For Quick Alerts
ALLOW NOTIFICATIONS  
For Daily Alerts

ಜಗತ್ತಿನ ಈ 10 ದೇಶಗಳ ಆರ್ಥಿಕತೆ ತುಂಬಾ ಅಪಾಯದಲ್ಲಿದೆ!

|

ಯಾವುದೇ ದೇಶದ ಆರ್ಥಿಕ ಸ್ಥಿತಿಯನ್ನು ಬಲಾಢ್ಯಗೊಳಿಸುವುದು ಹಾಗೂ ಅದೇ ಮಟ್ಟದಲ್ಲಿ ಸ್ಥಿರವಾಗಿರಿಸುವುದು ಕಷ್ಟಕರವಾದ ಗುರಿಯೇ ಆಗಿದೆ. ಹೆಚ್ಚಿನ ದೇಶಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಕೆಲವಾರು ಕ್ರಮಗಳ ಮೂಲಕ ತಮ್ಮ ಕೈಲಾದ ಯತ್ನಗಳನ್ನು ಮಾಡುತ್ತಿವೆ. ನಿರುದ್ಯೋಗ ನಿವಾರಣೆ ಹಾಗೂ ಬಡತನದ ನಿರ್ಮೂಲನೆ ಈ ದೇಶಗಳ ಪ್ರಮುಖ ಆದ್ಯತೆಯಾಗಿದ್ದು ಈ ಮೂಲಕ ಆರ್ಥಿಕವಾಗಿಯೂ ಸುಧಾರಿಸುತ್ತಿವೆ. ಉಳಿದ ರಾಷ್ಟ್ರಗಳಿಗೆ ತಮ್ಮ ಆದಾಯ ಖರ್ಚುಗಳ ಲೆಕ್ಕಾಚಾರವನ್ನು ಸರಿದೂಗಿಸುವ ಅಗತ್ಯವಿದೆ. ಆದರೆ ಈ ವಿಶ್ವದಲ್ಲಿ ಕೆಲವು ರಾಷ್ಟ್ರಗಳು ತಮ್ಮಲ್ಲಿರುವ ಕೆಲವೇ ಸಂಪನ್ಮೂಲಗಳನ್ನು ಬಹುವಾಗಿಯೇ ಆಧರಿಸಿರುವ ಕಾರಣ ವಿಶ್ವಮಟ್ಟದ ಬದಲಾವಣೆಗಳಿಗೆ ಒಗ್ಗಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಇವು ಆರ್ಥಿಕವಾಗಿ ಹಿಂದುಳಿಯುತ್ತವೆ.

ಬನ್ನಿ, ಈ ಪರಿಸ್ಥಿತಿಗೆ ತಲುಪಿರುವ, ಸುಧಾರಣೆಗೆ ಹಲವು ಅವಕಾಶಗಳಿರುವ ಹತ್ತು ದೇಶಗಳ ಬಗ್ಗೆ ಅರಿಯೋಣ..

1. ಗ್ರೀಸ್
 

1. ಗ್ರೀಸ್

ಒಂದು ಕಾಲದಲ್ಲಿ ವಿಶ್ವದ ಅತಿ ಶ್ರೀಮಂತ ರಾಷ್ಟ್ರವಾಗಿದ್ದ ಗ್ರೀಸ್ ಇಂದು ಸಾಲದ ಕೂಪದಲ್ಲಿದೆ. ಇದರ ಸಾಲದ ಮೊತ್ತಗಳು ಏರುತ್ತಲೇ ಹೋಗಿದ್ದು, ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕೆಲವಾರು ವರ್ಷಗಳಿಂದ ಆರ್ಥಿಕವಾಗಿ ಕುಸಿಯುತ್ತಲೇ ಸಾಗಿದೆ. ಪ್ರಸ್ತುತ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಸಾಲ ಪಡೆದ ರಾಷ್ಟ್ರವಾಗಿದೆ. ಇದರ ಪರಿಣಾಮವಾಗಿ ಈ ರಾಷ್ಟ್ರದ ಜಿಡಿಪಿಯ 179% ದಷ್ಟು ಸಾಲ ಹೊಂದಿದೆ. ಈ ಅಂಕಿ ಅಂಶವನ್ನು ಯೂರೋಸ್ಟಾಟ್ ಸಂಸ್ಥೆಯೇ ಬಹಿರಂಗಪಡಿಸಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಮ್ಎಫ್) ಹಾಗೂ ಯೋರೋಪಿಯನ್ ಯೂನಿಯನ್ ಗಳು ಗ್ರೀಸ್ ದೇಶವನ್ನು ರಕ್ಷಿಸಲು ನೆರವಿನ ಹಸ್ತವನ್ನು ಚಾಚಿದ್ದರೂ ಇದುವರೆಗೂ ಗ್ರೀಸ್ ಸಾಲಕೂಪದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. 2016ರಲ್ಲಿ ಗ್ರೀಸ್ ನ ಜಿಡಿಪಿ ಕುಸಿಯ ತೊಡಗಿತ್ತು ಹಾಗೂ ಆ ವರ್ಷದ ಕಡೆಯ ಮೂರು ತಿಂಗಳುಗಳಲ್ಲಿ 2015ರ ಬಳಿಕದ ಅವಧಿಯ ಅತ್ಯಂತ ಕಳಪೆ ಸಾಧನೆ ಪ್ರಕಟಿಸಿತು. ಈ ಸಮಯದಲ್ಲಿ ದೇಶದ ವ್ಯಾಪಾರ ವಹಿವಾಟು ಕನಿಷ್ಟ ಮಟ್ಟಕ್ಕಿಳಿಯಿತು ಎಂದು ಬಿಸಿನೆಸ್ ಇನ್ಸೈಡರ್ ಮಾಧ್ಯಮ ಪ್ರಕಟಿಸಿದೆ. ಭಾರತದ ಟಾಪ್ 10 ಅತಿ ಶ್ರೀಮಂತ ರಾಜ್ಯಗಳು

