For Quick Alerts
ALLOW NOTIFICATIONS  
For Daily Alerts

ವಿಶ್ವದ ಅತ್ಯಂತ ದುಬಾರಿ ಟಾಪ್‌ 10 ಮನೆಗಳು, ಅಂಬಾನಿಯ ಆ್ಯಂಟಿಲಾಗೆ ಎಷ್ಟನೇ ಸ್ಥಾನ?

|

ಜಗತ್ತಿನಲ್ಲಿ ನೂರಾರು ಸಂಖ್ಯೆಯಲ್ಲಿ ಶತಕೋಟ್ಯಧಿಪತಿಗಳಿದ್ದಾರೆ. ಭಾರತದಲ್ಲೇ 138 ಜನರು ಸಾವಿರಾರು ಕೋಟಿಯ ಒಡೆಯರಾಗಿದ್ದಾರೆ. ಇವರು ಎದ್ದರೂ, ಕೂತರು ಸುದ್ದಿಯಾಗ್ತಿರುತ್ತೆ. ಏಕೆಂದರೆ ಅವರ ಖರೀದಿಯ ಸಾಮರ್ಥ್ಯವೇ ಅಂತಹುದ್ದು.

ವಿಶ್ವದ ಶ್ರೀಮಂತ ವ್ಯಕ್ತಿ ಅಮೆಜಾನ್ ಸಿಇಓ ಜೆಫ್‌ ಬೇಜೋಸ್ ಕಳೆದ ವರ್ಷವಷ್ಟೇ 1200 ಕೋಟಿ (165 ಮಿಲಿಯನ್ ಡಾಲರ್) ಬೆಲೆ ಬಾಳುವ ಮನೆಯನ್ನು ಖರೀದಿಸಿದ್ರು. ಇದು ಕೂಡ ವಿಶ್ವದ ಅತ್ಯಂತ ದುಬಾರಿ ಮನೆಯ ಲಿಸ್ಟ್‌ಗೆ ಸೇರಿತ್ತು. ಒಂಭತ್ತು ಎಕರೆಯಷ್ಟು ವಿಸ್ತೀರ್ಣದಲ್ಲಿರುವ ವಿಲಾಸಿ ಎಸ್ಟೇಟ್‌ಗೆ ಬೇಜೋಸ್ ಭಾರೀ ಹಣ ಕೊಟ್ಟು ಖರೀದಿಸಿದ್ದು ಭಾರೀ ಸುದ್ದಿಯಾಗಿತ್ತು.

ಹಾಗಿದ್ದರೆ ವಿಶ್ವದ ಟಾಪ್ 10 ದುಬಾರಿ ಮನೆಗಳ ಲಿಸ್ಟ್‌ನಲ್ಲಿ ಯಾವೆಲ್ಲಾ ಇವೆ. ಭಾರತದ ಬಿಲಿಯನೇರ್‌ಗಳಿಗೇನಾದ್ರೂ ಸ್ಥಾನ ಇದ್ಯಾ? ಎಂಬುದರ ಕುರಿತು ಮಾಹಿತಿ ಈ ಕೆಳಗೆ ನೀಡಲಾಗಿದೆ.

ನಂಬರ್ 10ನಲ್ಲಿ ಜೆಫ್ ಬೇಜೋಸ್ ಮನೆ

ನಂಬರ್ 10ನಲ್ಲಿ ಜೆಫ್ ಬೇಜೋಸ್ ಮನೆ

ಮನೆಯ ಅಂದಾಜು ಮೌಲ್ಯ : 1,200 ಕೋಟಿ ರುಪಾಯಿ

ಡೇವಿಡ್ ಜೆಫೆನ್ ಎಂಬ ಶ್ರೀಮಂತ ವ್ಯಕ್ತಿಯಿಂದ ಅತ್ಯಂತ ದುಬಾರಿ ಮನೆಯನ್ನು ಜೆಫ್ ಬೇಜೋಸ್ ತ 165 ಮಿಲಿಯನ್ ಅಮೆರಿಕನ್ ಡಾಲರ್(ಭಾರತದ ರುಪಾಯಿಗಳಲ್ಲಿ ಸುಮಾರು 1200 ಕೋಟಿ) ಕೊಟ್ಟು ಖರೀದಿ ಮಾಡಿದ್ದಾರೆ.

