಲಿ ಅತಿ ಹೆಚ್ಚು ಅಂದರೆ 1.1 ಲಕ್ಷಕ್ಕೂ ಹೆಚ್ಚು ಮಾರಾಟಗಾರರು, ಮಹಾರಾಷ್ಟ್ರ 87,000 ಮತ್ತು ಗುಜರಾತ್ ನಲ್ಲಿ 79,000 ಮಾರಾಟಗಾರರಿದ್ದಾರೆ. ಈ ವರ್ಷ ಅಕ್ಟೋಬರ್ ಮಧ್ಯದಿಂದ ನವೆಂಬರ್ ಮಧ್ಯೆ ನಡೆದ ಹಬ್ಬದ ಋತುವಿನ ಮಾರಾಟದಲ್ಲಿ ಫ್ಲಿಪ್ ಕಾರ್ಟ್ ಗ್ರಾಸ್ ಮರ್ಚಂಡೈಸ್ ವ್ಯಾಲ್ಯೂ (ಜಿಎಂವಿ) 66%, ಅಂದರೆ ಒಟ್ಟಾರೆ 8.3 ಬಿಲಿಯನ್ ಯುಎಸ್ ಡಿ ಮಾರಾಟದಲ್ಲಿ ಇಷ್ಟು ಪಾಲು ಹೊಂದಿತ್ತು. ಇತ್ತ ಅಮೆಜಾನ್ ಪಾಲು 34% ಇತ್ತು.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಹಬ್ಬದ ಋತುವಿನ ಆನ್ ಲೈನ್ ಮಾರಾಟ ಶೇಕಡಾ 65ರಷ್ಟು ಹೆಚ್ಚಾಗಿದೆ. ಕಳೆದ ವರ್ಷ 5 ಬಿಲಿಯನ್ ಯುಎಸ್ ಡಿ ಮೌಲ್ಯದ ಮಾರಾಟ ಮಾಡಿದ್ದವು. ಇನ್ನು ಈ ವರ್ಷ ಒಟ್ಟಾರೆ ಜಿಎಂವಿ 8.3 ಬಿಲಿಯನ್ ಯುಎಸ್ ಡಿಯ 90% ಹೆಚ್ಚಳ ಕಂಡು ಬಂದಿತು.

English summary

4152 Sellers Crossed Rs 1 Crore Sales In Amazon India In 2020

Amazon India In year 2020: 4152 sellers crossed Rs 1 crore sales. Here is an interesting statistics.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X