2. ಇಟಲಿ

2. ಇಟಲಿ

ಯೂರೋಪ್ ನಲ್ಲಿ ಕುಸಿಯುವ ಆರ್ಥಿಕತೆಯ ಪಟ್ಟಿಯಲ್ಲಿ ಗ್ರೀಸ್ ಬಳಿಕ ಇಟಲಿ ಎರಡನೆಯ ಸ್ಥಾನದಲ್ಲಿದೆ. 2016ರಲ್ಲಿ ಇಟಲಿಯ ಸಾಲ ಆ ದೇಶದ ಜಿಡಿಪಿಯ 132.6% ರಷ್ಟಿತ್ತು ಎಂದು ಯೂರೋಸ್ಟಾಟ್ ತಿಳಿಸಿದೆ. ಸಾಲ ನೀಡಬಾರದೆಡೆ ಸಾಲ ನೀಡುವ ದುರ್ಬಲ ನಿರ್ಧಾರದ ಕಾರಣ ಇಟಲಿ ಈ ಸ್ಥಿತಿ ತಲುಪಿದೆ. ಕಳಪೆ ಪ್ರದರ್ಶನ ನೀಡಿದ ಬ್ಯಾಂಕುಗಳಿಗೆ ಇತರ ಬ್ಯಾಂಕುಗಳು, ಹೂಡಿಕೆದಾರರು ಹಾಗೂ ವಿಮಾ ಸಂಸ್ಥೆಗಳು ಹಣ ಸಾಲವಾಗಿ ನೀಡಬೇಕೆಂದು ತಾಕೀತು ಮಾಡಿದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ. ಆದರೆ 47 ಬಿಲಿಯನ್ ಯೋರೋ (56 ಬಿಲಿಯನ್ ಡಾಲರ್) ಅಥವಾ 37,11,81,56,00,000 ರೂ ನಷ್ಟು ಭಾರೀ ಸಾಲ ಇರುವ ಇಟಲಿ ಸದ್ಯಕ್ಕೆ ಆರ್ಥಿಕವಾಗಿ ದುರ್ಬಲವಾಗಿದೆ. ವಿಶ್ವದ ಅತಿ ಹಳೆಯ ಮತ್ತು ಪ್ರಸ್ತುತ ಇಟಲಿಯ ಅತಿ ದುರ್ಬಲ ಬ್ಯಾಂಕ್ ಆಗಿರುವ ಮಾಂಟೆ ಡೈ ಪಾಸ್ಕಿ ಡಿ ಸಿಯೇನಾ ನ ಪುಸ್ತಕಗಳಲ್ಲಿ ಈ ಮೊತ್ತ ದಾಖಲಾಗಿದ್ದು, ಈ ಬಗ್ಗೆ ಯೂರೋಪಿಯನ್ ಯೂನಿಯನ್ ಹಾಗೂ ಇಟಲಿ ಸರ್ಕಾರ ಕಾಳಜಿ ವ್ಯಕ್ತಪಡಿಸಿದ್ದು ರಾಷ್ಟ್ರದ ಭವಿಷ್ಯದ ಬಗ್ಗೆ ಚಿಂತಿತವಾಗಿವೆ.

