For Quick Alerts
ALLOW NOTIFICATIONS  
For Daily Alerts

ಸಣ್ಣ ಉದ್ಯಮಗಳಿಗೆ ಸಾಲ; ಸೆಪ್ಟೆಂಬರ್‌ನಲ್ಲಿ ಏರಿಕೆ

|

ನವದೆಹಲಿ, ಅ. 17: ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (ಎಸ್‌ಐಡಿಬಿಐ) ಸಂಸ್ಥೆ ಸಾರ್ವಜನಿಕ ವಲಯ ಬ್ಯಾಂಕ್‌ಗಳಿಗೆ (ಪಿಎಸ್‌ಬಿ) ನೀಡುವ ಸಾಲ ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ತುಸು ಏರಿಕೆ ಆಗಿದೆ. 59 ನಿಮಿಷದೊಳಗೆ ಸಾಲ ಅನುಮೋದನೆ ನೀಡುವ ಯೋಜನೆ ಇದು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಿಎಸ್‌ಬಿ ಸಾಲಗಳ ಸಂಖ್ಯೆ ಏರಿರುವುದು ಸರಕಾರ ದತ್ತಾಂಶದಿಂದ ತಿಳಿದುಬಂದಿದೆ. 2020 ಅಕ್ಟೋಬರ್ 1ರಿಂದ 2021ರ ಸೆಪ್ಟೆಂಬರ್‌ವರೆಗೆ 2,34,905 ಸಾಲಗಳನ್ನು ಈ ಯೋಜನೆ ಅಡಿ ವಿತರಿಸಲಾಗಿತ್ತು. ಒಟ್ಟು 78,409 ಕೋಟಿ ರೂಪಾಯಿಯನ್ನು ಸಾಲವಾಗಿ ನೀಡಲಾಗಿತ್ತು. 2021 ಅಕ್ಟೋಬರ್ 1ರಿಂದ 2022 ಸೆಪ್ಟೆಂಬರ್ 20ರವರೆಗೆ 82,822 ಕೋಟಿ ರೂ ಮೊತ್ತದಷ್ಟು ಒಟ್ಟು 2,42,812 ಸಾಲಗಳನ್ನು ನೀಡಲಾಗಿದೆ. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 3.36ರಷ್ಟು ಹೆಚ್ಚಳವಾಗಿದೆ.

Explainer: ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಾದರೆ ಭಾರತಕ್ಕೆ ಯಾಕೆ ಬಾಧೆ?Explainer: ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಾದರೆ ಭಾರತಕ್ಕೆ ಯಾಕೆ ಬಾಧೆ?

59 ನಿಮಿಷಗಳ ಈ ಸಾಲ ಅನುಮೋದನೆ ಯೋಜನೆಯನ್ನು ಆನ್‌ಲೈನ್ ಪಿಎಸ್‌ಬಿ ಲೋನ್ಸ್ (ಒಪಿಎಲ್) ಸಂಸ್ಥೆ ನಿಭಾಯಿಸುತ್ತದೆ. ಈ ಹಣಕಾಸು ವರ್ಷದಲ್ಲಿ (ಏಪ್ರಿಲ್‌ನಿಂದ ಮಾರ್ಚ್‌ವರೆಗೆ) ಒಂದು ಲಕ್ಷ ಕೋಟಿ ರೂ ಸಾಲ ವಿತರಣೆಯಾಗುವ ಸಾಧ್ಯತೆ ಇದೆ ಎಂದು ಒಪಿಎಲ್ ಸಂಸ್ಥೆಯ ಸಿಇಒ ಜಿನಂದ್ ಶಾ ಇತ್ತೀಚೆಗಷ್ಟೇ ಹೇಳಿದ್ದರು. ಅವರ ಅಂದಾಜು ಪ್ರಕಾರ ಸೆಪ್ಟೆಂಬರ್‌ನಿಂದ ಮಾರ್ಚ್‌ವರೆಗೆ ಎಂಎಸ್‌ಎಂಇಗಳಿಗೆ ಹೆಚ್ಚು ಸಾಲ ವಿತರಣೆ ಆಗುತ್ತದೆ. ಈ ಅವಧಿಯಲ್ಲೇ ಶೇ. 50ರಷ್ಟು ಸಾಲ ವಿತರಣೆ ಆಗಬಹುದು ಎಂದಿದ್ದರು.

