2030ರಲ್ಲಿ ಪ್ರಪಂಚವನ್ನು ಆಳುವ ದೇಶಗಳು

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಜಾಗತಿಕವಾಗಿ ಹಲವು ಕ್ಷೇತ್ರಗಳ ಬಗ್ಗೆ ಅನೇಕ ವಿಧದ ಲೆಕ್ಕಾಚಾರಗಳು, ಸಂಶೋಧನೆಗಳು, ವರದಿಗಳು ಬರುತ್ತಲೇ ಇರುತ್ತವೆ. ಸೂಜಿಗ ಎನಿಸುವ ಮಾಹಿತಿಯನ್ನು ನೀಡುತ್ತಲೇ ಇರುತ್ತವೆ. ಹೀಗೆ ಅನೇಕ ಲೆಕ್ಕಾಚಾರಗಳು ನಮ್ಮೊಂದಿಗೆ ಗಿರಕಿ ಹೊಡೆಯುತ್ತಲೇ ಇರುತ್ತವೆ. ಇಂತಹ ಸಂಗತಿಗಳು ಎಲ್ಲರ ಕುತೂಹಲಕ್ಕೂ ಕಾರಣವಾಗಿರುತ್ತವೆ. 

  2030ರ ವೇಳೆಗೆ ಜಗತ್ತಿನ ಅತಿದೊಡ್ಡ ಆರ್ಥಿಕತೆಯಾಗಿ, ಜಗತ್ತನ್ನು ಆಳಬಲ್ಲ ದೇಶವಾಗಿ ಯಾವ ರಾಷ್ಟ್ರಗಳು ಪೈಫೋಟಿ ನಡೆಸಲಿವೆ? ಆರ್ಥಿಕ ಸಮರ ಯಾವ ದೇಶಗಳ ನಡುವೆ ಏರ್ಪಡಲಿದೆ? ಇತ್ಯಾದಿ ವಿಚಾರಗಳ ಬಗ್ಗೆ ಕೂಡ ಲೆಕ್ಕಾಚಾರ ನಡೆದಿದೆ. ಅನೇಕ ಮಾನದಂಡಗಳ ಆಧಾರದ ಮೇಲೆ ಈ ಕುತೂಹಲಕಾರಿ ಸಂಗತಿಯನ್ನು ನಿರ್ಧರಿಸಲಾಗಿದೆ. ಅದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ.  ಜಗತ್ತಿನ ಈ 10 ದೇಶಗಳ ಆರ್ಥಿಕತೆ ತುಂಬಾ ಅಪಾಯದಲ್ಲಿದೆ!

   

  ಹಾಗಿದ್ದರೆ 2030ರಲ್ಲಿ ಜಗತ್ತನ್ನು ಆಳಬಲ್ಲ ಆ ದೇಶಗಳು ಯಾವವು? ಅಂತಹ ಟಾಪ್ 20 ದೇಶಗಳ ಕುತೂಹಲಕರ ಮಾಹಿತಿ ಇಲ್ಲಿದೆ.

  1. ಅಮೆರಿಕ

  ಜಗತ್ತಿನ ದೊಡ್ಡಣ್ಣ ಖ್ಯಾತಿಯ ಅಮೆರಿಕ 2030ರ ವೇಳೆಗೆ ಜಗತ್ತನ್ನು ಆಳಬಲ್ಲದು ಎಂಬುದು ಸಾಮಾನ್ಯವಾಗಿ ಎಲ್ಲರ ಊಹೆ ಆಗಿರುತ್ತದೆ. 2030ರ ವೇಳೆಗೆ ಅಮೆರಿಕಾದ ಜಿಡಿಪಿ 23,857 ಬಿಲಿಯನ್ ಡಾಲರ್ ಆಗಲಿದೆ. 2016ರಲ್ಲಿ 17,149 ಬಿಲಿಯನ್ ಡಾಲರ್ ಇದ್ದು, 2016 ರಿಂದ 2030ರಲ್ಲಿ ಶೇ. 2.3ರಷ್ಟು ಹೆಚ್ಚಳವಾಗುತ್ತದೆ. ಅಮೆರಿಕ ವಿಶ್ವದ 10 ಸಿರಿವಂತ ದೇಶಗಳ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನದಲ್ಲಿ ನಿಂತಿದೆ. ಪ್ರಸ್ತುತ ಅಮೆರಿಕಾದ ಒಟ್ಟು ಸಂಪತ್ತು ರೂ. 3276 ಲಕ್ಷ ಕೋಟಿ ಆಗಿದೆ.
  ಹೀಗಾಗಿ ಜಗತ್ತನ್ನು ಆಳುವ ಮೊದಲ ದೇಶವಾಗಿ ಅಮೆರಿಕ ಮುಂಚೂಣಿಯಲ್ಲಿ ನಿಲ್ಲುವುದರಲ್ಲಿ ಯಾವುದೇ ಸಂಶಯಗಳಿಲ್ಲ ಎಂಬುದು ಪಂಡಿತರ ಲೆಕ್ಕಾಚಾರ.

  2. ಚೀನಾ

  2030ರಲ್ಲಿ ಜಗತ್ತನ್ನು ಆಳುವ ದೇಶಗಳ ಸಾಲಿನಲ್ಲಿ ಏಷಿಯಾದ ಮೊದಲ ದೇಶ ಎಂಬ ಹೆಗ್ಗಳಿಕೆ. ಜತೆಗೆ ಚೀನಾ ಏಷಿಯಾದ ಮೊದಲ ಹಾಗೂ ವಿಶ್ವದ ಎರಡನೇ ಶ್ರೀಮಂತ ದೇಶ.
  2016ರಲ್ಲಿ ಜಿಡಿಪಿ 9307 ಬಿಲಿಯನ್ ಡಾಲರ್ ಇದ್ದು, 2030ರ ವೇಳೆಗೆ ಶೇ. 4ರಷ್ಟು ಹೆಚ್ಚಳವಾಗಲಿದೆ. ಹಾಗೂ 2030ರಲ್ಲಿ ಆರ್ಥಿಕ ಮೌಲ್ಯದ ಪ್ರಮಾಣ 18829 ಬಿಲಿಯನ್ ಡಾಲರ್ ಇರಲಿದೆ. ಪ್ರಸ್ತುತ ಚೀನಾ ದೇಶ ಒಟ್ಟು ರೂ. 1165 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

  3. ಭಾರತ

  ಬಾರತ ಜಗತ್ತನ್ನು ಆಳಬಲ್ಲ ವಿಶ್ವದ ಮೂರನೇ ದೇಶ ಹಾಗೂ ಏಷಿಯಾದ 2ನೇ ದೇಶ. ಮುಂದಿನ ದಶಕದಲ್ಲಿ ಭಾರತದ ಆರ್ಥಿಕತೆ ಬೃಹತ್ ಪ್ರಮಾಣದಲ್ಲಿ ಹಾಗೂ ಶರವೇಗದಲ್ಲಿ ಬೆಳವಣಿಗೆಯಾಗಲಿದ್ದು, ಶೇ. 6.9ರಷ್ಟು ಹೆಚ್ಚಳವಾಗಲಿದೆ. ಅಮೆರಿಕಾ ಮತ್ತು ಚೀನಾಕ್ಕೆ ಹೋಲಿಸಿದರೆ ಹೆಚ್ಚಳದ ಪ್ರಮಾಣ ಹೆಚ್ಚು. 2016ರಲ್ಲಿ ಇರುವ 2557 ಬಿಲಿಯನ್ ಡಾಲರ್ ಜಿಡಿಪಿಯಿಂದ 2030ರ ವೇಳೆಗೆ 7287 ಬಿಲಿಯನ್ ಡಾಲರ್ ಜಿಡಿಪಿ ಏರಲಿದೆ. ಅಂದರೆ ಅರ್ಧದಷ್ಟು ಹೆಚ್ಚಳ ಸಾಧಿಸಲಿದೆ.