3. ಪೋರ್ಚುಗಲ್
 

3. ಪೋರ್ಚುಗಲ್

ತನ್ನ ಜಿಡಿಪಿಯ 130.4% ದಷ್ಟು ಸಾಲ ಹೊಂದಿರುವ ಪೋರ್ಚುಗಲ್ 2016ರ ಕೊನೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಆರ್ಥಿಕ ದಿವಾಳಿತನದ ಪಟ್ಟಿಯಲ್ಲಿ ಮೂರನೆಯ ಸ್ಥಾನ ಪಡೆದಿದೆ ಎಂದು ಯೂರೋಸ್ಟಾಟ್ ತಿಳಿಸಿದೆ. 2015ರಲ್ಲಿ ಈ ಸಾಲ ಜಿಡಿಪಿಯ ಶೇ. 129ರಷ್ಟಿತ್ತು. 2016ರಲ್ಲಿ ಈ ಪ್ರಮಾಣ ಏರಿದ್ದರೂ ದೇಶದ ಕೆಲವಾರು ಕ್ರಮಗಳ ಪರಿಣಾಮವಾಗಿ ಕೊಂಚ ಸುಧಾರಣೆಯನ್ನು ಪ್ರಕಟಿಸಿದರೂ ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗಿದೆ. 2014ರಲ್ಲಿ ದಿವಾಳಿತನ ಘೋಷಿಸುವ ಅಂಚಿನಲ್ಲಿದ್ದ ಪೋರ್ಚುಗಲ್ ಮೂರು ವರ್ಷಗಳಲ್ಲಿ ಕೊಂಚ ಚೇತರಿಕೆ ಪಡೆದಿದೆ ಎಂದು ನಾಸ್ಡಾಕ್ ತಿಳಿಸಿದೆ. 2015 ರಲ್ಲಿ ಬದಲಾದ ಸರ್ಕಾರ ಇದಕ್ಕೆ ಪ್ರಮುಖ ಕಾರಣವಾಗಿದ್ದು ಆರ್ಥಿಕ ಸಬಲತೆಯೆಡೆಗೆ ಪುಟ್ಟ ಹೆಜ್ಜೆಗಳನ್ನಿಡುತ್ತಿದೆ. ಪೋರ್ಚುಗಲ್ ನ ಭಾರೀ ಸಾಲದ ಕಾರಣದಿಂದ ಯೂರೋಪಿಯನ್ ಯೂನಿಯನ್ ಹಿಂದೆ ವಿಧಿಸಿದ್ದ ಶಿಸ್ತುಕ್ರಮವೊಂದನ್ನು ಈ ವರ್ಷ ಕೊಂಚ ಸಡಿಲಿಸಿದೆ.

4. ಜಪಾನ್

4. ಜಪಾನ್

24/7 ವಾಲ್ ಸ್ಟ್ರೀಟ್ ಪ್ರಕಾರ ಜಪಾನ್ ವಿಶ್ವದ ತೃತೀಯ ಅತಿ ದೊಡ್ಡ ಆರ್ಥಿಕ ದೇಶವಾಗಿದೆ. ಆದರೆ ಕೆಲವು ದಶಕಗಳ ಸ್ಥಿರ ಆರ್ಥಿಕತೆಯ ಬಳಿಕ ಕೆಲವು ಪ್ರಚೋದಕ ಹಣಕಾಸಿನ ಯೋಜನೆಗಳಿಗೆ ಸರಿಯಿತು ಎಂದು ಜಪಾನ್ ಟೈಮ್ಸ್ ತಿಳಿಸುತ್ತದೆ. ಆದರೆ ಈಗ $8.93 ಟ್ರಿಲಿಯನ್ ನಷ್ಟು (893,000,000,000,000 ರೂ) ಸಾಲಕೂಪದಲ್ಲಿದೆ ಎಂದು ನ್ಯಾಶನಲ್ ಡೆಬ್ಟ್ ಕ್ಲಾಕ್ಸ್ ಎಂಬ ಸಂಸ್ಥೆ ತಿಳಿಸಿದೆ. ಈ ಭಾರೀ ಮೊತ್ತದ ಸಾಲದಿಂದಾಗಿ ದೇಶದ ಜಿಡಿಪಿಯ 234.7% ರಷ್ಟು ಸಾಲದಲ್ಲಿದೆ. ಬಿಸಿನೆಸ್ ಇನ್ಸೈಡರ್ ಪ್ರಕಾರ ಜಪಾನ್ ವಿಶ್ವದ ಅತಿಹೆಚ್ಚು ಸಾಲದಲ್ಲಿ ಮುಳುಗಿರುವ ದೇಶವಾಗಿದೆ. ಆದರೆ ದೇಶದ ಅತ್ಯುತ್ತಮ ಮೂಲಸೌಕರ್ಯ, ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಗಳು ಈಗಲೂ ಈ ದೇಶವನ್ನು ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಿಸಿದೆ.

