For Quick Alerts
ALLOW NOTIFICATIONS  
For Daily Alerts

ಭಾರತದ ಎಂಎಸ್‌ಎಂಇಗಳಿಗೆ ದೊಡ್ಡ ಮೊತ್ತದ ಸಾಲ ನೀಡಲು ಮುಂದಾದ ವಿಶ್ವಬ್ಯಾಂಕ್

|

ನವದೆಹಲಿ, ಜುಲೈ 7: ಭಾರತದಲ್ಲಿನ ಸುಮಾರು 1.5 ಲಕ್ಷ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ನೆರವಿನ ದೃಷ್ಠಿಯಿಂದ 5700 ಕೋಟಿ ರುಪಾಯಿ ಸಾಲ ಒದಗಿಸಲು ವಿಶ್ವ ಬ್ಯಾಂಕ್ ಮುಂದಾಗಿದೆ.

ಕೊರೊನಾ ಲಾಕ್‌ಡೌನ್ ಬಿಕ್ಕಟ್ಟಿನಿಂದ ತೀವ್ರವಾಗಿ ಪರಿಣಾಮ ಬೀರುವ ಎಂಎಸ್‌ಎಂಇಗಳ ಕೈಗೆ ಹೆಚ್ಚಿನ ಹಣಕಾಸಿನ ಹರಿವನ್ನು ಬೆಂಬಲಿಸುವ ಉದ್ದೇಶದಿಂದ ವಿಶ್ವ ಬ್ಯಾಂಕ್ ಮತ್ತು ಭಾರತ ಸರ್ಕಾರ ಸೋಮವಾರ ಎಂಎಸ್‌ಎಂಇ ತುರ್ತು ಪ್ರತಿಕ್ರಿಯೆ ಕಾರ್ಯಕ್ರಮ ಒಪ್ಪಂದಕ್ಕೆ ಸಹಿ ಹಾಕಿವೆ.

ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮಾಜಿ ಸಿಇಒ ಆತ್ಮಹತ್ಯೆಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮಾಜಿ ಸಿಇಒ ಆತ್ಮಹತ್ಯೆ

ಪ್ರಸ್ತುತ ಲಾಕ್‌ಡೌನ್ ಪರಿಣಾಮವನ್ನು ತಡೆದುಕೊಳ್ಳಲು ಮತ್ತು ಲಕ್ಷಾಂತರ ಉದ್ಯೋಗಗಳನ್ನು ರಕ್ಷಿಸಲು, ಎಂಎಸ್‌ಎಂಇಗಳಿಗೆ ಸಹಾಯ ಮಾಡಲು ವಿಶ್ವ ಬ್ಯಾಂಕಿನ ಪರಿಹಾರ ಅಗತ್ಯವನ್ನು ಪರಿಹರಿಸುತ್ತದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.

ಭಾರತದ ಎಂಎಸ್‌ಎಂಇಗಳಿಗೆ  ಸಾಲ ನೀಡಲು ಮುಂದಾದ ವಿಶ್ವಬ್ಯಾಂಕ್

ಕಾರ್ಯಸಾಧ್ಯವಾದ ಎಂಎಸ್‌ಎಂಇಗಳಿಗೆ ಸಾಲವನ್ನು ಮುಂದುವರಿಸಲು ಹಣಕಾಸು ಸಂಸ್ಥೆಗಳಿಗೆ ಈ ಕ್ರಮವು ಸಹಾಯ ಮಾಡುತ್ತದೆ ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಅದನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಲಾಕ್‌ಡೌನ್ ಎಂಎಸ್ಎಂಇ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ, ಇದು ಜೀವನೋಪಾಯ ಮತ್ತು ಉದ್ಯೋಗಗಳ ನಷ್ಟಕ್ಕೆ ಕಾರಣವಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ. ಈಗಾಗಲೇ ಕೇಂದ್ರ ಸರ್ಕಾರ ಆತ್ಮ ನಿರ್ಭರ ಪ್ಯಾಕೇಜ್ ಅಡಿ ಮೂರು ಲಕ್ಷ ಕೋಟಿ ರುಪಾಯಿ ಗಳನ್ನು ಎಂಎಸ್‌ಎಂಇ ಗಳ ವಲಯಕ್ಕೆ ನೀಡಿದೆ.

Read more about: msme loan world bank ಸಾಲ
English summary

Indian MSMEs To Get Loan Worth 5700 Crore Rupees From World Bank

Indian MSMEs To Get Loan Worth 5700 Crore Rupees From World Bank
Story first published: Tuesday, July 7, 2020, 8:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X