ಜೆಫ್‌ ಬೇಜೋಸ್‌ನ ಒಟ್ಟು ಆಸ್ತಿಯ 8 ಪರ್ಸೆಂಟ್‌ನಷ್ಟು ಬೆಲೆಬಾಳುವ ಈ ಮನೆ ಕ್ಯಾಲಿಫೋರ್ನಿಯಾದ ಲಾಸ್ ಏಂಜಲ್ಸ್‌ನಲ್ಲಿದೆ. 9 ಎಕರೆ ವಿಸ್ತೀರ್ಣದ ಈ ಎಸ್ಟೇಟ್‌ನಲ್ಲಿ ಟೆನಿಸ್ ಕೋರ್ಟ್, ಅತಿಥಿ ಗೃಹಗಳು, ಗಾಲ್ಫ್‌ ಕೋರ್ಸ್, ದೊಡ್ಡ ಬಂಗಲೆ ಮತ್ತು ಟೆರೇಸ್ ಒಳಗೊಂಡಿದೆ. ಜೊತೆಗೆ ಅತ್ಯಂತ ದುಬಾರಿ ವಸ್ತುಗಳನ್ನು ಬಳಸಿ ಮನೆಯನ್ನು ಸಿಂಗಾರಗೊಳಿಸಲಾಗಿದೆ.

 

1200 ಕೋಟಿ ಬೆಲೆ ಬಾಳುವ ಮನೆ ಖರೀದಿಸಿದ ಜೆಫ್ ಬೇಜೋಸ್1200 ಕೋಟಿ ಬೆಲೆ ಬಾಳುವ ಮನೆ ಖರೀದಿಸಿದ ಜೆಫ್ ಬೇಜೋಸ್

ನಂಬರ್ 9ನಲ್ಲಿ 'ಪ್ರೀತಿಯ ಅರಮನೆ'

ನಂಬರ್ 9ನಲ್ಲಿ 'ಪ್ರೀತಿಯ ಅರಮನೆ'

ಮನೆಯ ಅಂದಾಜು ಮೌಲ್ಯ : 1,425 ಕೋಟಿ ರುಪಾಯಿ


ಅಮೆರಿಕಾದ ಅತ್ಯಂತ ದುಬಾರಿ ಮನೆಯಾದ ಪಲಾಜ್ಹೊ ಡಿ ಅಮೋರ್ ವಿಶ್ವದ ದುಬಾರಿ ಮನೆಗಳಲ್ಲಿ ಒಂದಾಗಿದೆ. ಪಲಾಜ್ಹೊ ಡಿ ಅಮೋರ್ ಅಂದರೆ ಪ್ರೀತಿಯ ಅರಮನೆ ಎಂದರ್ಥ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲ್ಸ್‌ನಲ್ಲಿರುವ ಈ ಮನೆಯ ಮೌಲ್ಯ 195 ಮಿಲಿಯನ್ ಡಾಲರ್‌ (ಭಾರತ ರುಪಾಯಿಗಳಲ್ಲಿ 1,425 ಕೋಟಿ ).

ಬಿಲಿಯನೇರ್ ರಿಯಲ್ ಎಸ್ಟೇಟ್ ಹೂಡಿಕೆದಾರ ಜೆಫ್ ಗ್ರೀನ್ ಅವರ ಈ ಮನೆ ಕಳೆದ ವರ್ಷ ನವೆಂಬರ್ 6ರಂದು ಮಾರುಕಟ್ಟೆ ಮೌಲ್ಯ 195 ಮಿಲಿಯನ್ ಅಮೆರಿಕನ್ ಡಾಲರ್‌ ತಲುಪಿದೆ.

