For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ ಟಾಪ್ 10 ಸಾಪ್ಟ್‌ವೇರ್ ಕಂಪನಿಗಳು

By Siddu
|

ದೇಶದಲ್ಲಿ ಸಾಪ್ಟವೇರ್, ಐಟಿ ಮತ್ತು ತಂತ್ರಜ್ಞಾನ ರಂಗಗಳು ಪ್ರಮುಖ ಸೇವಾ ವಲಯಗಳಾಗಿವೆ. ಇವು ನೂರಾರು ಉದ್ಯೋಗಗಳನ್ನು ಸೃಷ್ಟಿ ಮಾಡಿ, ದೇಶದ ಜಿಡಿಪಿ(GDP) ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡುತ್ತಿವೆ.

ಇನ್ಫೋಸಿಸ್, ವಿಪ್ರೋ, ಐಬಿಎಂ, ಅಸೆಂಚರ್, ಟೆಕ್ ಮಹೀಂದ್ರಾ ಇವೇಲ್ಲವೂ ಬೆಂಗಳೂರಿನಲ್ಲಿನ ಪ್ರಸಿದ್ದ ಕಂಪನಿಗಳಷ್ಟೆ ಅಲ್ಲದೆ, ಜಾಗತಿಕವಾಗಿ ಹಾಗೂ ದೇಶದಲ್ಲಿ ಅಗ್ರ ಶ್ರೆಯಾಂಕ ಹೊಂದಿರುವ ಕಂಪನಿಗಳಾಗಿವೆ.

ಬೆಂಗಳೂರಿನಲ್ಲಿ ಟಾಪ್ 10 ಅಗ್ರ ಶ್ರೇಯಾಂಕ ಪಡೆದಿರುವ ಪ್ರಮುಖ ಸಾಪ್ಟವೇರ್ ಕಂಪನಿಗಳ ಕುತೂಹಲಕಾರಿ ವಿವರ ಇಲ್ಲಿದೆ ನೋಡಿ.

1. ಇನ್ಫೋಸಿಸ್

1. ಇನ್ಫೋಸಿಸ್

1981ರಲ್ಲಿ ನಾರಾಯಣ ಮೂರ್ತಿ ಇನ್ಫೋಸಿಸ್ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಭಾರತದ 2ನೇ ಅತಿದೊಡ್ಡ ಐಟಿ ಕಂಪನಿಯಾಗಿದೆ. ಇನ್ಫೋಸಿಸ್ ಭಾರತದಲ್ಲಿನ ಅತ್ಯಂತ ಜನಪ್ರಿಯ ಬ್ರಾಂಡ್ ಆಗಿದ್ದು, ಇದು ನಾರಾಯಣ ಮೂರ್ತಿ, ಗೋಪಾಲಕೃಷ್ಣನ್, ನಂದನ್ ನಿಲೇಖಣಿ ಮತ್ತು ವಿಶಾಲ್ ಸಿಕ್ಕಾ ತರಹದ ಪ್ರಬಲ ನಾಯಕರು ಹೊಂದಿದೆ. ಪ್ರಸ್ತುತ 194000 ಉದ್ಯೋಗಿಗಳನ್ನು ಹೊಂದಿದ್ದು, ವಿಶ್ವದ 40ಕ್ಕಿಂತ ಹೆಚ್ಚಿನ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅಂಗಸಂಸ್ಥೆಗಳು:
-ಇನ್ಫೋಸಿಸ್ ಬಿಪಿಓ
- ಇನ್ಫೋಸಿಸ್ ಕನ್ಸಲ್ಟಿಂಗ್
- ಇನ್ಫೋಸಿಸ್ ಸಾರ್ವಜನಿಕ ಸೇವೆಗಳು
- Skava
- EdgeVerve