5. ಫ್ರಾನ್ಸ್

5. ಫ್ರಾನ್ಸ್

ಹಿಂದಿನ ವರ್ಷಗಳಲ್ಲಿ ವಿಶ್ವದ ಬಲಾಢ್ಯ ಆರ್ಥಿಕ ರಾಷ್ಟ್ರಗಳಲ್ಲೊಂದಾಗಿದ್ದ ಫ್ರಾನ್ಸ್ 2016ರಲ್ಲಿ ಅಂದಿನ ಇನ್ನೊಂದು ಬಲಾಢ್ಯ ದೇಶವಾಗಿದ್ದ, ಅಂದು ಐದನೆಯ ಸ್ಥಾನದಲ್ಲಿದ್ದ ಬ್ರಿಟನನ್ನೂ ಹಿಂದಿಕ್ಕಿತ್ತು ಎಂದು ಫಾರ್ಚೂನ್ ವರದಿ ತಿಳಿಸುತ್ತದೆ. ಅದರರ್ಥ ಈ ದೇಶಗಳಲ್ಲಿ ಆರ್ಥಿಕ ತೊಂದರೆಗಳೇ ಇರಲಿಲ್ಲವೆಂದು ಅರ್ಥವಲ್ಲ. ಫ್ರಾನ್ಸ್ ನ ಒಟ್ಟು ಸಾಲಗಳು ಆ ದೇಶದ ಉತ್ತಮ ಜಿಡಿಪಿಯಿಂದಾಗಿ ಹೊರ ಜಗತ್ತಿಗೆ ತಿಳಿಯಲೇ ಇಲ್ಲ. ಆದರೆ ಒಂದು ಟ್ರಿಲಿಯನ್ ಯೂರೋಗಳಿಗೂ ಹೆಚ್ಚಿನ ಮೊತ್ತದ ಸಾಲ ಪಡೆದ ಐದು ರಾಷ್ಟ್ರಗಳಲ್ಲಿ ಫ್ರಾನ್ಸ್ ಸಹಾ ಒಂದು. 2016ರ ಕೊನೆಯ ವೇಳೆಗೆ ಈ ಸಾಲ ಏರಿ 2.15 ಟ್ರಿಲಿಯನ್ ಯೂರೋಗಳಾಗಿದೆ! (2.57,000,000,000,000 ಡಾಲರ್). ಅಲ್ಲದೇ ಇದುವರೆಗೆ ಮುಚ್ಚಿದ ಕೆಂಡದಂತಿದ್ದ ನಿರುದ್ಯೋಗ ಸಮಸ್ಯೆಯೂ ಈಗ ಹೊರಬಿದ್ದಿದ್ದು ಇದಕ್ಕಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಫ್ರಾನ್ಸ್ ಸರ್ಕಾರ ಪ್ರಕಟಿಸಿರುವುದನ್ನು ರಾಯಿಟರ್ಸ್ ವರದಿ ಮಾಡಿದೆ. ಈ ಬದಲಾವಣೆಗಳಿಂದ ಸಂಸ್ಥೆಗಳು ಉದ್ಯೋಗಿಗಳನ್ನು ತಮಗಿಷ್ಟ ಬಂದಂತೆ ಕೆಲಸಕ್ಕೆ ತೆಗೆದುಕೊಳ್ಳುವ ಅಥವಾ ತೆಗೆದುಹಾಕುವ ಅರ್ಹತೆ ಪಡೆದಿವೆ. ಅಲ್ಲದೇ ಮಾರುಕಟ್ಟೆಯ ಸ್ಥಿತಿಗನುಸಾರವಾಗಿ ವೇತನವನ್ನೂ ನೀಡಬಹುದಾಗಿದೆ.

