Englishहिन्दी മലയാളം தமிழ் తెలుగు

ಪೇಟಿಎಂ: ಹಣ ವರ್ಗಾವಣೆಗೆ ಇಂಟರ್ನೆಟ್, ಸ್ಮಾರ್ಟ್ ಫೋನ್ ಬೇಕಿಲ್ಲ

Written By: Siddu
Subscribe to GoodReturns Kannada

ಹಳೆ 500, 1000 ನೋಟುಗಳ ರದ್ದತಿ ನಂತರ ಪೇಟಿಎಂ, ಫೋನ್ ಪೇ, ಫ್ರೀಚಾರ್ಜ್, ಮೊಬಿಕ್ವಿಕ್ ನಂತಹ ಮೊಬೈಲ್ ವಾಲೆಟ್ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಜನರು ಅರಿತಿದ್ದಾರೆ.

ಪೇಟಿಎಂ ಬಿಲ್ ಪಾವತಿ, ಹಣ ರವಾನೆ ,ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್, ಗ್ಯಾಸ್ ಬಿಲ್ ಪಾವತಿ, ಮೆಟ್ರೋ ಸ್ಮಾರ್ಟ್ ಕಾರ್ಡ್ ರೀಚಾರ್ಜ್, ವಿದ್ಯುತ್ ಬಿಲ್ ಪಾವತಿ ಮತ್ತು ಲ್ಯಾಂಡ್ ಲೈನ್ ಬಿಲ್ ಪಾವತಿ ಸೇವೆಗಳನ್ನು ಒದಗಿಸುತ್ತದೆ.

ಪೇಟಿಎಂ: ಹಣ ವರ್ಗಾವಣೆಗೆ ಇಂಟರ್ನೆಟ್, ಸ್ಮಾರ್ಟ್ ಫೋನ್ ಬೇಕಿಲ್ಲ

ಇತ್ತಿಚಿಗೆ ಟೋಲ್ ಫ್ರೀ ನಂಬರ್ 1800-1800-1234 ಮೂಲಕ ಹಣ ಪಾವತಿ, ಮೊಬೈಲ್ ರೀಚಾರ್ಜ್, ಹಣ ಸ್ವೀಕೃತಿಗಳನ್ನು ಇಂಟರ್ನೆಟ್ ಬಳಕೆ ಇಲ್ಲದೆಯೇ ಮಾಡಬಹುದಾಗಿದೆ ಎಂದು ಪೇಟಿಎಂ ಹೇಳಿದೆ. ಇದಕ್ಕೆ ಸ್ಮಾರ್ಟ್ ಫೋನ್ ಮತ್ತು ಅಂತರ್ಜಾಲದ ಅಗತ್ಯವಿಲ್ಲ.

ಅಂತರ್ಜಾಲ ಇಲ್ಲದೆ ಹಣ ವರ್ಗಾವಣೆ ಹೇಗೆ?
*ಪೇಟಿಎಂನೊಂದಿಗೆ ಗ್ರಾಹಕರು ಮತ್ತು ವ್ಯಾಪಾರಿಗಳು ಮೊಬೈಲ್ ನಂಬರ್ ನೋಂದಣಿ ಮಾಡಿಸಬೇಕು.
* ಟೋಲ್ ಫ್ರೀ ನಂಬರ್ 1800-1800-1234 ಕರೆ ಮಾಡಿ ಪೇಟಿಎಂ ಖಾತೆಗೆ ನೋಂದಣಿ ಮಾಡಿಸಿ.
* ನಾಲ್ಕು ಅಂಕೆಗಳ ಪೇಟಿಎಂ ಪಿನ್ ಸೆಟ್ ಮಾಡಿ ಖಚಿತಪಡಿಸಿಕೊಳ್ಳಿ. ಈ ಪಿನ್ ನಂಬರ್ ಮುಂದಿನ ವ್ಯವಹಾರಗಳಿಗಾಗಿ ನೆನಪಿನಲ್ಲಿಡಿ.
* ಒಂದು ಪೇಟಿಎಂ ವಾಲೆಟ್ ನಿಂದ ಇನ್ನೊಂದು ವಾಲೆಟ್ ಗೆ ಹಣ ವರ್ಗಾವಣೆ ಮಾಡಲು ಸ್ವೀಕರಿಸುವವರ ಮೊಬೈಲ್ ನಂಬರ್, ಮೊತ್ತ ಮತ್ತು ಪೇಟಿಎಂ ಪಿನ್ ನಮೂದಿಸಬೇಕು.

ಪೇಟಿಎಂ: ಹಣ ವರ್ಗಾವಣೆಗೆ ಇಂಟರ್ನೆಟ್, ಸ್ಮಾರ್ಟ್ ಫೋನ್ ಬೇಕಿಲ್ಲ

English summary

How To Send Money In Paytm Without Internet

After demonetization of Rs 1,000 and Rs 500 notes in the country people realized the purpose of mobile wallets such as Paytm, Mobikwik, Freecharge, PhonePe, etc.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC