For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ವಸತಿ ಬೇಡಿಕೆ ಹೆಚ್ಚಿರುವ 11 ನಗರಗಳು

By Siddu
|

ಭಾರತ ತುಂಬಾ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದ್ದು, ಎಲ್ಲ ರಂಗಗಳಲ್ಲಿ ಮಹತ್ತರ ಸಾಧನೆ ಮಾಡುತ್ತ ಮುನ್ನುಗ್ಗುತ್ತಿದೆ. ಹೀಗಾಗಿ ಎಲ್ಲಾ ರಂಗಗಳ ಬಗ್ಗೆ ಪಂಡಿತರು-ವಿಶ್ಲೇಷಕರು ಲೆಕ್ಕಾಚಾರ, ವಿಮರ್ಶೆ, ವರದಿ ಮಾಡುತ್ತಲೇ ಇರುತ್ತಾರೆ.

ಅದೇ ರೀತಿ ಮುಂದಿನ ಐದು ವರ್ಷಗಳಲ್ಲಿ ಯಾವ ನಗರಗಳಲ್ಲಿ ವಸತಿ ಬೇಡಿಕೆ ಹೆಚ್ಚಲಿದೆ ಎಂಬ ಲೆಕ್ಕಾಚಾರವೂ ಶುರುವಾಗಿದೆ.

ಆಸ್ತಿ ಸಲಹೆಗಾರರಾದ ಕುಶ್ಮನ್ ಮತ್ತು ವೇಕ್ಫೀಲ್ಡ್ (C&W) ಪ್ರಕಾರ ಮುಂದಿನ ಐದು ವರ್ಷಗಳಲ್ಲಿ (2016-2020) 9.44 ಲಕ್ಷ ಯುನಿಟ್ ವಸತಿ ಬೇಡಿಕೆ ಹೆಚ್ಚಲಿದೆ ಎಂದು ಹೇಳಿದ್ದು, ಭಾರತದ ಒಟ್ಟು ಹನ್ನೊಂದು ನಗರಗಳನ್ನು ಗುರುತಿಸಿದ್ದಾರೆ. ಸುರಕ್ಷಿತ ಮತ್ತು ಸುಭದ್ರ ನಗರಗಳ ಸ್ಥಾಪನೆಗಾಗಿ ಹಾಗೂ ವಸತಿ ಬೇಡಿಕೆ ಉತ್ತೇಜನಗೊಳಿಸಲು ಮೂಲಭೂತ ಸೌಕರ್ಯಗಳನ್ನು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

2016-20ರ ಅವಧಿಯಲ್ಲಿ ವಸತಿಗೆ ಹೆಚ್ಚು ಬೇಡಿಕೆ ಇರುವ ನಗರಗಳಲ್ಲಿ ಸೂರತ್ ಮೊದಲನೆ ಸ್ಥಾನದಲ್ಲಿದ್ದು, ಕೊಚ್ಚಿ, ವಿಶಾಖಪಟ್ಟಣಂ ನಂತರದ ಸ್ಥಾನದಲ್ಲಿವೆ. ಭಾರತದಲ್ಲಿ ವಸತಿಗೆ ಹೆಚ್ಚು ಬೇಡಿಕೆ ಇರುವ ಆ ಹನ್ನೊಂದು ನಗರಗಳ ವಿವರ ಇಲ್ಲಿದೆ.

ಸೂರತ್

ಸೂರತ್

ಹನ್ನೊಂದು ನಗರಗಳ ಪೈಕಿ ಸೂರತ್ ಮೊದಲನೆ ಸ್ಥಾನದಲ್ಲಿದೆ. ಸೂರತ್ ಗುಜರಾತಿನ ಪ್ರಸಿದ್ದ ವಾಣಿಜ್ಯಾತ್ಮಕ ನಗರವಾಗಿದೆ. ಇದು 2.3 ಲಕ್ಷ ಯುನಿಟ್ಸ್ ನಷ್ಟು ವಸತಿ ಬೇಡಿಕೆಯನ್ನು ಹೊಂದಿದೆ ಎಂದು ಅಧ್ಯಯನದಿಂದ ತಿಳಿದಿದೆ.

ಕೊಚ್ಚಿ

ಕೊಚ್ಚಿ

ವಸತಿ ಬೇಡಿಕೆ ಹೆಚ್ಚಿರುವ ನಗರಗಳ ಪೈಕಿ ಕೊಚ್ಚಿ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದ ಬಂದರು ನಗರವಾಗಿರುವ ಇದು ಕೇರಳ ರಾಜ್ಯದಲ್ಲಿದೆ. ಈ ನಗರ 1.18 ಲಕ್ಷ ಯುನಿಟ್ಸ್ ವಸತಿ ಬೇಡಿಕೆ ಹೊಂದಿದೆ.

ವಿಶಾಖಪಟ್ಟಣ
 

ವಿಶಾಖಪಟ್ಟಣ

ಮೂರನೇ ಸ್ಥಾನದಲ್ಲಿರುವ ವಿಶಾಖಪಟ್ಟಣ ಆಂದ್ರಪ್ರದೇಶದ ಪ್ರಮುಖ ಬಂದರು ಮತ್ತು ವಾಣಿಜ್ಯ ನಗರ. ಇಲ್ಲಿ ಅನೇಕ ಐಟಿ ಮತ್ತು ಅಂತರಾಷ್ಟ್ರೀಯ ಕಂಪನಿಗಳು ಇವೆ. ಈ ನಗರದಲ್ಲಿ 1 ಲಕ್ಷ ಯುನಿಟ್ಸ್ ನಷ್ಟು ವಸತಿ ಬೇಡಿಕೆ ಇದೆ.

