For Quick Alerts
ALLOW NOTIFICATIONS  
For Daily Alerts

ಇಂದಿನಿಂದ ಜಿಎಸ್ಟಿ ಮಂಡಳಿ ಸಭೆ: ಮುಂದಿರುವ ಅಜೆಂಡಾ-ಸವಾಲುಗಳೇನು?

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಮೂರು ದಿನಗಳ ಸಭೆ ಮಂಗಳವಾರದಿಂದ ಆರಂಭವಾಗಲಿದೆ. ಈ ಸಭೆಯಲ್ಲಿ ಜಿಎಸ್ಟಿ ಮಂಡಳಿ ಎದುರಿರುವ ಅಜೆಂಡಾ ಮತ್ತು ಸವಾಲುಗಳನ್ನು ಸಾಧಿಸುವುದರ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು.

By Siddu
|

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಮೂರು ದಿನಗಳ ಸಭೆ ಮಂಗಳವಾರದಿಂದ ಆರಂಭವಾಗಲಿದೆ. ಈ ಸಭೆಯಲ್ಲಿ ಜಿಎಸ್ಟಿ ಮಂಡಳಿ ಎದುರಿರುವ ಅಜೆಂಡಾ ಮತ್ತು ಸವಾಲುಗಳನ್ನು ಸಾಧಿಸುವುದರ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು.

 

ಹೊಸ ತೆರಿಗೆ ವ್ಯವಸ್ಥೆ ನವೆಂಬರ್‌ ಒಳಗಾಗಿ ಅಂತಿಮಗೊಳಿಸುವಂತೆ ಹಣಕಾಸು ಸಚಿವಾಲಯ ಜಿಎಸ್ಟಿ ಮಂಡಳಿಗೆ ಗಡುವು ನಿಡಿದ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ನಿರ್ಣಾಯಕ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಜಿಎಸ್ಟಿ ಬಿಲ್ ಅಂಗೀಕಾರ: ಯಾವುದು ದುಬಾರಿ? ಯಾವುದು ಅಗ್ಗ?

ತೆರಿಗೆ ದರ

ತೆರಿಗೆ ದರ

ಜಿಎಸ್ಟಿ ಮಸೂದೆ: ಪ್ರಮುಖ ಪರಿಷ್ಕೃತ ಅಂಶಗಳುಜಿಎಸ್ಟಿ ಮಸೂದೆ: ಪ್ರಮುಖ ಪರಿಷ್ಕೃತ ಅಂಶಗಳು

 

ಪರಿಹಾರ ಸೂತ್ರ

ಪರಿಹಾರ ಸೂತ್ರ

ಪರಿಹಾರ ನೀತಿ ಸಂಬಂಧಿತ ನಿರ್ಣಯ ಕೈಗೊಳ್ಳುವುದು ಕಷ್ಟಸಾಧ್ಯವೆಂದೆ ಹೇಳಬೇಕು. ಈ ಹಿಂದೆ ಮೂರ್ನಾಲ್ಕು ಬಾರಿ ಇದರ ಬಗ್ಗೆ ಚರ್ಚಿಸಿದರೂ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪರಿಹಾರ ನೀತಿ ಹಾಗೂ ಇನ್ನೀತರ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಜಿಎಸ್ಟಿ(GST) ಬಿಲ್ ಜಾರಿ ಸಾಧ್ಯತೆ: 9 ಲಾಭ ತಪ್ಪದೆ ಪಡೆಯಿರಿ

ಹಣಕಾಸು ಸಚಿವಾಲಯದಿಂದ ಗಡುವು
 

ಹಣಕಾಸು ಸಚಿವಾಲಯದಿಂದ ಗಡುವು

ಏಪ್ರಿಲ್‌ 1, 2017ರಂದು ದೇಶದಾದ್ಯಂತ ಜಿಎಸ್ಟಿ ವ್ಯವಸ್ಥೆ ಜಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಹೊಸ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಸಮಸ್ಯೆ ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ನವೆಂಬರ್‌ 22ರ ಒಳಗಾಗಿ ಅಂತಿಮಗೊಳಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ಜಿಎಸ್ಟಿ ಮಂಡಳಿಗೆ ಗಡುವು ನಿಗದಿ ಮಾಡಿದೆ.

ಈಶಾನ್ಯ ರಾಜ್ಯಗಳಿಗೆ ರಿಯಾಯಿತಿ

ಈಶಾನ್ಯ ರಾಜ್ಯಗಳಿಗೆ ರಿಯಾಯಿತಿ

ಈಶಾನ್ಯ ಮತ್ತು ಕಣಿವೆ ರಾಜ್ಯಗಳಿಗೆ ಸಂಬಂಧಿಸಿದಂತೆ ಕಳೆದ ತಿಂಗಳು ಎಲ್ಲ ರಾಜ್ಯಗಳ ಹಣಕಾಸು ಸಚಿವರು ಭಾಗವಹಿಸಿದ್ದ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಪ್ರದೇಶವಾರು ರಿಯಾಯ್ತಿ ಕೊಡುವುದರ ಬಗ್ಗೆ ಚರ್ಚಿಸಿ ಅಂತಿಮಗೊಳಿಸಲಾಗಿತ್ತು.

ಪರ್ಯಾಯ ಮಾರ್ಗಗಳೇನು?

ಪರ್ಯಾಯ ಮಾರ್ಗಗಳೇನು?

ಏಕರೂಪದ ಹೊಸ ತೆರಿಗೆ ವ್ಯವಸ್ಥೆಯಿಂದಾಗಿ ರಾಜ್ಯಗಳಿಗೆ ಆಗಬಹುದಾದ ನಷ್ಟವನ್ನು ತುಂಬಿಕೊಡಲು ಪರ್ಯಾಯ ಮಾರ್ಗಗಳ ಕುರಿತು ಮೊದಲ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾದ್ಯವಾಗಿರಲಿಲ್ಲ. ಹೀಗಾಗಿ ಈ ಸಭೆಯಲ್ಲಿ ಈ ಅಂಶಗಳೆಲ್ಲವೂ ಮಹತ್ವಪೂರ್ಣವಾದವುಗಳಾಗಿವೆ.

English summary

GST Council meeting starts today: What are the Agenda and Challenges

As the crucial three-day meeting of the GST Council, comprising state finance ministers, starts Tuesday, here is a look at the the agenda and key challenges before the council.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X