Englishहिन्दी മലയാളം தமிழ் తెలుగు

ಗ್ರಾಹಕರು ಈ ಕಂಪನಿಯ ಉತ್ಪನ್ನಗಳನ್ನು ಹೆಚ್ಚು ಇಷ್ಟ ಪಡುತ್ತಾರೆ..!

Written By: Siddu
Subscribe to GoodReturns Kannada

ದೇಶದಲ್ಲಿನ ಹಲವಾರು ಪ್ರಮುಖ ಉನ್ನತ ಕಂಪನಿಗಳು ಗ್ರಾಹಕರನ್ನು ಹೆಚ್ಚೆಚ್ಚು ತನ್ನತ್ತ ಸೆಳೆಯುತ್ತಿದ್ದು, ಗ್ರಾಹಕರು ಯಾವುದೇ ವಸ್ತು/ಸರಕುಗಳ ಖರೀದಿಗೆ ಇದೇ ಕಂಪನಿಗಳ ಉತ್ಪನ್ನಗಳ ಆಯ್ಕೆಗೆ ಒಲವು ತೋರಿಸುತ್ತಾರೆ. ಅವೇಲ್ಲವೂ ಅತ್ಯುತ್ತಮ ಬ್ರಾಂಡೆಂಡ್ ಕಂಪನಿಗಳಾಗಿದ್ದು, ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುತ್ತಿವೆ ಎನ್ನಬಹುದು. ಗ್ರಾಹಕರು ಕೂಡ ಇದೇ ಕಂಪನಿಗಳ ವಸ್ತುಗಳನ್ನು ಖರೀದಿಸುವಂತೆ ತನ್ನತ್ತ ಆಕರ್ಷಿಸುತ್ತಿವೆ. 

ಅಲ್ಲದೆ ಗ್ರಾಹಕರು ಕೂಡ ಈ ಕಂಪನಿಗಳ ಉತ್ಪನ್ನಗಳನ್ನು ಹೆಚ್ಚು ಇಷ್ಟ ಪಡುತ್ತಾರೆ.! ಹಾಗಿದ್ದರೆ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆದು ಭಾರತದ ಮಾರುಕಟ್ಟೆಯನ್ನು ನಿಯಂತ್ರಣದಲ್ಲಿರಿಸುತ್ತಿರುವ ಕಂಪನಿಗಳು ಯಾವುವು ಎಂಬ ಕುತೂಹಲ ಇದ್ದೆ ಇರುತ್ತದೆ. ಅದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ..

ಜಗತ್ತಿನ ಅರ್ಧದಷ್ಟು ಸಂಪತ್ತು ಇವರ ಬಳಿ ಇದೆ!

1. ಅಮೂಲ್

ವಹಿವಾಟು(Turnover): 2.5 ಬಿಲಿಯನ್ ಡಾಲರ್
ಅಮೂಲ್ ಕಂಪನಿ ಯಾರಿಗೆ ತಾನೆ ಗೊತ್ತಿಲ್ಲ. ಡೈರಿ ಉತ್ಪನ್ನಗಳನ್ನು ತಯಾರಿಸುವ ಈ ಕಂಪನಿಯ ಆಹಾರವನ್ನು ಪ್ರತಿಯೊಬ್ಬರೂ ಸೇವಿಸಿರುತ್ತಾರೆ. ಹಾಲು, ಮೊಸರು, ಬೆಣ್ಣೆ, ತುಪ್ಪ, ಚಾಕೋಲೆಟ್ ಹೀಗೆ ಹಲವು ಪದಾರ್ಥಗಳು ನಿಮ್ಮ ಮನೆಯ ಟೆಬಲ್ ಮೇಲೆ ಇರುತ್ತವೆ.
ಅಮೂಲ್ ಇಂಡಿಯನ್ ಡೈರಿ ಕೋಅಪರೇಟಿವ್ ಆಧಾರಿತ ಗುಜರಾತ್ ಮೂಲದ ಕಂಪನಿ. ವರ್ಗಿಸ್ ಕುರಿಯನ್ ಇದರ ಸಂಸ್ಥಾಪಕರು.

