For Quick Alerts
ALLOW NOTIFICATIONS  
For Daily Alerts

ಭಾರತದ ನಂ.4 ಸಾಫ್ಟ್ ವೇರ್ ಕಂಪನಿಗೆ ಭಾರಿ ಪೆಟ್ಟು!

By Mahesh
|

ಮುಂಬೈ, ಅ.01: ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಎಚ್ ಸಿಎಲ್ ಟೆಕ್ನಾಲಜೀಸ್ ಗೆ ಗುರುವಾರ ಬೆಳಗ್ಗೆಯಿಂದಲೇ ಭಾರಿ ಪೆಟ್ಟು ಬೀಳುತ್ತಿದೆ. ಷೇರುಪೇಟೆಯಲ್ಲಿ ಕಂಪನಿಯ ಷೇರುಗಳು ನಿರಂತರವಾಗಿ ನೆಲಕಚ್ಚುತ್ತಿದ್ದು, ಶೇ 10 ರಿಂದ 15ರಷ್ಟು ಕುಸಿತ ಕಂಡು ಷೇರುದಾರರಿಗೆ ಆತಂಕ ಮೂಡಿಸಿದೆ.

ಸೆಪ್ಟೆಂಬರ್ ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ಲಾಭದ ನಿರೀಕ್ಷೆ ಕಷ್ಟ ಎಂಬ ಹೇಳಿಕೆ ಎಚ್ ಸಿಎಲ್ ಷೇರುಗಳ ಕುಸಿತಕ್ಕೆ ಕಾರಣವಾಗಿದೆ. ಬಿಎಸ್ ಇನಲ್ಲಿ 915.00 ರು ಬೆಲೆಯಂತೆ ವಹಿವಾಟು ಆರಂಭಿಸಿದ ಎಚ್ ಸಿಎಲ್ ಷೇರುಗಳು ಮಾರುಕಟ್ಟೆ ಮುಕ್ತಾಯದ ವೇಳೆಗೆ 858.50 ರು ನಂತೆ 123.65 ರು ಕಳೆದುಕೊಂಡು ಶೇ 12.59ರಷ್ಟು ಕುಸಿತ ಕಂಡಿದೆ. [ಎಚ್ ಸಿಎಲ್ ಸಂಸ್ಥೆಗೆ ಈ ವರ್ಷ ಶೇ 14ರಷ್ಟು ನಿವ್ವಳ ಲಾಭ]

ಭಾರತದ ನಂ.4 ಸಾಫ್ಟ್ ವೇರ್ ಕಂಪನಿಗೆ ಭಾರಿ ಪೆಟ್ಟು!

ಇದೇ ವೇಳೆ ಎನ್ ಎಸ್ ಇನಲ್ಲಿ 890ರುನಂತೆ ವಹಿವಾಟು ಆರಂಭಿಸಿ 858.80 ರು ನಂತೆ 123.35 ರು ಕಳೆದುಕೊಂಡು ಶೇ 12.56ರಷ್ಟು ಇಳಿಮುಖವಾಗಿದೆ. ಜುಲೈ ಜೂನ್ ಆರ್ಥಿಕ ವರ್ಷ ಮಾದರಿ ಬಳಸುವ ನೋಯ್ಡಾ ಮೂಲದ ಎಚ್ ಸಿಎಲ್ ಸಂಸ್ಥೆ ಅಕ್ಟೋಬರ್ ನಾಲ್ಕನೇ ವಾರದಲ್ಲಿ ತನ್ನ ಜುಲೈ -ಸೆಪ್ಟೆಂಬರ್ 2015 ತ್ರೈಮಾಸಿಕ ವರದಿಯನ್ನು ಪ್ರಕಟಿಸಲಿದೆ. [ಷೇರುಪೇಟೆಯಲ್ಲಿ ಯಾರಿಗೆ ಲಾಭ? ಯಾರಿಗೆ ನಷ್ಟ?]

ಅದಾಯ ಪ್ರಗತಿಯ ಮಾರ್ಗಸೂಚಿಯ ಬಗ್ಗೆ ಕೂಡಾ ಸಂಸ್ಥೆ ತಣ್ಣನೆಯ ಪ್ರತಿಕ್ರಿಯೆ ನೀಡಿರುವುದು ಗ್ರಾಹಕರನ್ನು ಕಂಗಾಲಿಗೆ ಈಡುಮಾಡಿದೆ. ಜೂನ್ 2015ರ ತ್ರೈಮಾಸಿಕದಂತೆ ಸಂಸ್ಥೆಯ ಆದಾಯ 4,465.50 ಕೋಟಿ ರು ನಷ್ಟಿದೆ. 2014-15ರಲ್ಲಿ 17,153.44 ಕೋಟಿ ರು ನಷ್ಟಿತ್ತು.

English summary

HCL Tech shares slump 15% on revenue growth concerns

Shares of IT services firm HCL Technologies on Thursday slumped 15 per cent after the company said it expects revenues for the September quarter to be “tepid”, impacted by adverse currency movement and issues with a client in the public services vertical.
Story first published: Thursday, October 1, 2015, 15:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X