2. ವಿಪ್ರೊ

2. ವಿಪ್ರೊ

1945ರಲ್ಲಿ ಅಸ್ತಿತ್ವಕ್ಕೆ ಬಂದ ವಿಪ್ರೊ ಭಾರತದಲ್ಲಿನ ಮೂರನೇ ಅತಿದೊಡ್ಡ ಐಟಿ ಕಂಪನಿಯಾಗಿದೆ. 1990ರಲ್ಲಿ ವಿಪ್ರೊ ಕಡಲಾಚೆಯ ಅಭಿವೃದ್ಧಿ ಮಾದರಿ ಕೇಂದ್ರಗಳನ್ನು ಪ್ರಾರಂಭಿಸಿದೆ. ಜಗತ್ತಿನ ಅನೇಕ ಭಾಗಗಳಿಂದ 170000 ಉದ್ಯೋಗಿಗಳನ್ನು ನೇಮಿಸಿದ್ದು, 60 ದೇಶಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿದೆ. ವಿಪ್ರೊ CMMI ಐದು ಹಂತದ ಕಂಪನಿ.
ವಿಪ್ರೊ ಸೇವಾ ವಯಗಳು
- ಬಿಎಫ್ಎಸ್ಐ
- ಉತ್ಪಾದನೆ ಮತ್ತು ತಂತ್ರಜ್ಞಾನ
- ಕಮ್ಯುನಿಕೇಷನ್ಸ್
- ಗ್ರಾಹಕ ವ್ಯವಹಾರ ಘಟಕ
- ಶಕ್ತಿ, ನೈಸರ್ಗಿಕ ಸಂಪನ್ಮೂಲ ಮತ್ತು ಉಪಯುಕ್ತತೆ
- ಹೆಲ್ತ್ ಕೇರ್ ಮತ್ತು ಲೈಫ್ ಸೈನ್ಸಸ್

3. ಅಸೆಂಚರ್

3. ಅಸೆಂಚರ್

ಸ್ಥಾಪನೆ - 1913
ಕಾರ್ಪೊರೇಟ್ ಕಚೇರಿ - ಡಬ್ಲಿನ್(ಐರ್ಲೆಂಡ್)
ಉದ್ಯಮ - ಐಟಿ, ಬಿಸಿನೆಸ್ ಕನ್ಸಲ್ಟಿಂಗ್ ಮತ್ತು ಹೊರಗುತ್ತಿಗೆ
Website - www. accenture.com
ಅಸೆಂಚರ್ ಬೆಂಗಳೂರಿನ ಅಗ್ರ ಸಾಪ್ಟವೇರ್ ಕಂಪನಿಗಳಲ್ಲಿ ಒಂದಾಗಿದೆ. ಇದು ಬಹುರಾಷ್ಟ್ರೀಯ ಸಾಪ್ಟವೇರ್ ಕಂಪನಿಯಾಗಿದ್ದು, ಹೆಚ್ಚುಕಡಿಮೆ ಜಗತ್ತಿನ ಎಲ್ಲಾ ದೇಶಗಳಲ್ಲೂ ಕಾರ್ಯನಿರ್ವಹಿಸುತ್ತಿದೆ. ಜಾಗತಿಕವಾಗಿ 1913ರಲ್ಲಿ ಪ್ರಾರಂಭವಾದ ಈ ಕಂಪನಿ ಮುಂಬೈನಲ್ಲಿ 1987ರಲ್ಲಿ ಕಾರ್ಯಾರಂಭಿಸಿದೆ.

4. ಐಬಿಎಂ

4. ಐಬಿಎಂ

ಸ್ಥಾಪನೆ - 1992
ಕಾರ್ಪೊರೇಟ್ ಕಚೇರಿ - ಬೆಂಗಳೂರು(ಕರ್ನಾಟಕ)
ಉದ್ಯಮ - ಸಾಪ್ಟವೇರ್ ಮತ್ತು ಹಾರ್ಡ್ವೇರ್ ಸೋಲುಷನ್
Website - www.ibm.com/in
ಐಬಿಎಂ ಯಂತ್ರಾಂಶ, ತಂತ್ರಾಂಶ ಕಂಪನಿಯಾಗಿದ್ದು, ತಂತ್ರಜ್ಞಾನ ಮತ್ತು ಸಾಫ್ಟ್ವೇರ್ ಸೇವೆಗಳಿಗೆ ಸಂಪೂರ್ಣ ಪರಿಹಾರ ನೀಡುತ್ತದೆ. ಇದು ಕಳೆದ 20 ವರ್ಷಗಳಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 200 ನಗರಗಳಲ್ಲಿ ಸೇವೆಗಳನ್ನು ಹೊಂದಿದೆ.

