For Quick Alerts
ALLOW NOTIFICATIONS  
For Daily Alerts

'ಬಿಜಲಿ'ಯಂಥ ಡೀಲ್, ಪಿವಿಆರ್ ಸಿನಿಮಾಸ್ ಷೇರುಗಳು ಏರಿಳಿತ

By Mahesh
|

ಮುಂಬೈ, ಜೂ.10: ಪಿವಿಆರ್ ಸಿನಿಮಾಸ್ ಸಂಸ್ಥೆಯ ಅಜಯ್ ಬಿಜ್ಲಿ ಅವರು ಡಿಎಲ್ಎಫ್ ಸಮೂಹ ಸಂಸ್ಥೆಯ ಡಿಟಿ ಸಿನಿಮಾವನ್ನು ಮಂಗಳವಾರ ಭಾರಿ ಮೊತ್ತಕ್ಕೆ ಖರೀದಿಸಿದ್ದು ಮನರಂಜನಾ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ. ಬುಧವಾರ ಪಿವಿಆರ್ ಸಂಸ್ಥೆ ಷೇರುಗಳು ಮೇಲಕ್ಕೇರಿ ಷೇರುದಾರರಿಗೆ ಸಂತಸ ತಂದಿದೆ.

500 ಕೋಟಿ ರು ಕೊಟ್ಟು ಡಿಟಿ ಸಿನಿಮಾಸ್ ಖರೀದಿಸಿದ ನಂತರ ಪಿವಿಆರ್ ಸಂಸ್ಥೆ ತೆಕ್ಕೆಗೆ ಈಗ 9,000 ಸೀಟುಗಳು ಅಧಿಕವಾಗಿ ಸೇರ್ಪಡೆಗೊಂಡಿದೆ. ಒಟ್ಟಾರೆ 44ನಗರಗಳಲ್ಲಿ 115 ಮಲ್ಟಿಪ್ಲೆಕ್ಸ್ ಗಳು ಹಾಗೂ 506 ಸ್ಕ್ರೀನ್ ಗಳನ್ನು ಈಗ ಪಿವಿಆರ್ ಹೊಂದಿದೆ.

'ಬಿಜಲಿ'ಯಂಥ ಡೀಲ್, ಪಿವಿಆರ್ ಸಿನಿಮಾಸ್ ಷೇರುಗಳು ಏರಿಳಿತ

2012ರಲ್ಲಿ ಸಿನಿಮ್ಯಾಕ್ಸ್ ಸಂಸ್ಥೆ ಜೊತೆ 395 ಕೋಟಿ ರು ಒಪ್ಪಂದ ಮಾಡಿಕೊಂಡು ಭಾರಿ ಡೀಲ್ ಕುದುರಿಸಿದ್ದ ಪಿವಿಆರ್ ಈಗ ಇದಕ್ಕಿಂತ ದೊಡ್ಡ ಮೊತ್ತ ಡೀಲ್ ಸಾಧಿಸಿದೆ.

ಪಿವಿಆರ್ ಹಾಗೂ ಡಿಎಲ್ ಎಫ್ ಯುಟಿಲಿಟಿಸ್ ಲಿ ನಡುವೆ ಮಂಗಳವಾರ ನಡೆದ ಒಪ್ಪಂದಕ್ಕೆ ಪಿವಿಆರ್ ಬೋರ್ಡ್ ಆಫ್ ಡೈರೆಕ್ಟರ್ಸ್ ಒಮ್ಮತ ಸೂಚಿಸಿದ್ದಾರೆ ಎಂದು ಬಿಎಸ್ ಇಗೆ ನೀಡಿದ ಹೇಳಿಕೆಯಲ್ಲಿದೆ.

ಬುಧವಾರ ಬೆಳಗ್ಗೆ ಶೇ 5.5 ರಷ್ಟು ಏರಿಕೆ ಕಂಡಿದ್ದ ಪಿವಿಆರ್ ಷೇರುಗಳು ಸಂಜೆ ವೇಳೆಗೆ ಶೇ 3.6 ರಷ್ಟು ಕುಸಿತ ಕಂಡಿದ್ದು ವಿಶೇಷವಾಗಿತ್ತು. ಬೆಳಗ್ಗೆ 699.90ರಂತೆ ಬಿಎಸ್ ಇನಲಿ ವಹಿವಾಟು ಆರಂಭಿಸಿದ ಪಿವಿಆರ್ ಷೇರುಗಳು ದಿನದ ಅಂತ್ಯಕ್ಕೆ 641.85 ರು ನಂತೆ ಕುಸಿತ ಕಂಡಿತ್ತು. ಎನ್ ಎಸ್ ಇನಲ್ಲಿ ಶೇ 3.22ರಷ್ಟು ಇಳಿಕೆ ಕಂಡು 645.20 ರು ನಂತೆ ವಹಿವಾಟು ಅಂತ್ಯಗೊಳಿಸಿತು. (ಪಿಟಿಐ)

English summary

PVR to Acquire DLFs DT Cinemas; Shares Up

Shares of multiplex operator PVR rallied 5.5 per cent on Wednesday, a day after it acquired real estate major DLF’s DT Cinemas for Rs. 500 crore.
Story first published: Wednesday, June 10, 2015, 16:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X