  ಅತಿ ದೊಡ್ಡ ಜನಸಂಖ್ಯೆಯಿಂದಾಗಿ ಭಾರತವು ಜಗತ್ತಿನ 10 ಸಿರಿವಂತ ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಈಗ ಭಾರತವು ಒಟ್ಟು ರೂ. 375 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

  4. ಜಪಾನ್

  ಜಗತ್ತನ್ನು ಆಳಬಲ್ಲ ಏಷಿಯಾದ ಮೂರನೇ ದೇಶ ಜಪಾನ್. 2016ರಲ್ಲಿ ಜಪಾನಿನ ಜಿಡಿಪಿ ಪ್ರಮಾಣ 5792 ಬಿಲಿಯನ್ ಡಾಲರ್ ಇದ್ದು, 2030ರಲ್ಲಿ 6535 ಬಿಲಿಯನ್ ಡಾಲರ್ ಆಗಲಿದೆ. ಶೇ. 0.7ರಷ್ಟು ಆರ್ಥಿಕ ಮೌಲ್ಯ ಹೆಚ್ಚಲಿದೆ.
  ಜಪಾನ್ ಏಷಿಯಾದ ಎರಡನೇ ಶ್ರೀಮಂತ ದೇಶವಾಗಿದ್ದು, ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ರಸ್ತುತ ಒಟ್ಟು ರೂ. 1011 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

  5. ಜರ್ಮನಿ

  ಜರ್ಮನಿ ಜಗತ್ತನ್ನು ಆಳುವ ದೇಶಗಳ ಸಾಲಿನಲ್ಲಿ ಐದನೇ ಹಾಗೂ ಜಗತ್ತಿನ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
  ಶೇ. 0.9ರಷ್ಟು ಆರ್ಥಿಕ ಮೌಲ್ಯದ ಹೆಚ್ಚಳದೊಂದಿಗೆ 2030ರಲ್ಲಿ 4308 ಬಿಲಿಯನ್ ಡಾಲರ್ ಜಿಡಿಪಿ ತಲುಪಲಿದೆ. ಪ್ರಸ್ತುತ ಜರ್ಮನಿಯ ಜಿಡಿಪಿ ಮೌಲ್ಯ 3747 ಬಿಲಿಯನ್ ಡಾಲರ್ ಇದೆ. ಒಟ್ಟು ಸಂಪತ್ತು ರೂ. 609 ಲಕ್ಷಕೋಟಿ ಆಗಿದೆ.

  6. ಯುಕೆ

  ಯುನೈಟೆಡ್ ಕಿಂಗ್ಡಮ್ ಶೇ. 2.5ರಷ್ಟು ಆರ್ಥಿಕ ಕ್ರಾಂತಿಯೊಂದಿಗೆ 2030ರಲ್ಲಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊಮ್ಮಲಿದೆ.
  ಅಂದರೆ 2030ರ ವೇಳೆಗೆ ಈಗಿನ 2710 ಬಿಲಿಯನ್ ಡಾಲರ್ ಜಿಡಿಪಿಯಿಂದ 3815 ಬಿಲಿಯನ ಡಾಲರ್ ಜಿಡಿಪಿ ತಲುಪಲಿದೆ. ಒಟ್ಟು ಸಂಪತ್ತು ರೂ. 616 ಲಕ್ಷಕೋಟಿ ಆಗಿದೆ.

  7. ಪ್ರಾನ್ಸ್

  ಪ್ರಾನ್ಸ್ ಪಶ್ಚಿಮ ಯುರೋಪಿಯನ್ ಪ್ರಸಿದ್ದ ದೇಶವಾಗಿದ್ದು, ವಿಶ್ವದ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
  ಈಗಿರುವ 2809 ಬಿಲಿಯನ್ ಡಾಲರ್ ಜಿಡಿಪಿಯಿಂದ 2030ರಲ್ಲಿ ಆರ್ಥಿಕ ಮೌಲ್ಯ 3476 ಬಿಲಿಯನ್ ಡಾಲರ್ ಜಿಡಿಪಿ ಆಗಲಿದೆ. ಶೇ. 1.5ರಷ್ಟು ಹೆಚ್ಚಳ ಸಾಧಿಸಲಿದೆ. ಇದು ರೂ. 442 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

