For Quick Alerts
ALLOW NOTIFICATIONS  
For Daily Alerts

ಪ್ರಚಾರ ವಿಶ್ಲೇಷಣೆಗಳಿಂದ ದೂರ- ಕಾರ್ಪೊರೇಟ್ ಫಲಗಳ ರುಚಿ ಅಮೋಘ

ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಲ್ಲಿ ಅದರಿಂದ ಬರುವ ಲಾಭವೇನು ಎಂಬುದು ಪೇಟೆ ಹೊಸದಾಗಿ ಪ್ರವೇಶಿಸುವವರಿಗೆ ಯಕ್ಷ ಪ್ರಶ್ನೆಯಾಗಿರುತ್ತದೆ.

By Krupal
|

ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಲ್ಲಿ ಅದರಿಂದ ಬರುವ ಲಾಭವೇನು ಎಂಬುದು ಪೇಟೆ ಹೊಸದಾಗಿ ಪ್ರವೇಶಿಸುವವರಿಗೆ ಯಕ್ಷ ಪ್ರಶ್ನೆಯಾಗಿರುತ್ತದೆ. ಷೇರುಪೇಟೆ ಒಂದು ವಿಸ್ಮಯ ಲೋಕ ಇದರ ಒಳ ಹೊಕ್ಕ ನಂತರ ಇದು ತನ್ಮಯಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದರಿಂದ ವಿವಿಧ ರೀತಿಯ ಲಾಭಗಳು ಲಭ್ಯವಾಗುತ್ತವೆ.

ಷೇರು/ಡಿವಿಡೆಂಡ್

ಷೇರು/ಡಿವಿಡೆಂಡ್

ಷೇರು ಎಂದರೆ ಒಂದು ಸಂಸ್ಥೆ, ಕಂಪನಿಯು ನಿರ್ವಹಿಸುವ ಜವಾಬ್ಧಾರಿಯನ್ನು ಹಂಚಿಕೊಂಡು ನಿರ್ವಹಿಸುವುದು ಮತ್ತು ಅದರ ಫಲವನ್ನು ಸಹ ಪಡೆಯುವುದಾಗಿದೆ. ಕಂಪನಿಗಳು ತಾವು ಗಳಿಸಿದ ಫಲಗಳನ್ನು, ಖರ್ಚು ವೆಚ್ಚಗಳ ನಂತರ ತನ್ನ ಷೇರುದಾರರಿಗೆ ಹಂಚುತ್ತದೆ. ಈ ಹಂಚಿಕೆಯೇ ಡಿವಿಡೆಂಡ್ ಆಗಿರುತ್ತದೆ.

ರಿಸರ್ವ್ ಫಂಡ್

ರಿಸರ್ವ್ ಫಂಡ್

ಗಳಿಸಿದ ಹಣದಲ್ಲಿ ಸ್ವಲ್ಪ ಹಣವನ್ನು ರಿಸರ್ವ್ ಫಂಡ್ ಆಗಿ ತೆಗೆದಿಡುವ ಹವ್ಯಾಸವು ಆ ಕಂಪನಿಯ ಘನತೆಯನ್ನು ಹೆಚ್ಚಿಸುತ್ತದೆ. ಈ ರೀತಿ ಶೇಖರಿಸಿದ ರಿಸರ್ವ್ ಫಂಡ್ ನ್ನು ಮುಂದೆ ಕಂಪನಿಯು ಹೆಚ್ಚಿನ ಡಿವಿಡೆಂಡ್ ವಿತರಿಸಲಾಗಲಿ ಅಥವಾ ಬೋನಸ್ ಷೇರು ಮೂಲಕವಾಗಲಿ ಷೇರುದಾರರನ್ನು ತೃಪ್ತಿಪಡಿಸಲು ಮುಂದಾಗುವುವು. ಹಿಂದೆ ಕೆಲವು ಕಂಪನಿಗಳು ಹೆಚ್ಚು ಹೆಚ್ಚು ಬೋನಸ್ ಷೇರುಗಳನ್ನು ನೀಡಿ ಷೇರುದಾರರ ಸ್ನೇಹಿಯಾಗಿ ಆತ್ಮೀಯತೆ ಬೆಳಸಿಕೊಂಡಿರುವ ಉದಾಹರಣೆಗಳು ಉಂಟು. ಈ ರೀತಿ ಷೇರುದಾರರಿಗೆ ಹಂಚುವ ಡಿವಿಡೆಂಡ್ ಅಥವಾ ಬೋನಸ್ ಷೇರು ಗಳೇ ಕಾರ್ಪೊರೇಟ್ ಬೆನಿಫಿಟ್ಸ್ ಗಳಾಗಿವೆ.