6. ಸೈಪ್ರಸ್

6. ಸೈಪ್ರಸ್

ಕೆಲವು ಹಿಂದಿನ ವರ್ಷಗಳಲ್ಲಿ ಸೈಪ್ರಸ್ ನ ಆರ್ಥಿಕ ಸ್ಥಿತಿ ಒಂದೇ ಪ್ರಕಾರವಿತ್ತು. ಅಲ್ಲದೇ ಸಾರ್ವಜನಿಕ ಖರ್ಚುಗಳನ್ನು ಅತಿ ಎಚ್ಚರಿಕೆಯಿಂದ ನಿರ್ವಹಿಸುತ್ತಿದ್ದ ಕಾರಣ ಈ ದೇಶದ ಬಜೆಟ್ ಸಮತೋಲನದಲ್ಲಿಯೇ ಇತ್ತು ಎಂದು ಫಾಮಾಗುಸ್ತಾ ಗೆಜೆಟ್ ವರದಿ ಮಾಡಿದೆ. 2018ರ ವರೆಗೂ ಸೈಪ್ರಸ್ ಇದೇ ಪ್ರಕಾರದ ಸಂತುಲಿತ ಬಜೆಟ್ ಹೊಂದಲಿದೆ ಎಂದು ನಿರೀಕ್ಷಿಸುತ್ತಿದೆ. ಆದರೆ ಇದಕ್ಕೂ ಹಿಂದೆ ಪಡೆದ ಸಾಲಗಳು ಮಾತ್ರ 9.3 ಬಿಲಿಯನ್ ಯೂರೋ (23.1 ಬಿಲಿಯನ್ ಡಾಲರ್) ದಷ್ಟಿದ್ದು ಇದು 2016ರಲ್ಲಿ ದೇಶದಲ್ಲಿದ್ದ ಜಿಡಿಪಿಯ 107.8 % ದಷ್ಟಿದೆ ಎಂದು ಯೂರೋಸ್ಟಾಟ್ ತಿಳಿಸುತ್ತದೆ. ಈ ವರ್ಷ ಅರ್ಥ ಶಾಸ್ತ್ರಜ್ಞರ ಪ್ರಕಾರ ಸೈಪ್ರಸ್ 2013ರಲ್ಲಿ ನಿರ್ವಹಿಸಿದ್ದ ಬ್ಯಾಂಕ್ ಠೇವಣಿಯ ಮೇಲೆ ಚಂದಾ ತೆರಿಗೆ ಮೊದಲಾದ ಕ್ರಮಗಳಿಂದ ಶೀಘ್ರವೇ ತನ್ನ ಸಾಲಗಳನ್ನು ಪಾವತಿಸುತ್ತಿದೆ ಹಾಗೂ ಈ ಮೂಲಕ ಶೀಘ್ರವೇ ಸಾಲಮುಕ್ತ ಬಲಾಢ್ಯ ರಾಷ್ಟವಾಗಲಿದೆ ಹಾಗೂ ಈ ದೇಶದಲ್ಲಿ ಹೂಡಿಕೆ ಮಾಡಲು ಉತ್ತಮವಾಗಲಿದೆ ಎಂದು ಬ್ಲೂಮ್ಬರ್ಗ್ ತಿಳಿಸಿದೆ. ಡಿಪಿ ವರ್ಲ್ಡ್ (ದುಬೈ ಪೋರ್ಟ್ ವರ್ಲ್ಡ್) ಎಂಬ ವಿಶ್ವವ್ಯಾಪಾರದ ಸಂಸ್ಥೆಯೊಂದು ಈ ದೇಶದಲ್ಲಿ ಹೂಡಿಕೆ ಹೂಡಲು ಉತ್ಸುಕತೆ ತೋರಿದ್ದು ಈ ಮೂಲಕ ಅಭಿವೃದ್ದಿ ಹೆಚ್ಚಲಿದೆ ಎಂದು ಸೈಪ್ರಸ್ ಮೇಲ್ ತಿಳಿಸಿದೆ. ಈ ಹೂಡಿಕೆಯಿಂದ ಪ್ರೇರಿತರಾಗಿ ಇನ್ನೂ ಹೆಚ್ಚಿನ ಹೂಡಿಕೆದಾರರು ಈ ದೇಶದಲ್ಲಿ ಹೂಡಿಕೆ ಹೂಡಲು ತಯಾರಾಗುವ ಕಾರಣ ಈ ದ್ವೀಪರಾಷ್ಟ್ರಕ್ಕೆ ಹೆಚ್ಚಿನ ಅವಕಾಶಗಳು ಎದುರಾಗಲಿವೆ ಎಂದು ಸೈಪ್ರಸ್ ಸರ್ಕಾರ ಆಶಾಭಾವನೆ ವ್ಯಕ್ತಪಡಿಸಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.

7. ಜರ್ಮನಿ

7. ಜರ್ಮನಿ

ಜರ್ಮನಿ ದೇಶದ ಇತಿಹಾಸದಲ್ಲಿ ಸದಾ ಉತ್ತಮ ಆರ್ಥಿಕತೆಯೇ ಕಂಡು ಬಂದಿದ್ದು ವಿಶ್ವಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಯೇ ಇತ್ತು. ಕಳೆದ ಐದು ವರ್ಷಗಳಲ್ಲಿ ತನ್ನ ಜಿಡಿಪಿಯ ಶೇಖಡವಾರು ಸಾಲವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾದ ಕೆಲವೇ ಯೂರೋಪಿಯನ್ ಯೂನಿಯನ್ ದೇಶಗಳಲ್ಲಿ ಜರ್ಮನಿ ಸಹಾ ಒಂದು. 2016ರಲ್ಲಿ ಜರ್ಮನಿಯ ಜಿಡಿಪಿಯ 68.3% ದಷ್ಟು ಸಾಲ ಹೊಂದಿತ್ತು ಎಂದು ಯೂರೋಸ್ಟಾಟ್ ತಿಳಿಸುತ್ತದೆ. ಆದರೆ ಇದರ ಅರ್ಥ ಜರ್ಮನಿಗೆ ಅಪಾಯಕ್ಕೆ ನೂಕಬಲ್ಲ ತನ್ನದೇ ಆದ ನ್ಯೂನತೆಗಳು ಮತ್ತು ದೋಷಗಳು ಇಲ್ಲವೆಂದಲ್ಲ. ಪಟ್ಟಿಯಲ್ಲಿರುವ ಇತರ ದೇಶಗಳಿಗೆ ಹೋಲಿಸಿದರೆ ಜಿಡಿಪಿ ಮತ್ತು ಸಾಲದ ಅನುಪಾತ ಕಡಿಮೆಯೇ ಇದ್ದರೂ 2.14 ಟ್ರಿಲಿಯನ್ ಯೂರೋ (2.56 ಬಿಲಿಯನ್ ಡಾಲರುಗಳು) ನಷ್ಟು ದೊಡ್ಡ ಮೊತ್ತದ ಸಾಲ ಯೂರೋಪಿಯನ್ ಯೂನಿಯನ್ ಮಟ್ಟಿಗೆ ದೊಡ್ಡದೇ ಸರಿ. ಜರ್ಮನಿಯ ಆರ್ಥಿಕತೆ ರಫ್ತನ್ನೇ ಹೆಚ್ಚಾಗಿ ಅವಲಂಬಿಸಿದೆ. ಈ ಮೂಲಕ ವಿಶ್ವಮಟ್ಟದಲ್ಲಿ ಆಗುವ ಬೆಲೆಗಳ ಏರುಪೇರುಗಳು ಹಾಗೂ ಜರ್ಮನಿನ ಉತ್ಪನ್ನಗಳನ್ನು ಕೊಳ್ಳುವ ರಾಷ್ಟ್ರಗಳ ಆರ್ಥಿಕತೆ ಕುಸಿದು ಇವುಗಳ ಕೊಳ್ಳುವ ಸಾಮರ್ಥ ಕಡಿಮೆಯಾಗುವುದು ಸಹಾ ಜರ್ಮನಿಯ ಆರ್ಥಿಕತೆ ಕುಸಿಯಲು ಪರೋಕ್ಷವಾಗಿ ಕಾರಣವಾಗಿದೆ ಎಂದು ಜಿಯೋಪೊಲಿಟಿಕಲ್ ಫ್ಯೂಚರ್ಸ್ ವರದಿ ಮಾಡಿದೆ. ಇದರೊಂದಿಗೆ 2015ರಲ್ಲಿ ಜರ್ಮನಿಗೆ ಆಗಮಿಸಿದ ಹತ್ತು ಲಕ್ಷಕ್ಕೂ ಹೆಚ್ಚಿನ ನಿರಾಶ್ರಿತರೂ ದೇಶದ ಕಾರ್ಮಿಕ ಮಾರುಕಟ್ಟೆಯನ್ನು ಶಿಥಿಲಗೊಳಿಸಿದೆ ಎಂದು 24/7 ವಾಲ್ ಸ್ಟ್ರೀಟ್ ವರದಿ ಮಾಡಿದೆ.

8. ಜಮೈಕಾ

8. ಜಮೈಕಾ

ವಿಶ್ವದ ಅತಿ ವೇಗವಾಗಿ ಓಡಬಲ್ಲ ವ್ಯಕ್ತಿ ಉಸೈನ್ ಬೋಲ್ಟ್ ಈ ದೇಶದ ಪ್ರಜೆಯಾಗಿದ್ದರೂ ಈತನ ದೇಶ ಮಾತ್ರ 2006ರಿಂದ ಸತತವಾಗಿ ಆರ್ಥಿಕವಾಗಿ ಕುಸಿಯುತ್ತಿದೆ ಎಂದು ಕಂಟ್ರಿಎಕಾನಮಿ.ಕಾಮ್ ವರದಿ ಮಾಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತನ್ನ ಸಾಲಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸಾಧಿಸಿರುವ ಕ್ಯಾರಿಬಿಯನ್ ದೇಶವಾದ ಜಮೈಕಾ 2015 ಮತ್ತು 2016ರ ನಡುವೆ ಗಮನಾರ್ಹ ಸಾಲದಲ್ಲಿ ಇಳಿಕೆಯನ್ನು ಸಾಧಿಸಿದೆ. ಆದರೂ ಸಾಧಿಸಬೇಕಾದುದು ಇನ್ನೂ ಬಹಳಷ್ಟಿದೆ. ವಿಶ್ವ ಹಣಕಾಸು ನಿಧಿ (ಐಎಂಎಫ್) ವರದಿಯ ಪ್ರಕಾರ ಈ ದೇಶದ ನೂರರಲ್ಲಿ ಹದಿಮೂರು ಜನರು ಇನ್ನೂ ನಿರುದ್ಯೋಗಿಗಳಾಗಿದ್ದು ದೇಶದ ಬಡತನ ಹೆಚ್ಚೇ ಇದೆ ಹಾಗೂ ಆರ್ಥಿಕ ಪ್ರಗತಿ ಬಹಳ ಕಷ್ಟದಲ್ಲಿ ಸಾಧಿಸಲಾಗುತ್ತಿದೆ. ಜಮೈಕಾದ ಆರ್ಥಿಕ ವ್ಯವಹಾರಗಳು ಮತ್ತು ಆರ್ಥಿಕ ಬೆಳವಣಿಗೆ ಮಂಡಳಿಯ ಉಪ ಅಧ್ಯಕ್ಷರಾದ ನೈಜೆಲ್ ಕ್ಲಾರ್ಕ್ ರವರು ಐ ಎಂ ಎಫ್ ಗೆ ಸಲ್ಲಿಸಿದ ವರದಿಯ ಪ್ರಕಾರ ಜಮೈಕಾ ಮಧ್ಯಂತರ ಅವಧಿಯ ಒಳಗೆ ಮೂಲಭೂತ ಸೌಕರ್ಯಗಳಲ್ಲಿ ಏಳು ಶೇಖಡಾದಷ್ಟು ಪ್ರಗತಿ ಸಾಧಿಸಲಿದೆ. ಇದು ದೊಡ್ಡ ಸವಾಲೇ ಆದರೂ ಸಾಧಿಸಬಹುದಾದ ಸವಾಲಾಗಿದೆ ಎಂಬ ಆಶಾವಾದವನ್ನು ಅವರು ಪ್ರಕಟಿಸಿದ್ದಾರೆ.

9. ಇರಾನ್

9. ಇರಾನ್

2016 ಇರಾನ್ ಪಾಲಿಗೆ ಒಂದು ಯಶಸ್ವಿ ವರ್ಷವಾಗಿತ್ತು ಆದರೆ ಸತತ ಬೆಳವಣಿಗೆ ಮಾತ್ರ ನಿರೀಕ್ಷಿತ ಮಟ್ಟಕ್ಕೇರಲಿಲ್ಲ ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ. ತನ್ನ ದೇಶದಲ್ಲಿರುವ ತೈಲ ಭಂಡಾರವನ್ನೇ ಮುಖ್ಯವಾಗಿ ಆಧರಿಸಿರುವ ಇರಾನ್ ಈಗ ವಿಶ್ವಮಟ್ಟದಲ್ಲಿ ತೈಲಬೆಲೆ ಕುಸಿತದ ಪ್ರಭಾವವನ್ನು ಎದುರಿಸಬೇಕಾಗಿ ಬಂದಿದೆ. ಅಲ್ಲದೇ ಅಗತ್ಯಕ್ಕೂ ಹೆಚ್ಚೇ ತೈಲವನ್ನು ಮಾರುಕಟ್ಟೆಗೆ ಒದಗಿಸಿದ ಕಾರಣ ಇದರ ಪರಿಣಾಮವನ್ನು ಅನುಭವಿಸುತ್ತಿದೆ ಎಂದು ಸಿಎನ್ಎನ್ ಪ್ರಕಟಿಸಿದೆ. ಹಣದುಬ್ಬರದೊಂದಿಗೆ ನಿರುದ್ಯೋಗವೂ ಇಲ್ಲಿ ಹೆಚ್ಚುತ್ತಿದೆ. ಇವೆರಡೂ ಇರಾನ್ ನ ಆರ್ಥಿಕ ಸ್ಥಿತಿಯನ್ನು ಕೆಳಕ್ಕೆಳೆಯುತ್ತಿವೆ. ಪ್ರಸ್ತುತ ಕೈಗಾರಿಕೆಗಳಿಗೆ ಅಥವಾ ಇತರ ಆರ್ಥಿಕ ಆದಾಯದ ಕಡೆಗೆ ಯಾವುದೇ ಗಮನ ನೀಡುತ್ತಿಲ್ಲವಾದುದರಿಂದ ತನ್ನ ಯಾವ ಸಂಪನ್ಮೂಲವನ್ನು ಉನ್ನತೀಕರಿಸಬೇಕೆಂದು ಇರಾನ್ ಶೀಘ್ರವೇ ನಿರ್ಧರಿಸಬೇಕಾಗಿದೆ. ಕೃಷಿ ಹಾಗೂ ಸೇವಾಕ್ಷೇತ್ರಗಳಿಗೆ ಇಂದು ಹೆಚ್ಚಿನ ಬೇಡಿಕೆ ಪಡೆದಿದ್ದು ಈ ಮಧ್ಯಪ್ರಾಚ್ಯ ದೇಶದ ಆರ್ಥಿಕತೆಯನ್ನು ಕೈಹಿಡಿಯಲು ನೆರವಾಗಬಹುದು.

