For Quick Alerts
ALLOW NOTIFICATIONS  
For Daily Alerts

ಕೊರೊನಾ ಬಳಿಕ 'ಸಿಹಿ ಉದ್ಯಮ'ಕ್ಕೆ 1.25 ಲಕ್ಷ ಕೋಟಿ ವ್ಯವಹಾರ ನಿರೀಕ್ಷೆ!

|

ಭಾರತದಲ್ಲಿ ಸರ್ವ ಜನಾಂಗ, ಸಹಬಾಳ್ವೆ ಜೊತೆಗೆ ಹಬ್ಬದ ಋತು ಬಂದರೆ ಹೆಚ್ಚಿನ ಲಾಭ ಗಳಿಸುವುದು ಸಿಹಿ,ಸ್ನ್ಯಾಕ್ಸ್ ಉದ್ಯಮ. ಕೋವಿಡ್ 19 ನಿಂದಾಗಿ ಕಳೆದ ಎರಡುವರ್ಷಗಳಿಂದ ಹಬ್ಬಗಳನ್ನು ಮಿತಿಯಲ್ಲಿ ನಿರ್ಬಂಧದಲ್ಲಿ ಆಚರಿಸಿದ್ದರಿಂದ ಸಿಹಿ ತಿಂಡಿ ಉತ್ಪಾದಕರಿಗೆ ಭಾರಿ ನಷ್ಟ ಉಂಟಾಗಿತ್ತು. ಆದರೆ ಪ್ರಸಕ್ತ ಆರ್ಥಿಕ ವರ್ಷದ ಕೊನೆಗೆ ಉದ್ಯಮಿಗಳು1.25 ಲಕ್ಷ ಕೋಟಿ ರು ವ್ಯವಹಾರ ಕಾಣುವ ನಿರೀಕ್ಷೆಯನ್ನು ಹೊಂದಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನೀರಸ ಮಾರಾಟದ ನಂತರ ಮಾರುಕಟ್ಟೆಗಳು ಈ ಹಬ್ಬದ ಋತುವಿನಲ್ಲಿ ಸಾಂಪ್ರದಾಯಿಕ ಉತ್ಸಾಹವನ್ನು ಮರಳಿ ಪಡೆಯುತ್ತಿರುವುದರಿಂದ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸಿಹಿ ಮತ್ತು ಖಾರ ತಿಂಡಿಗಳ ವ್ಯಾಪಾರವು ಸಾರ್ವಕಾಲಿಕ ಗರಿಷ್ಠ 1.25 ಲಕ್ಷ ಕೋಟಿ ರೂಪಾಯಿಗಳನ್ನು ತಲುಪುವ ಸಾಧ್ಯತೆಯಿದೆ ಎಂದು ಉದ್ಯಮ ಒಕ್ಕೂಟದ ಪ್ರತಿನಿಧಿ ಹೇಳಿದ್ದಾರೆ.

ಸಿಹಿ ಸುದ್ದಿ: ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಖಾದ್ಯ ತೈಲ ಬೆಲೆ ಇಳಿಕೆಸಿಹಿ ಸುದ್ದಿ: ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಖಾದ್ಯ ತೈಲ ಬೆಲೆ ಇಳಿಕೆ

ಕಳೆದ ತಿಂಗಳು ರಕ್ಷಾಬಂಧನ ಹಬ್ಬದ ಸಂದರ್ಭದಲ್ಲಿ, ಸಿಹಿತಿಂಡಿಗಳು ಮತ್ತು ತಿಂಡಿಗಳ ವ್ಯಾಪಾರವು ಮಹತ್ತರವಾದ ಬೆಳವಣಿಗೆಯನ್ನು ಕಂಡಿದೆ ಎಂದು ಸಿಹಿತಿಂಡಿಗಳ ಒಕ್ಕೂಟ ಮತ್ತು ನಮ್ಕೀನ್ ತಯಾರಕರ ನಿರ್ದೇಶಕ ಫಿರೋಜ್ ಎಚ್ ನಖ್ವಿ ಪಿಟಿಐಗೆ ತಿಳಿಸಿದರು.

ಪ್ರಸ್ತುತ ನಡೆಯುತ್ತಿರುವ ಗಣೇಶ ಹಬ್ಬದಲ್ಲಿ ಮೋದಕ ಮತ್ತು ಇತರ ಸಿಹಿತಿಂಡಿಗಳ ಬೇಡಿಕೆಯೂ ಹೆಚ್ಚಿದ್ದು, ಮುಂಬರುವ ದಸರಾ, ದೀಪಾವಳಿ ಮತ್ತು ಹೋಳಿ ಹಬ್ಬಗಳಲ್ಲೂ ಇದೇ ಪ್ರವೃತ್ತಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಫಿರೋಜ್ ಹೇಳಿದರು. ಒಕ್ಕೂಟವು ಸಿಹಿತಿಂಡಿಗಳು ಮತ್ತು ಇತರ ತಿಂಡಿ ತಯಾರಕರ ಉನ್ನತ ಸಂಸ್ಥೆಯಾಗಿದೆ.