ಸಣ್ಣ ಉದ್ಯಮಗಳಿಗೆ ಸಾಲ; ಸೆಪ್ಟೆಂಬರ್‌ನಲ್ಲಿ ಏರಿಕೆ

ಏನಿದು ಯೋಜನೆ?
ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ (ಎಂಎಸ್‌ಎಂಇ) 10 ಲಕ್ಷದಿಂದ ಹಿಡಿದು 5 ಕೋಟಿ ರೂವರೆಗೆ ಸಾಲ ನೀಡಲಾಗುತ್ತದೆ. ಈ ಯೋಜನೆಯ ಅಡಿ ಇಂಥ ಸಾಲಗಳಿಗೆ ಕೇವಲ 59 ನಿಮಿಷದಲ್ಲಿ ಅನುಮೋದನೆ ನೀಡಲಾಗುತ್ತದೆ. ಈ ಸಾಲಕ್ಕೆ ವಾರ್ಷಿಕ ಬಡ್ಡಿ ದರ ಶೇ. 8.5ರಿಂದ ಪ್ರಾರಂಭವಾಗುತ್ತದೆ.

6 ಕಂಪನಿಗಳ 78,163 ಕೋಟಿ ರು ಮೌಲ್ಯ ಇಳಿಕೆ; RILಗೆ ಭಾರಿ ನಷ್ಟ6 ಕಂಪನಿಗಳ 78,163 ಕೋಟಿ ರು ಮೌಲ್ಯ ಇಳಿಕೆ; RILಗೆ ಭಾರಿ ನಷ್ಟ

ಇನ್ನು, ಆಗಸ್ಟ್‌ವರೆಗಿನ ಒಂದು ವರ್ಷದ ಅವಧಿಯಲ್ಲಿ ಎಂಎಸ್‌ಎಂಇ ವಲಯಕ್ಕೆ ಬ್ಯಾಂಕ್‌ನಲ್ಲಿ ಕಾಯ್ದಿರಿಸಲಾಗಿದ್ದ ಸಾಲ 18.15 ಲಕ್ಷ ಕೋಟಿ ರೂ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 24ರಷ್ಟು ಹೆಚ್ಚಳ ಕಂಡಿದೆ. ಏಪ್ರಿಲ್‌ನಿಂದ ಆರಂಭಗೊಂಡು ಪ್ರತೀ ತಿಂಗಳೂ ಬ್ಯಾಂಕ್ ಕ್ರೆಡಿಟ್‌ನಲ್ಲಿ ಏರಿಕೆ ಕಂಡಿದೆ.

ಸಣ್ಣ ಉದ್ಯಮಗಳಿಗೆ ಸಾಲ; ಸೆಪ್ಟೆಂಬರ್‌ನಲ್ಲಿ ಏರಿಕೆ

ಮುದ್ರಾ ಸಾಲದಲ್ಲೂ ಹೆಚ್ಚಳ
ಸಣ್ಣ ಉದ್ಯಮಗಳಿಗೆ ನೀಡಲಾಗುವ ಮುದ್ರಾ ಯೋಜನೆ ಅಡಿ ನೀಡಲಾಗುವ ಸಾಲದಲ್ಲೂ ಏರಿಕೆ ಆಗಿರುವುದು ಇತ್ತೀಚಿನ ದತ್ತಾಂಶದಿಂದ ತಿಳಿದುಬಂದಿದೆ.

ಈ ಬಾರಿಯ ಹಣಕಾಸು ವರ್ಷದಲ್ಲಿ ಅಕ್ಟೋಬರ್ 7ರವರೆಗೆ ಬರೋಬ್ಬರಿ 2.19 ಕೋಟಿ ಸಾಲಗಳನ್ನು ನೀಡಲಾಗಿದೆ. ವಿತರಣೆಯಾದ ಸಾಲದ ಮೊತ್ತ 1.58 ಲಕ್ಷ ಕೋಟಿ ರೂ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 8ರಷ್ಟು ಮುದ್ರಾ ಸಾಲದಲ್ಲಿ ಹೆಚ್ಚಳವಾಗಿದೆ.

2015ರಲ್ಲಿ ಕೇಂದ್ರ ಸರಕಾರ ಆರಂಭಿಸಿದ ಮುದ್ರಾ ಸಾಲ ಯೋಜನೆಯಲ್ಲಿ ಸಣ್ಣ ಉದ್ಯಮಗಳಿಗೆ 10 ಲಕ್ಷ ರೂವರೆಗೆ ಸಾಲ ಒದಗಿಸಲಾಗುತ್ತದೆ.

English summary

SIDBIs 59-Minutes Loan Scheme Shows Growth In September

SIDBI’s PSB Loans in 59 Minutes for MSMEs sanctioned 2,42,812 loans involving Rs 82,822 crores as of September 30, 2022, registering a year-on-year increase of only 3.36 per cent
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X