For Quick Alerts
ALLOW NOTIFICATIONS  
For Daily Alerts

Q3ಗೆ ಮುನ್ನ ನೆಲ ಕಚ್ಚಿದ್ದ ಟಿಸಿಎಸ್ ಷೇರುಗಳು

By Mahesh
|

ಮುಂಬೈ, ಜ. 12: ಭಾರತದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಂಸ್ಥೆ ಷೇರುಗಳು ಮಂಗಳವಾರ (ಜನವರಿ 12) 52 ವಾರಗಳಲ್ಲೇ ಕಾಣದಷ್ಟು ಕೆಳ ಮಟ್ಟಕ್ಕೆ ಕುಸಿದಿದೆ.

ಮಂಗಳವಾರ 2,367.95 ರು ನಂತೆ ವಹಿವಾಟು ಆರಂಭಿಸಿದ ಟಿಸಿಎಸ್ ಷೇರುಗಳು ಇಂಟ್ರಾ ಡೇನಲ್ಲಿ 2,301.10 ರುಗೆ ಕುಸಿಯಿತು, ಇದು ಬಿಎಸ್ ಇಯಲ್ಲಿ 52 ವಾರಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣವಾಗಿದೆ. ದಿನದ ಅಂತ್ಯಕ್ಕೆ 2,324.05 ರು ಗೆ ಸ್ಥಿರವಾದ ಷೇರುಗಳ ಬೆಲೆ ಶೇ 1.65ರಷ್ಟು ಕುಸಿತ ಕಂಡಿದೆ.

Q3ಗೆ ಮುನ್ನ ನೆಲ ಕಚ್ಚಿದ್ದ ಟಿಸಿಎಸ್ ಷೇರುಗಳು
Tata Consultancy Services: Quotes, News
BSE 3831.25BSE Quote42.95 (-1.12%)
NSE 3831.05NSE Quote43.65 (-1.14%)

ಇದೇ ವೇಳೆ ಎನ್ ಎಸ್ ಇನಲ್ಲಿ 2,362.70 ರು ನಂತೆ ದಿನದ ವಹಿವಾಟು ಆರಂಭಿಸಿ ಇಂಟ್ರಾ ಡೇ ನಲ್ಲಿ 2,301.60 ರುಗೆ ಕುಸಿದು ದಿನದ ಅಂತ್ಯಕ್ಕೆ 2,327.05 ರು ನಂತೆ ಶೇ 1.49 ರಷ್ಟು ಇಳಿಕೆ ಕಂಡಿತು.

ಚೆನ್ನೈ ನಲ್ಲಿನ ಇತ್ತೀಚಿನ ಪ್ರವಾಹ ಪರಿಸ್ಥಿತಿ ಸಂಸ್ಥೆಯ ತ್ರೈಮಾಸಿಕ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಚೆನ್ನೈನಲ್ಲಿ ಟಿಸಿಎಸ್ ಸಂಸ್ಥೆ ಸುಮಾರು 65,000 ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ.

ಇದರ ಜೊತೆಗೆ ಯುಎಸ್, ಯುರೋಪಿನಲ್ಲಿ ಕ್ರಿಸ್ ಮಸ್, ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಮಾರುಕಟ್ಟೆ ಕೊಂಚ ಡಲ್ ಆಗುವುದು ಮಾಮೂಲಿ. ಟಿಸಿಎಸ್ ಸಂಸ್ಥೆ ಶೇ 16.2ರಷ್ಟು ಆಟ್ರಿಷನ್ ಪ್ರಮಾಣ ಹೊಂದಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಉಳಿದಂತೆ ಪೆರೋಟ್ ಸಿಸ್ಟಮ್ ಖರೀದಿ ಮೂಲಕ ಹೊಸ ಆರ್ಥಿಕ ವರ್ಷಕ್ಕೆ ಹೊಸ ಭರವಸೆ ನೀಡುವ ಸಾಧ್ಯತೆಯಿದೆ.(ಪಿಟಿಐ)

English summary

TCS shares slump ahead of Q3 results

Shares of TCS today slumped to its 52-week low level and finally settled for the day down nearly two per cent ahead of its third quarter earnings announcement.
Story first published: Tuesday, January 12, 2016, 17:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X