ಕಂಪನಿ ಷೇರು ಮುಖಬೆಲೆ
 

ಕಂಪನಿ ಷೇರು ಮುಖಬೆಲೆ

ಕಂಪನಿಗಳು ಡಿವಿಡೆಂಡ್ ಹಂಚುವಿಕೆಯಲ್ಲಿ ತಮ್ಮದೇ ಅದ ವೈವಿಧ್ಯತೆಯನ್ನು ಹೊಂದಿರುತ್ತವೆ. ಕೆಲವು ಕಂಪನಿಗಳು ಲಾಭಾಂಶ ಹಂಚುವಲ್ಲಿ ಜಿಪುಣತನವನ್ನು ಪ್ರದರ್ಶಿಸಿದರೆ, ಕೆಲವು ಬಹಳ ದಾರಾಳತನವನ್ನು ತೋರುತ್ತವೆ. ಡಿವಿಡೆಂಡ್ ನ್ನು ಷೇರಿನ ಮುಖಬೆಲೆಯ ಮೇಲೆ ನೀಡಲಾಗುವುದು. ಶೇ. 50 ಡಿವಿಡೆಂಡ್ ಅಂದರೆ ಆ ಕಂಪನಿಯ ಷೇರಿನ ಮುಖಬೆಲೆಯ ಮೇಲೆ ಅರ್ಧದಷ್ಟು ಎಂದರ್ಥ. ಕಂಪನಿಯ ಷೇರಿನ ಮುಖಬೆಲೆಯು ರೂ. 10 ಆಗಿದ್ದರೆ, ಶೇ. 50ರ ಡಿವಿಡೆಂಡ್ ಅಂದರೆ ರೂ. 5 ಆಗಿರುತ್ತದೆ.

ಸೆಬಿ ನಿಯಮ

ಸೆಬಿ ನಿಯಮ

ಪೇಟೆಯನ್ನು ಪ್ರವೇಶಿಸುವವರು ಹೆಚ್ಚಾಗುತ್ತಿರುವುದರಿಂದ, ಹೂಡಿಕೆದಾರರಿಗೆ ಗೊಂದಲವಾಗಬಾರದೆಂಬ ಕಾರಣಕ್ಕಾಗಿ ಪೇಟೆಯ ನಿಯಂತ್ರಕ 'ಸೆಬಿ' ಕಂಪನಿಗಳು ಪ್ರತಿ ಷೇರಿಗೆ ನೀಡುವ ಡಿವಿಡೆಂಡ್ ಘೋಷಿಸುವುದು ಕಡ್ಡಾಯಗೊಳಿಸಿದೆ. ಅಂದರೆ ಕೋಟಕ್ ಮಹಿಂದ್ರಾ ಬ್ಯಾಂಕ್ ಸುಮಾರು ರೂ. 875ರ ಸಮೀಪದಲ್ಲಿ ಟ್ರೇಡ್ ಆಗುತ್ತಿರುವ ಕಂಪನಿಯ ಷೇರಿನ ಮುಖಬೆಲೆಯು ರೂ. 5 ಆಗಿದ್ದು, ಈ ಕಂಪನಿಯು ಪ್ರತಿ ಷೇರಿಗೆ ಐವತ್ತು ಪೈಸೆಗಳ ಡಿವಿಡೆಂಡ್ ಹಂಚಿದೆ. ಅದೇ ರೀತಿ ಷೇರುಪೇಟೆಯಲ್ಲಿ ಅತ್ಯಂತ ಗರಿಷ್ಠ ದರದಲ್ಲಿ ಅಂದರೆ ರೂ. 61 ಸಾವಿರ ರೂಪಾಯಿಗಳ ಸಮೀಪ ಟ್ರೇಡ್ ಆಗುತ್ತಿರುವ ಕಂಪನಿ ಎಂಆರ್ಎಫ್ ಶೇ. 30ರಷ್ಟು ಡಿವಿಡೆಂಡ್ ನೀಡುತ್ತದೆ. ಅಂದರೆ ರೂ. 10ರ ಮುಖಬೆಲೆಯ ಷೇರಿಗೆ ರೂ. 3ರಂತೆ ಡಿವಿಡೆಂಡ್ ಹಂಚುವುದು ಎಂದರ್ಥ. ರೂ. 61 ಸಾವಿರ ರೂಪಾಯಿಗಳನ್ನು ಗಮನದಲ್ಲಿರಿಸಿ ಶೇ. 30ರ ಡಿವಿಡೆಂಡ್ ನ್ನು ಹೋಲಿಸಿಕೊಳ್ಳುವುದು ತಪ್ಪು. ಡಿವಿಡೆಂಡ್ ಯಾವಾಗಲೂ ಷೇರಿನ ಮುಖಬೆಲೆಯ ಮೇಲೆ ಮಾತ್ರ ನೀಡಲಾಗುವುದು, ಪೇಟೆಯ ದರದ ಮೇಲಲ್ಲ.