1.25 ಲಕ್ಷ ಕೋಟಿ ರೂ. ಮಟ್ಟಲಿದೆ

1.25 ಲಕ್ಷ ಕೋಟಿ ರೂ. ಮಟ್ಟಲಿದೆ

ಮಾರುಕಟ್ಟೆಯಲ್ಲಿನ ಪ್ರಸ್ತುತ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು, ಈ ಹಣಕಾಸು ವರ್ಷದಲ್ಲಿ ಸಿಹಿತಿಂಡಿಗಳು ಮತ್ತು ಖಾರಾ ಸ್ನ್ಯಾಕ್‌ಗಳ ಒಟ್ಟು ವ್ಯಾಪಾರವು ಹಿಂದಿನ ಎಲ್ಲಾ ಅಂಕಿಅಂಶಗಳನ್ನು ದಾಟುವ ಸಾಧ್ಯತೆಯಿದೆ ಮತ್ತು ಇವುಗಳ ಆನ್‌ಲೈನ್ ಮಾರಾಟ ಮತ್ತು ಹೋಮ್ ಡೆಲಿವರಿಯಿಂದಾಗಿ ಆಹಾರ ಉತ್ಪನ್ನಗಳು ಸಾರ್ವಕಾಲಿಕ ಗರಿಷ್ಠ 1.25 ಲಕ್ಷ ಕೋಟಿ ರೂ. ಮಟ್ಟಲಿದೆ ಎಂದು ನಖ್ವಿ ಹೇಳಿದರು.

ಸಾಮಾನ್ಯ ಜನರ ಜೇಬಿನ ಮೇಲೆ ಹಣದುಬ್ಬರದ ಪ್ರಭಾವದ ಬಗ್ಗೆ ಪ್ರಶ್ನಿಸಿದಾಗ, "ಜನರು ಆಭರಣಗಳು ಮತ್ತು ಬಟ್ಟೆಗಳ ಮೇಲಿನ ತಮ್ಮ ವೆಚ್ಚವನ್ನು ಮೊಟಕುಗೊಳಿಸಬಹುದು, ಆದರೆ ಸಿಹಿತಿಂಡಿಗಳು ಮತ್ತು ನಮ್ಕೀನ್ ಹಬ್ಬಗಳ ಅತ್ಯಗತ್ಯ ಅಂಶವಾಗಿದೆ" ಎಂದು ಹೇಳಿದರು. ಈ ಹಿಂದೆ ಸಾಂಕ್ರಾಮಿಕ ರೋಗದಿಂದ ಸಿಹಿ-ಖಾರ ತಿಂಡಿ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿತ್ತು ಎಂದರು. 2020-21ರಲ್ಲಿ ಒಟ್ಟು ವಹಿವಾಟು 65,000 ಕೋಟಿಗೆ ಕುಸಿದಿತ್ತು, ಹಾಗೂ 35,000 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿತ್ತು ಎಂದು ನಖ್ವಿ ತಿಳಿಸಿದರು.

ಸ್ವೀಟ್ಸ್-ನಮ್ಕೀನ್ ಉದ್ಯಮ

ಸ್ವೀಟ್ಸ್-ನಮ್ಕೀನ್ ಉದ್ಯಮ

"ಸ್ವೀಟ್ಸ್-ನಮ್ಕೀನ್ ಉದ್ಯಮವು 2021-22 ರಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡಿದೆ, ಅದು ಒಟ್ಟು 1.10 ಲಕ್ಷ ಕೋಟಿ ರೂಪಾಯಿಗಳ ವ್ಯಾಪಾರವನ್ನು ಕಂಡಿತು ಮತ್ತು ಈಗ ಮತ್ತಷ್ಟು ಸುಧಾರಣೆಯತ್ತ ಸಾಗುತ್ತಿದೆ" ಎಂದರು. ಯುಕೆ, ಕೆನಡಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳಿಗೆ ಹಾಲು ಆಧಾರಿತ ಸಿಹಿತಿಂಡಿಗಳನ್ನು ಕಳುಹಿಸುವಲ್ಲಿ "ನಿಯಂತ್ರಕ ಅಡಚಣೆಗಳು" ಇರುವುದರಿಂದ ಪ್ರಸ್ತುತ ಭಾರತದಿಂದ ಸಿಹಿತಿಂಡಿಗಳ ರಫ್ತು 2,000 ಕೋಟಿಯಿಂದ 3,000 ಕೋಟಿಗೆ ಸೀಮಿತವಾಗಿದೆ ಎಂದು ನಖ್ವಿ ಹೇಳಿದರು.