 

ನಂಬರ್ 8 'ಎಲಿಸನ್ ಎಸ್ಟೇಟ್'

ನಂಬರ್ 8 'ಎಲಿಸನ್ ಎಸ್ಟೇಟ್'

ಮನೆಯ ಅಂದಾಜು ಮೌಲ್ಯ : 1,463 ಕೋಟಿ ರುಪಾಯಿ

ಕ್ಯಾಲಿಫೋರ್ನಿಯಾದ ವುಡ್‌ಸೈಡ್‌ನಲ್ಲಿರುವ ಎಲಿಸನ್ ಎಸ್ಟೇಟ್ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ 8ನೇ ಸ್ಥಾನ ಹೊಂದಿದೆ. ಒರಾಕಲ್‌ ಸಹ ಸಂಸ್ಥಾಪಕ ಮತ್ತು ಮಾಜಿ ಸಿಇಒ ಆಗಿರುವ ಲಾರಿ ಎಲಿಸನ್‌ ಮನೆ ಇದಾಗಿದ್ದು ಅಂದಾಜು ಮಾರುಕಟ್ಟೆ ಮೌಲ್ಯ 200 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 1,463 ಕೋಟಿ).

 

ನಂಬರ್ 7 'ಫೋರ್ ಫೇರ್‌ಫೀಲ್ಡ್‌ ಪೊನ್ಡ್'

ನಂಬರ್ 7 'ಫೋರ್ ಫೇರ್‌ಫೀಲ್ಡ್‌ ಪೊನ್ಡ್'

ಮನೆಯ ಅಂದಾಜು ಮೌಲ್ಯ : 1,813 ಕೋಟಿ ರುಪಾಯಿ

ಅಮೆರಿಕಾದ ಖ್ಯಾತ ಉದ್ಯಮಿ ಇರಾ ಲಿಯಾನ್ ರೆನ್ನರ್ಟ್‌ ಅತ್ಯಂತ ದುಬಾರಿ ಮನೆಯಾಗಿರುವ ಫೋರ್ ಫೇರ್‌ಫೀಲ್ಡ್‌ ಪೊನ್ಡ್ ಅಮೆರಿಕಾದ ನ್ಯೂಯಾರ್ಕ್‌ನಲ್ಲಿದೆ. 91 ಅಡಿ ಉದ್ದದ ಡೈನಿಂಗ್ ಹಾಲ್, ಬಾಸ್ಕೆಟ್ ಬಾಲ್ ಕೋರ್ಟ್, ಎರಡು ಟೆನಿಸ್ ಕೋರ್ಟ್‌ಗಳು, 29 ಬೆಡ್‌ರೂಂಗಳು ಮತ್ತು 39 ಬಾತ್‌ರೂಂಗಳಿಗೆ.

ಇರಾ ರೆನ್ನರ್ಟ್‌ರ ಈ ಮನೆಯ ಅಂದಾಜು ಮೌಲ್ಯ 248 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 1,813 ಕೋಟಿ)

 

ನಂಬರ್ 6  'ದಿ ಒಡಿಯನ್ ಟವರ್ ಪೆಂಟ್‌ ಹೌಸ್‌'

ನಂಬರ್ 6 'ದಿ ಒಡಿಯನ್ ಟವರ್ ಪೆಂಟ್‌ ಹೌಸ್‌'

ಮನೆಯ ಅಂದಾಜು ಮೌಲ್ಯ : 2,413 ಕೋಟಿ ರುಪಾಯಿ

ದಿ ಒಡಿಯನ್ ಟವರ್ ಪೆಂಟ್‌ ಹೌಸ್‌ ಜಗತ್ತಿನ ಅತ್ಯಂತ ದುಬಾರಿ ಮನೆಯಲ್ಲಿ ಒಂದಾಗಿದೆ. ಯೂರೋಪ್‌ನ ಮೊನಾಕೊದಲ್ಲಿರುವ ಈ ಮನೆಯು ಡಬಲ್ ಗಗನಚುಂಬಿ ಕಟ್ಟಡವಾಗಿದೆ. 1980ರ ನಂತರ ನಗರದಲ್ಲಿ ನಿರ್ಮಾಣದವಾದ ಮೊದಲ ಎತ್ತರದ ಕಟ್ಟಡ ಇದಾಗಿದೆ.