5. ಕಾಂಪ್ಯಾಕ್

5. ಕಾಂಪ್ಯಾಕ್

ಸ್ಥಾಪನೆ - 1982
ಕಾರ್ಪೊರೇಟ್ ಕಚೇರಿ - ಟೆಕ್ಸಾಸ್(ಯುಎಸ್)
ಉದ್ಯಮ - ಐಟಿ ಕನ್ಸಲ್ಟಿಂಗ್, ಐಟಿ ಸೇವೆಗಳು ಹಾಗೂ ಕಂಪ್ಯೂಟರ್ ಯಂತ್ರಾಂಶ
Website - compaq.com
೨೦೦೨ರಲ್ಲಿ ಎಚ್ಪಿ(HP) ಕಾಂಪ್ಯಾಕ್ ಸಂಸ್ಥೆಯನ್ನು ವಶಪಡಿಸಿಕೊಂಡಿದೆ. ಕಂಪ್ಯೂಟರ್ ಯಂತ್ರಾಂಶ, ಐಟಿ ಸೇವೆ ಮತ್ತು ತಂತ್ರಾಂಶ ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ.

6. ಲಿಂಕ್ ಸಾಪ್ಟವೇರ್ ಸರ್ವಿಸಸ್ ಪ್ರೈ. ಲಿ.

6. ಲಿಂಕ್ ಸಾಪ್ಟವೇರ್ ಸರ್ವಿಸಸ್ ಪ್ರೈ. ಲಿ.

ಸ್ಥಾಪನೆ - 1988
ಕಾರ್ಪೊರೇಟ್ ಕಚೇರಿ - ಬೆಂಗಳೂರು
ಉದ್ಯಮ - ಐಟಿ ಸೇವೆಗಳು
Website - lincsoftware.com
ವಿಶ್ವದಾದ್ಯಂತ ಐಟಿ ಪರಿಹಾರಗಳನ್ನು ಒದಗಿಸುತ್ತಿರುವ ಬೆಂಗಳೂರಿನ ಅತ್ಯುತ್ತಮ ಕಂಪನಿ.
ಭಾರತ, ಅಮೆರಿಕಾ, ಯುರೋಪ್ ಮತ್ತು ಏಷ್ಯಾ ಪೆಸಿಫಿಕ್ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ಕಚೇರಿಗಳನ್ನು ಹೊಂದಿದೆ.

7. ಒರಾಕಲ್ ಇಂಡಿಯ ಪ್ರೈ. ಲಿ.

7. ಒರಾಕಲ್ ಇಂಡಿಯ ಪ್ರೈ. ಲಿ.

ಸ್ಥಾಪನೆ - 1977
ಕಾರ್ಪೊರೇಟ್ ಕಚೇರಿ - ಗುರಗಾಂವ್(ಹರಿಯಾಣ)
ಉದ್ಯಮ - ಯಂತ್ರಾಂಶ ಮತ್ತು ತಂತ್ರಾಂಶ
www.oracle.com/in
1977ರಲ್ಲಿ ಕ್ಯಾಲಿಪೋರ್ನಿಯ(ಯುಎಸ್ಎ)ದಲ್ಲಿ ಒರಾಕಲ್ ಕಂಪನಿ ಸ್ಥಾಪಿಸಲ್ಪಟ್ಟಿತ್ತು. ಇದು ವಿಶ್ವದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಮಾರ್ಕೆಟಿಂಗ್, DBMS ಮತ್ತು ಸಾಫ್ಟ್ವೇರ್ ಆಧಾರಿತ ಸಂಘಟನೆ ಕ್ಷೇತ್ರಗಳಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸುತ್ತದೆ.

