For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಗಳಿಂದ ಸಾಲ ವಿತರಣೆಯ ಪ್ರತಿ ದಿನದ ವರದಿ ಪಡೆಯುತ್ತಿದೆಯಂತೆ ಸರ್ಕಾರ

|

ಎಷ್ಟು ಸಾಲ ನೀಡಲಾಗುತ್ತಿದೆ, ಯಾವ ಪ್ರಮಾಣದ ಮೊತ್ತ ಎಂಬುದರ ಬಗ್ಗೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಂದ ಕೇಂದ್ರ ಸರ್ಕಾರ ದಿನವೂ ವರದಿ ಪಡೆಯುತ್ತಿದೆ. ಇನ್ನು ಸಾಲ ನೀಡುವಂತೆ ಬ್ಯಾಂಕ್ ಗಳಿಗೆ ಸೂಚನೆ ನೀಡುತ್ತಿದೆ ಎಂದು ಬ್ಯಾಂಕಿಂಗ್ ವಲಯದ ಮೂಲಗಳನ್ನು ಉದಾಹರಿಸಿ ಹಾಗೂ ದಾಖಲೆಗಳನ್ನು ಪರಾಂಬರಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

ಕೇಂದ್ರ ಹಣಕಾಸು ಸಚಿವಾಲಯವು ಏಪ್ರಿಲ್ 17ರಂದು ಬರೆದಿರುವ ಪತ್ರವೊಂದು ರಾಯಿಟರ್ಸ್ ಗೆ ಸಿಕ್ಕಿದೆ. ಹೊಸ ಸಾಲದ ಬಗ್ಗೆ ಸಂಪೂರ್ಣ ಮಾಹಿತಿ, ಅದರಲ್ಲೂ ಯಾವ ವಲಯಕ್ಕೆ ಸಾಲ ಹರಿದುಹೋಗುತ್ತಿದೆ ಎಂಬ ವಿಚಾರವನ್ನು ಹಂಚಿಕೊಳ್ಳುವಂತೆ ಆ ಪತ್ರದಲ್ಲಿ ತಿಳಿಸಲಾಗಿದೆ ಎಂದು ವರದಿಯಲ್ಲಿ ಇದೆ.

ಎಲ್ ಐಸಿ ಹೌಸಿಂಗ್ ಫೈನಾನ್ಸ್ ಗೃಹ ಸಾಲದ ಬಡ್ಡಿ ದರದಲ್ಲಿ ಭರ್ಜರಿ ಇಳಿಕೆಎಲ್ ಐಸಿ ಹೌಸಿಂಗ್ ಫೈನಾನ್ಸ್ ಗೃಹ ಸಾಲದ ಬಡ್ಡಿ ದರದಲ್ಲಿ ಭರ್ಜರಿ ಇಳಿಕೆ

ಆರ್ಥಿಕತೆ ಚೇತರಿಕೆ ಕಾಣಿಸಿಕೊಳ್ಳಲಿ ಎಂಬ ಕಾರಣಕ್ಕೆ ಈಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 75 ಬೇಸಿಸ್ ಪಾಯಿಂಟ್ ಇಳಿಕೆ ಮಾಡಲಾಗಿತ್ತು. ಆ ಮೂಲಕ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರ ಇಳಿಸಲು ನೆರವಾಗಿತ್ತು. ಕೊರೊನಾದ ಕಾರಣಕ್ಕೆ ಲಾಕ್ ಡೌನ್ ಘೋಷಿಸಿರುವುದರಿಂದ ಭಾರತದಲ್ಲಿ ಹತ್ತಾರು ಲಕ್ಷ ಉದ್ಯೋಗ ನಷ್ಟವಾಗುವ ಭೀತಿಯಲ್ಲಿದೆ.

ಸಾಲ ವಿತರಣೆಯ ಪ್ರತಿ ದಿನದ ವರದಿ ಪಡೆಯುತ್ತಿದೆಯಂತೆ ಸರ್ಕಾರ

ಉದ್ಯೋಗ ಮತ್ತು ವ್ಯಾಪಾರ ಅಪಾಯದಲ್ಲಿ ಇರುವುದರಿಂದ ಎಲ್ಲಿ ನೀಡಿದ ಸಾಲ ವಾಪಸ್ ಬರುವುದಿಲ್ಲವೋ ಎಂಬ ಆತಂಕದಲ್ಲಿ ಬ್ಯಾಂಕಿಂಗ್ ವಲಯದ ಹಲವು ಅಧಿಕಾರಿಗಳು ಸಾಲ ನೀಡಲು ಸಿದ್ಧರಿಲ್ಲ. ಈಗಾಗಲೇ ಭಾರತದ ಬ್ಯಾಂಕಿಂಗ್ ವಲಯದಲ್ಲಿ 1400 ಕೋಟಿ ಅಮೆರಿಕನ್ ಡಾಲರ್ ನಷ್ಟು ಬ್ಯಾಡ್ ಡೆಟ್ ಇದೆ. ಆ ಕಾರಣಕ್ಕೆ ಬ್ಯಾಂಕ್ ಗಳು ಸಾಲ ನೀಡುವ ಮುನ್ನ ಸರ್ಕಾರದಿಂದ ಖಾತ್ರಿ ಕೇಳುತ್ತಿವೆ.

ಇನ್ನು ಕೆಲವು ಸಾರ್ವಜನಿಕ ಬ್ಯಾಂಕ್ ಗಳು ಹೇಳುವ ಪ್ರಕಾರ, ಹಣಕಾಸು ಸಚಿವಾಲಯದಿಂದ ಆದೇಶ ಬಂದ ಮೇಲೆ ಶಾಖೆಗೆ ಇಷ್ಟು ಎಂದು ಸಾಲ ವಿತರಿಸುವ ಗುರಿ ನೀಡಲಾಗಿದೆ. ಒಂದು ವೇಳೆ ಆ ಗುರಿ ತಲುಪದಿದ್ದಲ್ಲಿ ಕಾರಣವನ್ನು ಸಹ ಕೇಳಲಾಗುತ್ತಿದೆ.

ಕಳೆದ ಆರ್ಥಿಕ ವರ್ಷದಲ್ಲಿನ ಸಾಲ ಬೆಳವಣಿಗೆಯು 58 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಅದನ್ನು ಕೂಡ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಈ ಪ್ರಯತ್ನ ಇದೆ.

English summary

Government Asking Everyday Report Of Lending From PSU Banks

Corona effect: Union government asking every day report from PSU banks about lending.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X