ಹಾಲು ಉತ್ಪಾದಕರಿಗೂ ಪ್ರಯೋಜನ

ಹಾಲು ಉತ್ಪಾದಕರಿಗೂ ಪ್ರಯೋಜನ

ಭಾರತ ಸರ್ಕಾರವು ದ್ವಿಪಕ್ಷೀಯ ಚರ್ಚೆಗಳ ಮೂಲಕ ಈ ಅಡೆತಡೆಗಳನ್ನು ತೆಗೆದುಹಾಕಲು ಮುಂದಾಗಬೇಕಿದೆ. ಏಕೆಂದರೆ ಇದು ದೇಶಿ ಸಿಹಿತಿಂಡಿ ತಯಾರಕರಿಗೆ ಮಾತ್ರವಲ್ಲ, ಹಾಲು ಉತ್ಪಾದಕರಿಗೂ ಪ್ರಯೋಜನವನ್ನು ನೀಡುತ್ತದೆ. ಸಿಹಿತಿಂಡಿಗಳಲ್ಲಿ, ಒಣ ಹಣ್ಣುಗಳಿಂದ ತಯಾರಿಸಿದ 'ಕಾಜು ಕಟ್ಲಿ'ಯಂತಹ ಸಿದ್ಧತೆಗಳು ಪ್ರಮುಖ ಅಂಶವಾಗಿದೆ ಮತ್ತು ಗಲ್ಫ್ ದೇಶಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದು ಅವರು ಹೇಳಿದರು.

ಇಂದೋರ್ ದೇಶದ ಪ್ರಮುಖ ಕೇಂದ್ರ

ಇಂದೋರ್ ದೇಶದ ಪ್ರಮುಖ ಕೇಂದ್ರ

ಸಿಹಿತಿಂಡಿಗಳು ಮತ್ತು ನಮ್ಕೀನ್ ತಯಾರಕರ ಒಕ್ಕೂಟದ ಪ್ರಕಾರ, ಈ ಉದ್ಯಮವು ದೇಶದಲ್ಲಿ ಒಂದು ಕೋಟಿಗೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ. ಪ್ರತಿ ವರ್ಷ 50,000 ಕೋಟಿ ಮೌಲ್ಯದ ಉಪ್ಪು ತಿಂಡಿಗಳು ದೇಶದಲ್ಲಿ ಮಾರಾಟವಾಗುತ್ತವೆ. ಮಧ್ಯಪ್ರದೇಶ ನಗರದಲ್ಲಿ ಸುಮಾರು 1,500 ಸಣ್ಣ ಮತ್ತು ದೊಡ್ಡ ಉತ್ಪಾದನಾ ಘಟಕಗಳಿರುವುದರಿಂದ ಇಂದೋರ್ ದೇಶದ ಪ್ರಮುಖ ಕೇಂದ್ರವಾಗಿದೆ.

ಇಂದೋರ್‌ನ ಮಿಷ್ಠನ್ ಕ್ರೇತಾ ಎವಮ್ ವಿಕ್ರೇತಾ ಕಲ್ಯಾಣ್ ಸಂಘದ ಕಾರ್ಯದರ್ಶಿ ಔನ್ರಾಗ್ ಬೋತ್ರಾ, "ರಕ್ಷಾಬಂಧನ ಹಬ್ಬದ ಸಮಯದಲ್ಲಿ ತಿಂಡಿಗಳ ಮಾರಾಟ ಹೆಚ್ಚಾಗಿದೆ ಮತ್ತು ಮುಂಬರುವ ದೀಪಾವಳಿ ಹಬ್ಬದ ಸಮಯದಲ್ಲಿ ಇದು ಮತ್ತಷ್ಟು ಜಿಗಿಯುವ ನಿರೀಕ್ಷೆಯಿದೆ" ಎಂದು ಹೇಳಿದರು.(ಪಿಟಿಐ)

English summary

Sweets-snacks trade picks up this festive season in India, likely to touch all-time high Rs 1.25 lakh cr: Manufacturers body

As markets are regaining the traditional excitement this festive season after lacklustre sales during the COVID-19 pandemic, the trade of sweets and namkeen (snacks) in the current financial year is likely to reach an all-time high of Rs 1.25 lakh crore, says an industry body representative.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X