170 ಮೀಟರ್ ಎತ್ತರದ ಈ ಮನೆಯ ಅಂದಾಜು ಮಾರುಕಟ್ಟೆ ಮೌಲ್ಯ 330 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 2,413 ಕೋಟಿ)

 

ನಂಬರ್ 5 'ಬಬಲ್ ಅರಮನೆಗಳು'

ನಂಬರ್ 5 'ಬಬಲ್ ಅರಮನೆಗಳು'

ಮನೆಯ ಅಂದಾಜು ಮೌಲ್ಯ : 2,853 ಕೋಟಿ ರುಪಾಯಿ

ಜಗತ್ತಿನ ಅತಿ ದುಬಾರಿ ಮನೆಯ ಮಾಲೀಕರಲ್ಲಿ ಫ್ರಾನ್ಸ್‌ನ ಖ್ಯಾತ ಇಟಾಲಿಯನ್ ಫ್ಯಾಶನ್ ಡಿಸೈನರ್ ಪೀರ್ ಕಾರ್ಡಿನ್ ಕೂಡ ಒಬ್ಬರು. ಫ್ರಾನ್ಸ್‌ನಲ್ಲಿರುವ ಈ ಬಬಲ್ ಅರಮನೆಗಳ ಅಂದಾಜು ಮಾರುಕಟ್ಟೆ ಮೌಲ್ಯ ಬರೋಬ್ಬರಿ 390 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 2,853 ಕೋಟಿ).

 

ನಂಬರ್ 4 'ವಿಲ್ಲಾ ಲೆಸ್ ಕೋಡ್ರೆಸ್'

ನಂಬರ್ 4 'ವಿಲ್ಲಾ ಲೆಸ್ ಕೋಡ್ರೆಸ್'

ಮನೆಯ ಅಂದಾಜು ಮೌಲ್ಯ : 3,298 ಕೋಟಿ ರುಪಾಯಿ

ಫ್ರಾನ್ಸ್‌ನಲ್ಲಿರುವ ವಿಲ್ಲಾ ಲೆಸ್ ಕ್ರೋಡೆಸ್ ಬೆವರೇಜ್ ಕಂಪನಿಯಾದ ಕ್ಯಾಂಪರಿ ಗ್ರೂಪ್ ಮಾಲೀಕತ್ವದಲ್ಲಿದೆ. ಜಗತ್ತಿನ ಅತಿ ದುಬಾರಿ ಮನೆಗಳಲ್ಲಿ ಇದಕ್ಕೆ ನಾಲ್ಕನೇ ಸ್ಥಾನವಿದ್ದು ಇದರ ಮಾರುಕಟ್ಟೆ ಮೌಲ್ಯ 450 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 3,298 ಕೋಟಿ).

 

ನಂಬರ್ 3 'ವಿಲ್ಲಾ ಲಿಯೋಪೋಲ್ಡಾ'

ನಂಬರ್ 3 'ವಿಲ್ಲಾ ಲಿಯೋಪೋಲ್ಡಾ'

