ಭಾರತೀಯ ದೂರಸಂಪರ್ಕ ಉದ್ಯಮಗಳ ವಾರ್ಷಿಕ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದ್ದು,ಇದಕ್ಕೆ ಜಿಯೋ ಕೊಡುಗೆಗಳೇ ಕಾರಣ ಎಂದು ವರದಿ ಆಗಿದೆ.
ದೇಶದ ಟೆಲಿಕಾಂ ರಂಗದಲ್ಲಿ ಜಿಯೋ ಎಫೆಕ್ಟ್ ಮತ್ತು ಪ್ರಭಾವ ತುಂಬಾ ಎಷ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಈ ಸುದ್ದಿ ಒಂದು ತಾಜಾ ಉದಾಹರಣೆ!! ಹಾಗಿದ್ದರೆ ಆ ಸುದ್ದಿ ಏನು ಅಂತಿರಾ..? ಜಿಯೋ 'ಸಮ್ಮರ್ ಆಫರ್'! ಮತ್ತೆ 3 ತಿಂಗಳು ಉಚಿತ ಕೊಡುಗೆ ಮುಂದುವರಿಕೆ!!
ಭಾರತೀಯ ದೂರಸಂಪರ್ಕ ಉದ್ಯಮಗಳ ವಾರ್ಷಿಕ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಇದಕ್ಕೆ ಜಿಯೋ ಕೊಡುಗೆಗಳೇ ಕಾರಣ ಎಂದು ವರದಿ ಆಗಿದೆ.
ಕಳೆದ ವರ್ಷಗಳ ಆದಾಯ
2015-16ನೇ ಸಾಲಿನಲ್ಲಿ 1.93 ಲಕ್ಷ ಕೋಟಿ ಹಾಗೂ 2016-17ನೇ ಸಾಲಿನಲ್ಲಿ 1.88 ಲಕ್ಷ ಕೋಟಿ ಆದಾಯ ಗಳಿಸಿದೆ. ಅಂದರೆ ಈ ಎರಡು ಸಾಲಿನ ನಡುವಿನ ಅವಧಿಯಲ್ಲಿ 4,600 ಕೋಟಿ ಆದಾಯ ನಷ್ಟ ಸಂಭವಿಸಿದೆ. 2017-18ನೇ ಸಾಲಿನಲ್ಲಿ 1.84 ಲಕ್ಷ ಕೋಟಿ ಆದಾಯ ಗಳಿಸುವ ನಿರೀಕ್ಷೆ ಇದೆ.
4,900 ಕೋಟಿ ಭಾರೀ ನಷ್ಟ!
2015-16ನೇ ಸಾಲಿಗೆ ಹೋಲಿಸಿದರೆ 2016-17ನೇ ಸಾಲಿನಲ್ಲಿ ಒಟ್ಟು 4,600 ಕೋಟಿ ಆದಾಯ ನಷ್ಟವಾಗಿದೆ.
2017-18ನೇ ಸಾಲಿನಲ್ಲಿ 4,900 ಕೋಟಿ ಆದಾಯ ಕುಸಿತ ಕಾಣಲಿದೆ ಎಂದು ದಲ್ಲಾಳಿ ಸಂಸ್ಥೆ CLSA ವರದಿ ಮಾಡಿದೆ.
ಕಾರಣ ಏನು?
ಮುಖೇಶ್ ಅಂಬಾನಿ ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಬಿಡುಗಡೆಗೊಳಿಸಿದ ರಿಲಾಯನ್ಸ್ ಜಿಯೋ ಇಷ್ಟೇಲ್ಲಾ ನಷ್ಟಕ್ಕೆ ಕಾರಣವಾಗಿದೆ. ಜಿಯೋ ಉಚಿತ ಕೊಡುಗೆಗಳ ಪರಿಣಾಮದಿಂದಾಗಿ ಇನ್ನಿತರ ಟೆಲಿಕಾಂ ಕಂಪನಿಗಳೂ ದರಗಳನ್ನು ಕಡಿತ ಮಾಡಿ ಹಲವು ಆಫರ್ ಗಳನ್ನು ಘೋಷಣೆ ಮಾಡಿದ್ದವು.