ಡಿವಿಡೆಂಡ್ ವಿತರಣೆ

ಡಿವಿಡೆಂಡ್ ವಿತರಣೆ

ಇತ್ತೀಚೆಗಷ್ಟೇ ಪಬ್ಲಿಕ್ ಸೆಕ್ಟರ್ ಕಂಪನಿಗಳಾದ ಕೋಲ್ ಇಂಡಿಯಾ ಎರಡು ಬಾರಿ ಅಂದರೆ ಒಮ್ಮೆ ರೂ. 18.75 ರಂತೆ ಮತ್ತೊಮ್ಮೆ ರೂ. 1.15ರಂತೆ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಎರಡು ಬಾರಿ ಅಂದರೆ ಒಮ್ಮೆ ರೂ. 19.50 ಮತ್ತೊಮ್ಮೆ ರೂ. 12 ರಂತೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮೊದಲು ರೂ. 13.50ರಂತೆ ಮತ್ತೊಮ್ಮೆ ರೂ. 4.50ರಂತೆ, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮೊದಲು ರೂ. 22.50 ಮತ್ತೊಮ್ಮೆ ರೂ. 6.40ರಂತೆ, ಗೆಲ್ ಇಂಡಿಯಾ ಪ್ರತಿ ಷೇರಿಗೆ ರೂ. 8.50ರಂತೆ, ಆಯಿಲ್ ಇಂಡಿಯಾ ಪ್ರತಿ ಷೇರಿಗೆ ರೂ. 9.50ರಂತೆ ಆಕರ್ಷಕ ಮಧ್ಯಂತರ ಡಿವಿಡೆಂಡ್ ವಿತರಿಸಿವೆ.

ಸ್ಟೇಕ್ ಮಾರಾಟ

ಸ್ಟೇಕ್ ಮಾರಾಟ

ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ಗಳಿಸಬಹುದಾದ ಆದಾಯವು ವೈವಿಧ್ಯಮಯವಾಗಿರುತ್ತದೆ. ಕಂಪನಿಯ ಸಹಜ ಚಟುವಟಿಕೆಯಿಂದ ಬರುವ ಆದಾಯದ ಜೊತೆಗೆ ಕಂಪನಿಯು ಹೂಡಿಕೆ ಮಾಡಿರುವ ಸಬ್ಸಿಡಿಯರಿ ಕಂಪನಿ ಗಳಿಸಿದ ಆದಾಯವು ಸಹ ಕಂಪನಿಗೆ ಲಾಭ ತರುತ್ತದೆ. ಕೆಲವು ವೇಳೆ ಸಬ್ಸಿಡಿಯರಿ ಕಂಪನಿ ಉತ್ತಮವಾಗಿ ನಿರ್ವಹಿಸುತ್ತಿದ್ದು, ಅದು ಹೆಚ್ಚು ಲಾಭಯುತವಾದ ಬ್ರಾಂಡ್ ಹೊಂದಿದ್ದರೆ ಅದನ್ನು ಮಾರಾಟ ಮಾಡಿ ಹೆಚ್ಚು ಲಾಭ ಗಳಿಕೆ ಸಾಧ್ಯವಿದೆ. ಕಂಪನಿಯು ತನ್ನ ಅಂಗ ಸಂಸ್ಥೆಯ ಸ್ಟೇಕನ್ನು ಮಾರಾಟ ಮಾಡಿ ಬಂದ ಹಣವನ್ನು ಅಥವಾ ತಾನು ಹೊಂದಿರುವ ರಿಯಲ್ ಎಸ್ಟೇಟ್ ನ್ನು ಮಾರಾಟ ಮಾಡಿ ಬರುವ ಹಣವನ್ನು ಸ್ಪೆಷಲ್ ಡಿವಿಡೆಂಡ್ ಎಂದು ವಿತರಿಸುವ ಸಾಧ್ಯತೆಗಳು ಇವೆ.