8. ಜೆನಿತ್ ಸಾಪ್ಟವೇರ್ ಲಿಮಿಟೆಡ್

8. ಜೆನಿತ್ ಸಾಪ್ಟವೇರ್ ಲಿಮಿಟೆಡ್

ಸ್ಥಾಪನೆ - 1966
ಕಾರ್ಪೊರೇಟ್ ಕಚೇರಿ - ಬೆಂಗಳೂರು
ಉದ್ಯಮ - ಐಟಿ ಸೇವೆ ಮತ್ತು ಹೊರಗುತ್ತಿಗೆ
www.zenithsoft.com
ಜೆನಿತ್ ಸಾಪ್ಟವೇರ್ ಲಿಮಿಟೆಡ್ ಕಂಪನಿ ಭಾರತ ಮತ್ತು ವಿದೇಶಗಳಲ್ಲಿ ತಂತ್ರಾಂಶ ಪರಿಹಾರಗಳನ್ನು ಪೂರೈಸುತ್ತಿದೆ.
ಸೇವಾ ವಲಯ:
ಡೇಟಾ ವೇರ್ಹೌಸಿಂಗ್, ಕಸ್ಟಮ್ ಅಪ್ಲಿಕೇಶನ್ ಡೆವಲಪ್ಮೆಂಟ್, ಸಾಫ್ಟ್ವೇರ್ ಟೆಸ್ಟಿಂಗ್, ಅಪ್ಲಿಕೇಶನ್ ನಿರ್ವಹಣೆ ಸೇವೆ ಮತ್ತು ಪ್ಯಾಕೇಜ್ ಅಪ್ಲಿಕೇಶನ್ ಸೇವೆಗಳನ್ನು ಒದಗಿಸುತ್ತಿದೆ.
ಇದು ISO 9001:2008 ಮತ್ತು ಐಎಸ್ಒ / ಐಇಸಿ 27001:2005ರಿಂದ ಪ್ರಮಾಣಿತ ಕಂಪನಿಯಾಗಿದೆ.

9. SAP ಲ್ಯಾಬ್ ಇಂಡಿಯ ಪ್ರೈ. ಲಿ.

9. SAP ಲ್ಯಾಬ್ ಇಂಡಿಯ ಪ್ರೈ. ಲಿ.

ಸ್ಥಾಪನೆ - 1996
ಕಾರ್ಪೊರೇಟ್ ಕಚೇರಿ - ಬೆಂಗಳೂರು
ಉದ್ಯಮ - ಸಾಪ್ಟವೇರ್ ಸೋಲುಷನ್
www.sap.com
ಇದು ಬೆಂಗಳೂರಿನ ಪ್ರತಿಷ್ಠಿತ ಸಾಪ್ಟವೇರ್ ಕಂಪನಿಗಳಲ್ಲಿ ಒಂದಾಗಿದೆ. ಮುಖ್ಯವಾಗಿ ಸಂಶೋಧನೆ, ವಿನ್ಯಾಸ, ತಂತ್ರಾಂಶದ ಹೆಚ್ಚಿಸುವ ಕ್ಷೇತ್ರಗಳಲ್ಲಿ ವ್ಯವಹರಿಸುತ್ತದೆ.

10. Syntel ಇಂಡಿಯಾ ಲಿಮಿಟೆಡ್

10. Syntel ಇಂಡಿಯಾ ಲಿಮಿಟೆಡ್

ಸ್ಥಾಪನೆ - 1980
ಕಾರ್ಪೊರೇಟ್ ಕಚೇರಿ - ಮಿಚಿಗನ್(ಯುಎಸ್ಎ)
ಉದ್ಯಮ - ಐಟಿ ಮತ್ತು ಹೊರಗುತ್ತಿಗೆ
www.syntelinc.com

ಸೇವಾವಲಯ:
- ಅಪ್ಲಿಕೇಶನ್ ಅಭಿವೃದ್ಧಿ
- ಅಪ್ಲಿಕೇಶನ್ ನಿರ್ವಹಣೆ
- ಆರ್ಕಿಟೆಕ್ಚರ್ ಪರಿಹಾರಗಳು
- ಬಿಸಿನೆಸ್ ಅನಾಲಿಟಿಕ್ಸ್
- ಕ್ಲೌಡ್ ಕಂಪ್ಯೂಟಿಂಗ್
- ಸಹಕಾರಿ ಕ್ಲೈಂಟ್ ಪಾಲುದಾರಿಕೆ
- ಎಂಟರ್ಪ್ರೈಸ್ ಬಿಸಿನೆಸ್ ಸೋಲುಷನ್

English summary

Top 10 Software Companies In Bangalore

Here is a list of Top software companies in Bangalore; these are the best companies in IT, Software and technology sector. Information Technology sector in India is one of the most important service sector. It contributes significantly to the country's GDP.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X