10. ಚೀನಾ

10. ಚೀನಾ

ಪ್ರಸ್ತುತ ಚೀನಾ ವಿಶ್ವದ ಎರಡನೆಯ ಅತಿದೊಡ್ಡ ಆರ್ಥಿಕತೆಯ ದೇಶವಾಗಿದ್ದರೂ, ಈ ದೇಶ ತನ್ನದೇ ಆದ ಆರ್ಥಿಕ ಹೋರಾಟದಿಂದ ಮುಕ್ತವಾಗಿಲ್ಲ ಎಂದು ಜಿಯೋಪೊಲಿಟಿಕಲ್ ಪ್ಯೂಚರ್ಸ್ ವರದಿ ಮಾಡಿದೆ. ವಿಶ್ವಮಟ್ಟದಲ್ಲಿ ಭಾರೀ ಪ್ರಮಾಣದ ರಫ್ತುಗಳ ಮೂಲಕ ಚೀನಾ ದಂಗು ಬಡಿಸುವಂತಹ ಆರ್ಥಿಕ ಪ್ರಗತಿ ಸಾಧಿಸಿದೆ. ಆದರೆ ಸತತವಾಗಿ ಏರುತ್ತಿರುವ ಉತ್ಪಾದನಾ ವೆಚ್ಚ ಹಾಗೂ ವಿಶ್ವಮಟ್ಟದಲ್ಲಿ ಕುಸಿಯುತ್ತಿರುವ ಚೀನಾ ನಿರ್ಮಿತ ವಸ್ತುಗಳ ಬೇಡಿಕೆ ಆರ್ಥಿಕ ಪ್ರಗತಿಯನ್ನು ಹಿಂದಕ್ಕೆಳೆಯುತ್ತಿದೆ. ಯಾವಾಗ ಈ ಪ್ರಗತಿ ಹಿನ್ನಡೆ ಪಡೆಯಿತೋ, ಕೆಲವೆಡೆ ಕುಸಿತವನ್ನೂ ಕಂಡಿತೋ, ಚೀನಾ ತಕ್ಷಣವೇ ಎಚ್ಚೆತ್ತು ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿತ್ತು. ರಫ್ತಾಗಿ ಹೋಗದ ವಸ್ತುಗಳನ್ನು ತನ್ನ ದೇಶದಲ್ಲಿಯೇ ಬಳಸಿಕೊಳ್ಳಲು ಹಾಗೂ ತನ್ನ ಹೂಡಿಕೆಗಳನ್ನು ಸೇವಾ ಕ್ಷೇತ್ರದಲ್ಲಿ ಹೂಡುವ ಮೂಲಕ ಉತ್ಪಾದನೆಯ ಮೇಲಿನ ಅವಂಬನೆಯನ್ನು ಕಡಿಮೆಗೊಳಿಸುವ ಕ್ರಮಗಳನ್ನು ಕೈಗೊಂಡಿದೆ ಎಂದು ಸಿಎನ್ ಬಿ ಸಿ ವರದಿ ಮಾಡಿದೆ. ಆದರೆ ಈ ಬದಲಾವಣೆಗಳು ದೊಡ್ಡ ಸವಾಲಾಗಿವೆ. ಅಲ್ಲದೇ ರಾಜ್ಯಗಳ ಒಡೆತನದ ಸಂಸ್ಥೆಗಳು ಚೀನಾದ ಆರ್ಥಿಕತೆಯನ್ನು ಹೆಚ್ಚಿಸುವ ಮೂಲಗಳಾಗಿದ್ದರೂ ಈ ಸಂಸ್ಥೆಗಳ ಸುಧಾರಣಾ ಕ್ರಮಗಳಲ್ಲಿ ಉದ್ಯೋಗಗಳಲ್ಲಿ ಹಾಗೂ ವೆಚ್ಚದಲ್ಲಿ ಕಡಿತಗಳು ನಾಗರಿಕರು ಈ ಸಂಸ್ಥೆಗಳನ್ನು ಮೆಚ್ಚದೇ ಇರಲು ನೆಪವಾಗಿ ಆರ್ಥಿಕ ಹಿನ್ನಡೆಗೆ ಪರೋಕ್ಷ ಕಾರಣವಾಗಿದೆ.

English summary

COUNTRIES WHOSE ECONOMIES ARE IN TROUBLE

A strong economy can be a hard goal to achieve and even tougher to maintain. Most countries have at least a few ways in which they can improve. Some must focus on driving down unemployment and poverty rates; others need to address their high balance sheets.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more