  8. ಬ್ರೆಜಿಲ್

  ಬ್ರೆಜಿಲ್ ದಕ್ಷಿಣ ಅಮೆರಿಕಾದ ದೇಶ. ಇದು ಶೆ. 2.5ರಷ್ಟು ಬೆಳವಣಿಗೆಯೊಂದಿಗೆ 2030ರಲ್ಲಿ ದೇಶದ ಆರ್ಥಿಕ ಮೌಲ್ಯ 3161 ಬಿಲಿಯನ್ ಡಾಲರ್ ಜಿಡಿಪಿ ಆಗಲಿದೆ. ಪ್ರಸ್ತುತ 2315 ಬಿಲಿಯನ್ ಡಾಲರ್ ಜಿಡಿಪಿ ಇದೆ.

  9. ಕೆನಡಾ

  ಶೇ. 2.1ರ ಜಿಡಿಪಿ ಬೆಳವಣಿಗೆಯಂತೆ 2030ರಲ್ಲಿ ಕೆನಡಾ ಜಗತ್ತಿನ 9ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.
  ಈಗಿರುವ 1829 ಬಿಲಿಯನ್ ಡಾಲರ್ ಆರ್ಥಿಕ ಮೌಲ್ಯ 2030ರಲ್ಲಿ 2486 ಬಿಲಿಯನ್ ಡಾಲರ್ ಆಗಲಿದೆ. ಈಗ ಒಟ್ಟು ಸಂಪತ್ತು ರೂ. 314 ಲಕ್ಷಕೋಟಿ ಇದೆ.

  10. ಇಟಲಿ

  ಇಟಲಿ ಜಗತ್ತಿನ 10ನೇ ಸಿರಿವಂತ ಹಾಗೂ 2030ರ ಹತ್ತನೇ ಅತಿದೊಡ್ಡ ಆರ್ಥಿಕ ದೇಶಗಳ ಸಾಲಿನಲ್ಲಿ ನಿಂತಿದೆ.
  2016ರಲ್ಲಿ 2071 ಬಿಲಿಯನ್ ಡಾಲರ್ ಇರುವ ಆರ್ಥಿಕ ಮೌಲ್ಯ 2030ರ ವೇಳೆಗೆ 2350 ಬಿಲಿಯನ್ ಡಾಲರ್ ಆಗಲಿದೆ. ಶೇ. 0.8ರಂತೆ ಜಿಡಿಪಿ ಏರಿಕೆ ಕಾಣಲಿದೆ. ಪ್ರಸ್ತುತ ರೂ. 294 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

  11. ರಷ್ಯಾ

  ರಷ್ಯಾ ಜಗತ್ತಿನ ಅತಿದೊಡ್ಡ ದೇಶ. ಯೂರೋಪಿಯನ್ ಮತ್ತು ಏಷಿಯನ್ ದೇಶಗಳು, ಪೆಸಿಫಿಕ್ ಮತ್ತು ಅರ್ಕಾಟಿಕ್ ಸರೋವರಗಳು ಇದರ ಗಡಿ ಪ್ರದೇಶಗಳಾಗಿವೆ.
  2016ರಲ್ಲಿ ರಷ್ಯಾ ಜಿಡಿಪಿ: 1594 ಬಿಲಿಯನ್ ಡಾಲರ್
  2030ರಲ್ಲಿ ರಷ್ಯಾ ಜಿಡಿಪಿ: 2219 ಬಿಲಿಯನ್ ಡಾಲರ್

