For Quick Alerts
ALLOW NOTIFICATIONS  
For Daily Alerts

ESI ಮಾಸಿಕ ವೇತನ 21,000ಕ್ಕೆ ಏರಿಕೆ

By Siddu
|

ಆರೋಗ್ಯ ವಿಮಾ ಯೋಜನೆ ವ್ಯಾಪ್ತಿ ಅಡಿಯಲ್ಲಿ ಪ್ರಸ್ತುತ ಇರುವ ರೂ. 15,000 ಮಾಸಿಕ ವೇತನವನ್ನು ರೂ. 21,000ಕ್ಕೆ ಏರಿಸಲು ಕಾರ್ಮಿಕರ ರಾಜ್ಯ ವಿಮಾ ನಿಗಮ(ESIC) ನಿರ್ಧರಿಸಿದೆ.

ಇಂದು ನಡೆದ ಸಭೆಯಲ್ಲಿ ಈಗಾಗಲೇ ತಿಂಗಳಿಗೆ 21,000 ರೂ. ಮಾಸಿಕ ವೇತನ ಪಡೆಯುವವರಿಗೂ ಸದಸ್ಯತ್ವ ಮುಂದುವರೆಸಲು ಅವಕಾಶ ನೀಡಲು ESIC ಮಂಡಳಿ ನಿರ್ಧರಿಸಿದೆ.

ಪ್ರಸ್ತುತ ಇರುವ ರೂ. 15,000 ಮಾಸಿಕ ವೇತನವನ್ನು ರೂ. 21,000ಕ್ಕೆ ಏರಿಕೆ ಪ್ರಕ್ರಿಯೆ ಅಕ್ಟೋಬರ್ 1ರಿಂದ ಕಾರ್ಯರೂಪಕ್ಕೆ ಬರಲಿದೆ.

ESI ಮಾಸಿಕ ವೇತನ 21,000ಕ್ಕೆ ಏರಿಕೆ

ಈ ವ್ಯಾಪ್ತಿಯನ್ನು ಹೆಚ್ಚಿಸುವುದರಿಂದ ಹೆಚ್ಚುವರಿ 50 ಲಕ್ಷ ಸದಸ್ಯರು ESIC ಗೆ ತರಲು ಸಾಧ್ಯವಾಗುತ್ತದೆ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದರು.

ಪ್ರಸ್ತುತ ESIC 2.6 ಕೋಟಿ ವಿಮಾ ವ್ಯಕ್ತಿಗಳನ್ನು ಹೊಂದಿದ್ದು, ಇದು ಒಟ್ಟು 10 ಕೋಟಿ ಜನರನ್ನು ಒಳಗೊಂಡಿದೆ. ಇದರಲ್ಲಿ ಪ್ರತಿ ಕುಟುಂಬದ ನಾಲ್ಕು ಸದಸ್ಯರು ಇದ್ದಾರೆಂದು ಅಂದಾಜಿಸಿಲಾಗಿದೆ.

ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪ್ರಸ್ತುತ ತಿಂಗಳಿಗೆ ರೂ. 15,000 ವೇತನ ಮಿತಿ ಇದೆ.

English summary

ESIC Raises Wage Threshold to Rs 21,000

The Employees' State Insurance Corporation (ESIC) today raised the monthly wage threshold to Rs 21,000, from the current Rs 15,000, for coverage under its health insurance scheme.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X