For Quick Alerts
ALLOW NOTIFICATIONS  
For Daily Alerts

ಬಾಯ್ಕಟ್ ಚೀನಾ; ಭಾರತದ ಎಂಎಸ್‌ಎಂಇಗಳಿಗೆ ಲಾಭ ದೊರೆಯುತ್ತಿಲ್ಲ

|

ನವದೆಹಲಿ, ಜುಲೈ 13: ಭಾರತ ಮತ್ತು ಚೀನಾದ ಗಡಿ ಉದ್ವಿಗ್ನತೆ ಉಂಟಾದ ನಂತರ ಭಾರತದಲ್ಲಿ ಚೀನಾ ವಸ್ತುಗಳನ್ನು ನಿಷೇಧಿಸುವ ಬಗ್ಗೆ ವ್ಯಾಪಕ ಚರ್ಚೆಗಳು ಆಗುತ್ತಿವೆ ಅಲ್ಲಲ್ಲಿ ಅಭಿಯಾನಗಳೂ ಕೂಡ ಆರಂಭವಾಗಿವೆ.

 

ಚೀನಾದ ಆಮದು ತಗ್ಗಿದರೆ ಭಾರತದ ಲಕ್ಷಾಂತರ ಅತಿ ಸಣ್ಣ, ಸಣ್ಣ, ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಅನುಕೂಲ ಆಗಲಿದೆ. ಇದರಿಂದ ಆ ವಲಯದ ಬೆಳವಣಿಗೆಗೆ ಸಹಾಯಕವಾಗಲಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಸ್ವತಃ ಎಂಎಸ್‌ಎಂಇಗಳ ಸಚಿವ ನಿತಿನ್ ಗಡ್ಕರಿ ಕೂಡ ಈ ಮಾತನ್ನು ಪುನರುಚ್ಚಿಸಿದ್ದರು.

ಆದರೆ ಈ ಸಂಗತಿ ಎಂಎಸ್‌ಎಂಇಗಳಿಗೆ ಹೊಸ ವ್ಯಾಪಾರ ಅವಕಾಶಗಳ ವಿಷಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಹೊಸ ಒಪ್ಪಂದಗಳನ್ನು ಪಡೆಯುತ್ತಿಲ್ಲ

ಹೊಸ ಒಪ್ಪಂದಗಳನ್ನು ಪಡೆಯುತ್ತಿಲ್ಲ

ಕ್ರೆಡಿಟ್ ರೇಟಿಂಗ್ ಏಜೆನ್ಸಿ ಕೇರ್ ರೇಟಿಂಗ್ಸ್ ಇತ್ತೀಚೆಗೆ ಸಮೀಕ್ಷೆ ನಡೆಸಿದ 345 ಎಂಎಸ್‌ಎಂಇಗಳ ಸಮೀಕ್ಷೆಯಲ್ಲಿ ಶೇ 79 ರಷ್ಟು ಎಂಎಸ್‌ಎಂಇಗಳು ಚೀನಾದ ಸರಕುಗಳ ಆಮದು ಮತ್ತು ಬಳಕೆಯನ್ನು ಬಹಿಷ್ಕರಿಸುವ ಹೊರತಾಗಿಯೂ ದೊಡ್ಡ ಉತ್ಪಾದಕರಿಂದ ಹೊಸ ಒಪ್ಪಂದಗಳನ್ನು ಪಡೆಯುತ್ತಿಲ್ಲ ಎಂದು ತಿಳಿದು ಬಂದಿದೆ.

