For Quick Alerts
ALLOW NOTIFICATIONS  
For Daily Alerts

ನಕಲಿ ಭೀಮ್ ಆಪ್ ಗಳಿವೆ ಎಚ್ಚರ!

ಭೀಮ್ ಆಪ್‌ ಬಿಡುಗಡೆ ಮಾಡಿ ಕೇವಲ ಒಂದು ವಾರ ಕಳೆಯುವಷ್ಟರಲ್ಲಿ ಭೀಮ್ ಆಪ್‌ ಮಾದರಿಯಲ್ಲಿ ಫೇಕ್ ಆಪ್‌ಗಳ ಹಾವಳಿ ಆರಂಭವಾಗಿದೆ. ಇದೀಗ ಭೀಮ್ ಆಪ್ ರೀತಿಯಲ್ಲಿಯೇ ನಕಲಿ ಆಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಬಂದಿವೆ.

By Siddu
|

ಕಳೆದ ವಾರವಷ್ಟೇ ಡಿಜಿಟಲ್ ಪಾವತಿ ಮತ್ತು ವ್ಯವಹಾರಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಭೀಮ್ ಮೊಬೈಲ್ ಆಪ್ ಬಿಡುಗಡೆಗೊಳಿಸಿದ್ದರು.'ಭೀಮ್' ಆಪ್ ಬಳಕೆ ಹೇಗೆ? ಏನಿದರ ಉಪಯೋಗ?

ಭೀಮ್ ಆಪ್‌ ಬಿಡುಗಡೆ ಮಾಡಿ ಕೇವಲ ಒಂದು ವಾರ ಕಳೆಯುವಷ್ಟರಲ್ಲಿ ಭೀಮ್ ಆಪ್‌ ಮಾದರಿಯಲ್ಲಿ ಫೇಕ್ ಆಪ್‌ಗಳ ಹಾವಳಿ ಆರಂಭವಾಗಿದೆ. ಇದೀಗ ಭೀಮ್ ಆಪ್ ರೀತಿಯಲ್ಲಿಯೇ ನಕಲಿ ಆಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಬಂದಿವೆ.

ನಕಲಿ ಭೀಮ್ ಆಪ್ ಗಳಿವೆ ಎಚ್ಚರ!

ಡಿಜಿಟಲ್ ವ್ಯವಹಾರಗಳಿಗಾಗಿ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಭೀಮ್ ಮೊಬೈಲ್ ಆಪ್ ಇಲ್ಲಿಯವರೆಗೆ ಮೂರು ಮಿಲಿಯನ್ ಗಿಂತ ಹೆಚ್ಚು ಡೌನ್ಲೋಡ್ ಆಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮೂರು ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗೊಂಡು ಗೂಗಲ್‌ ಪ್ಲೇಸ್ಟೊರ್‌ನಲ್ಲಿ ಮೊದಲ ಸ್ಥಾನವನ್ನು ಭೀಮ್ ಆಪ್‌ ಪಡೆದುಕೊಂಡಿತ್ತು.

BHIM UPI Bank No internet, BHIM payment updater 2017, Modi Bhim, BHIM App-Radio Jay Bhim, Bhim Modi App, Bhim Modi, BHIM Payment-UPI Guide, BHIM Banking guide, BHIM banking, Modi ka Bhim ಹೀಗೆ ಹಲವಾರು ಹೆಸರುಗಳಲ್ಲಿ ನಕಲಿ ಭೀಮ್ ಆಪ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯ ಇವೆ.

ಭೀಮ್ ಆಪ್‌ ನಕಲಿಸುವ ಮೂಲಕ ಖದೀಮರು ಸಾರ್ವಜನಿಕರನ್ನು ಮೋಸಗೊಳಿಸುವ ಹುನ್ನಾರವನ್ನು ಕ್ರಿಮಿನಲ್‌ಗಳು ಮಾಡಿದ್ದಾರೆ. ಹೀಗಾಗಿ ಭೀಮ್ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕಾಗಿದ್ದು, ಸರ್ಕಾರದಿಂದಲೇ ಬಿಡುಗಡೆಯಾಗಿರುವ ಭೀಮ್ ಆಪ್‌ ಡೌನ್‌ಲೋಡ್ ಮಾಡಿಕೊಳ್ಳುವುದರ ಬಗ್ಗೆ ಕಾಳಜಿ ವಹಿಸಬೇಕು.

English summary

Fake BHIM apps on Google Play Store: What you need to do

Prime Minister Narendra Modi had announced the launch of BHIM mobile app in order to enable citizens to make digital payments and transactions. While the app is at the top of Google charts with more than 3 million downloads, the same platform which is filled with numerous duplicate apps.
Story first published: Thursday, January 5, 2017, 16:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X