2. ಹಿಂದುಸ್ತಾನ್ ಯುನಿಲಿವರ್

ವಹಿವಾಟು(Turnover): 4 ಬಿಲಿಯನ್ ಡಾಲರ್
ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್ ಮುಂಬೈ ಮೂಲದ ಭಾರತೀಯ ಗ್ರಾಹಕರ ಸರಕು ಕಂಪನಿಯಾಗಿದೆ.
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಈ ಕಂಪನಿಯ ಆಹಾರ, ಪಾನೀಯ ಮತ್ತು ಇತ್ಯಾದಿ ಸರಕುಗಳನ್ನು ಕಾಣಬಹುದು. ಇದು ಎಲ್ಲರ ವಿಶ್ವಾಸಾರ್ಹತೆ ಪಡೆದಿದ್ದು, ಲಕ್ಸ್ ಸರ್ಫ್ ಎಕ್ಸೆಲ್, ಕ್ಲಿನಿಕ್ ಪ್ಲಸ್, ರಿನ್, ಲೈಫ್ ಬಾಯ್, ಕ್ಲೋಸ್ ಅಪ್, ಪಾಂಡ್ಸ್, ಪೆಪ್ಸೊಡೆಂಟ್, ಫೇರ್ & ಲವ್ಲಿ, ಡವ್, ಸನ್ ಸಿಲ್ಕ್, ವಿಮ್, ವ್ಹೀಲ್, ವಾಸ್ಲಿನ್, ಪಿಯರ್ಸ್, ಲಕ್ಮೆ ಇತ್ಯಾದಿ ಪ್ರಮುಖ ಉತ್ಪನ್ನಗಳಾಗಿವೆ.

3. ಪತಂಜಲಿ

ವಹಿವಾಟು(Turnover): 5000 ಕೋಟಿ
ಅತಿ ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆದ ಕೀರ್ತಿ ಪತಂಜಲಿಗೆ ಸಲ್ಲುತ್ತದೆ. ಆರ್ಯುವೇದ, ಗಿಡಮೂಲಿಕೆ, ನೈಸರ್ಗಿಕ ಉತ್ಪನ್ನಗಳಿಗೆ ಇದು ಹೆಚ್ಚು ಪ್ರಸಿದ್ದಿ.
ಬಾಬಾ ರಾಮದೇವ್ ಅವರ ಪತಂಜಲಿ ವೇಗವಾಗಿ ಚಲಿಸುವ ಗ್ರಾಹಕ ಸರಕುಗಳನ್ನು(FMCG) ನೀಡುತ್ತಿದೆ. ಹಿಟ್ಟು, ಬೇಳೆಕಾಳುಗಳು, ಮಸಾಲಾಗಳು, ಔಷಧಿ, ಬಿಸ್ಕೆಟ್,ನೂಡಲ್ಸ್, ಸೋಪು, ಕ್ರೀಮ್ಸ್, ಹಾಲುತ್ಪನ್ನ ಇತ್ಯಾದಿಗಳೊಂದಿಗೆ ನಮ್ಮ ಅಡಿಗೆಮನೆ ಆಕ್ರಮಿಸುತ್ತಿದೆ.

4. ಐಟಿಸಿ(ITC)

ವಹಿವಾಟು(Turnover): 7 ಬಿಲಿಯನ್ ಡಾಲರ್
ಐಟಿಸಿ ಹೋಟೆಲ್, ಪೇಪರ್ ಬೋರ್ಡ್ಸ್ ಮತ್ತು ಪ್ಯಾಕೇಜಿಂಗ್, ಕೃಷಿ ಉದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಕ್ಕೆ ಸಂಬಂಧಿಸಿದ 5 ಪ್ರಮುಖ ವೇಗವಾಗಿ ಚಲಿಸುವ ಗ್ರಾಹಕ ಸರಕುಗಳನ್ನು(FMCG) ನೀಡುತ್ತಿದೆ. ಬಿಸ್ಕೆಟ್, ಸಿಗರೇಟ್ ಕೂಡ ಇದರ ಪ್ರಮುಖ ಉತ್ಪನ್ನ.

5. ಬ್ರಿಟಾನಿಯಾ

ವಹಿವಾಟು(Turnover): 730 ಬಿಲಿಯನ್ ಡಾಲರ್
ಬ್ರಿಟಾನಿಯಾ ಕೂಡ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆದಿರುವ ಕಂಪನಿಯಾಗಿದ್ದು, ಬೇಕರಿ ಉತ್ಪನ್ನಗಳಿಗೆ ಪ್ರಸಿದ್ದಿಯಾಗಿದೆ. ಬಿಸ್ಕೆಟ್, ಬ್ರೆಡ್, ಕೇಕ್ಸ್, ರಸ್ಕ್, ಹಾಲು, ಬೆಣ್ಣೆ, ಚೀಸ್, ತುಪ್ಪ ಮತ್ತು ಮೊಸರು ಸೇರಿದಂತೆ ಡೈರಿ ಉತ್ಪನ್ನಗಳಿಗೆ ಹೆಸರುವಾಸಿ.

6. ನೆಸ್ಟ್ಲೆ

ವಹಿವಾಟು(Turnover): 87 ಬಿಲಿಯನ್ ಡಾಲರ್
ನೆಸ್ಟ್ಲೆ ಭಾರತದ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿರುವ ಪ್ರಮುಖ ಕಂಪನಿ. ಇದು ಡೈರಿ ಉತ್ಪನ್ನಗಳು, ಬೇಬಿ ಪುಡ್ಸ್, ಬಾಟಲ್ ನೀರು, ಚಾಕೊಲೇಟ್, ಕಾಫಿ, ಶೈತ್ಯೀಕರಿಸಿದ ಆಹಾರ, ಪಾನೀಯಗಳು, ಪುಡ್ ಸರ್ವಿಸ್, ಹೆಲ್ತ್ ನ್ಯೂಟ್ರಿಶನ್, ಐಸ್ ಕ್ರೀಮ್ ಇತ್ಯಾದಿ ಉತ್ಪನನ್ಗಳ ಮೇಲೆ ಹತೋಟಿ ಹೊಂದಿದೆ.

7. ಪಾರ್ಲೆ(Parle)

ವಹಿವಾಟು(Turnover): 1 ಬಿಲಿಯನ್ ಡಾಲರ್
ಪಾರ್ಲೆ(Parle) ಕಂಪನಿ ಬಿಸ್ಕೆಟ್, ತಂಪು ಪಾನೀಯ, ಚಿಪ್ಸ್ ಮತ್ತು ಮಿನಿರಲ್ ವಾಟರ್ ಮಾರಾಟ ಮಾಡುತ್ತದೆ. ಪಾರ್ಲೆ ಜಿ(Parle-G) ಬಿಸ್ಕೆಟ್ ಇದರ ಪ್ರಸಿದ್ದ ಬ್ರಾಂಡ್.

8. ಕೋಲ್ಗೆಟ್-ಪಾಲ್ಮೊಲಿವ್

ವಹಿವಾಟು(Turnover): 17.08 ಬಿಲಿಯನ್ ಡಾಲರ್
ನ್ಯೂಯಾರ್ಕ್ ಮೂಲದ ಈ ಕಂಪನಿ ಭಾರತದಲ್ಲಿ ಉತ್ತಮ ಹಿಡಿತವನ್ನು ಸಾಧಿಸಿದೆ. ಓರಲ್ ಕೇರ್, ಪರ್ಸನಲ್ ಕೇರ್, ಕೋಲ್ಗೇಟ್ ಟೂತ್ ಪೇಸ್ಟ್, ಪಾಲೊಲಿವ್ ಹ್ಯಾಂಡ್ವಾಶ್, ಕೊಲ್ಗೇಟ್ ಟೂತ್ ಬ್ರಷ್ ಇತ್ಯಾದಿ ಉತ್ಪನ್ನಗಳನ್ನು ಪೂರೈಸುತ್ತದೆ.

9. ಮಾರಿಕೊ ಇಂಡಸ್ಟ್ರಿಸ್

ವಹಿವಾಟು(Turnover): 850 ಮಿಲಿಯನ್ ಡಾಲರ್
ಈ ಕಂಪನಿ ಸಫೊಲಾ ಎಣ್ಣೆ ಮತ್ತು ಇತರ ಉತ್ಪನ್ನಗಳ ಮೂಲಕ ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುತ್ತದೆ.

10. ಆರ್ಇಐ(REI) ಅಗ್ರೊ

ವಹಿವಾಟು(Turnover): 4228 ಕೋಟಿ ರೂಪಾಯಿ
ದಿನನಿತ್ಯ ಸವಿಯುವ ರುಚಿ ರುಚಿಯಾದ ಬಾಸ್ಮತಿ ಅಕ್ಕಿ ಈ ಕಂಪನಿಯ ಮುಖ್ಯ ಉತ್ಪನ್ನ. ಜಾಗತಿಕವಾಗಿ ವೇಗವಾಗಿ ಚಲಿಸುವ ಗ್ರಾಹಕ ಸರಕುಗಳನ್ನು(FMCG) ಒದಗಿಸುವ ಸಂಸ್ಥೆ.

English summary

Top 10 companies that control everything you buy in India

There are several companies in India that have become synonyms to brands. They have become a part and parcel of our lives and have been associated with us from the pre-independent era too. Companies such as Hindustan Unilever, Parle Agro, Amul, etc control everything that we eat and drink in India.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC