For Quick Alerts
ALLOW NOTIFICATIONS  
For Daily Alerts

ಭಾರತದ ಬೆಳವಣಿಗೆಗೆ ಕೇಂದ್ರಕ್ಕಿಂತ ರಾಜ್ಯಗಳದ್ದೆ ಮೇಲುಗೈ

By Siddu
|

ದೇಶದ ಒಟ್ಟು ಶೇ. 7ರಷ್ಟು ಬೆಳವಣಿಗೆಗೆ ಕೇಂದ್ರ ಸರ್ಕಾರದ ಬದಲಾಗಿ ರಾಜ್ಯದ ನಾಯಕರು, ಮುಖ್ಯಂತ್ರಿಗಳು ಹೆಚ್ಚಿನ ಕಾರಣಿಭೂತರಾಗಿದ್ದು, ಪ್ರತಿ ರಾಜ್ಯದ ನಾಯಕರ ಪಾತ್ರ ತುಂಬಾ ಮಹತ್ವಪೂರ್ಣವಾದುದ್ದಾಗಿದೆ ಹೀಗಾಗಿ ಭಾರತ ಅವರಿಗೆ ಧನ್ಯವಾದ ಹೇಳಬೇಕು ಎಂದು ಸಮೀಕ್ಷೆ ತಿಳಿಸಿದೆ.

 

ವಿಶ್ವ ಆರ್ಥಿಕ ವೇದಿಕೆ ತಯಾರಿಸಿರುವ ಜಾಗತಿ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ 16 ಸ್ಥಾನಗಳ ಏರಿಕೆ ಕಂಡು 39ನೇ ಸ್ಥಾನ ಪಡೆದಿದೆ. ಜಗತ್ತಿನ ಅತಿ ಸಿರಿವಂತ ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದರೆ, 2030ರಲ್ಲಿ ಜಗತ್ತನ್ನು ಆಳುವ ದೇಶಗಳ ಸಾಲಿನಲ್ಲಿ 3ನೇ ಶ್ರೇಯಾಂಕದಲ್ಲಿದೆ. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. 'ಭಾರತ, ಚೀನಾ, ಪಾಕಿಸ್ತಾನ' ಆರ್ಥಿಕ ಸಮರದಲ್ಲಿ ಯಾರಿಗೆ ಗೆಲುವು?

ಭಾರತದ ವೇಗದ ಬೆಳವಣಿಗೆಗೆ ಹಾಗೂ ಕೆಲ ಕುಸಿತಕ್ಕೆ ಕಾರಣವಾಗಿರುವ ಪ್ರಧಾನ ಅಂಶಗಳನ್ನು ಇಲ್ಲಿ ನೀಡಲಾಗಿದೆ.

1. ಅಡಿಟರ್ ಅಂಕಿಅಂಶ

1. ಅಡಿಟರ್ ಅಂಕಿಅಂಶ

ರಾಷ್ಟ್ರೀಯ ಅಡಿಟರ್ ಡೇಟಾ ಪ್ರಕಾರ ಏಪ್ರಿಲ್ ನಿಂದ ಜುಲೈ ಅವಧಿಯಲ್ಲಿ ಶೇ. 29ರಷ್ಟು ಸ್ಥಳೀಯ ಆಡಳಿತ/ಸರ್ಕಾರಗಳು ರಸ್ತೆ, ಬಂದರು ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ಹೆಚ್ಚು ಖರ್ಚು ಮಾಡಿದ್ದಾರೆ. ಸ್ಥಳೀಯ ಅಭಿವೃದ್ಧಿಯಲ್ಲಿನ ಬೆಳವಣಿಗೆಯಿಂದಾಗಿ ದೇಶದ ಒಟ್ಟು ಬೆಳವಣಿಗೆಗೆ ವೇಗೋತ್ಕರ್ಷ ಸಿಕ್ಕಿದೆ.

2. ಸೆಂಟ್ರಲ್ ಬ್ಯಾಂಕ್ ವರದಿ

2. ಸೆಂಟ್ರಲ್ ಬ್ಯಾಂಕ್ ವರದಿ

ವೆಚ್ಚದಲ್ಲಿ ಶೇ. ಒಂದರಷ್ಟು ಹೆಚ್ಚಳವಾಗಿದ್ದು, ಅದರಲ್ಲಿ ರಾಜ್ಯಗಳು ಶೇ. 0.11ರಷ್ಟು ಒಟ್ಟು ದೇಶಿಯ ಉತ್ಪನ್ನ ಹೆಚ್ಚಳಕ್ಕೆ ಕಾರಣವಾಗಿವೆ. ರಾಜ್ಯಗಳಿಗೆ ಹೋಲಿಸಿದರೆ ಒಕ್ಕೂಟದ ಹೂಡಿಕೆಯಿಂದ ಶೇ. 0.04ರಷ್ಟು ಮಾತ್ರ ಹೆಚ್ಚಳವಾಗಿದೆ. ಹೀಗಾಗಿ ಕೇಂದ್ರಕ್ಕಿಂತ ರಾಜ್ಯಗಳ ಕೊಡುಗೆಯೇ ಹೆಚ್ಚಿದೆ ಎಂದು ಸೆಂಟ್ರಲ್ ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.