  12. ಇಂಡೊನೆಷ್ಯಾ

  ಇಂಡೊನೆಷ್ಯಾ ಆಗ್ನೇಯ ಏಷಿಯಾದ ದೇಶ. ಜಕಾರ್ತ ಇದರ ರಾಜಧಾನಿ. ಇದು ಕಡಲತೀರ, ಜ್ವಾಲಾಮುಖಿ, ಕೊಮೊಡೊ ಡ್ರ್ಯಾಗನ್ ಮತ್ತು ಕಾಡುಗಳಲ್ಲಿ ಆಶ್ರಯ ಪಡೆದ ಆನೆಗಳು, ಒರೆಂಗುಟನ್ ಮತ್ತು ಹುಲಿಗಳಿಗೆ ಹೆಸರುವಾಸಿಯಾಗಿದೆ. ಯೋಗ್ಯಕರ್ತಾ ನಗರವು ಗ್ಯಾಮಲಾನ್ ಸಂಗೀತ ಮತ್ತು ಸಾಂಪ್ರದಾಯಿಕ ಬೊಂಬೆಯಾಟದ ಹೆಸರುವಾಸಿಯಾಗಿದೆ. ಇಂತಹ ವೈಶಿಷ್ಟತೆಯನ್ನು ಹೊಂದಿರುವ ಇಂಡೊನೆಷ್ಯಾ 12 ಬೃಹತ್ ದೆಶವಾಗಿ 2030ರ ವೇಳೆಗೆ ಹೊಮ್ಮಲಿದೆ.

  2016ರಲ್ಲಿ ಇಂಡೊನೆಷ್ಯಾ ಜಿಡಿಪಿ: 1037 ಬಿಲಿಯನ್ ಡಾಲರ್
  2030ರಲ್ಲಿ ಇಂಡೊನೆಷ್ಯಾ ಜಿಡಿಪಿ: 2077 ಬಿಲಿಯನ್ ಡಾಲರ್

  13. ಮೆಕ್ಸಿಕೊ

  ಮೆಕ್ಸಿಕೊ ಯುಎಸ್ ಮತ್ತು ಮಧ್ಯ ಅಮೆರಿಕಾದ ನಡುವಿನಲ್ಲಿದೆ. ಮೆಕ್ಸಿಕೊ ಸಿಟಿ ಇದರ ರಾಜಧಾನಿ. ಈ ಪುಟ್ಟ ದೇಶ ೨೦೩೦ರಲ್ಲಿ ಜಗತ್ತನ್ನಾಳುವ ದೇಶಗಳ ಸಾಲಿನಲ್ಲಿ ನಿಲ್ಲಲಿದೆ.

  2016ರಲ್ಲಿ ಮೆಕ್ಸಿಕೊ ಜಿಡಿಪಿ: 1244 ಬಿಲಿಯನ್ ಡಾಲರ್
  2030ರಲ್ಲಿ ಮೆಕ್ಸಿಕೊ ಜಿಡಿಪಿ: 1970 ಬಿಲಿಯನ್ ಡಾಲರ್

  14. ಆಸ್ಟ್ರೇಲಿಯ

  ಆಸ್ಟ್ರೇಲಿಯ ದೇಶವನ್ನು ಇಂಡಿಯನ್ ಮತ್ತು ಪೆಸಿಫಿಕ್ ಮಹಾಸಾಗರಗಳೂ ಸುತ್ತುವರೆದಿವೆ. ಇದರ ರಾಜಧಾನಿ ಕ್ಯಾನ್ಬೆರಾ. ಸಿಡ್ನಿ, ಬ್ರಿಸ್ಬೇನ್, ಮೆಲ್ಬೋರ್ನ್, ಪರ್ಥ್, ಅಡಿಲೇಡ್ ಇದರ ಪ್ರಮುಖ ನಗರಗಳು.

  2016ರಲ್ಲಿ ಆಸ್ಟ್ರೇಲಿಯ ಜಿಡಿಪಿ: 1338 ಬಿಲಿಯನ್ ಡಾಲರ್
  2030ರಲ್ಲಿ ಆಸ್ಟ್ರೇಲಿಯ ಜಿಡಿಪಿ: 1943 ಬಿಲಿಯನ್ ಡಾಲರ್

  15. ಸ್ಪೇನ್

  ಮಾಡ್ರಿಡ್ ಸ್ಪೇನ್ ದೇಶದ ರಾಜದಾನಿಯಾಗಿದ್ದು, 46.77 ಮಿಲಿಯನ್ (2014) ಜನಸಂಖ್ಯೆ ಹೊಂದಿದೆ. ಈ ಸಣ್ಣ ರಾಷ್ಟ್ರ ೨೦೩೦ರಲ್ಲಿ ಜಗತ್ತನ್ನಾಳುವ ೧೫ನೇ ದೇಶವಾಗಲಿದೆ.

