For Quick Alerts
ALLOW NOTIFICATIONS  
For Daily Alerts

ಆರ್ಬಿಐ: ರಾಜನ್ ನಿರ್ಗಮನ ಪಟೇಲ್ ಆಗಮನ

By Siddu
|

ಭಾರತೀಯ ರಿಸರ್ವ್ ಬ್ಯಾಂಕಿನ ನೂತನ 24ನೇ ಗವರ್ನರ್ ಆಗಿ ಉರ್ಜಿತ್ ಪಟೇಲ್ ಅವಧಿ ಸೆಪ್ಟಂಬರ್ 4ರಿಂದ (ಭಾನುವಾರ) ಪ್ರಾರಂಭವಾಗಿದೆ. ಗಣೇಶ ಹಬ್ಬದ ಪ್ರಯುಕ್ತ ಸೋಮವಾರ ಸರ್ಕಾರಿ ರಜೆ ಆಗಿರುವುದರಿಂದ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಪಟೇಲ್ ಮುಂದಿನ ಮೂರು ವರ್ಷಗಳ ಅವಧಿಗೆ ಸೇವೆ ಸಲ್ಲಿಸಲಿದ್ದಾರೆ.

ಆಪ್ತವಲಯದಿಂದ ಮಿತಭಾಷಿ ಎನಿಸಿರುವ ಮತ್ತು ವಿವಾದಗಳಿಂದ ಹಾಗೂ ಮಾದ್ಯಮದಿಂದ ಸದಾ ದೂರ ಉಳಿದಿರುವ ಪಟೇಲ್ ರಾಜನ್ ಆವರು ಆರಂಭಿಸಿರುವ ಕಾರ್ಯಗಳನ್ನು ಪೂರ್ಣಗೊಳಿಸುವ ಹೊಣೆಗಾರಿಕೆ ಹೊತ್ತಿದ್ದಾರೆ. ಆರ್ಬಿಐ ನೂತನ ಗವರ್ನರ್ ಉರ್ಜಿತ್ ಪಟೇಲ್ ಮುಂದೆ ಅನೇಕ ಸವಾಲುಗಳು

ಉರ್ಜಿತ್ ಪಟೇಲ್ ಮುಂದೆ ಹಣದುಬ್ಬರ ನಿಯಂತ್ರಣ, ಆರ್ಥಿಕ ಚೇತರಿಕೆ, ಡಿಜಿಟಲ್ ಬ್ಯಾಂಕು, ಹಣಕಾಸು ನೀತಿ, ಬ್ಯಾಂಕುಗಳ ಸುಧಾರಣೆ ಹೀಗೆ ಹಲವು ಸವಾಲುಗಳಿವೆ.

ರಾಜನ್ ವಿದಾಯ ಮುಂದೇನು?

ರಾಜನ್ ವಿದಾಯ ಮುಂದೇನು?

ಆರ್ಬಿಐ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರಿಗೆ ಭಾನುವಾರ ಕಡೆ ದಿನ ಆಗಿತ್ತು. ಇವರು ಅಧಿಕಾರಾವಧಿಯಲ್ಲಿ ಅನೇಕ ವಿವಾದಗಳಿಗೆ ಒಳಗಾಗಿದ್ದರು. ನಿವೃತ್ತಿ ನಂತರ ಮತ್ತೆ ಅವರ ನೆಚ್ಚಿನ ವೃತ್ತಿಯಾದ ಬೋಧನೆಯತ್ತ ಮರಳಲಿದ್ದಾರೆ. ಜತೆಗೆ ಅನೇಕ ಜವಾಬ್ಧಾರಿಗಳನ್ನು ಅವರು ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಹಣದುಬ್ಬರ ವಿರೋಧಿ ಯೋಧ

ಹಣದುಬ್ಬರ ವಿರೋಧಿ ಯೋಧ

ರಾಜನ್ ಹಣದುಬ್ಬರ ವಿರೋಧಿ ಯೋಧ ಎಂದೇ ಖ್ಯಾತಿ ಪಡೆದಿದ್ದಾರೆ. ಏಕೆಂದರೆ ರಾಜನ್ ಗವರ್ನರ್ ಆಗಿದ್ದಾಗ ಪಟೇಲ್ ಉಪ ಗವರ್ನರ್ ಆಗಿದ್ದವರು. ಆಗ ಬೆಲೆ ಏರಿಕೆ ತಡೆಗೆ ಹೊಸ ಚೌಕಟ್ಟೊಂದನ್ನು ರೂಪಿಸಿದ್ದರು. ಹಾಗಾಗಿಯೇ ಹಣದುಬ್ಬರ ವಿರೋಧಿ ಯೋಧ ಎಂದು ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ವಸೂಲಾಗದ ಸಾಲ ವಸೂಲಿ

ವಸೂಲಾಗದ ಸಾಲ ವಸೂಲಿ

ಬ್ಯಾಂಕುಗಳ ಸ್ಥಿತಿಯನ್ನು ಉತ್ತಮ ಪಡಿಸುವ ದೃಷ್ಟಿಯಿಂದ ವಸೂಲಾಗದ ಸಾಲವನ್ನು ವಸೂಲು ಮಾಡುವ ಕೆಲಸವನ್ನು ರಾಜನ್ ಆರಂಭಿಸಿದ್ದರು. ಅದನ್ನು ಪೂರ್ಣಗೊಳಿಸುವ ದೊಡ್ಡ ಹೊಣೆಗಾರಿಕೆಯೂ ಪಟೇಲ್ ಅವರ ಮೇಲಿದೆ ಎಂದು ಹೇಳಬಹುದು.