3.  ಶೇ. 33.7ರಷ್ಟು ಕುಸಿತ
 

3. ಶೇ. 33.7ರಷ್ಟು ಕುಸಿತ

ಕಳೆದ ತಿಂಗಳು ಹೆಚ್ಚಿನ ನಾಗರಿಕ ಸೇವಾ ಸಂಬಳಕ್ಕಾಗಿ ಹೆಚ್ಚು ಹಣವನ್ನು ವ್ಯಯ ಮಾಡಿದ್ದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ಅವಧಿಯಲ್ಲಿ ಶೇ. 33.7ರಷ್ಟು ಕುಸಿತ ಕಂಡಿದೆ. ಭಾರತೀಯ ರಾಜ್ಯಗಳ ಸಾಲ ವೆಚ್ಚ ಸಾರ್ವಭೌಮ ಬಾಂಡ್ ಇಳುವರಿಗಿಂತ ವೇಗವಾಗಿ ಕುಸಿಯುತ್ತಿದೆ.

4. ಮೋದಿಗೆ ವರ

4. ಮೋದಿಗೆ ವರ

2019ರಲ್ಲಿನ ಪುನರಾಯ್ಕೆ ಸ್ಪರ್ಧೆಯ ಮುನ್ನ ದೇಶದ ಸರ್ವಾಂಗೀಣ ಹಾಗೂ ಆರ್ಥಿಕ ಅಭಿವೃದ್ಧಿ ಸುಧಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದು, ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಿರುವುದು ಮೋದಿಯವರಿಗೆ ವರವಾಗಿದೆ.

5. ಪ್ಯೂ ಸಮೀಕ್ಷೆ

5. ಪ್ಯೂ ಸಮೀಕ್ಷೆ

ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾದ ನಂತರ ನಿರುದ್ಯೋಗ ಮಟ್ಟದಲ್ಲಿ ಏರಿಕೆಯಾಗಿದೆ. ಆದರೂ ಭಾರತದ ಅತ್ಯಂತ ನೆಚ್ಚಿನ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಪ್ಯೂ ಸಮೀಕ್ಷೆ ವರದಿ ಮಾಡಿದೆ.

6. ಮಾರ್ಗದರ್ಶನ ಕೊರತೆ

6. ಮಾರ್ಗದರ್ಶನ ಕೊರತೆ

ಸ್ಥಳಿಯ ಅಗತ್ಯಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡುವಲ್ಲಿ ಹಾಗೂ ರಾಜ್ಯಗಳು ಹೇಗೆ ನಗದನ್ನು ಬಳಸಬಹುದು ಎಂಬುದರ ಕುರಿತು ಮೋದಿಯವರ ಆಡಳಿತದ ಈ ತಿಂಗಳಲ್ಲಿ ಸರಿಯಾದ ಮಾರ್ಗದರ್ಶನ ರಾಜ್ಯಗಳಿಗೆ ಸಿಗಲಿಲ್ಲ.

7. ಸಾಲವೆಚ್ಚದಲ್ಲಿ ಕುಸಿತ

7. ಸಾಲವೆಚ್ಚದಲ್ಲಿ ಕುಸಿತ

ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಿಗೆ ಸಿಗುವ ಸಾಲ ವೆಚ್ಚದ ಮೂಲಾಂಕದಲ್ಲಿ 17 ರಿಂದ 22ಕ್ಕೆ ಕುಸಿತ ಕಂಡಿದೆ. ಸಾರ್ವಬೌಮ ಇಳುವರಿಯ ಮಾನದಂಡಕ್ಕೆ ಹೋಲಿಸಿದರೆ ಆರು ಅಂಕಗಳ ಕುಸಿತವಾಗಿದೆ ಎಂದು ಸಮೀಕ್ಷೆ ಹೇಳಿದೆ.

8. 750 ಬಿಲಿಯನ್ ರೂಪಾಯಿ ಸಂಗ್ರಹ

8. 750 ಬಿಲಿಯನ್ ರೂಪಾಯಿ ಸಂಗ್ರಹ

ಸೆಪ್ಟಂಬರ್ 30ಕ್ಕೆ ಕೊನೆಗೊಳ್ಳುವ ತ್ರೈಮಾಸಿಕಕ್ಕೆ ಒಳಗಾಗಿ 750 ಬಿಲಿಯನ್ ರೂಪಾಯಿ ಸಂಗ್ರಹಿಸಲು ಭಾರತೀಯ ರಾಜ್ಯಗಳು ಯೋಜನೆ ಮಾಡಿವೆ ಎಂದು ಸೆಂಟ್ರಲ್ ಬ್ಯಾಂಕ್ ವೆಬ್ಸೈಟ್ ತಿಳಿಸಿದೆ.

9. ಸೀಮಿತ ಪಾತ್ರ

9. ಸೀಮಿತ ಪಾತ್ರ

ಇಷ್ಟಾದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೀಮಿತ ಪಾತ್ರವನ್ನು ವಹಿಸುತ್ತವೆ. ಶೇ. 80ರಷ್ಟು ಭಾರತದ ಒಟ್ಟು ಬಂಡವಾಳ ವೆಚ್ಚ ಕುಟುಂಬ ಮತ್ತು ಕಾರ್ಪೋರೇಟ್ ಗಳಿಂದ ಬರುತ್ತದೆ. ಹೀಗಾಗಿ ಸರ್ಕಾರಗಳ ಪಾತ್ರ ತುಂಬಾ ಕಡಿಮೆ ಎಂದು ಹೇಳಲಾಗಿದೆ

10. ಕನ್ಸ್ಟ್ರಕ್ಸನ್ ವಲಯ ಕುಸಿತ

10. ಕನ್ಸ್ಟ್ರಕ್ಸನ್ ವಲಯ ಕುಸಿತ

ಉದ್ಯೋಗ ಸೃಷ್ಟಿಯ ಮೂಲ ಶಕ್ತಿಯಾಗಿರುವ ಕನ್ಸ್ಟ್ರಕ್ಸನ್ ವಲಯ ಒಂದು ವರ್ಷದ ಹಿಂದೆ ಶೇ. 5.6ರಷ್ಟಿತ್ತು. ಏಪ್ರಿಲ್ - ಜೂನ್ ಅವಧಿಯಲ್ಲಿ ಶೆ 1.5ರಷ್ಟು ಜಾರಿದೆ. ರಾಷ್ಟ್ರದ ಅರ್ಧಕ್ಕಿಂತ ಹೆಚ್ಚಿನ ಜನರು ಅವಲಂಬಿಸಿರುವ ಕೃಷಿ ಉತ್ಪತ್ತಿಯಲ್ಲೂ ಶೇ. 2.6 ರಿಂದ 1.8ರಷ್ಟು ಕುಸಿತ ಕಂಡಿದೆ.

11. ಜಿಡಿಪಿ ಹೆಚ್ಚಳ

11. ಜಿಡಿಪಿ ಹೆಚ್ಚಳ

ಕಳೆದ ಒಂದು ವರ್ಷದ ಹಿಂದೆ ಇದ್ದ ಶೇ. 7.2ರಷ್ಟು ಜಿಡಿಪಿಯ ಪ್ರಮಾಣ ಶೇ. 7.6ಕ್ಕೆ ಏರಿಕೆ ಕಂಡಿದೆ.

12. ಜಾಗತಿಕವಾಗಿ ಭಾರತ ಮೇಲುಗೈ

12. ಜಾಗತಿಕವಾಗಿ ಭಾರತ ಮೇಲುಗೈ

ಈ ಎಲ್ಲ ವಿಚಾರಗಳ ನಡುವೆಯೂ ಭಾರತ ಜಗತ್ತಿನಲ್ಲಿ ತಂತ್ರಜ್ಞಾನ ಆಧಾರಿತ, ತಂತ್ರಜ್ಞಾನ ರಹಿತ, ಸ್ಟಾರ್ಟ್ಅಪ್, ಇ-ಕಾಮರ್ಸ್ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುತ್ತಿದೆ. ಅಲ್ಲದೇ ತಂತ್ರಜ್ಞಾನ ಮತ್ತು ಉದ್ದಿಮೆ ವಹಿವಾಟಿನ ಪ್ರಮುಖ ದೇಶವಾಗಿದೆ. ಭಾರತವು ಒಟ್ಟು ರೂ. 375 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ. ಭಾರತ ತುಂಬಾ ವೇಗವಾಗಿ ಬೆಳೆಯುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ.

English summary

India should thank its CMs more than Modi for 7 percent plus growth

India can thank its state leaders, rather than the federal government, for its 7 percent-plus growth rate. Local administrations raised spending on roads, ports and power plants by 29 percent in April to July, according to data from the national auditor.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X