2018-19ರಲ್ಲಿ ಚೇತರಿಕೆ ನೀರಿಕ್ಷೆ
ದೂರಸಂಪರ್ಕ ಉದ್ಯಮಗಳು 2018-19ನೇ ಸಾಲಿನಲ್ಲಿ ಚೇತರಿಕೆ ಕಾಣುವ ನೀರಿಕ್ಷೆ ಹೊಂದಿವೆ. 2018-19ರಲ್ಲಿ 1.87 ಲಕ್ಷ ಕೋಟಿ ಚೇತರಿಕೆ ಕಾಣುವ ನೀರಿಕ್ಷೆ ಹೊಂದಲಾಗಿದೆ ಎಂದು ದಲ್ಲಾಳಿ ಸಂಸ್ಥೆ CLSA ವರದಿ ಮಾಡಿದೆ. BSNL ಭರ್ಜರಿ ಆಫರ್! ಪ್ರತಿದಿನ 10GB ಡೇಟಾ ಮತ್ತು ಉಚಿತ ಕರೆ
ಟ್ರಾಯ್ ಆದೇಶ
ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಸಮ್ಮರ್ ಆಫರ್ ಮೂಲಕ ಘೋಷಣೆ ಮಾಡಿದ್ದ ಮೂರು ತಿಂಗಳ ಪೂರಕ ಪ್ರಯೋಜನಗಳನ್ನು ಹಿಂದಕ್ಕೆ ಪಡೆಯುವಂತೆ ರಿಲಯನ್ಸ್ ಜಿಯೋಗೆ ಆದೇಶ ನೀಡಿದ್ದು, ಅದಕ್ಕೆ ಈಗಾಗಲೇ ಜಿಯೋ ಸಮ್ಮತಿಯನ್ನು ಸೂಚಿಸಿದೆ. ಜಿಯೋಗೆ ಸವಾಲು! ಬಿಎಸ್ಎನ್ಎಲ್, ಏರ್ಟೆಲ್, ಐಡಿಯಾ ಭರ್ಜರಿ ಆಫರ್!!
ಟೆಲಿಕಾಂ ಕಂಪನಿಗಳಿಂದ ಟ್ರಾಯ್ ಗೆ ದೂರು
ಈ ಹಿಂದೆಯೇ ಜಿಯೊ ಆಫರ್ ಕಾನೂನು ಬಾಹಿರ ಸೇವೆಯಾಗಿದೆ. ಹೀಗಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇದರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಏರ್ಟೆಲ್, ವೋಡಾಫೋನ್, ಐಡಿಯ ಟೆಲಿಕಾಂ ಕಂಪನಿಗಳು TRAI ದೂರನ್ನು ನೀಡಿದ್ದವು. ದೇಶದ ಏಏರ್ಟೆಲ್, ವೋಡಾಫೋನ್, ಐಡಿಯಾ ಇತರ ಪ್ರಮುಖ ಟೆಲಿಕಾಂ ಕಂಪನಿಗಳು ಭಾರತೀಯ ದೂರಸಂಪರ್ಕ ನಿಯಂತ್ರಣ ಮಂಡಳಿ(ಟ್ರಾಯ್) ರಿಲಾಯನ್ಸ್ ಜಿಯೋಗೆ ಸಹಕಾರಿಯಾಗಿದೆ ಎಂದು ಹಿಂದೆ ಕೋರ್ಟ್ ಮೆಟ್ಟಿಲೇರಿದ್ದವು. ಜಿಯೋಗೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ರಾಯ್ ಮತ್ತೆ ಕೆಲವು ಟೆಲಿಕಾಂ ನಿಯಮಗಳನ್ನು ಬದಲಾವಣೆಗಳನ್ನು ಮಾಡಿದೆ ಎಂದು ದೂರಿದ್ದವು.
ಹೊಸ ಗುಣಮಟ್ಟದ ಕಾನೂನು ಜಾರಿ


Click it and Unblock the Notifications