12 ತಿಂಗಳುಗಳು ಅಥವಾ ಹೆಚ್ಚಿನ ಸಮಯ ಬೇಕಾಗುತ್ತದೆ

12 ತಿಂಗಳುಗಳು ಅಥವಾ ಹೆಚ್ಚಿನ ಸಮಯ ಬೇಕಾಗುತ್ತದೆ

65 ಪ್ರತಿಶತದಷ್ಟು ಎಂಎಸ್‌ಎಂಇಗಳು ತಮ್ಮ ವ್ಯವಹಾರವು ಸಾಮಾನ್ಯ ಸ್ಥಿತಿಗೆ ಬರಲು 12 ತಿಂಗಳುಗಳು ಅಥವಾ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಆದರೆ, ಅರ್ಧದಷ್ಟು ಮಂದಿ ಪ್ರತಿಕ್ರಿಯಿಸಿದವರು ಮುಂದಿನ ಆರು ತಿಂಗಳಲ್ಲಿ ತಮ್ಮ ವ್ಯವಹಾರವು ಸುಧಾರಣೆಯಾಗಲಿದೆ ಎಂದು ಆಶಿಸಿದ್ದಾರೆ. ಕೋವಿಡ್ ಮತ್ತು ಲಾಕ್‌ಡೌನ್ ಮಧ್ಯೆ ಎಂಎಸ್‌ಎಂಇಗಳು ಗರಿಷ್ಠ ತೊಂದರೆ ಪಡೆದಿವೆ, ಏಕೆಂದರೆ ಅವುಗಳಲ್ಲಿ ಹೆಚ್ಚಿನವು ಸ್ಥಗಿತಗೊಳಿಸುವಿಕೆ ಅಥವಾ ನಗಣ್ಯ ಕಾರ್ಯಾಚರಣೆಗಳನ್ನು ಅನುಭವಿಸಿವೆ. ಇದು ವೇತನ ಕಡಿತ ಮತ್ತು ಉದ್ಯೋಗಿಗಳ ವಜಾಗಳಿಗೆ ಕಾರಣವಾಗಿದೆ. ಕಳೆದ ಮೂರು ತಿಂಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಆದಾಯ ನಷ್ಟವನ್ನು ಎದುರಿಸಿದೆ. ಅಲ್ಲದೆ, ಶೇಕಡಾ 60 ಕ್ಕಿಂತ ಹೆಚ್ಚು ಜನರು ತಮ್ಮ ಸಿಬ್ಬಂದಿಗೆ ಪೂರ್ಣ ವೇತನವನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಒಂದು ಅವಕಾಶವಾಗಿ ಪಡೆದುಕೊಳ್ಳಲಿ
 

ಒಂದು ಅವಕಾಶವಾಗಿ ಪಡೆದುಕೊಳ್ಳಲಿ

ಚೀನಾ ಎದುರಿಸುತ್ತಿರುವ ಪ್ರಸ್ತುತ ಬಿಕ್ಕಟ್ಟಿನ ಲಾಭವನ್ನು ಒಂದು ಅವಕಾಶವಾಗಿ ಪಡೆದುಕೊಳ್ಳುವಂತೆ ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಕೂಡ ಎಂಎಸ್‌ಎಂಇಗಳನ್ನು ಒತ್ತಾಯಿಸುತ್ತಿದ್ದಾರೆ. ಕೆಲವು ದೇಶಗಳು ತಮ್ಮ ಹೂಡಿಕೆಗಳನ್ನು ಚೀನಾದಿಂದ ಹಿಂದೆ ಸರಿಸಲು ನೋಡುತ್ತಿರುವುದರಿಂದ ಉದ್ಯಮಗಳಿಂದ ಹೂಡಿಕೆಗಳನ್ನು ಆಕರ್ಷಿಸಲು ಎಂಎಸ್ಎಂಇಗಳು ಮುಂದೆ ಬರಬೇಕು ಎಂದು ಎಂದು ಗಡ್ಕರಿ ಹೇಳಿದ್ದರು

collateral-free ಸಾಲ

collateral-free ಸಾಲ

ಸಮೀಕ್ಷೆಯ ಪ್ರಕಾರ, ಸುಮಾರು 70 ಪ್ರತಿಶತದಷ್ಟು ಎಂಎಸ್‌ಎಂಇಗಳು collateral-free ಸಾಲಕ್ಕಾಗಿ ಬ್ಯಾಂಕುಗಳನ್ನು ಸಂಪರ್ಕಿಸಿದ್ದಾರೆ. ಮೇ ತಿಂಗಳಲ್ಲಿ ಪಿಎಂ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜಿನ ಭಾಗವೇ collateral-free ಸಾಲ ಯೋಜನೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಯೋಜನೆಯಡಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಜುಲೈ 4 ರ ವೇಳೆಗೆ 56,091.18 ಕೋಟಿ ರೂ. ಮಂಜೂರಾದ 36,28,444 ಖಾತೆಗಳಲ್ಲಿ 15,24,691 ಎಂಎಸ್‌ಎಂಇ ಖಾತೆಗಳಿಗೆ ಈ ಮೊತ್ತವನ್ನು ವಿತರಿಸಲಾಗಿದೆ.

English summary

There Is No Massive Significant Of Boycott China Benefits For Indian MSMEs

There Is No Massive Significant Of Boycott China Benefits For Indian MSMEs
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X