ಸ್ಪೆಷಲ್ ಡಿವಿಡೆಂಡ್

ಸ್ಪೆಷಲ್ ಡಿವಿಡೆಂಡ್

ಈ ಹಿಂದೆ 2013ರಲ್ಲಿ ಫಾರ್ಮಾ ವಲಯದ ಸ್ಟ್ರೈಡ್ಸ್ ಶಾಸೂನ್ ಕಂಪನಿಯು ತನ್ನ ಬ್ರಾಂಡ್ ಒಂದನ್ನು ವಿದೇಶಿ ಕಂಪನಿಗೆ ಮಾರಾಟ ಮಾಡಿದ ಕಾರಣ ಗಳಿಸಿದ ಆದಾಯದಿಂದ ಪ್ರತಿ ರೂ. 10ರ ಮುಖಬೆಲೆಯ ಷೇರಿಗೆ ರೂ. 500ರಂತೆ ದಾಖಲೆಯ ಸ್ಪೆಷಲ್ ಡಿವಿಡೆಂಡ್ ಹಂಚಿದೆ. ನಂತರ ಮರುವರ್ಷದಲ್ಲಿ ಪ್ರತಿ ಷೇರಿಗೆ ರೂ. 105ರ ಡಿವಿಡೆಂಡ್ ಹಂಚಿದೆ.

ಷೇರಿನ ಮೇಲೆ ಪರಿಣಾಮ

ಷೇರಿನ ಮೇಲೆ ಪರಿಣಾಮ

ಕೆಲವೊಮ್ಮೆ ಕಂಪನಿ ಹೊಂದಿರುವ ನಿವೇಶನವನ್ನು ಮಾರಾಟ ಮಾಡುವ ಸುದ್ದಿಯು ಷೇರಿನ ಬೆಲೆಯಲ್ಲಿ ಹೆಚ್ಚು ಹೆಚ್ಚು ಏರಿಕೆಯನ್ನು ಕಾಣುವಂತಾಗುತ್ತದೆ. ಮತ್ತೆ ಕೆಲವು ಬಾರಿ ಕಂಪನಿಯ ನಿವೇಶನದಲ್ಲಿ ಬಾಗಶಃ ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಸುದ್ದಿಯು ಹೆಚ್ಚಿನ ಏರಿಳಿತಗಳನ್ನು ಷೇರಿನ ಬೆಲೆಯಲ್ಲಿ ಪ್ರದರ್ಶಿಸಲು ಕಾರಣವಾಗುತ್ತದೆ. ಈ ತಿಂಗಳ ಮೊದಲ ವಾರದಲ್ಲಿಯಷ್ಟೇ ಗ್ಯಾಲೆಂಟ್ ಇಸ್ಪಾಟ್ ಕಂಪನಿ ಹೊಂದಿರುವ ಗೋರಕ್ ಪುರದ ನಿವೇಶನದಲ್ಲಿ ಸ್ವಲ್ಪ ಭಾಗವನ್ನು ಅಲ್ಲಿನ ಮೆಟ್ರೋ ರೇಲ್ ಕಂಪನಿ ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಸುದ್ಧಿಯಿಂದ ಷೇರಿನ ಬೆಲೆಯು ರೂ.425ರ ಸಮೀಪದಿಂದ ರೂ. 228ರವರೆಗೂ ಇಳಿಯುವಂತೆ ಮಾಡಿತು. ಅಂದರೆ ಷೇರಿನ ಬೆಲೆ ಏರಿಕೆ ನಂತರ ಬಂದ ಕಾರಣಗಳನ್ನು ಪರಿಶೀಲಿಸಿಕೊಂಡು ಅಳವಡಿಸಿಕೊಳ್ಳುವುದು ಉತ್ತಮ.

ಕೊನೆ ಮಾತು

ಕೊನೆ ಮಾತು

ಒಟ್ಟಾರೆ ಸಮತೋಲನಾ ಭಾವದಿಂದ ಸಂದರ್ಭಕ್ಕನುಗುಣವಾಗಿ ನಿರ್ಧರಿಸುವ ಗುಣವನ್ನು ಬೆಳಸಿಕೊಂಡಲ್ಲಿ ಮಾತ್ರ ಷೇರುಪೇಟೆಯಲ್ಲಿ ಕಾರ್ಪೊರೇಟ್ ಫಲಗಳ ರುಚಿ ನೋಡಲು ಸಾಧ್ಯ. ಕೇವಲ ಪ್ರಚಾರಕ್ಕೆ ಪೂರಕವಾದ ವಿಶ್ಲೇಷಣೆಗಳಿಂದ ದೂರವಿರುವುದು ಕ್ಷೇಮ.

Read more about: share stock sensex
English summary

The campaign analyzes- impacts of corporate results

If you invest in the stock exchange, the benefit that comes from it is a question of looks and access to new markets.
Story first published: Friday, April 14, 2017, 17:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X