  2016ರಲ್ಲಿ ಸ್ಪೇನ್ ಜಿಡಿಪಿ: 1478ಬಿಲಿಯನ್ ಡಾಲರ್
  2030ರಲ್ಲಿ ಸ್ಪೇನ್ ಜಿಡಿಪಿ: 1918 ಬಿಲಿಯನ್ ಡಾಲರ್

  16. ದಕ್ಷಿಣ ಕೊರಿಯಾ

  2016ರಲ್ಲಿ ದಕ್ಷಿಣ ಕೊರಿಯಾ ಜಿಡಿಪಿ: 1310 ಬಿಲಿಯನ್ ಡಾಲರ್
  2030ರಲ್ಲಿ ಸ್ಪೇನ್ ಜಿಡಿಪಿ: 1906 ಬಿಲಿಯನ್ ಡಾಲರ್

  17. ಟರ್ಕಿ

  2016ರಲ್ಲಿ ಟರ್ಕಿ ಜಿಡಿಪಿ: 923 ಬಿಲಿಯನ್ ಡಾಲರ್
  2030ರಲ್ಲಿ ಟರ್ಕಿ ಜಿಡಿಪಿ: 1589 ಬಿಲಿಯನ್ ಡಾಲರ್

  18. ಸೌದಿ ಅರೆಬಿಯ

  2016ರಲ್ಲಿ ಸೌದಿ ಅರೆಬಿಯ ಜಿಡಿಪಿ: 689 ಬಿಲಿಯನ್ ಡಾಲರ್
  2030ರಲ್ಲಿ ಸೌದಿ ಅರೆಬಿಯ ಜಿಡಿಪಿ: 1205 ಬಿಲಿಯನ್ ಡಾಲರ್

  19. ನೆದರ್ಲ್ಯಾಂಡ್ಸ್

  2016ರಲ್ಲಿ ನೆದರ್ಲ್ಯಾಂಡ್ಸ್ ಜಿಡಿಪಿ: 868 ಬಿಲಿಯನ್ ಡಾಲರ್
  2030ರಲ್ಲಿ ಸೌದಿ ಅರೆಬಿಯ ಜಿಡಿಪಿ: 1089 ಬಿಲಿಯನ್ ಡಾಲರ್

  20. ನೈಜಿರೀಯಾ

  ಆಫ್ರಿಕನ್ ದೇಶವಾಗಿರುವ ನೈಜಿರೀಯಾದ ರಾಜಧಾನಿ ಅಬುಜಾ. ಇದು ಹಲವು ನೈಸರ್ಗಿಕ ಹೆಗ್ಗುರುತು ಮತ್ತು ವನ್ಯಜೀವಿ ನಿಕ್ಷೇಪಗಳನ್ನು ಹೊಂದಿರುವ ಪ್ರಾಕೃತಿಕವಾಗಿ ಸಂಪತ್ ಭರಿತವಾಗಿರುವ ದೇಶ. ೨೦೩೦ರ ವೇಳೆಗೆ ಜಗತ್ತನ್ನು ಆಳಬಲ್ಲ ೨೦ನೇ ದೇಶವಾಗಲಿದೆ.

  2016ರಲ್ಲಿ ನೈಜಿರೀಯಾ ಜಿಡಿಪಿ: 492 ಬಿಲಿಯನ್ ಡಾಲರ್
  2030ರಲ್ಲಿ ನೈಜಿರೀಯಾ ಜಿಡಿಪಿ: 916 ಬಿಲಿಯನ್ ಡಾಲರ್

  English summary

  Which Countries will Rule the World in 2030?

  No huge surprise that the United States takes the number one slot with a projected GDP of $23,857 (£16,380bn) billion in 2030. This is a 2.3% increase from its 2016 value of $17,149 (£11,775bn) billion.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more