For Quick Alerts
ALLOW NOTIFICATIONS  
For Daily Alerts

10 ಕೋಟಿ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿ ಡಾರ್ಕ್ ವೆಬ್ ನಲ್ಲಿ ಮಾರಾಟ

By ಅನಿಲ್ ಆಚಾರ್
|

ದೇಶದ ಹತ್ತಿರ ಹತ್ತಿರ 10 ಕೋಟಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿಯು ಡಾರ್ಕ್ ವೆಬ್ ನಲ್ಲಿ ಮಾರಾಟ ಆಗಿದೆ ಎಂಬ ಸಂಗತಿಯನ್ನು ಸ್ವತಂತ್ರ ಸೈಬರ್ ಸುರಕ್ಷತೆ ಸಂಶೋಧಕರಾದ ರಾಜಶೇಖರ್ ರಜಹರಿಯಾ ಭಾನುವಾರ ಹೇಳಿದ್ದಾರೆ. ಆದರೆ ಎಷ್ಟು ಮೊತ್ತಕ್ಕೆ ಮಾರಾಟ ಆಗಿದೆ ಅನ್ನೋದನ್ನ ಅವರು ತಿಳಿಸಿಲ್ಲ.

ಬೆಂಗಳೂರು ಮೂಲದ ಪೇಮೆಂಟ್ ಗೇಟ್ ವೇ Juspay ಸರ್ವರ್ ಮೂಲಕ ಡಾರ್ಕ್ ವೆಬ್ ಗೆ ಈ ಮಾಹಿತಿಯ ಸೋರಿಕೆ ಆಗಿದೆ ಎಂದು ಅವರು ಹೇಳಿದ್ದಾರೆ. ಇತ್ತ ಐಎಎನ್ ಎಸ್ ಮಾತನಾಡಿರುವ Juspay, ಸೈಬರ್ ದಾಳಿಯ ವೇಳೆ ಯಾವುದೇ ಕಾರ್ಡ್ ಮಾಹಿತಿ ಅಥವಾ ಹಣಕಾಸು ವಿವರ ಸೋರಿಕೆ ಆಗಿಲ್ಲ. ಈಗ ವರದಿ ಆಗಿರುವಂತೆ ಸಂಖ್ಯೆ 10 ಕೋಟಿಯಷ್ಟಿಲ್ಲ ಎಂದಿದೆ.

ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಇದ್ರೆ ಮೊದಲು ಡಿಲೀಟ್ ಮಾಡಿ: ಇಲ್ಲದಿದ್ರೆ ನಿಮ್ಮ ಹಣ ಗಾಯಬ್ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಇದ್ರೆ ಮೊದಲು ಡಿಲೀಟ್ ಮಾಡಿ: ಇಲ್ಲದಿದ್ರೆ ನಿಮ್ಮ ಹಣ ಗಾಯಬ್

"ಆಗಸ್ಟ್ 18, 2020ರಂದು ನಮ್ಮ ಸರ್ವರ್ ಮಾಹಿತಿಯನ್ನು ಕದಿಯಲು ಪ್ರಯತ್ನ ಮಾಡಿರುವುದು ಕಂಡುಬಂತು. ಅದು ಪ್ರಗತಿಯಲ್ಲಿ ಇರುವಾಗಲೇ ತಡೆಯಲಾಯಿತು. ಯಾವುದೇ ಕಾರ್ಡ್ ಸಂಖ್ಯೆ, ಹಣಕಾಸು ಕ್ರೆಡೆನ್ಷಿಯಲ್ಸ್, ವಹಿವಾಟಿನ ಮಾಹಿತಿಯು ಬಹಿರಂಗವಾಗಿಲ್ಲ," ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

10 ಕೋಟಿ ಕ್ರೆಡಿಟ್, ಡೆಬಿಟ್ ಕಾರ್ಡ್ ದಾರರ ಮಾಹಿತಿ ಮಾರಾಟ

ಆದರೆ, ರಜಹರಿಯಾ ಹೇಳುವುದೇ ಬೇರೆ. ಡಾರ್ಕ್ ವೆಬ್ ನಲ್ಲಿ ಬಿಟ್ ಕಾಯಿನ್ ಮೂಲಕವಾಗಿ ಹಣ ಪಡೆದು, ಮಾರಾಟ ಮಾಡಲಾಗಿದೆ. ಆದರೆ ಎಷ್ಟು ಮೊತ್ತಕ್ಕೆ ಎಂಬುದು ಗೊತಾಗಿಲ್ಲ. ಈ ಮಾಹಿತಿಗಾಗಿ ಹ್ಯಾಕರ್ ಗಳನ್ನು ಟೆಲಿಗ್ರಾಂ ಮೂಲಕ ಕೂಡ ಸಂಪರ್ಕಿಸುತ್ತಿದ್ದಾರೆ. 10 ಕೋಟಿ ಕಾರ್ಡ್ ದಾರರು ಅಪಾಯದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೆಲವು ಫೋನ್ ನಂಬರ್ ಮತ್ತು ಇಮೇಲ್ ವಿಳಾಸ ಸೋರಿಕೆ ಆಗಿವೆ. ಆದರೆ ಅದಕ್ಕೆ ಯಾವ ಬೆಲೆಯೂ ಇಲ್ಲ ಎಂದು Juspay ಕಂಪೆನಿ ಹೇಳುತ್ತಿದೆ. 2012ರಲ್ಲಿ ಆರಂಭವಾದ Juspay ಕಳೆದ ವರ್ಷ 21.6 ಮಿಲಿಯನ್ ಯುಎಸ್ ಡಿ ಹಣ ಸಂಗ್ರಹ ಮಾಡಿದೆ.

English summary

10 Crore Indian Debit, Credit Card Data Selling On Dark Web, According To Report

According to report, 10 crore Indian debit, card data selling on dark web.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X