ಲಕ್ನೋ

ಲಕ್ನೋ

ಲಕ್ನೋ ಉತ್ತರ ಪ್ರದೇಶದ ರಾಜಧಾನಿಯಾಗಿದ್ದು, ಅತಿದೊಡ್ಡ ನಗರವಾಗಿದೆ. ಜತೆಗೆ ಭಾರತದ ಬೃಹತ್ ಮೆಟ್ರೊಪಾಲಿಟನ್ ನಗರ ಆಗಿದೆ.
ಲಕ್ನೋ ನಗರ 89,600 ಯುನಿಟ್ಸ್ ವಸತಿ ಬೇಡಿಕೆಯನ್ನು ಹೊಂದಿದೆ.

ಜೈಪುರ

ಜೈಪುರ

ಜೈಪುರ ರಾಜಸ್ಥಾನದ ರಾಜಧಾನಿ ಹಾಗೂ ಇತಿಹಾಸ ಪ್ರಸಿದ್ದ ನಗರವಾಗಿದೆ. ಇದು ಪಿಂಕ್ ಸಿಟಿ ಎಂದೇ ಪ್ರಸಿದ್ದಿ ಹೊಂದಿದೆ.
ಜೈಪುರ ಐದನೇ ಸ್ಥಾನದಲ್ಲಿದ್ದು, 81,700 ಯುನಿಟ್ಸ್ ವಸತಿ ಬೇಡಿಕೆ ಪಡೆದಿದೆ.

ನಾಗಪುರ

ನಾಗಪುರ

ಇದು ಮಹಾರಾಷ್ಟ್ರ ರಾಜ್ಯದ ಅಹಮ್ಮದನಗರ ಜಿಲ್ಲೆಯಲ್ಲಿರುವ ಮುನ್ಸಿಪಲ್ ಕಾರ್ಪೊರೇಷನ್ ನಗರ.
ಈ ನಗರ 80,000 ಯುನಿಟ್ಸ್ ವಸತಿ ಬೆಡಿಕೆಯನ್ನು ಹೊಂದಿದೆ.

ಇಂದೋರ್

ಇಂದೋರ್

ಇದು ಮಧ್ಯ ಪ್ರದೇಶದ ಪ್ರಸಿದ್ದ ನಗರಗಳಲ್ಲಿ ಒಂದಾಗಿದ್ದು, ವಾಣಿಜ್ಯಾತ್ಮಕ ರಾಜಧಾನಿ ಎಂದು ಬಿರುದು ಪಡೆದಿದೆ.
ಇದು ತುಂಬಾ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಂದೋರ್ 78,100 ಯುನಿಟ್ಸ್ ವಸತಿ ಬೇಡಿಕೆಯನ್ನು ಹೊಂದಿದೆ.

ಕೊಯಂಬತ್ತೂರ್

ಕೊಯಂಬತ್ತೂರ್

ಕೊಯಂಬತ್ತೂರ್ ತಮಿಳುನಾಡು ರಾಜ್ಯದ ನಗರವಾಗಿದ್ದು, ಪ್ರಸಿದ್ದ ಐತಿಹಾಸಿಕ ಸ್ಥಳ. ಇಲ್ಲಿ ದ್ರಾವಿಡ ಶೈಲಿಯ ಅನೇಕ ದೇವಸ್ಥಾನಗಳಿವೆ.
76,000 ಯುನಿಟ್ಸ್ ವಸತಿ ಬೇಡಿಕೆಯನ್ನು ಈ ನಗರ ಪಡೆದುಕೊಂಡಿದೆ.

ವಡೋದರಾ

ವಡೋದರಾ

ವಡೋದರಾ ನಗರ ಬರೋಡ ಎಂದೇ ಚಿರಪರಿಚಿತ. ಈ ನಗರ ಅಹಮ್ಮದಾಬಾದ್ ಮತ್ತು ಸೂರತ್ ನಂತರದ ದೊಡ್ಡ ನಗರವಾಗಿದೆ.
36,600 ಯುನಿಟ್ಸ್ ವಸತಿ ಬೇಡಿಕೆಯನ್ನು ಪಡೆದುಕೊಂಡಿದೆ.

ಚಂದಿಗಡ

ಚಂದಿಗಡ

ಚಂದಿಗಡ ಪಂಜಾಬ ರಾಜ್ಯದ ರಾಜಧಾನಿ ಆಗಿದೆ. ಈ ನಗರ ಹತ್ತನೇ ಸ್ಥಾನದಲ್ಲಿದ್ದು, 33,100 ಯುನಿಟ್ಸ್ ವಸತಿ ಬೇಡಿಕೆಯನ್ನು ಹೊಂದಿದೆ.

ಭುವನೇಶ್ವರ

ಭುವನೇಶ್ವರ

ಭುವನೇಶ್ವರ ಓಡಿಸ್ಸಾ ರಾಜ್ಯದ ರಾಜಧಾನಿ. ಇದು ಪೂರ್ವ ಭಾರತದ ಪ್ರಸಿದ್ದ ಆರ್ಥಿಕ ಮತ್ತು ಧಾರ್ಮಿಕ ಕೇಂದ್ರ ಸ್ಥಾನವಾಗಿದೆ.
ಈ ನಗರ 21,600 ಯುನಿಟ್ಸ್ ವಸತಿ ಬೇಡಿಕೆಯನ್ನು ಹೊಂದಿದೆ.

Read More:8 documents you must check before buying property in India

Read more about: housing ವಸತಿ
English summary

11 smart cities in india having more housing demand

These eleven smart cities are likely to witness an incremental housing demand of 9.44 lakh units in next five years, property consultant Cushman and Walefield said. Surat is likely to see hihest incremental residential demand among the 11 cities selected in a study at 2.3 lakh units.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X