For Quick Alerts
ALLOW NOTIFICATIONS  
For Daily Alerts

ರೆಪೋ ದರ ಕಡತ: ಸಾಲ ಮಾಡಿ ತುಪ್ಪ ತಿನ್ನಲಡ್ಡಿಯಿಲ್ಲ

|

ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಹಣಕಾಸು ವರ್ಷದ ಆರಂಭದಲ್ಲಿ 25 ಮೂಲಾಂಕ ಕಡಿತ ಮಾಡಿದೆ. ಪರಿಣಾಮ ಗೃಹ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿ ಇನ್ನಷ್ಟು ಕಡಿಮೆಯಾಗಲಿದೆ. ಹೂಡಿಕೆಗೂ ಉತ್ತೇಜನ ಸಿಗಲಿದೆ ಎಂದು ಆರ್ ಬಿಐ ಗವರ್ನರ್ ರಘುರಾಂ ರಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. [ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?]

 

ಈ ಕಡಿತ ರೆಪೋ ದರವನ್ನು ಶೇ. 6.5ಕ್ಕೆ ಸೀಮಿತ ಮಾಡಿದೆ. ನಗದು ಮೀಸಲು ಅನುಪಾತದಲ್ಲಿ (ಸಿ ಆರ್ ಆರ್) ಯಾವ ಬದಲಾವಣೆಯನ್ನು ಮಾಡಲಾಗಿಲ್ಲ. ಶೇ. 4 ರ ಬಡ್ಡಿ ದರವನ್ನೇ ಕಾಯ್ದುಕೊಳ್ಳಲಾಗಿದೆ.

 
ರೆಪೋ ದರ ಕಡತ: ಸಾಲ ಮಾಡಿ ತುಪ್ಪ ತಿನ್ನಲಡ್ಡಿಯಿಲ್ಲ

2016 ರಲ್ಲಿ ಹಣದುಬ್ಬರ ಸಹ ಇಳಿಕೆ ಕಂಡಿದೆ. 5.69 ಇದ್ದ ಹಣದುಬ್ಬರ 5.2ಕ್ಕೆ ಬಂದು ನಿಂತಿದೆ. ಕೈಗಾರಿಕಾ ಅಭಿವೃದ್ಧಿಗೆ ಈ ಕಡಿತ ಇನ್ನು ಹೆಚ್ಚಿನ ನೆರವು ನೀಡಲಿದೆ ಎಂದು ಹೇಳಲಾಗಿದೆ.

ಬಡ್ಡಿ ದರ ಕಡಿತದ ಮಾಹಿತಿ ನೀಡಿದ ರಾಜನ್, ಕೆಲವೇ ದಿನಗಳಲ್ಲಿ ಬ್ಯಾಂಕ್ ಗಳು ಇದನ್ನು ಜಾರಿ ಮಾಡಲಿವೆ ಎಂದು ತಿಳಿಸಿದ್ದಾರೆ. 7 ನೇ ಹಣಕಾಸು ಆಯೋಗದ ಲೆಕ್ಕಾಚಾರಗಳನ್ನು ಇಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ.[ಮನೆ ಖರೀದಿಗೆ ಸೂಕ್ತ ಸಮಯ ಯಾವುದು?]

ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ.

English summary

RBI Cuts Repo Rates By 25 Basis Points; Keeps CRR Rates Unchanged

The Reserve Bank of India (RBI), as was largely expected cut the repo rate by 25 basis points in its Monetary policy meet, while holding the Cash Reserve Ratio (CRR) requirements for banks unchanged. Repo rates are interest rates at which the RBI lends money to banks in the country. Any cut in this rate, tends to lower interest rates in the economy, including deposit and lending rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X