ಮನೆಯ ಅಂದಾಜು ಮೌಲ್ಯ : 5,500 ಕೋಟಿ ರುಪಾಯಿ

ಫ್ರಾನ್ಸ್‌ನಲ್ಲಿ 18 ಎಕರೆ ಜಾಗದಲ್ಲಿರುವ ವಿಲ್ಲಾ ಲಿಯೋಪೋಲ್ಡಾ ಕೂಡ ವಿಶ್ವದ ಅತ್ಯಂತ ದುಬಾರಿ ಮನೆಯಾಗಿದ್ದು, ಬ್ರೆಜಿಲ್ ದೇಶದ ಬಿಲಿಯನೇರ್, ಫಿಲೋಸಾಫಿಸ್ಟ್ ಲಿಲ್ಲಿ ಸಫ್ರಾ ಇದರ ಮಾಲೀಕರು. 85 ವರ್ಷ ವಯಸ್ಸಿನ ಈಕೆಯ ಮನೆ 'ವಿಲ್ಲಾ ಲಿಯೋಪೋಲ್ಡಾ' ಅಂದಾಜು ಮೌಲ್ಯ 750 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 5,500 ಕೋಟಿ).

 

ನಂಬರ್ 2 ' ಅಂಬಾನಿಯ ಆ್ಯಂಟಿಲಾ'

ನಂಬರ್ 2 ' ಅಂಬಾನಿಯ ಆ್ಯಂಟಿಲಾ'

ಮನೆಯ ಅಂದಾಜು ಮೌಲ್ಯ : 7,339 ಕೋಟಿ ರುಪಾಯಿ

ಏಷ್ಯಾದ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ವಿಶ್ವದಲ್ಲೇ ಅತಿ ದುಬಾರಿಯ ಮನೆ ಹೊಂದಿದ್ದಾರೆ. ವಿಶ್ವದ ಟಾಪ್ 10 ದುಬಾರಿ ಮನೆಗಳಲ್ಲಿ ಮುಕೇಶ್ ಅಂಬಾನಿಯ ಆ್ಯಂಟಿಲಾ ಎರಡನೇ ಸ್ಥಾನದಲ್ಲಿದೆ.

27 ಅಂತಸ್ತಿನ ಈ ಬಂಗಲೆ 570 ಅಡಿ ಎತ್ತರದಲ್ಲಿದೆ. ಈ ಮನೆಯ ನಿರ್ವಹಣೆಗೆಂದೇ ಸುಮಾರು 600 ಜನರು ಕೆಲಸದವರಿದ್ದಾರೆ. ಈ ಮನೆಯ ಅಂದಾಜು ಮೌಲ್ಯ 1 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 7,339 ಕೋಟಿ).

 

ನಂಬರ್ 1 'ಬಕಿಂಗ್‌ಹ್ಯಾಮ್ ಪ್ಯಾಲೆಸ್'

ನಂಬರ್ 1 'ಬಕಿಂಗ್‌ಹ್ಯಾಮ್ ಪ್ಯಾಲೆಸ್'

ಅಂದಾಜು ಮೌಲ್ಯ: 21,470 ಕೋಟಿ ರುಪಾಯಿ

ಬಕಿಂಗ್‌ಹ್ಯಾಮ್ ಅರಮನೆ ಇಂಗ್ಲೆಂಡ್ ರಾಜಮನೆತನದ ಅಧಿಕೃತ ನಿವಾಸ. ಈ ಅರಮನೆಯಲ್ಲಿ 775 ಕೊಠಡಿಗಳು, 19 ಸಭಾಂಗಣಗಳು, 52 ಸ್ನಾನ ಗೃಹಗಳು, 188 ಸಿಬ್ಬಂದಿ ಕೊಠಡಿಗಳು, 92 ಕಚೇರಿಗಳು ಮತ್ತು 78 ಶೌಚಗೃಹಗಳಿವೆ.

ಇಂಗ್ಲೆಂಡ್ ಮನೆತನದ ರಾಯಲ್ ರೆಸಿಡೆನ್ಸಿ ಆಗಿರುವ ಈ ಪ್ಯಾಲೆಸ್‌ನ ಅಂದಾಜು ಮೌಲ್ಯ 2.9 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 21,470 ಕೋಟಿ).

 

English summary

10 Of The World's Most Expensive Homes

In this article explained world's top 10 most expensive homes
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X