ಬ್ಯಾಂಕು ಸುಧಾರಣೆಯ ಕಠಿಣ ಸವಾಲು

ಬ್ಯಾಂಕು ಸುಧಾರಣೆಯ ಕಠಿಣ ಸವಾಲು

ಕೆಲವು ಬ್ಯಾಂಕುಗಳು, ಉದ್ಯಮ ಸಂಸ್ತೆಗಳು ಸುಧಾರಣೆಯ ನಿರ್ಧಾರದ ವಿರುದ್ದ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಬ್ಯಾಂಕು ಸುಧಾರಣೆ ಹಿನ್ನೆಲೆಯಲ್ಲಿ ಆರ್ಬಿಐ ಅನಗತ್ಯ ಆತುರ ತೋರುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಹೀಗಾಗಿ ಪಟೇಲ್ ಅವರಿಗೆ ಬ್ಯಾಂಕು ವಲಯಕ್ಕೆ ಸಂಬಂಧಿಸಿದ ಸುಧಾರಣೆ ಕಠಿಣ ಸವಾಲು ಒಡ್ಡುವ ಸಾದ್ಯತೆ ಖಂಡಿತ ಇದೆಯೆಂದು ಹೇಳಲಾಗುತ್ತದೆ.

ಡಿಜಿಟಲ್ ಬ್ಯಾಂಕು

ಡಿಜಿಟಲ್ ಬ್ಯಾಂಕು

ಮುಂದಿನ ದಿನಗಳಲ್ಲಿ ಡಿಜಿಟಲ್ ಪಾವತಿ ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಕಾರ್ಯಾಚರಣೆ ಪ್ರಾರಂಭಿಸಲಿವೆ. ಈ ಹೊಸ ಕಾರ್ಯಾಚರಣೆಗಳು ಸಹ ಆರ್ಬಿಐ ಗೆ ಹೊಸ ಸವಾಲು ಒಡ್ಡಲಿದೆ ಎನ್ನಲಾಗುತ್ತಿದೆ.

ಆರ್ಥಿಕತೆ ಮತ್ತು ಹಣದುಬ್ಬರ

ಆರ್ಥಿಕತೆ ಮತ್ತು ಹಣದುಬ್ಬರ

ಹಣದುಬ್ಬರವನ್ನು ನಿಗದಿತ ಅವಧಿಯೊಳಗೆ ನಿಯಂತ್ರಿಸಿ ದೇಶದ ಆರ್ಥಿಕತೆಯನ್ನು ಬಲಾಢ್ಯಗೊಳಿಸುವುದು. ಆರ್ಬಿಐ ಹಣದುಬ್ಬರ ದರ ಶೇ. 5ಕ್ಕಿಂತ ಕೆಳಗಿರಬೇಕು ಎನ್ನುವ ಗುರಿ ಹೊಂದಿರುವಾಗಲೇ ಹಣದುಬ್ಬರ ದರ ಶೇ. 6.07ಕ್ಕೆ ತಲುಪಿರುವುದರಿಂದ ಪಟೇಲ್ ಮುಂದೆ ಇದನ್ನು ನಿಯಂತ್ರಿಸುವ ಸವಾಲಿದೆ.

ರಾಜನ್ ದಿಟ್ಟ ನಿರ್ಧಾರಗಳು

ರಾಜನ್ ದಿಟ್ಟ ನಿರ್ಧಾರಗಳು

ರಾಜನ್ ದಿಟ್ಟ ನಿರ್ಧಾರಗಳಿಗೆ, ನೇರ ನಡೆ-ನುಡಿಗೆ ಹೆಸರಾದವರು. ರಾಜನ್ ತಮ್ಮ ಅಧಿಕಾರವಧಿಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ದಿಟ್ಟ ನಿರ್ಣಯಗಳನ್ನು ಕೈಗೊಂಡಿದ್ದರು. ರೂಪಾಯಿ ಮೌಲ್ಯ ಸ್ಥಿರತೆ ಸಾಧಿಸುವುದು, ಆರ್ಬಿಐ ಹಣಕಾಸು ನೀತಿಯಲಲ್ಇ ಪಾರದರ್ಶಕತೆ ತರುವುದು, ಹೊಸ ಬ್ಯಾಂಕುಗಳಿಗೆ ಲೈಸೆನ್ಸ್ ಇತ್ಯಾದಿ ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದರು.

English summary

RBI: Rajan era ends, new Governor Urjit Patel

Dr. Urjit R. Patel assumed charge as the twenty-fourth Governor of the Reserve Bank of India effective September 4, 2016 after serving as Deputy Governor since January 2013,” the central bank said in a press statement. Dr. Patel has been given a three year term.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X